ಗೋವು ಬದುಕಿನ ಭಾಗವಾಗಬೇಕು- ನೂತನ ಆಂದೋಲನ- ರಾಘವೇಶ್ವರ ಶ್ರೀ
ಗೋವು ಪ್ರತಿಯೊಬ್ಬನ ಬದುಕಿನ ಭಾಗವಾದಾಗ ಮಾತ್ರ ಗೋ ರಕ್ಷಣೆ ಸಾಧ್ಯ ಯಾವುದೇ ಸಂಸತ್,ಕಾನೂನು,ಸಂಘರ್ಷದಿಂದ ಸಾಧ್ಯವಿಲ್ಲ.ಹೀಗಾಗಿ ಸದ್ಯದಲ್ಲೇ ನೂತನ ಯೋಜನೆಯನ್ನು ಆಂದೋಲನ ರೂಪದಲ್ಲಿ ಸಮಾಜದ ಎಲ್ಲರೂ ಭಾಗವಹಿಸುವಂತಹ ಯೋಜನೆ ತರುವುದಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಪೆರಾಜೆ ಮಾಣಿ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ನಮ್ಮ ಬದುಕು ರೂಪಿಸಿದ ಗೋವಿಗೆ ಇಂದು ಬದುಕೇ ಇಲ್ಲವಾಗಿದೆ.ಹೀಗಾಗಿ ಗೋವಿನ ರಕ್ಷಣೆ ಇಂದು ಅನಿವಾರ್ಯವಾಗಿದೆ.ಇದಕ್ಕೆ ಸಮಾಜದ ಎಲ್ಲರೂ ಪ್ರಯತ್ನ ಮಾಡಬೇಕಾಗಿದೆ,ಹೀಗಾಗಿ ಆಂದೋಲನವೇ ಅಗತ್ಯ ಎಂದ ಅವರು ಇದಕ್ಕೆ ಸಮಾಜವೇ ಅಂತಿಮ ಮಾಧ್ಯಮ ಎಂದರು.
ಚಾತುಮರ್ಾಸ್ಯ ಸಂದರ್ಭದಲ್ಲಿ ನಡೆಯುತ್ತಿರುವ ರಾಮಕಥಾ ಸಂತೋಷ ಹಾಗೂ ಸಂದೇಶ ಎರಡೂ ಕೂಡಾ ನೀಡುವ ಈ ಕಾರ್ಯಕ್ರಮವಾಗಿದೆ.ಎಳೆಯರಿಂದ ತೊಡಗಿ ಹಿರಿಯರವರೆಗೆ ಮಾಧ್ಯಮವಾಗಿ ರಾಮಕಥಾ ಕಾರ್ಯಕ್ರಮ ಆಕರ್ಷಣೆಯಾಗಿದೆ ಎಂದರು.
No comments:
Post a Comment