ದಕ್ಷಿಣಕನ್ನಡ ಜಿಲ್ಲೆಯ ವಿವೇಕಾನಂದ ಶಾಲೆಯಲ್ಲೂ ಇದೇ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಕೃತಿ- ಸಂಸ್ಕಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವ ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಮಕ್ಕಳನ್ನು ಗುರುಕುಲ ಮಾದರಿಯಲ್ಲಿ ಹಿಂದೂ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಮಕ್ಕಳ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಜೊತೆಗೆ ಸಿಹಿಯನ್ನು ನೀಡಿ ಅಭಿನಂಧಿಸಲಾಯಿತು. ಕೇವಲ ಮೊದಲ ಬಾರಿಗೆ ಶಾಲೆಗೆ ಬಂದ ಮಕ್ಕಳನ್ನಲ್ಲದೆ, ಈ ಹಿಂದೆ ಕಲಿಯುತ್ತಿದ್ದ ಮಕ್ಕಳನ್ನೂ ಸೇರಿಸಿ ಬರಮಾಡಿಕೊಳ್ಳಲಾಗಿತ್ತು, ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿಗಳು, ಶಿಕ್ಷಕ-ಶಿಕ್ಷಕಿಯರು ಮಕ್ಕಳನ್ನ ಬರಮಾಡಿಕೊಂಡರು. ಶಾಲೆಗೆ ಮರಳಿ ಬಂದ ಮಕ್ಕಳು ಶಾಲೆಯ ಸಂಪ್ರದಾಯದಂತೆ ಶಿಕ್ಷಕ-ಶಿಕ್ಷಕಿಯರ ಕಾಲಿಗೆರಗಿ ನಮಸ್ಕರಿಸಿ, ಆಶೀರ್ವಾದವನ್ನೂ ಪಡೆದಿದ್ದಾರೆ. ಶಾಲೆಯ ಪ್ರಾರಂಭೋತ್ಸವದ ದಿನವೇ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳಿಗೆ ಶಾಲೆಯ ಶಿಸ್ತು, ಶಾಲೆಯ ನಿಯಮಗಳ ಪರಿಚಯವನ್ನು ಮಾಡುವ ಉದ್ಧೇಶವೂ ಈ ಕಾರ್ಯಕ್ರಮ ಆಯೋಜನೆ ಹಿಂದಿರುವ ಪ್ರಮುಖ ಉದ್ಧೇಶವೂ ಆಗಿದೆ. ಮೊದಲ ಬಾರಿಗೆ ಶಾಲೆಯ ಮೆಟ್ಟಲೇರುವ ಮಕ್ಕಳು ತಮ್ಮ ಪೋಷಕರನ್ನು ಬಿಟ್ಟು ಬರಲು ನಿರಾಕರಿಸಿ ಗೋಳಾಡುವ ಮಕ್ಕಳನ್ನು ತಮ್ಮ ಮಕ್ಕಳಂತೆ ಎತ್ತಿಕೊಂಡು ಹೋಗುವ ಶಿಕ್ಷಕಿಯರ ದೃಶ್ಯಗಳು ಶಾಲೆಯ ಪ್ರಾರಂಭೋತ್ಸವದ ದಿನ ಎಲ್ಲೆಡೆ ಕಂಡು ಬಂದಿದೆ.
Tuesday, 3 June 2025
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ..ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲೆಗಳು ವಿವಿಧ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಜ್ಯ ಸರಕಾರವೇ ಶಾಲೆ ಪ್ರಾರಂಭೋತ್ಸವ ಎನ್ನುವ ಕಾರ್ಯಕ್ರಮವನ್ನು ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಲು ಸೂಚನೆ ನೀಡಿದ್ದು, ಶಾಲೆಗೆ ಮೊದಲ ಬಾರೊಗೆ ಆಗಮಿಸುವ ಮಕ್ಕಳು ಯಾವುದೇ ಅಂಜಿಕೆಯಿಲ್ಲದೆ, ಖುಷಿ ಖುಷಿಯಾಗಿ ಶಾಲೆಗೆ ಆಗಮಿಸಬೇಕು ಎನ್ನುವುದು ಈ ಕಾರ್ಯಕ್ರಮದ ಪ್ರಮುಖ ಉದ್ಧೇಶವೂ ಆಗಿದೆ. ಸರಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳೂ ಮಕ್ಕಳನ್ನು ತಮ್ಮ ತಮ್ಮ ರೀತಿಯಲ್ಲಿ ಶಾಲೆಗೆ ಬರಮಾಡಿಕೊಳ್ಳುತ್ತಿದೆ.
Subscribe to:
Posts (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...