Friday, 29 November 2013
ಇಬ್ಬರು ವಶಕ್ಕೆ, ಪ್ರಕರಣ ತಿರುಚುವ ಪ್ರಯತ್ನ, ಪತ್ರಕರ್ತ ಸಂಘದಿಂದ ಖಂಡನೆ, ಗುರುವಾರ ಬೆಳಗ್ಗೆ ಠಾಣೆ ಮುಂದೆ ಪ್ರತಿಭಟನೆ
ವಿಟ್ಲ ಅನ್ಯ ಮತದ ಬಡ ಮಹಿಳೆಯೊಬ್ಬರಿಗೆ ಮನೆ ನಿಮರ್ಾಣ ಕೊಡುವ ವಿಚಾರವಾಗಿ ವಿಟ್ಲ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ಸುಮಾರು 40ಕ್ಕೂ ಅಧಿಕ ಮಂದಿ ತಂಡ ಯದ್ವಾ ತದ್ವಾ ಬಡಿದು, ತುಳಿದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಸಂಜೆಯಾಗುತ್ತಿದ್ದಂತೆ ಪ್ರಕರಣ ತಿರುಚುವ ಪ್ರಯತ್ನ ನಡೆದಿದೆ.
ಬೆಳಗ್ಗೆ ಸುಮಾರು ಗಂಟೆ 11.45ರ ಸಮಯ ಇವರು ಮನೆ ಪಕ್ಕದಲ್ಲೇ ಇದ್ದ ಶಾಲೆಗೆ ಭೇಟಿ ನೀಡಿ, ಅಲ್ಲಿನ ಸಿಬಂದಿಗಳ ಜತೆ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಎರಡು ರಿಕ್ಷಾಗಳಲ್ಲಿ ಒಂದೇ ಕೋಮಿಗೆ ಸೇರಿದ ತಂಡವೊಂದು (ಸಂಘಟನೆಯ ಹೆಸರಲ್ಲಿ) ಪ್ರಸಾದ್ ಅವರನ್ನು ಹೊರಗೆ ಕರೆದಿದ್ದರು. ಇವರು ಧೈರ್ಯದಿಂದ ಮುನ್ನುಗ್ಗಿದಾಗ ಸುಮಾರು 40ಕ್ಕೂ ಅಧಿಕ ಮಂದಿ ಪ್ರಸಾದ್ ಅವರ ಮೈಮೇಲೆ ಕೈಮಾಡಿದ್ದಾರೆ. ಬಡಿದು ಉರುಳಿಸಿದ ತಂಡ ಅವರನ್ನು ರಿಕ್ಷಾದಲ್ಲಿ ಹಾಕಿ, ಅಲ್ಲೇ ಪಕ್ಕದಲ್ಲಿದ್ದ ಅಲೀಮ ಎಂಬವರ ಮನೆಗೆೆ ಕರೆದುಕೊಂಡು ಸಾಗಿದ್ದಲ್ಲದೆ ಅಲ್ಲಿ ಒಟ್ಟಾಗಿ ಏಕಮಾತ್ರ ವ್ಯಕ್ತಿಯ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಪಕ್ಕಾಸು ತುಂಡುಗಳಿಂದ, ಕೈಯಿಂದ ಹೊಡೆದಿದ್ದು, ಶೂ ಹಾಕಿ ತುಳಿದಿದ್ದಾರೆ. ಇದರಿಂದ ತಲೆ, ಮುಖ, ಸೊಂಟಕ್ಕೆ ಗಂಭೀರ ಗಾಯವಾಗಿದೆ. ವಿ.ಟಿ.ಪ್ರಸಾದ್ ಅವರನ್ನು ಮಲಗಿಸಿ, ಮೈಮೇಲೆ ಅನೇಕ ಮಂದಿ ನಿಂತು, ಕುಣಿದು ಅಮಾನವೀಯವಾಗಿ ವತರ್ಿಸಿದ್ದಾರೆ. ಪ್ರಸಾದ್ ತಲೆ ಮೇಲೆ ಶೂವಿನ ಅಚ್ಚೊತ್ತಿರುವುದು ಕಂಡುಬರುತ್ತದೆ.
ಸಂಪೂರ್ಣ ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಸಾದ್ ಅವರನ್ನು ಪೊಲೀಸರು ಮತ್ತು ಫ್ರೆಂಡ್ಸ್ ವಿಟ್ಲ ತಂಡದ ಆ್ಯಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ತಲೆ, ಸೊಂಟ ಮೊದಲಾದ ಅಂಗಾಂಗಗಳನ್ನು ಸ್ಕ್ಯಾನಿಂಗ್ ನಡೆಸಲಾಗಿದೆ. ಇದೇ ಸಂದರ್ಭ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ ಪ್ರಕಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆ್ಯಂಬುಲೆನ್ಸ್ಗೆ ಅಡ್ಡ ನಿಂತ ವ್ಯಕ್ತಿ :
ಆ್ಯಂಬುಲೆನ್ಸ್ಗೆ ಅಡ್ಡ ನಿಂತು ಓರ್ವ ಅಪರಿಚಿತ ವ್ಯಕ್ತಿ ಈತನನ್ನು ಬದುಕಿಸುವುದು ಯಾಕೆ ? ಅವನನ್ನು ಆಸ್ಪತ್ರೆಗೆ ಒಯ್ಯಬೇಡಿ. ಅವ ಇಲ್ಲೇ ಸಾಯಲಿ ಎಂದನಂತೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಚಾಲಕ ತಿಳಿಸಿದ್ದಾರೆ.
ಪ್ರಕರಣ ತಿರುಚಲು ಯತ್ನ :
ಈ ನಡುವೆ ಈ ಪ್ರಕರಣವನ್ನು ತಿರುಚಲು ಯತ್ನ ನಡೆಯುತ್ತಿದೆಯೆನ್ನಲಾಗಿದೆ. ಓರ್ವ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ವಿ.ಟಿ.ಪ್ರಸಾದ್ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆಯೆನ್ನಲಾಗಿದೆ. ದೂರಿನ ವಿರುದ್ಧ ಪ್ರತಿದೂರು ದಾಖಲಿಸುವ ನಿಟ್ಟಿನಲ್ಲಿ ಕಾಣದ ಶಕ್ತಿಗಳ ಕೈವಾಡ ನಡೆಯುತ್ತಿದೆಯೆಂದು ತಿಳಿದುಬಂದಿದೆ.
ಅಧ್ಯಕ್ಷರಿಂದ ಖಂಡನೆ:
ಕಾರ್ಯನಿರತ ಪತ್ರಕರ್ತನಿಂದ ತೊಂದರೆಯಾಗಿದ್ದರೆ ದೂ ನೀಡುವುದು ಬಿಟ್ಟು, ಬೇರೆಡೆಯಿಂದ ಎಳೆದೊಯ್ದು ಅಮಾನವಿಯವಾಗಿ ಹಲ್ಲೆ ನಡೆಸಿರುವುದು ಖಂಡನೀಯ ಹಾಗೂ ಹಲ್ಲೆ ನಡೆಸಿದ ಎಲ್ಲಾ ಆರೋಪಿಗಳನ್ನು ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕು ಎಂದು ಬಂಟ್ವಾಳ ತಾಲೂಕು ಕಾರ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದ್ದಾರೆ.
ಪ್ರತಿಭಟನೆ:
ಪ್ರಕರಣ ತಿರುಚುವ ಪ್ರಯತ್ನ ಮಾಡುವುದು ಸರಿಯಲ್ಲ ಒಬ್ಬ ಪತ್ರಕರ್ತನ ಮೇಲೆ ನೈತಿಕ ಪೊಲೀಸ್ ಗಿರಿ ನಡೆದರೆ ಸಾಮಾನ್ಯನ ಗತಿಯೇನು ಎಂಬ ಪ್ರಶ್ನೆಯನ್ನಿಟ್ಟು, 40 ಆರೋಪಿಗಳನ್ನು ತಕ್ಷಣ ಬಂಧಿಸಿ ಸತ್ಯ ಪ್ರಕರಣವನ್ನು ಎತ್ತಿ ಹಿಡಿಸು ನ್ಯಾಯವೊದಗಿಸುವ ಜೊತೆಗೆ ಪತ್ರಕರ್ತರಿಗೆ ಭದ್ರತೆ ನೀಡಬೇಕೆಂದು ಹೇಳಿ ಗುರುವಾರ ಬೆಳಗ್ಗೆ 10ಕ್ಕೆ ಠಾಣೆಯ ಮುಂದೆ ಪ್ರತಿಭಟನೆ .
ಬಂಟ್ವಾಳ, ಪುತ್ತೂರು, ವಿಟ್ಲ ಕಾರ್ಯನಿರತ ಪತ್ರಕರ್ತರು ಮತ್ತು ಸ್ಥಳೀಯ ನಾಗರಿಕರ ಆಶ್ರಯದಲ್ಲಿ ವಿಟ್ಲ ಪೊಲೀಸ್ ಠಾಣೆಯ ಮುಂದೆ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅವರು ಮಾತನಾಡಿ ಸಮಾಜದ ದುಃಖ, ಸುಖಗಳಿಗೆ ಸ್ಪಂದಿಸುವ, ಯಾವುದೇ ಜಾತಿ-ಮತ-ಧರ್ಮಗಳ ಬಗ್ಗೆ ಚಿಂತಿಸದೇ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಎಂಬ ವಿಚಾರವನ್ನೇ ಗಣನೆಗೆ ತೆಗೆದುಕೊಳ್ಳುವ ಪತ್ರಕರ್ತರಿಗೇ ಜಾತಿಯ ನೆಪದಲ್ಲಿ ಸಂಘಟನೆ ಹಲ್ಲೆ ನಡೆಸಿದ್ದು ಖಂಡನೀಯ.ಬಡ ಮಹಿಳೆಗೆ ಮನೆ ಕಟ್ಟಿಸಿ ಕೊಡಿಸುವುದಕ್ಕೆ ಪ್ರಯತ್ನಿಸಿದ ಮತ್ತು ಅದಕ್ಕಾಗಿ ಪತ್ರಿಕೆಗಳ ಮೂಲಕ ಲೇಖನ ಬರೆದು ಸಹಾಯ ಯಾಚಿಸಿದ ವಿ.ಟಿ.ಪ್ರಸಾದ್ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸ್ ಇಲಾಖೆ ಇನ್ನೂ ಬಂಧಿಸಿಲ್ಲ. ತತ್ಕ್ಷಣ ಆರೋಪಿಗಳನ್ನು ಬಂಸಲೇಬೇಕು. ಮತ್ತು ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಸಿದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.
ಪತ್ರಕರ್ತ ಸಂತೋಷ್ ಅವರು ಮಾತನಾಡಿ ಎಲ್ಲ ಅಕ್ರಮ ಚಟುವಟಿಕೆ, ಭೂಗತ ಜಗತ್ತಿನ ಅವ್ಯವಹಾರಗಳನ್ನು ಬಯಲಿಗೆಳೆದು ಅವನ್ನು ನಿಭರ್ೀತಿಯಿಂದ ಬರೆಯುತ್ತಿದ್ದ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ಹಗೆತನವನ್ನಿಟ್ಟುಕೊಂಡು ಈ ಕುಕೃತ್ಯ ನಡೆಸಲಾಗಿದೆ. ಯಾವುದೇ ಕಾರಣವಿಲ್ಲದೇ ಸಹಾಯ ಮಾಡಲು ಹೊರಟ ವ್ಯಕ್ತಿಗೇ ಜೀವಕ್ಕೆ ಕುಂದು ತರುವಂತಹ ತಪ್ಪು ಏನು ? ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆಯನ್ನು ಮಾಡಬೇಡವೇ ? ಯಾವುದೇ ಆರೋಪಿಯನ್ನು ಬಂಧಿಸದೇ ನಿಷ್ಕ್ರಿಯರಾಗಿರುವ ಇಲಾಖೆಗೆ ಏನಾಗಿದೆ ? ಸಾಮಾಜಿಕ ಜೀವನದಲ್ಲೇ ಜಂಜಾಟಗಳಲ್ಲೇ ಇರುವ ಪತ್ರಕರ್ತರನ್ನು ರಕ್ಷಿಸಲಾಗದ ಮತ್ತು ಆರೋಪಿಗಳನ್ನು ರಕ್ಷಿಸುವ ಕಾಣದ ಕೈಗಳ ಬೆಂಬಲ ನೀಡುವ ಜಾಲವನ್ನು ಬೇದಿಸಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ,ಪತ್ರಕರ್ತರಾದ ವಿಷ್ಣು ಗುಪ್ತ ಪುಣಚ, ಹಮೀದ್ ಕಂದಕ್, ವಿಶ್ವನಾಥ ಬಂಟ್ವಾಳ, ಸಾಮಾಜಿಕ ಮುಖಂಡರಾದ ರಾಜೇಂದ್ರ ರೈ ಬೈಲುಗುತ್ತು ಪುತ್ತೂರು ಪತ್ರಕರ್ತ ಸಂಘದ ಅಧ್ಯಕ್ಷ ಜೈನುದ್ದೀನ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದಶರ್ಿ ರತ್ನದೇವ್ ಪುಂಜಾಲಕಟ್ಟೆ, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಅಜಿತ್ ಕುಮಾರ್, ಸಿದ್ದಿಕ್ ಕುಂಬ್ರ, ಕಿಶೋರ್ ಪೆರಾಜೆ, ಜ್ಯೋತಿಪ್ರಕಾಶ್ ಪುಣಚ, ನಿಶಾಂತ್ ಬಿಲ್ಲಂಪದವು, ಹಮೀದ್ ವಿಟ್ಲ, ಲತೀಫ್ ನೇರಳಕಟ್ಟೆ, ಅರುಣ ವಿಟ್ಲ, ಸಿಎಚ್.ಜಯಂತ್ ವಿಟ್ಲ, ನಾಗೇಶ್ ಬಸವನಗುಡಿ, ದೇವಿದಾಸ ಶೆಟ್ಟಿ ಪಾಲ್ತಾಜೆ ಮೊದಲಾದವರು ಉಪಸ್ಥಿತರಿದ್ದರು.
Wednesday, 2 October 2013
Netravathi
ಕನರ್ಾಟಕದ ಕೆಲವು ಜಿಲ್ಲೆಗಳಿಗೆ ಬೇಕಾದ ನೀರನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೆತ್ತಿಕೊಳ್ಳಲು ಉದ್ಧೇಶಿಸಿರುವ ಎತ್ತಿನಹೊಳೆ ಯೋಜನೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧವ್ಯಕ್ತವಾಗುತ್ತಿದ್ದು, ಈ ಸಂಬಂಧ ಕಟ್ಟಡ ನಿಮರ್ಾಣ ಕಾರ ಕಾಮರ್ಿಕರು ಇಂದು ಬೀದಿಗಿಳಿದು ವಿವಿದ ರೀತಿಯ ಹೋರಾಟನಡೆಸಲು ಸಜ್ಜಾಗಿದ್ದಾರೆ. ಪರಮಶಿವಯ್ಯ ವರದಿಯ ಕರಡನ್ನು ಊರಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ . ಜಿಲ್ಲೆಯ ಕುಮಾರದಾರ ಮತ್ತು ನೇತ್ರಾವತಿಯ ಏಕೈಕ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ತಿರುವು ಯೋಜನೆಯ ವಿರುದ್ದ ಒಂದು ತಿಂಗಳಲ್ಲಿ ಇದು 3 ನೇ ಪ್ರತ್ತಿಭಟನೆಯಾಗಿರುತ್ತದೆ.
ನೇತ್ರಾವತಿ ನದಿಯನ್ನು ಎತ್ತಿನಹೊಳೆ ಎನ್ನುವ ಪ್ರದೇಶದಲ್ಲಿ ಉತ್ತರಭಾಗಕ್ಕೆ ತಿರುಗಿಸುವ ಈ ಯೋಜನೆಯಿಂದ ಉತ್ತರ ಕನರ್ಾಟಕದ ಕೋಲಾರ, ಚಿಕ್ಕಬಳ್ಳಾಪುರ,ಬೆಂಗಳೂರು ಉತ್ತರ ಹೀಗೆ ಒಂಬತ್ತು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸುವುದಾಗಿ ಹೊರಟಿರುವ ರಾಜ್ಯ ಸರಕಾರದ ತೀಮರ್ಾನಕ್ಕೆ ಕರಾವಳಿಭಾಗದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ.ನೇತ್ರಾವತಿ ಈ ಬಾಗದ ಜನರ ಜೀವನದಿ ಮತ್ತು ಭಾಗ್ಯದೇವತೆ. ಇದನ್ನೆ ನಂಬಿಕೊಂಡು ಬದುಕು ಕಟ್ಟಿಕಂಡವರು ಹಲವರು. ಇಂದು ಆ ಭಾಗ್ಯದೇವತೆಗೆ ಸಂಕಷ್ಟಬಂದಿದೆ .ಎತ್ತಿನಹೊಳೆ ಯೋಜನೆಯ ಕುರಿತು ಜನರಿಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಯಾವುದೇ ರೀತಿಯ ಪ್ರಾಕೃತಿಕ,ಜೈವಿಕ ತೊಂದರೆ ಮಾಡದೇ 24 ಟಿ.ಎಂ.ಸಿ. ನೀರನ್ನು ಮೇಲ್ಮುಕವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಸಾಧ್ಯವೇ ಇಲ್ಲ. ಜನರನ್ನು ದಾರಿ ತಪ್ಪಿಸುವ ಕಾರ್ಯ ನಿಲ್ಲಬೇಕು ದಕ್ಷಿಣ ಕನ್ನಡ ಜಿಲ್ಲೆಗೆ ನೇತ್ರಾವತಿಯೇ ಉಸಿರು. ಅದಕ್ಕೆ ಬರುವ ನೀರನ್ನು ತಿರುಗಿಸಿದರೆ ಮುಂದೋಂದು ದಿನ ನದಿ ಬತ್ತಿ ಹೋಗಿ ನಾಶವಾಗುವುದಲ್ಲಿ ಸಂದೇಹವಿಲ್ಲ ಮಾತ್ರವಲ್ಲದೆ ದಕ್ಷಿಣ ಕನ್ನಡದಲ್ಲಿ ಕುಡಿಯುವ ನೀರಿನ ಅಭಾವ ಕೂಡ ತಲೆದೋರಲಿದೆ ಎನ್ನುತ್ತಾರೆ
ನೇತ್ರಾವತಿಯ ಮೂಲವಾದ ಎತ್ತಿನಹೊಳೆ ತಿರುಗಿಸಿದರೆ ಅದರ ಜೀವ ತೆಗೆದಂತೆ. ಅದನ್ನು ಊಹಿಸಲು ನಮ್ಮಿಂದ ಸಾದ್ಯವಿಲ್ಲ. ನದಿಯನ್ನು ತಡೆದರೆ, ಅಮೂಲ್ಯ ಮಲೆಕಾಡು, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಜಲಚರಗಳು ನಾಶವಾಗಲಿವೆ. ಅಗಾಧ ವೆಚ್ಚ ಮತ್ತು ಅಷ್ಟೇ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗುವ ಈ ಯೋಜನೆ ನಮಗೆ ಬೇಡವೇ ಬೇಡ. ದಕ್ಷಿಣ ಕನ್ನಡದ ಜನತೆಯ ಬದುಕನ್ನು ಬಲಿ ಕೊಟ್ಟು ನದಿ ತಿರುವು ಯೋಜನೆಗೆ ಕೈಜೋಡಿಸುವ ರಾಜಕಾರಣಿಗಳನ್ನು ತಿರಸ್ಕರಿಸಿದರೆ ನಮ್ಮ ನದಿ ಉಳಿಯುತ್ತದೆ . ಎತ್ತಿನಹೊಳೆ ಜಾರಿಯಾದರೆ, ಕಾವೇರಿ ನೀರಿಗಾಗಿ ಕನರ್ಾಟಕ ಮತ್ತು ತಮಿಳುನಾಡು ಸಂಘರ್ಷ ನಡೆಯುತ್ತಿರುವಂತೆ, ನೇತ್ರಾವತಿ ನದಿ ನೀರಿಗಾಗಿ ದಕ್ಷಿಣ ಕನ್ನಡ ಮತ್ತು ಬಯಲುಸೀಮೆ ಮಧ್ಯೆ ವಿವಾದ, ಸಂಘರ್ಷ ನಡೆದು ಹೊತ್ತಿ ಉರಿಯುವ ಸಾಧ್ಯತೆಗಳಿವೆ. ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಿ ಪಶ್ಚಿಮಘಟ್ಟವನ್ನೂ ನಾಶಮಾಡುವ ಯೋಜನೆಯನ್ನು ಜೀವ ಕೊಟ್ಟಾದರೂ ಉಳಿಸುವ ದಿಟ್ಟ ನಿಧರ್ಾರಕ್ಕೂ ಇದೀಗ ಜಿಲ್ಲೆಯ ಜನತೆ ಬಂದಿದ್ದಾರೆ.
ಒಟ್ಟಾರೆಯಾಗಿ ಈ ಯೋಜನೆಯಿಂದ 10 ಸಾವಿರ ಹೆಕ್ಟೇರ್ ಅರಣ್ಯ ನಾಶ ಎಂದರೂ, 28 ಸಾವಿರ ಹೆಕ್ಟೇರ್ ನಾಶವಾಗಲಿದೆ. ಒಂದು ವರ್ಷದಲ್ಲಿ ಮುಗಿಸುವ ಯೋಜನೆ ವೆಚ್ಚ 8323 ಕೋಟಿ ರೂ. ಎಂದು ಸರಕಾರ ಹೇಳಿದರೂ, 10- 20 ವರ್ಷ ಮುಂದುವರಿದು, 20 ಸಾವಿರ ಕೋಟಿ ರೂ. ದಾಟಿದರೂ ಆಶ್ಚರ್ಯವಿಲ್ಲ.ಕೋಲಾರ, ಚಿತ್ರದುರ್ಗ ಜಿಲ್ಲೆ ಜನರಿಗೆ ನಿರಂತರ ನೀರಿನ ಭ್ರಮೆ ಹುಟ್ಟಿಸಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೇಬು ತುಂಬಿಸುವ ಇರಾದೆ ಇದ್ದಂತಿದೆ ಅಸಂಬದ್ಧ ಈ ಯೋಜನೆಯು ಎಷ್ಟು ಸರಿಯೆಂದು ಸರಕಾರ ಅಲೋಚಿಸ ಬೇಕಾಗಿದೆ
Wednesday, 4 September 2013
ಪುತ್ತೂರು:ಕೆಟ್ಟಮನಸ್ಸು ಹಾಗೂ ಕಣ್ಣುಗಳಿಂದ ದೋಷಗಳು ಹೆಚ್ಚಾದರೆ,ಗುರು ದೃಷ್ಟಿಯಿಂದ ಲಕ್ಷ ದೋಷಗಳೂ ನಿವಾಋಣೆಯಾಗುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಪೆರಾಜೆ ಮಾಣಿ ಮಠದಲ್ಲಿ ನಡೆದ ರಾಮಕಥಾ ಪ್ರವಚನದಲ್ಲಿ ಮಾತನಾಡಿದರು.ಅನೇಕ ಸಂದರ್ಭದಲ್ಲಿ ಬಾಹ್ಯಕಾಂತಿಗೇ ಎಲ್ಲರೂ ಮರುಳಾಗುತ್ತಾರೆ.ಆದರೆ ಬಾಹ್ಯಕಾಂತಿ ಶಾಶ್ವತ ಅಲ್ಲ, ಅಂತ:ಕಾಂತಿ ಶಾಶ್ವತವಾಗಿದೆ ಎಂದ ಶ್ರೀಗಳು ಉಪವಾಸ ದಮೂಲಕ ದೇವರ ಸಮೀಪಕ್ಕೆ ತೆರಳಿ ಎಲ್ಲವನ್ನೂ ಮರೆಉ ದೇವರೊಂದಿಗೆ ಇದ್ದರೆ ಬದುಕು ಪಾವವಾಗುತ್ತದೆ ಎಂದರು.
ಹನುಮಂತ ಸಿಂಹಿಕೆಯ ಹೊಟ್ಟೆಯೊಳಗೆ ಪ್ರವೇಶ ಮಾಡಿ ಹೊರಗೆ ಬರುವ ಅದ್ಭುತ ಕಥಾನಕವನ್ನು ಶ್ರೀಗಳು ವಣರ್ಿಸಿದರು.ಹನುಮ ಗೆದ್ದ ಸಿಹಿಂಕೆಗೆ ಮೋಕ್ಷವನ್ನು ಕರುಣಿಸಿದ ಕಥಾವಕವನ್ನು ಶ್ರೀಗಳು ವಿವರಿಸಿದರು.
ಶ್ರೀಗಳು ಹೇಳಿದ್ದು:
* ಹೊಟ್ಟೆಪಾಡಿಗಾಗಿ ದೇವರ ಬಳಕೆ ಸರಿಯಲ್ಲ
*ಡಾಕ್ಟ್ರು ಹಾಕುವ ಚೂರಿಗೂ ಡಾಕು ಹಾಕುವ ಚೂರಿಯ ಭಾವದಲ್ಲಿ ವ್ಯತ್ಯಾಸ ಇದೆ
*ನಾನು ಎಂಬ ಭಾವ ಇರುವುದು ಹೃದಯದಲ್ಲಿ
*ಬಾಹ್ಯಕಾಂತಿಗೆ ಸೋಲು
*ಒಳ್ಳೆಯ ಕೆಲಸಕ್ಕೆ ದೇವರ ಸಹಾಯ ಇದೆ
Tuesday, 3 September 2013
Saturday, 24 August 2013
ಗೋವು ಬದುಕಿನ ಭಾಗವಾಗಬೇಕು- ನೂತನ ಆಂದೋಲನ- ರಾಘವೇಶ್ವರ ಶ್ರೀ
ಗೋವು ಪ್ರತಿಯೊಬ್ಬನ ಬದುಕಿನ ಭಾಗವಾದಾಗ ಮಾತ್ರ ಗೋ ರಕ್ಷಣೆ ಸಾಧ್ಯ ಯಾವುದೇ ಸಂಸತ್,ಕಾನೂನು,ಸಂಘರ್ಷದಿಂದ ಸಾಧ್ಯವಿಲ್ಲ.ಹೀಗಾಗಿ ಸದ್ಯದಲ್ಲೇ ನೂತನ ಯೋಜನೆಯನ್ನು ಆಂದೋಲನ ರೂಪದಲ್ಲಿ ಸಮಾಜದ ಎಲ್ಲರೂ ಭಾಗವಹಿಸುವಂತಹ ಯೋಜನೆ ತರುವುದಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಪೆರಾಜೆ ಮಾಣಿ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ನಮ್ಮ ಬದುಕು ರೂಪಿಸಿದ ಗೋವಿಗೆ ಇಂದು ಬದುಕೇ ಇಲ್ಲವಾಗಿದೆ.ಹೀಗಾಗಿ ಗೋವಿನ ರಕ್ಷಣೆ ಇಂದು ಅನಿವಾರ್ಯವಾಗಿದೆ.ಇದಕ್ಕೆ ಸಮಾಜದ ಎಲ್ಲರೂ ಪ್ರಯತ್ನ ಮಾಡಬೇಕಾಗಿದೆ,ಹೀಗಾಗಿ ಆಂದೋಲನವೇ ಅಗತ್ಯ ಎಂದ ಅವರು ಇದಕ್ಕೆ ಸಮಾಜವೇ ಅಂತಿಮ ಮಾಧ್ಯಮ ಎಂದರು.
ಚಾತುಮರ್ಾಸ್ಯ ಸಂದರ್ಭದಲ್ಲಿ ನಡೆಯುತ್ತಿರುವ ರಾಮಕಥಾ ಸಂತೋಷ ಹಾಗೂ ಸಂದೇಶ ಎರಡೂ ಕೂಡಾ ನೀಡುವ ಈ ಕಾರ್ಯಕ್ರಮವಾಗಿದೆ.ಎಳೆಯರಿಂದ ತೊಡಗಿ ಹಿರಿಯರವರೆಗೆ ಮಾಧ್ಯಮವಾಗಿ ರಾಮಕಥಾ ಕಾರ್ಯಕ್ರಮ ಆಕರ್ಷಣೆಯಾಗಿದೆ ಎಂದರು.
ಕಸಾಯಿಖಾನೆಗೆ ಅಕ್ರಮ ಗೋ ಸಾಗಾಟ ಆರೋಪ ಸತ್ಯಕ್ಕೆ ದೂರವಾದ ವಿಚಾರ- ಎ.ಆರ್. ಚಂದ್ರ
ಪುತ್ತೂರು ತಾಲೂಕಿನ ಸವಣೂರಿನಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ನಡೆಸಲಾಗುತ್ತಿತ್ತು ಎನ್ನುವುದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು , ಅಲ್ಲಿ ದನಗಳನ್ನು ಕದ್ದು ಸಾಗಾಟ ಮಾಡಲಾಗಿಲ್ಲ. ತೋಟಕ್ಕೆ ನುಗ್ಗಿ ಹಾನಿ ಮಾಡಿದ ದನಗಳನ್ನು ಅಲ್ಲಿನ ಕೃಷಿಕರು ಕಟ್ಟಿ ಹಾಕಿ ತನಗೆ ಮಾಹಿತಿ ನೀಡಿ ಗೋ ಆಶ್ರಮಕ್ಕೆ ಪಿಕಫ್ ವಾಹನದಲ್ಲಿ ತಂದಿದ್ದರು. ಈ ಘಟನೆಯ ವೇಳೆ ದನದ ಮಾಲಕ ಹಾಗೂ ಇತರ ಸುಮಾರು 100ಕ್ಕೂ ಅಧಿಕ ಮಂದಿ ಸೇರಿಕೊಂಡು ಘಟನೆಯನ್ನು ವಿಷಯಾಂತರಗೊಳಿಸಿ ಅಪಪ್ರಚಾರ ನಡೆಸಿದ್ದಾರೆ ಎಂದು ಸವಣೂರಿನ ಭಾರತೀಯ ಭಾವೈಕ್ಯತಾ ಪ್ರತಿಷ್ಠಾನದ ಸಂಚಾಲಕ , ಗೋಕುಲಂ ಗೋಶಾಲೆಯ ಎ.ಆರ್.ಚಂದ್ರ ಎಡಪತ್ಯ ಅವರು ಹೇಳಿದರು.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.21ರಂದು ರಾತ್ರಿ ಸವಣೂರಿನ ಆರೆಲ್ತಡ್ಕದ ಕೃಪಿಕರಾದ ಪ್ರಕಾಶ್ ಎಂಬವರು ನಾರಾಯಣ ಎಂಬವರ ಮೊಬೈಲ್ ಮೂಲಕ ತನಗೆ ಕರೆ ಮಾಡಿ ತಮ್ಮ ತೋಟಕ್ಕೆ ನುಗ್ಗಿದ 4 ದನಗಳನ್ನು ಕಟ್ಟಿಹಾಕಿದ್ದೇವೆ. ನಿಮ್ಮ ಆಶ್ರಮಕ್ಕೆ ಅದನ್ನು ತರುತ್ತೇವೆ .ಅದನ್ನು ನೀವು ಸ್ವೀಕಾರ ಮಾಡಬೇಕು ಎಂದಿದ್ದರು. ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ ನಾಳೆ ಬೆಳಿಗ್ಗೆ ತಂದರೆ ಒಳ್ಳೆಯದ್ದು , ಇಲ್ಲದಿದ್ದರೆ ಪೊಲೀಸ್ ಠಾಣೆಗೆ ತಿಳಿಸಿ ಬರಹ ಮೂಲಕವೇ ಆಶ್ರಮಕ್ಕೆ ಒಪ್ಪಿಸಬೇಕು ಎಂದು ತಾನು ತಿಳಿದಿದ್ದೆ. ಈ ಬಗ್ಗೆ ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಮೆದು ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ ಬಳಿಕ ಆಶ್ರಮಕ್ಕೆ ತರುವಂತೆ ಹೇಳಿದ್ದೆ . ಅದರಂತೆ ಅವರು ದನಗಳನ್ನು ಆಶ್ರಮಕ್ಕೆ ಪಿಕಪ್ ವಾಹನದಲ್ಲಿ ತಂದಿದ್ದರು. ಆ ವೇಳೆ ದನಗಳ ವಾರಿಸುದಾರ ಉಸ್ಮಾನ್ ಸೇರಿದಂತೆ ಸುಮಾರು ನೂರಕ್ಕಿಂತಲೂ ಅಧಿಕ ಮಂದಿ ಗೋಶಾಲೆಯ ಬಳಿ ಜಮಾಯಿಸಿ ಗೊಂದಲ ಸೃಷ್ಟಿಸಿದರು. ಘಟನೆಯ ವಿಷಯಾಂತರಿಸಿ ಅಪಪ್ರಚಾರ ಎಬ್ಬಿಸಿದರು . ಆ ಸಂದರ್ಭದಲ್ಲಿ ಈ ಬಗ್ಗೆ ತಾನೇ ಪೊಲೀಸರಿಗೆ ದೂರು ನೀಡಿದ್ದೆ ಎಂದು ಅವರು ತಿಳಿಸಿದರು.
ತಾನು ದನಗಳನ್ನು ಗೋಶಾಲೆಗೆ ಸೇರಿಸಲು ನಿರಾಕರಿಸಿಲ್ಲ . ಆದರೆ ಆ ವಿಚಾರದಲ್ಲಿ ತಪ್ಪು ಸುದ್ದಿ ಬಿತ್ತರವಾಗಿದೆ. ಈ ಘಟನೆಗೆ ಸಂಬಂಧಿಸಿ ರಾಜಕೀಯ ಲಾಭ ಪಡೆಯುವ ಕೆಲಸ ನಡೆದಿದೆ. ಪೊಲೀಸರ ಆಗಮನದ ಬಳಿಕ ಮುಗಿಯುವ ಹಂತದಲ್ಲಿದ್ದ ಪ್ರಕರಣವನ್ನು ದೊಡ್ಡದಾಗಿಸುವ ಕೆಲಸ ನಡೆದಿದೆ ಎಂದು ಅವರು ತಿಳಿಸಿದರು.
ಪ್ರಮಾಣಕ್ಕೆ ಬರಲಿ -ಸವಾಲು :
ದನಗಳನ್ನು ಕದ್ದು ಕಖಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಆರೋಪ ಮಾಡುವವರು ಯಾವುದೇ ಕ್ಷೇತ್ರದಲ್ಲಿ ಪ್ರಮಾಣ ಮಾಡಲು ಮುಂದಾಗಲಿ .ನಾವು ಅದಕ್ಕೆ ಸಿದ್ದ ಎಂದು ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಮೆದು ಸವಾಲು ಹಾಕಿದರು. ಉಸ್ಮಾನ್ ಅವರ ದನಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿರುವ ಕುರಿತು ಆರೆಲ್ತಡ್ಕದ ಕೃಷಿಕರು 6 ತಿಂಗಳ ಹಿಂದೆಯೇ ಪಂಚಾಯಿತಿಗೆ ದೂರು ನೀಡಿದ್ದರು. ಅದಕ್ಕೂ ಮುನ್ನ ಕಡಬ ಪೊಲೀಸರಿಗೂ ದೂರು ಸಲ್ಲಿಸಿದ್ದರು. ಪಂಚಾಯಿತಿಯಿಂದ ಅವರಿಗೆ ಈ ಕುರಿತು ನೋಟೀಸು ಕೂಡ ನೀಡಲಾಗಿತ್ತು. ಆದರೆ ಉಸ್ಮಾನ್ ಅವರು ಹಗಲು ಹೊತ್ತಿನಲ್ಲಿ ದನಗಳನ್ನು ಕಟ್ಟಿ ಹಾಕಿ ರಾತ್ರಿ ವೇಳೆ ಬಿಡುತ್ತಿದ್ದರು. ಮೂರು ದಿನಗಳ ಹಿಂದೆ ದನಗಳನ್ನು ಬಿಡಬೇಡಿ . ಕೃಷಿ ಹಾನಿ ಮಾಡುತ್ತಿವೆ ಎಂದು ಸ್ಥಳೀಯ ಕೃಷಿಕರೊಬ್ಬರು ವಿನಂತಿಸಿಕೊಂಡಿದ್ದರು. ಆದರೂ ಅವರು ಅದನ್ನು ಲೆಕ್ಕಿಸದ ಕಾರಣ ತಾನೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದೆ. ಆ ವೇಳೆ ಪೊಲೀಸರು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುವ ದನಗಳನ್ನು ಸ್ಥಳೀಯ ಗೋಶಾಲೆಗೆ ಕೊಡಿ. ಬಳಿಕ ಅವರು ದಾಖಲೆ ಕೊಟ್ಟು ಬಿಡಿಸಿಕೊಂಡು ಹೋಗಲಿ ಅಂದಿದ್ದರು. ಈ ಕಾರಣದಿಂದ ಗೋಶಾಲೆಗೆ ಕೊಂಡೊಯ್ಯಲಾಗುತ್ತಿತ್ತು ಎಂದು ದಿನೇಶ್ ಮೆದು ತಿಳಿಸಿದರು.
ಮುಸ್ಲಿಮರು ಅಕ್ರಮವಾಗಿ ದನಗಳ ಸಾಗಾಟ ಮಾಡುತ್ತಿದ್ದ ವೇಳೆ ತಡೆಯಲು ಮುಂದಾದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ,ದರೋಡೆ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಪೊಲೀಸರು ಈ ಪ್ರಕರಣದಲ್ಲಿ ತಡೆಯಲು ಹೋದ ಮುಸ್ಲಿಂ ಮಂದಿಯ ಮೇಲೆ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ . ನಾವು ತಡೆದರೆ ಮಾತ್ರ ನೈತಿಕ ಪೊಲೀಸ್ಗಿರಿ , ಇದು ಯಾವುದು ಅನೈತಿಕ ಪೊಲೀಸ್ ಗಿರಿಯೇ ಎಂದು ಅವರು ಪ್ರಶ್ನಿಸಿದರು .
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಸುಪ್ರೀತ್ ರೈ ಖಂಡಿಗ , ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ, ಸದಸ್ಯ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.
Friday, 23 August 2013
ಪುತ್ತೂರು: ಸಂಘ ಪರಿವಾರ ಮತ್ತು ಬಿಜೆಪಿಯವರು ಗೋ ರಕ್ಷಣೆಯ ಹೆಸರಿನಲ್ಲಿ ಕೋಮು ಪ್ರಚೋದನಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮರೆಯಲ್ಲಿ ಗೋವುಗಳ ಕಳ್ಳತನ ನಡೆಸುವ ಮತ್ತು ನೈತಿಕ ಪೊಲೀಸ್ಗಿರಿ ನಡೆಸುತ್ತಿರುವ ವಿಚಾರವು ಸವಣೂರಿನಲ್ಲಿ ನಡೆದ ಪ್ರಕರಣದ ಮೂಲಕ ಬಹಿರಂಗಗೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿಯ ಅಧ್ಯಕ್ಷ ಶಾಫಿ ಬೆಳ್ಳಾರೆ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಧಾನ ಸಭಾ ಚುನಾವಣೆಯ ಬಳಿಕ ಅಸ್ಥಿತ್ವ ಕಳೆದುಕೊಂಡಿರುವ ಸಂಘಪರಿವಾರವು ಇದೀಗ ಜಿಲ್ಲೆಯಾದ್ಯಂತ ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದು ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದ ಅವರು ಸವಣೂರು ಪ್ರಕರಣದಲ್ಲಿ ಗೋವುಗಳ ಮಾಲಕ ಉಸ್ಮಾನ್ ಎಂಬವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದರು
ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ಚಪ್ಪಲಿ ಮಾರಾಟಗಾರ ಅಝೀಝ್ ಎಂಬವರ ಮೇಲೆ ಹಲ್ಲೆ ನಡೆದಾಗ ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು, ಸಂಘ ಪರಿವಾರದ ಒತ್ತಾಯಕ್ಕೆ ಮಣಿದು ಅಝೀಝ್ ಅವರ ಮೇಲೆ ಮಾನಭಂಗ ಕೇಸು ದಾಖಲಿಸಿ ನೈತಿಕ ಪೊಲೀಸ್ಗಿರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಬಳಿಕ ಉಪ್ಪಿನಂಗಡಿಯಲ್ಲಿ ಇಮ್ರಾನ್ ಖಾನ್ ಎಂಬ ಹೆಸರಿನ ಬೆಂಗಳೂರು ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅರೆಬೆತ್ತಲೆ ಮೆರವಣಿಗೆ ನಡೆಸಿದಾಗಲೂ ಪೊಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ತಪ್ಪು ಮಾಡಿದಲ್ಲಿ ಅವರನ್ನು ಶಿಕ್ಷೆಗೊಳಪಡಿಸಲು ಇಲಾಖೆ ಮತ್ತು ಕಾನೂನುಗಳಿವೆ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದ ಅವರು ಕಾಲೇಜುಗಳಲ್ಲಿ ಕೋಮು ವಿಷಬೀಜ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಹೊರಗಿನ ಶಕ್ತಿಗಳು ಶೈಕ್ಷಣಿಕ ಕೇಂದ್ರಗಳಿಗೆ ಪ್ರವೇಶಿಸಿ ಶಿಕ್ಷಣರಂಗವನ್ನು ಹಾಲುಗೆಡವುತ್ತಿದೆ ಎಂದು ಆರೋಪಿಸಿದರು.
ಸಕರ್ಾರ ಮತ್ತು ಪೊಲೀಸ್ ಇಲಾಖೆ ನೈತಿಕ ಪೊಲೀಸ್ ಗಿರಿಯನ್ನು ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಇವರ ಮೇಲೆ ಮೃಧು ಧೋರಣೆ ಮುಂದುವರಿಸಿದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಝೀಝ್ ಕಬಕ, ಪುತ್ತೂರು ವಲಯ ಅಧ್ಯಕ್ಷ ಕೆ.ಎಚ್. ಖಾಸಿಂ, ಕುಂಬ್ರ ವಲಯ ಅಧ್ಯಕ್ಷ ರಿಝ್ವಾನ್, ಕಬಕ ವಲಯ ಅಧ್ಯಕ್ಷ ಅಶ್ರಫ್ ಬಾವು ಉಪಸ್ಥಿತರಿದ್ದರು.
ಹಿಂದೂ ಸಂಘಟನೆ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ
ಪುತ್ತೂರು:ಸವಣೂರಿನಲ್ಲಿ ನಡೆದ ಗೋಸಾಗಾಟದಲ್ಲಿ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಮುಖಂಡ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
ಸವಣೂರಿನ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರೊಬ್ಬರು ಶಾಮೀಲಾಗಿ ಸವಣೂರಿನಲ್ಲಿ ನಡೆದ ಗೋಸಾಗಾಟದಲ್ಲಿ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಗೂಬೆ ಕೂರಿಸಲಾಗುತ್ತಿದೆ.ಆದರೆ ವಾಸ್ತವವಾಗಿ ಸವಣೂರಿನಲ್ಲಿ ಬಜರಂಗ ದಳಘಟಕವೇ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಜರಂಗದಳ ಜಿಲ್ಲಾ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ,ದೃಶ್ಯಮಾಧ್ಯಮದ ವರದಿಗಾರನೊಬ್ಬ ಫೇಸ್ಬುಕ್ನಲ್ಲಿ ಹಿಂದೂ ಸಂಘಟನೆ ಧಕ್ಕೆ ಬರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ.ಈ ಬಗ್ಗೆ ಕಾನೂನಿನಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಕುಮಾರ್ ಜೈನ್,ಗೋರಕ್ಷಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು,ತಾಲೂಕು ಸಂಚಾಲಕ ಸಚಿನ್,ನಗರ ಸಂಚಾಲಕ ಶ್ರೀಧರ ಪಡ್ನೂರು,ಕರುಣಾಕರ ಕೊಮ್ಮಂಡ ಉಪಸ್ಥಿತರಿದ್ದರು.
ಸದಾನಂದ ಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದ = ಕಾಂಗ್ರೆಸ್
ಪುತ್ತೂರು:ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ತವರು ಕ್ಷೇತ್ರದ ಅಭಿವೃದ್ಧಿ ಹಾಕಿಕೊಂಡಿರುವ ಯೋಜನೆ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದಶರ್ಿ ಮಹಮ್ಮದ್ ಆಲಿ ಹೇಳಿದ್ದಾರೆ.
ಬುಧವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸದನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಯವುದೇ ಜನಪರವಾದ ಕೆಲಸ ಮಾಡದೇ ಈಗ ಯಾರ್ಯಾರಲ್ಲೋ ಸಮರ್ಥನೆ ಮಾಡಿಸುತ್ತಿದ್ದಾರೆ.ಇದು ಸರಿಯಲ್ಲ, ಜನರ ಹದಿ ತಪ್ಪಿಸುವ ಕೆಲಸ ಹಾಗೂ ಅನಗತ್ಯವಾಗಿ ಕಾಂಗ್ರೆಸ್ ವಿರುದ್ದ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.ಕಾಂಗ್ರೆಸ್ ಜಿಲ್ಲೆಯಿಂದ 4 ಸಚಿವರು ಇದ್ದಾರೆ ಮುಂದೆ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಯುತ್ತದೆ.ಆದರೆ ಅನಗತ್ಯವಾಗಿ ಟೀಕೆ ಮಾಡುವುದರ ಬದಲು ಬಹಿರಂಗ ಚಚರ್ೆಗೆ ಬಿಜೆಪಿ ಬರಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್,ಪುರಸಭಾ ಸದಸ್ಯ ಅನ್ವರ್ ಖಾಸಿಂ ಮೊದಲಾದವರು ಉಪಸ್ಥಿತರಿದ್ದರು.
-----------------------
Tuesday, 20 August 2013
ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಉಪಕರ್ಮ ಎಂದು ಬಹಳ ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತದೆ.ಈ ದಿನಕ್ಕೆ ಇನ್ನೊಂದು ವಿಶೆಷವೇ ರಕ್ಷಾಬಂದನ. ರಕ್ಷಾಬಂಧನ ಎಂದ ಕೂಡಲೇ ನೆನೆಪಾಗುವುದು ಅಣ್ಣ ತಂಗಿಯರ ಸಂಬಂಧ ಸಹೋದರತೆಯ ಪ್ರೇಮ. ಅಣ್ಣ ತಂಗಿಯರ ಭಾವನಾತ್ಮಕವಾಗಿ ಸ್ಮರಿಸುವ ಈ ದಿನದ ಬಾಲ್ಯದ ಅನೇಕ ಸಿಹಿಕಹಿ ನೆನಪುಗಳನ್ನು ಮನಸ್ಸಿನ ಮೂಲೆಯಲ್ಲಿ ಮೂಡಿಸುತ್ತದೆ.ಈ ರಕ್ಷಾ ಬಂಧನ ಈ ಹಬ್ಬಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶೇಷಮಹತ್ವವಿದೆ.
ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ಈ ರಕ್ಷಾಬಂಧನ ಹಬ್ಬದ ನೀತಿಯಾಗಿದೆ.
Friday, 16 August 2013
ಶಾಸಕಿ ಶಕುಂತಳಾ ಶೆಟ್ಟಿ ಮತನಾಡಿ ಸ್ವಾತಂತ್ರದಿನದಂದು ಕೂಡ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಬದ್ರತೆಯನ್ನುಕಾಣುವ ದುಸ್ತಿತಿಇಂದು ಬಂದೊರಗಿದೆ. ಈ ದೇಶದ ಲ್ಲಿ ಇದ್ದುಕೋಂಡು ಉಗ್ರಗಾಮಿಯಾಗುವುದು ನಮ್ಮ ದುರದ್ರಷ್ಟ. ನವೇಲ್ಲರು ಒಂದೇ .ಸಹ ಬಾಲ್ವೆ,ಪ್ರೀತಿ,ವಿಶ್ವಾಸ.ನಂಬಿಕೆ ಮತ್ತು ಎಲ್ಲಾ ಧರ್ಮಗಳನ್ನು ಪ್ರೀತಿಸುವ ಮೂಲಕ ನಾವೆಲ್ಲರು ಬಾರತಿರೆಂದ ನಡೆದು ಕೋಂಡರೆ ಮಾತ್ರ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ಗೌರವವಾಗಬಹುದಲ್ಲವೇ ಎಂದರು
ಈ ಸಂದರ್ಬದಲ್ಲಿ ತಶೀಲ್ದಾರ್ ಕುಳ್ಳೆ ಗೌಡ. ತಾಲೂಕು ಪಂಚಾಯತ್ತ ಅಧ್ಯಕ್ಷೆ ಶಶಿಪ್ರಭಾ ಉಪಸ್ತಿತರಿದ್ದರು
67 ನೇ ಸ್ವಾತಂತ್ರೋತ್ಸವ ಸಡಗರವನ್ನು ಪುತ್ತೂರಿನಲ್ಲಿ ಕಿಲ್ಲೆ ಮೈದಾನದಲ್ಲಿ ಇಂದು ಬೆಳಿಗ್ಗೆ ಆಚರಿಸಲಾಯಿತು. ಪುತ್ತೂರಿನ ಸಹಾಯಕ ಆಯುಕ್ತರಾದ ಪ್ರಸನ್ನರವರು ಧ್ವಜಾರೋಹಣಗೈದರು.
ಬಳಿಕ ಮಾತನಾಡಿದ ಪ್ರಸನ್ನರವರು ಸಬ್ಮೆರಿನ್ನ ಸ್ಪೋಟದಲ್ಲಿ ಮಡಿದ ಯೋದರಿಗೆ ಸಂತಾಪ ಸೂಚಿಸಿದರು. ಸ್ವಾತಂತ್ರ ದೇಶ ಕೇವಲ ಹೆಸರಿಗೆ ಮಾತ್ರವಲ್ಲ ಹಾಗೆಯೇ ಸ್ವಾತಂತ್ರದಿನ ಇಂದಿಗೆ ಮಾತ್ರ ವಲ್ಲ ನಮ್ಮವರು ಅಂದು ಬ್ರಿಟಿಷರ ಕೈಯಿಂದ ಈ ದೇಶವನ್ನು ಸ್ವತಂತ್ರಗೊಳಿಸಿದ್ದನ್ನು ನಾವು ಅನುಭವಿಸಬೇಕಾಗಿದೆ ಮುಂದಿನದಿನಗಳಲ್ಲಿ ಬಲಿಷ್ಟವಾದ ದೇಶವನ್ನು ಸಂವಿದಾನಬದ್ದವಾಗಿ ಕಟ್ಟೋನ ಎನ್ನುವ ಸಂದೇಶವನ್ನು ನೀಡಿದರು
Monday, 15 April 2013
Vasudeva (SMT) Puttur
ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಧ್ವಜ ಏರಿಸುವ ಪ್ರಕ್ರಿಯೆಗೆ ಗರುಡ ಬೇಕಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ದಾರ ಕಾರ್ಯದ ಈ ಸಂದರ್ಭದಲ್ಲಿ ಗರುಡ ಕೂಡಾ ಸಿದ್ದವಾಗುತ್ತಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಈ ಸಂದರ್ಭದಲ್ಲಿ ಗರುಡ ಕೂಡಾ ಅಲಂಕಾರಗೊಳ್ಳುತ್ತಿದೆ. ಬೆಟ್ಟಂಪಾಡಿಯ ವಾಸುದೇವ ಅವರು ಗರುಡ ಚಿತ್ರ ನಿಮರ್ಾಣದಲ್ಲಿ ತೊಡಗಿದ್ದಾರೆ.ಮೂಲತ: ಕಾಸರಗೋಡು ಜಿಲ್ಲೆಯ ಕೂಡ್ಲುಬಳಿಯ ಕಾವುಗುಳಿಯ ಇವರು ಕಳೆದ 10 ದಿನಗಳಿಂದ ಈ ಕೆಲಸವನ್ನು ದೇವಸ್ಥಾನದ ವಠಾರದಲ್ಲಿ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಜಾತ್ರೆ ವೇಳೆ ಗ್ರಾಮ್ಯ ಭಾಷೆಯಲ್ಲಿ ಕೊಡಿ ಏರುವುದು ಎಂಬ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಕೊಡಿಮರದಲ್ಲಿ (ಧ್ವಜಸ್ಥಂಭದಲ್ಲಿ) ಗರುಡ ನೇತಾಡುತ್ತದೆ. ಮನುಷ್ಯನ ಅಥವಾ ಬೇತಾಳದ ಮಾದರಿಯಲ್ಲಿ ಇರುವ ಈ ಆಕೃತಿಯು ಕೆಲವು ಪ್ರಮುಖ
ದೇವಸ್ಥಾನಗಳಲ್ಲಿ ಇರುತ್ತದೆ. ಈ ಗರುಡ ಆಕೃತಿಯನ್ನು ಕೆಲವೇ ಕೆಲವು ಜನ ಮಾತ್ರಾ ತಯಾರಿಸುತ್ತಾರೆ. ಅಂತಹವರಲ್ಲಿ ವಾಸುದೇವ ಒಬ್ಬರು.
ಒಂದು ನೂತನ ಗರುಡ ನಿಮರ್ಾಣಕ್ಕೆ ಕನಿಷ್ಠ 6 ತಿಂಗಳ ಕೆಲಸ ಇದೆ ಎನ್ನುವ ವಾಸುದೇವ್ ಇದರಲ್ಲಿ ಕೆಂಪು , ಕಪ್ಪು , ಬಿಳಿ ಹಾಗೂ ಹಳದಿ ಬಣ್ಣ ಉಪಯೋಗಿಸಲಾಗುತ್ತದೆ. ಒಮ್ಮೆ ತಯಾರು ಮಾಡಿದರೆ ಸುಮಾರು 20 ರಿಂದ 30 ವರ್ಷದವರೆಗೂ ಬಾಳ್ವಿಗೆ ಬರುತ್ತದೆ. ಆದರೆ 5 ವರ್ಷಗಳಿಗೊಮ್ಮೆ ದುರಸ್ತಿ ಮಾಡಿದರೆ ಸೈ. ಸುಮಾರು 73 ವರ್ಷದ ಇವರು ಇದುವರೆಗೆ 15 ರಷ್ಟು ನೂತನ ಗರುಡ ರಚನೆ ಮಾಡಿದ್ದಾರೆ.
ಪುತ್ತೂರಿನಲ್ಲಿ ಇರುವ ಗರುಡವು ಅನೇಕ ವರ್ಷಗಳ ಹಿಂದೆ ಮಾಡಲಾಗಿದೆ. ಈಗಲೂ ಸುಸಜ್ಜಿತವಾಗಿದೆ. ಆದರೆ ಗ ದೇವಸ್ಥಾನ ಜೀಣರ್ೋಧ್ದಾರಗೊಂಡು ಬ್ರಹ್ಮಕಲಶ ಆಗುವ ವೇಳೆ ಮತ್ತೆ ಸುಂದರವಾಗಿ ರೂಪುಗೊಳಿಸಬೇಕಿದೆ. ಇನ್ನು 15 ದಿನಗಳ ಒಳಗಾಗಿ ಆಕರ್ಷಕ ಗರುಡ ರಚನೆ ಆಗಲಿದೆ ಎನ್ನುತ್ತಾರೆ ವಾಸುದೇವ.
Saturday, 13 April 2013
Gas tanker 2
ದುರಂತ ನಡೆದು ಸರಿಯಾಗಿ 24 ಗಂಟೆ ಕಳೆದರೂ ಆಘಾತದಿಂದ ಸ್ಥಳೀಯರು ಇನ್ನೂ ಹೊರಬಂದಿಲ್ಲ. ಹತ್ತಿರದಲ್ಲಿ ಹೊತ್ತಿ ಭಸ್ಮವಾಗಿದ್ದ ಅಂಗಡಿಯ ಕಿಡಿ ಇನ್ನೂ ಆರಿಲ್ಲ. ಜನಸಾಗರ ಕುತೂಹಲದಿಂದ ಇನ್ನೂ ಹರಿದು ಬರುತ್ತಲೇ ಇದೆ. ಇದು ಬುಧವಾರದಂದು ಕಂಡ ಘಟನೆ.
ಯಮ ಸ್ವರೂಪಿ ಟ್ಯಾಂಕರ್ ಪಲ್ಟಿಯಾಗಿ 8 ಮಂದಿ ಸಜೀವ ದಹನವಾಗಿ 24 ಗಂಟೆ ಕಳೆದಿದೆ. ಈಗಲೂ ಕೂಡಾ ಹೆದ್ದಾರಿ ಪಕ್ಕದ ಈ ಪುಟ್ಟ ಗ್ರಾಮದಲ್ಲಿ ಭಯ ಮಾಸಿಲ್ಲ, ಆಘಾತದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲ. ಆಸುಪಾಸಿನ ಎಲ್ಲಾ ಮನೆಗಳಿಗೆ ಕೂಡಾ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಡಿಕೆ , ತೆಂಗಿನ ಮರಗಳು ಕರಟಿ ಹೋಗಿದೆ. ಬುಧವಾರದಂದು ಮೆಸ್ಕಾಂ ಸಿಬಂದಿಗಳು ತುಂಡಾದ ಮುಖ್ಯ ತಂತಿಯ ಮರುಜೋಡಣೆ ಕೆಲಸ ಮಾಡುತ್ತಿದ್ದಾರೆ.ನಿನ್ನೆ ಬೆಳಗ್ಗೆ ಹೊತ್ತಿದ ಬೆಂಕಿಯಲ್ಲಿ ಇಂದಿಗೂ ಬೀಡಿ ಬ್ರಾಂಚ್ ಅಂಗಡಿಯಲ್ಲಿನ ಬೆಂಕಿಯ ಕಿಡಿ ಇನ್ನೂ ಆರಿಲ್ಲ. ಹೊಗೆಯಾಡುತ್ತಲೇ ಇದೆ.
ಸ್ಥಳಕ್ಕೆ ಐಜಿ ಪ್ರತಾಪ್ ರೆಡ್ಡಿ , ಎಸ್ಪಿ ಅಭಿಷೇಕ್ ಗೋಯಲ್ , ಎಎಸ್ಪಿ ಸದಾನಂದ ವಣರ್ೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ನಡುವೆ ಸಾರ್ವಜನಿಕರು ತಂಡತಂಡವಾಗಿ ಆಗಮಿಸಿ ದುರಂತ ನಡೆದ ಸ್ಥಳವನ್ನು ನೋಡಿ ಮರುಕ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದುರಂತದಲ್ಲಿ ಮೃತಪಟ್ಟ ಶೋಭಾ ಅವರ ಪತಿ ಶಂಕರ ರೈ ಖಾಸಗೀ ಬಸ್ಸಿನಲ್ಲಿ ನಿವರ್ಾಹಕ.ಮಂಗಳವಾರ ಕೆಲಸಕ್ಕೆ ರಜೆ ಮಾಡಿ ಖಾಸಗೀ ಕೆಲಸಕ್ಕೆ ಹೋಗಲು ಮಮನೆಯಿಂದ ಸ್ವಲ್ಪ ಮೇಲಿನ ಬಸ್ಸು ನಿಲ್ದಾಣಕ್ಕೆ ತೆರಳಿದ್ದರು. ಹೀಗೆ ಹೊರಟು 15 ನಿಮಿಷದಲ್ಲಿ ದುರಂತ ನಡೆದಿದೆ.ಕೂಡಲೇ ಬಸ್ಸು ನಿಲ್ದಾಣದ ಬಳಿಯಿಂದ ಮನೆಯ ಹಿಂಬದಿಗೆ ದೂರದಿಂದ ಬಂದಾಗ ಮನೆಯೇ ಉರಿಯುವುದು ಕಂಡಿತು , ಪತ್ನಿ ಬೆಂಕಿಯಲ್ಲಿ ಸುಡುವುದು ಕಂಡಿತು , ಆದರೆ ಏನೂ ಮಾಡಲಾಗದ ಸ್ಥಿತಿ ಅದಾಗಿತ್ತು ಎಂದು ಶಂಕರ್ ರೈ ಘಟನೆಯನ್ನು ವಿವರಿಸುತ್ತಾರೆ. ಈಗ ಮನೆಯಲ್ಲಿ ಏನೂ ಇಲ್ಲದೆ ಖಾಲಿ ಕೈಯಲ್ಲಿ ಇರಬೇಕಾದ ಸ್ಥಿತಿ ಬಂದಿದೆ ಎಂದು ಹೇಳುತ್ತಾರೆ.
ಮನೆ ಸುತ್ತಲೂ ಹೊತ್ತಿ ಉರಿಯಿತು. . . ಮನೆ ಉಳಿಯಿತು. . .!
ಘಟನೆ ನಡೆದ 50 ಮೀಟರ್ ದೂರದ ಗುಡ್ದದಲ್ಲಿ ಲಾರಿ ಚಾಲಕ ಉಮ್ಮರ್ ಂಬವ ಮನೆ ಇದೆ. ನೇರವಾಗಿ ಟ್ಯಾಂಕರ್ ಪಲ್ಟಿಯಾದ ಜಾಗದಲ್ಲೇ ಇದೆ. ಇವರ ಮನೆ ಮುಂಭಾಗದ ಚಿಕ್ಕು , ತೆಂಗಿನ ಮರ ಎಲ್ಲವೂ ಹೊತ್ತಿ ಉರಿದಿದೆ. ಮನೆಯ ಹಿಂಭಾಗದ ತೆಂಗಿನ ಮರವೂ ಕರಟಿಹೋಗಿದೆ. ಆದರೆ ಮನೆಯ ವಯರಿಂಗ್ ಸುಟ್ಟುಹೋದದ್ದು ಬಿಟ್ಟರೆ ಬೇರೆ ಯಾವುದೇ ಅನಾಹುತ ಆಗಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಮನೆಯ ಮೇಲೆ ಗುಡ್ಡದಲ್ಲಿ ತೆಂಗಿನ ಗರಿಗಳನ್ನು ತುಂಡರಿಸುತ್ತಿದ್ದಾಗ ಲಾರಿ ಪಲ್ಟಿಯಾಗಿ ಬೆಂಕಿ ಬಂದಾಗ ಮನೆಯವರಿಗೆ ಹೇಳಿ ಓಡಲು ತಿಳಿಸಿ ನಾನು ನೀರು ಸುರಿದೆ ಎಂದು ಘಟನೆಯನ್ನು ವಿವರಿಸುತ್ತಾರೆ.
ಮೃತರ ಅಂತ್ಯ ಸಂಸ್ಕಾರ :
ಘಟನೆಯಲ್ಲಿ ಮೃತರಾದ ಎಲ್ಲಾ ಶವಗಳನ್ನೂ ಮಂಗಳವಾರ ರಾತ್ರಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮಾಂಸದ ಮುದ್ದೆಯಂತಾಗಿದ್ದ ಈ ದೇಹಗಳಲ್ಲಿ ಕೆಲವುಗಳನ್ನು ಉಪ್ಪಿನಂಗಡಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದರೆ . ಟ್ಯಾಂಕರ್ ಚಾಲಕನ ಶವ ಮಂಗಳೂರಿನ ಶವಾಗಾರದಲ್ಲಿ ಇಡಲಾಗಿದೆ.
ಹೆದ್ದಾರಿಯಲ್ಲಿ ಮತ್ತೆ ಯಮರೂಪಿ ಟ್ಯಾಂಕರ್ ಓಡಾಟ :
ಮಂಗಳವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 8 ಜನ ಸಜೀವ ದಹನವಾದ ಬಳಿಕ ಬುಧವಾರದಂದು ಮತ್ತೆ ಅದೇ ವೇಗದಲ್ಲಿ ಗ್ಯಾಸ್ ಟ್ಯಾಂಕರ್ಗಳು ಓಡಾಟ ನಡೆಸುತ್ತಿವೆ. ಈಗ ಗ್ಯಾಸ್ ಟ್ಯಾಂಕರ್ ಹಿಂಬಾಗದಲ್ಲಿ ಹೋಗುವುದೇ ಅಪಾಯಕಾರಿ ಎಂದು ಸಾರ್ವಜನಿರು ಮಾತನಾಡಿಕೊಳ್ಳುವಂತಾಗಿದೆ.
ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ , ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮೊಕ್ಕಾಂ ಹೂಡಿದ್ದು ಸಮಾರೋಪಾದಿಯ ಕೆಲಸದಲ್ಲಿ ನಿರತವಾಗಿವೆ.
ಮೃತಪಟ್ಟ ಕುಟುಂಬಗಳಿಗೆ ಮತ್ತು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಟುಂಬಗಳಿಗೆ ಸಕರ್ಾರ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಿದ್ದಾರೆ..
ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಶಿರಾಡಿವರೆಗೆ ಆಗಾಗ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅವಘಡಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ಹೆದ್ದಾರಿ ಬದಿಯಲ್ಲಿ ವಾಸಿಸುವುದೇ ಈಗ ಸಾವಿನ ಮೇಲೆ ಮಲಗಿದಂತೆಯೇ ಆಗಿದೆ. ಹೀಗಾಗಿ ಈ ಭಾಗದಲ್ಲಿ ತುತರ್ು ಕಾರ್ಯಕ್ಕಾಗಿ ಅಗ್ನಿಶಾಮಕ ದಳದ ವ್ಯವಸ್ಥೆ ಆಗಬೇಕು, ಈ ಮೂಲಕ ಅವಘಡಗಳು ನಡೆದ ತಕ್ಷಣವೇ ಪರಿಹಾರ ಕಾರ್ಯ ನಡೆಯಲು ಸಹಾಯವಾಗುತ್ತದೆ. ಇಲ್ಲದೇ ಇದ್ದಲ್ಲಿ ಕನಿಷ್ಠ 30 ನಿಮಿಷವಾದರೂ ದುರಂತದ
ಸ್ಥಳಗಳಿಗೆ ಅಗ್ನಿಶಾಮಕ ದಳದ ಸಿಬಂದಿಗಳು ತಲುಪಲು ಸಾಧ್ಯವಾಗುವುದಿಲ್ಲ ಎಂದು ಸ್ಥಳೀಯರಾದ ಲೋಕೇಶ್ ಒತ್ತಾಯಿಸಿದ್ದಾರೆ.
-----------------------
ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ - ಪ್ರತಾಪ್ ರೆಡ್ಡಿ
ಟ್ಯಾಂಕರ್ಗಳ ಅಪಘಾತ ನಡೆಯುತ್ತಿರುವುದು ಹೆಚ್ಚಾಗುತ್ತಿದೆ.ಇದಕ್ಕೆ ವೇಗದ ಚಾಲನೆಯೇ ಕಾರಣ ಎಂಬ ಕಾರಣಕ್ಕಾಗಿ ಹೆದ್ದಾರಿಯಗಳಲ್ಲಿ ಇಂಟರ್ಸೆಪ್ಟರ್ ಮೂಲಕ ವೇಗ ನಿಯಂತ್ರಣಕ್ಕಾಗಿ ಹೆದ್ದಾರಿ ಪೊಲೀಸ್ ವ್ಯವಸ್ಥೆ ಬಲಪಡಿಸಲಾಗುತ್ತದೆ ಎಂದು ಪಶ್ಚಿಮ ವಲಯ ಐಜಿ ಪ್ರತಾಪ್ ತಿಳಿಸಿದ್ದಾರೆ.
ಪೆನರ್ೆಯ ಟ್ಯಾಂಕರ್ ದುರಂತದ ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಪ್ರತಾಪ್ ರೆಡ್ಡಿ ಪರಿಶೀಲನೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹೆದ್ದಾರಿಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಆರ್ಟಿಒ , ಹೈವೇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಹೆದ್ದಾರಿ ಮೂಲಸೌಲಭ್ಯ ಸೇರಿದಂತೆ ವಾಹನ ಒತ್ತಡಗಳ ನಿವಾರಣೆಗೆ ಬೇಕಾದ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ಹಿರಿಯ ಪೆಟ್ರೋಲಿಯಂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಟ್ಯಾಂಕರ್ ಚಾಲಕರಿಗೆ ಮುಂಜಾಗ್ರತಾ ಮಾಹಿತಿಗಳನ್ನು ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಅದರ ಜೊತೆಗೆ ಹಾಟ್ಸ್ಫಾಟ್ಗಳಲ್ಲಿ ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಪ್ರತಾಪ್ ರೆಡ್ಡಿ ಹೇಳಿದರು.ಹೆದ್ದಾರಿಗಳಲ್ಲಿ ಅಗ್ನಿಶಾಮಕ ದಳದ ಸಿಬಂದಿ ನಿಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಇದೇ ವೇಳೆ ಹೇಳಿದರು.
Wednesday, 10 April 2013
news puttur
ಮಂಗಳೂರಿನಿಂದ ಎಚ್ಪಿಸಿಎಲ್ ಅಡುಗೆ ಅನಿಲ ಹೇರಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಬುಲೆಟ್ ಟ್ಯಾಂಕರ್ ಪೆನರ್ೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾಯಿತು. ಈ ಸಂದರ್ಭದಲ್ಲಿ ಶಾಟರ್್ ಸಕ್ಯರ್ೂಟ್ನಿಂದ ಬೆಂಕಿ ಹತ್ತಿಕೊಂಡು ಸುಮಾರು 500 ಮೀಟರ್ ವ್ಯಾಪ್ತಿಯ ಮನೆಗಳು , ಅಂಗಡಿಗಳು ಏಕ್ಧಂ ಬೆಂಕಿಹತ್ತಿಕೊಂಡಿತು. ಈ ಸಂದರ್ಭದಲ್ಲಿ ಅಂಗಡಿ ಬಳಿ ಹಾಗೂ ಮನೆಯೊಳಗಿದ್ದ ವರೆಲ್ಲಾ ಸಜೀವ ದಹನವಾದರು. ಟ್ಯಾಂಕರ್ ಚಾಲಕ ಲಾರಿಯೊಳಗೇ ದಹನವಾದ. ಘಟನೆಯಿಂದಾಗಿ ಹೆದ್ದಾರಿ ಸಂಚಾರ್ ಬಂದ್ ಮಾಡಲಾಗಿದ್ದು ಗ್ಯಾಸ್ ಸೋರಿಕೆಯಾಗುತ್ತಿರುವುದರಿಮದ ಅಗ್ನಿ ಶಾಮಕ ದಳದ ಸಿಬಂದಿಗಳು ನಿರಂತರವಾಗಿ ಟ್ಯಾಂಕರ್ಗೆ ನೀರು ಸಿಂಚನ ಮಾಡುತ್ತಿದ್ದಾರೆ.
ಘಟನೆಯ ವಿವರ :
ಮಂಗಳೂರಿನ ಸುರತ್ಕಲ್ನಿಂದ ಬೆಳಗ್ಗೆ 16 ಸಾವಿರ ಲೀಟರ್ ಅಡುಗೆ ಅನಿಲ ತುಂಬಿಕೊಂಡು ಹೊರಟ್ಟಿದ್ದ ಬುಲೆಟ್ ಟ್ಯಾಂಕರ್ ಬೆಳಗ್ಗೆ ಸುಮಾರು 9.45 ರ ಹೊತ್ತಿಗೆ ಪೆನರ್ೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಈ ಸಂದರ್ಭದಲ್ಲಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬಗಳಿಗೆ ಕೂಡಾ ಡಿಕ್ಕಿಯಾದ್ದರಿಂದ ಶಾಟರ್್ ಸಕ್ಯರ್ೂಟ್ ಆಗಿ ಟ್ಯಾಂಕರ್ ಪಲ್ಟಿಯಾಗುವ ವೇಳೆ ಟ್ಯಾಂಕರ್ನಿಂದ ಚಿಮ್ಮಿದ ಗ್ಯಾಸ್ಗೆ ಬೆಂಕಿ ಹತ್ತಿಕೊಂಡು ಇಡೀ ವ್ಯಾಪಿಸಿತು. ಈ ಸಂದರ್ಭದಲ್ಲಿ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿದ್ದ 3 ಮನೆಗಳಿಗೆ , ಒಂದು ಗ್ಯಾರೇಜ್ಗೆ ,ಬೇಕರಿ ಅಂಗಡಿ ಸಂಪೂರ್ಣ ಭಸ್ಮವಾಗಿ ಆಸುಪಾಸಿನ ಮನೆಗಳಿಗೆ ಬೆಂಕಿ ತಗುಲಿತು. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಮಗು ಸಹಿತ ಮಹಿಳೆ , ಅಂಗಡಿಯದ್ದಲಿದ್ದ ಮಗು ಹಾಗೂ ಸ್ಥಳೀಯರು ಹಾಗೂ ಟ್ಯಾಂಕರ್ ಚಾಲಕ ಸಜೀವವಾಗಿ ದಹನವಾದರು.ಆಸುಪಾಸಿನಲ್ಲಿದ್ದ ಕೆಲವರು ಓಡಿ ಹೋದರು.
ಕೋಳಿಗಳು , ಸಾಕುಪ್ರಾಣಿಗಳು ಸುಟ್ಟು ಕರಕಲಾಗಿ ಬಿದ್ದುಕೊಂಡಿದ್ದವು. ಸ್ಥಳದಲ್ಲಿದ್ದ ಮಾಂಸದ ಮುದ್ದೆಯಂತಾಗಿದ್ದ ಮೃತದೇಹಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡೊಯ್ಯುವ ದೃಶ್ಯ ಮನಕಲಕುವಂತಿತ್ತು. ಮೃತರಲ್ಲಿ ಶೋಭಾ (35) , ಕರೀಂ (17) , ವನಿತಾ ಎಂಬವರು ಗುರುತು ಪತ್ತೆಯಾಗಿದೆ.
ಬೆಂಕಿಯ ಕೆನ್ನಾಲಿಗೆ ಸುಮಾರು 500 ಮೀಟರ್ವರೆಗೆ ವ್ಯಾಸಪಿಸಿತ್ತು. ಆಸುಪಾಸಿನ 8 ತೆಂಗಿನ ಮರ ಸಂಪೂರ್ಣ ಭಸ್ಮವಾಗಿದೆ. ಟ್ಯಾಂಕರ್ ಹಿಂಬದಿಯಿಂದ ಬರುತ್ತಿದ್ದ ಓಮ್ನಿ , ಅಂಗಡಿಗೆ ಬೇಕರಿ ವಸ್ತುಗಳನ್ನು ನೀಡಲು ನಿಲ್ಲಿಸಿದ್ದ ಮಂಗಳೂರಿನ ಕಂಪನಿಯೊಂದರ ಮಿನಿ ಲಾರಿ, ಗ್ಯಾರೇಜ್ನಲ್ಲಿದ್ದ 2 ಬೈಕ್ ಸೇರಿದಂತೆ ಒಟ್ಟು 7 ವಾಹನಗಳು ಭಸ್ಮವಾಗಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಒಟ್ಟು 13 ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವುದರ ಜೊತೆಗೆ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಿದರು.ನಿರಂತರವಾಗಿ ನೀರಿನ ಸಿಂಪಡಣೆ ಮಾಡಿ ಟ್ಯಾಂಕರ್ ತಂಪಾಗಿಸಿ ಎಚ್ಚರಿಕೆ ವಹಿಸಿದರು.
ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹಿಡಿದು ಶಂಕರ್ ರೈ , ನಾರಾಯಣ , ಅಬೂಬಕರ್ ಎಂಬವರ ಮನೆ ಚಂದ್ರ ಎಂಬವರ ಗ್ಯಾರೇಜ್ ಭಸ್ಮವಾಗಿದೆ.
ಪ್ರತ್ಯಕ್ಷದಶರ್ಿಗಳ ಮಾತು :
ಬೆಂಕಿ ಜೊತೆಗೇ ಬಂತು :
ಮನೆಯೊಳಗಿದ್ದ ಉಮ್ಮರ್ ಅವರಿಗೆ ಲಾರಿ ಬಿದ್ದ ಸದ್ದು ಕೇಳಿತು ಜೊತೆಗೆ ಹೊಗೆಯೂ ಬಂತು , ಬೆಂಕಿಯೂ ಜೊತೆ ಜೊತೆಗೇ ಬಂತು , ಮನೆಯ ಹೊರಗಿದ್ದ ಚಪ್ಪಲ್ , ಬಟ್ಟೆ ಹೊತ್ತಿ ಉರಿಯುತ್ತಿತ್ತು ಕೂಡಲೇ ಮನೆಯವರನ್ನೆಲ್ಲಾ ಓಡಲು ಹೇಳಿ , ಮನೆ ಹೊರಗಡೆ ಉರಿಯುತ್ತಿದ್ದ ಚಪ್ಪಲ್ , ಬಟ್ಟೆಗಳನ್ನು ಎಸೆದು ಓಡಿದೆ ಎಂದು ಹೇಳುತ್ತಾರೆ. ನೋಡುತ್ತಿದ್ದಂತೆಯೇ ತೆಂಗಿನಮರಗಳೆಲ್ಲಾ ಉರಿಯುತ್ತಲೇ ಇತ್ತು ಎಂದು ಭಯದಿಂದ ಹೇಳುತ್ತಾರೆ. ಆ ಸಂದರ್ಭದಲ್ಲಿ ಕೆಳಗಿನ ಮನೆಯ ಹೆಂಗಸು ನಮ್ಮ ಮನೆ ಕಡೆಗೆ ಬರುತ್ತಿದ್ದರು , ಅವರ ಕೂದಲಿಗೆ ಬೆಂಕಿ ಹಿಡಿದಿತ್ತು ಅದನ್ನು ನಂದಿಸಲು ಪ್ರಯತ್ನ ಪಟ್ಟು ಓಡಿ ಎಂದು ಹೇಳಿದೆ , ಆದರೆ ಅವರಿಗೆ ಬರಲು ಆಗಲಿಲ್ಲ , ತೀವ್ರ ಗಾಯವಾಗಿದೆ ಎಂದು ಉಮ್ಮರ್ ಹೇಳುತ್ತಾರೆ.
ಹೊಗೆ ಬಂತು ಓಡಿದೆ . .
ಮಂಗಳೂರಿನಿಂದ ಬೇಕರಿ ತಿಂಡಿಗಳನ್ನು ಹೇರಿಕೊಂಡು ಹಾಸನದ ಕಡೆಗೆ ತೆರಳುತ್ತಿದ್ದೆವು. ಈ ಸಂದರ್ಭದಲ್ಲೆ ಪೆನರ್ೆಯ ಈ ಪ್ರದೇಶದಲ್ಲಿ ಅಂಗಡಿಗೆ ಯಾವಾಗಲೂ ತಿಂಡಿ ಖಾಲಿ ಮಾಡಿ ತೆರಳುವುದು. ಇಂದು ಕೂಡಾ ಇಲ್ಲಿ ನಿಲ್ಲಿಸಿದ್ದಾಗ ಟ್ಯಾಂಕರ್ ಬಿದ್ದ ಸದ್ದು ಕೇಳಿತು , ಜೊತೆಗೆ ದಟ್ಟವಾದ ಹೊಗೆಯೂ ಬಂತು. ನಮ್ಮ ಜೊತೆಗೆ ಇದ್ದ ಕೃಷ್ಣ ಓಡಿ ಓಡಿ ಎಂದಾಗ ದಾರಿ ಸಿಕ್ಕ ಕಡೆ ಓಡುತ್ತಾ ಸಮೀಪದ ಮನೆಯವರಿಗೂ ತಿಳಿಸುತ್ತಾ ಓಡಿದೆವು. ನೋಡುತ್ತಿದ್ದಂತೆಯೇ ನಮ್ಮ ಲಾರಿಯೂ ಉರಿಯಿತು ಎಂದು ಮಿನಿ ಲಾರಿ ಚಾಲಕ ಶಿವಪ್ಪ ದೃಶ್ಯವನ್ನು ವಿವರಿಸಿದರು.
Sunday, 10 February 2013
Subscribe to:
Posts (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...









