Wednesday, 4 September 2013

ಗುರುದೃಷ್ಟಿಯಿಂದ ದೋಷ ಪರಿಹಾರ-  ರಾಘವೇಶ್ವರ ಶ್ರೀ
ಪುತ್ತೂರು:ಕೆಟ್ಟಮನಸ್ಸು ಹಾಗೂ ಕಣ್ಣುಗಳಿಂದ ದೋಷಗಳು ಹೆಚ್ಚಾದರೆ,ಗುರು ದೃಷ್ಟಿಯಿಂದ ಲಕ್ಷ ದೋಷಗಳೂ ನಿವಾಋಣೆಯಾಗುತ್ತದೆ ಎಂದು   ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ಪೆರಾಜೆ ಮಾಣಿ ಮಠದಲ್ಲಿ ನಡೆದ ರಾಮಕಥಾ ಪ್ರವಚನದಲ್ಲಿ ಮಾತನಾಡಿದರು.ಅನೇಕ ಸಂದರ್ಭದಲ್ಲಿ ಬಾಹ್ಯಕಾಂತಿಗೇ ಎಲ್ಲರೂ ಮರುಳಾಗುತ್ತಾರೆ.ಆದರೆ ಬಾಹ್ಯಕಾಂತಿ ಶಾಶ್ವತ ಅಲ್ಲ, ಅಂತ:ಕಾಂತಿ ಶಾಶ್ವತವಾಗಿದೆ ಎಂದ ಶ್ರೀಗಳು ಉಪವಾಸ ದಮೂಲಕ  ದೇವರ ಸಮೀಪಕ್ಕೆ ತೆರಳಿ ಎಲ್ಲವನ್ನೂ ಮರೆಉ ದೇವರೊಂದಿಗೆ ಇದ್ದರೆ ಬದುಕು ಪಾವವಾಗುತ್ತದೆ ಎಂದರು.

ಹನುಮಂತ ಸಿಂಹಿಕೆಯ ಹೊಟ್ಟೆಯೊಳಗೆ ಪ್ರವೇಶ ಮಾಡಿ  ಹೊರಗೆ ಬರುವ ಅದ್ಭುತ ಕಥಾನಕವನ್ನು ಶ್ರೀಗಳು ವಣರ್ಿಸಿದರು.ಹನುಮ ಗೆದ್ದ ಸಿಹಿಂಕೆಗೆ ಮೋಕ್ಷವನ್ನು ಕರುಣಿಸಿದ ಕಥಾವಕವನ್ನು  ಶ್ರೀಗಳು ವಿವರಿಸಿದರು.

ಶ್ರೀಗಳು ಹೇಳಿದ್ದು:
* ಹೊಟ್ಟೆಪಾಡಿಗಾಗಿ ದೇವರ ಬಳಕೆ ಸರಿಯಲ್ಲ
*ಡಾಕ್ಟ್ರು ಹಾಕುವ ಚೂರಿಗೂ ಡಾಕು ಹಾಕುವ ಚೂರಿಯ ಭಾವದಲ್ಲಿ ವ್ಯತ್ಯಾಸ ಇದೆ
*ನಾನು ಎಂಬ ಭಾವ ಇರುವುದು ಹೃದಯದಲ್ಲಿ
*ಬಾಹ್ಯಕಾಂತಿಗೆ ಸೋಲು
*ಒಳ್ಳೆಯ ಕೆಲಸಕ್ಕೆ ದೇವರ ಸಹಾಯ ಇದೆ

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...