Thursday, 10 August 2023
Monday, 13 March 2023
Thursday, 2 March 2023
Thursday, 9 February 2023
Thursday, 26 January 2023
&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 30ನೇ ವರ್ಷದ ಕೋಟ ಚೆನ್ನಯ ಜೋಡುಕರೆ ಕಂಬಳ ಜ.28ರಂದು ಬೆಳಗ್ಗೆ 10.35ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಉದ್ಘಾಟಿಸಲಿದ್ದು, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಂಬಳ ಸಮಿತಿ ಮಾರ್ಗದರ್ಶಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಸಾಯಂಕಾಲ 6ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ಪ್ರಕಾಶ್ ಶೆಟ್ಟಿ ವಹಿಸಲಿದ್ದು, 30ನೇ ವರ್ಷದ ಸ್ಮರಣ ಸಂಚಿಕೆ ಬಿಡುಗಡೆಯನ್ನು ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾಡಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎನ್. ಸುಧಾಕರ ಶೆಟ್ಟಿ ಪುತ್ತೂರು (ಧಾರ್ಮಿಕ ಕ್ಷೇತ್ರ), ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ (ಕಂಬಳ ಕ್ಷೇತ್ರ), ಆಕಾಶ್ ಐತಾಳ್ (ಕ್ರೀಡಾ ಕ್ಷೇತ್ರ), ಸತೀಶ್ ದೇವಾಡಿಗ ಅಳದಂಗಡಿ (ಹಿರಿಯ ಕಂಬಳ ಓಟಗಾರರು), ಶ್ರೀಧರ್ ಮಾರೋಡಿ (ಕಂಬಳ ಓಟಗಾರ ಕ್ರೀಡಾರತ್ನ ಪುರಸ್ಕೃತರು) ಅವರಿಗೆ ಸನ್ಮಾನ ನಡೆಯಲಿದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ ಸುಮಾರು 200ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇಟ್ಟಿದ್ದು, ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ಮಿಂಚಿನ ಓಟದ ಕೋಣ ಚೆನ್ನ ನಿಗೆ ಸನ್ಮಾನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ನಟ ನಟಿಯರಾದ ಅದಿತಿ ಪ್ರಭುದೇವ, ಸಂಗೀತ ಶೃಂಗೇರಿ, ಸಾನಿಯ ಅಯ್ಯರ್, ದೀಪಕ್ ರೈ ಪಾಣಾಜೆ, ಸಂಗೀತ ನಿರ್ದೇಶಕ ಗುರುಕಿರಣ್, ಬಿಗ್ಬಾಸ್-9 ವಿಜೇತ ರೂಪೇಶ್ ಶೆಟ್ಟಿ, ನಿರ್ಮಾಪಕ ರವಿ ರೈ ಕಳಸ, ವಿಕ್ರಾಂತ್ ರೋಣ ಖ್ಯಾತಿಯ ವಜ್ರಧೀರ್ ಜೈನ್, ಡೈಜಿ ವರ್ಲ್ಡ ನ ವಾಲ್ಟರ್ ನಂದಳಿಕೆ ಮತ್ತಿತರರು ಭಾಗವಹಿಸದಿದ್ದಾರೆ ಎಂದರು.
ಜ.29ರಂದು ಬಹುಮಾನ ವಿತರಣೆ ನಡೆಯಲಿದ್ದು, ಅಧ್ಯಕ್ಷತೆಯನ್ನು ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್ ವಹಿಸಲಿದ್ದು, ಸಂಸದ ನಳಿನ್ ಕುಮಾರ್, ಶಾಸಕ ಮಠಂದೂರು ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಹಿರಿಯ ವಿಭಾಗದಲ್ಲಿ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ನ (16ಗ್ರಾಂ) ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್ ಹಾಗೂ ದ್ವಿತೀಯ 1/2 ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ವಿಜೇತ ಕೋಣಗಳ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿಚೆನ್ನಯ ಟ್ರೋಫಿಯನ್ನು ನೀಡಲಿದ್ದೇವೆಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.
^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^
ಪುತ್ತೂರು: ಸಾಂಸ್ಕೃತಿಕವಾಗಿ ಒಂದು ಎಂಬ ಚಿಂತನೆಯಲ್ಲಿ ದೇಶ ನಿಂತಿದೆ. ವಿದೇಶಿಗರ ನಿರಂತರ ಆಕ್ರಮಣವನ್ನು ವಿರೋಧಿಸಿ ತನ್ನತನವನ್ನು ಭಾರತ ಉಳಿಸಿಕೊಂಡಿದೆ. ಗಡಿನಾಡಿ ಉತ್ಸವದ ಮೂಲಕ ಭಾಷೆ - ಪದ್ಧತಿ ಒಂದೇ ಎಂಬುದನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ. ಭಾರತದ ಸಂಸ್ಕೃತಿ ವಿಭಿನ್ನವಾಗಿದ್ದು, ದೇವರನ್ನು ಬಿಟ್ಟು ದೇಶ ಇಲ್ಲ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಗೋಲ್ಡನ್ ಜುಬಿಲಿ ಹಾಲ್ನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿನಾಡ ಸಂಸ್ಕೃತಿ ಉತ್ಸವ-ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಗಡಿನಾಡಿನಲ್ಲಿ ಸರ್ಕಾರಗಳ ಪ್ರಭಾವದಿಂದ ಅನ್ಯಯ ಭಾಷೆಗಳನ್ನು ನಾಶ ಮಾಡಲಾಗುತ್ತಿದೆ. ಕಾಸರಗೋಡು ಭಾಗದ ಕನ್ನಡ ಶಾಲೆಗಳ ಪುನಶ್ಚೇತನ ಕಾರ್ಯ ಕರ್ನಾಟಕದಿಂದ ನಡೆಯಬೇಕಾಗಿದೆ. ವ್ಯಕ್ತಿಗೆ ಬದುಕಿನಲ್ಲಿ ಕಲಿಕೆ ಎಂಬುದು ನಿರಂತರವಾಗಿರಬೇಕು. ಜೀವನ ಪೂರ್ತಿ ಸಾಧನಕನಾಗಿ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯವಾಗಬೇಕು. ಗಡಿನಾಡಿನಲ್ಲಿದ್ದುಕೊಂಡು ಕನ್ನಡ ನಾಡಿನ ಸಂಸ್ಕೃತಿಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್, ಪೂಡಾ ಅಧ್ಯಕ್ಷ ಬಾಮಿ ಅಶೋಕ ಶೆಣೈ ಉಪಸ್ಥಿತರಿದ್ದರು. ಸಿಂಚನಾ ಭಟ್ ಪ್ರಾರ್ಥಿಸಿದರು. ಉಪನ್ಯಾಸಕಿ ಮೈತ್ರಿ ಭಟ್ ಸ್ವಾಗತಿಸಿದರು. ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್ ಪ್ರಸ್ತಾವನೆಗೈದರು. ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ವಂದಿಸಿದರು. ಸ್ನಾತಕೋತ್ತರ ವಿಭಾಗ ಡೀನ್ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.
ಐವರು ಸಾಧಕರಿಗೆ ಗೌರವ:
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ಪುತ್ತೂರಿನ ಚರ್ಮವಾದ್ಯ ತಯಾರಕ ರಾಜರತ್ನಂ ದೇವಾಡಿಗ, ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ರಾಮಕೃಷ್ಣ ಮಯ್ಯ, ಹಿರಿಯ ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ಎಡನೀರು ಉಡುಪುಮೂಲೆ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ ಸೇರಿ ಐವರು ಸಾಧಕರನ್ನು ಸನ್ಮಾನಿಸಲಾಯಿತು.
**********************************************************************************************************************************************************************
30ರಂದು ತಾಲೂಕು ಮಟ್ಟದ ಸಮನ್ವಯ ಸಮಿತಿಗಳ ಸಭೆ
ಪುತ್ತೂರು: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ನೇತೃತ್ವದಲ್ಲಿ ಪುತ್ತೂರು ತಾಲೂಕು ಮಟ್ಟದ ವಿವಿಧ ಸಮನ್ವಯ ಸಮಿತಿಗಳ ಸಭೆ ಜನವರಿ 30ರಂದು ಸೋಮವಾರ ಅಪರಾಹ್ನ 2.30 ಗಂಟೆಗೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ.
ವರದಕ್ಷಿಣೆ ನಿಷೇಧ ಕಾಯಿದೆ ಸಮಿತಿ, ಮಾದಕ ವಸ್ತು ಸೇವನೆ ನಿಷೇಧ ತಾಲೂಕು ಮಟ್ಟದ ಸಮಿತಿ, ಸ್ತ್ರೀಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ, ಸಾಗಾಣಿಕೆ ವಿರುದ್ಧ ಪ್ರಚಾರ ಆಂದೋಲನ ಸಮಿತಿ, ಬಾಲ್ಯ ವಿವಾಹ ನಿಷೇಧ ಸಮಿತಿ, ಭಾಗ್ಯಲಕ್ಷ್ಮೀ ಯೋಜನೆಯ ಕಾರ್ಯಪಡೆ ಸಮಿತಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಸಮಿತಿ, ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ, ವಿಕಲಚೇತನರ ತಾಲೂಕು ಮಟ್ಟದ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಮಾತೃವಂದನಾ ಸಮಿತಿ, ಭೇಟಿ ಬಚಾವೋ- ಭೇಟಿ ಪಡಾವೊ ಸಮಿತಿ ಇವುಗಳ ಸಭೆ ನಡೆಯಲಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
Tuesday, 24 January 2023
ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ "ವಿಜಯ ಸಂಕಲ್ಪ ಅಭಿಯಾನ" ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಹಿರೆಬಂಡಾಡಿ ಗ್ರಾಮದ ಬೂತ್ 48ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ "ವಿಜಯ ಸಂಕಲ್ಪ ಅಭಿಯಾನ" ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಹಿರೆಬಂಡಾಡಿ ಗ್ರಾಮದ ಬೂತ್ 48ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರಕವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲಾಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಉಪಾಧ್ಯಕ್ಷರಾದ ಶ್ರೀ ಮುಕುಂದ ಬಜತ್ತೂರು, ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
*#VijayaSankalpaAbhiyana |* *#ವಿಜಯಸಂಕಲ್ಪಅಭಿಯಾನ |* *#ಬಿಜೆಪಿಯೇಭರವಸೆ*
Monday, 23 January 2023
ಎಸ್.ಕೆ.ಎಸ್.ಎಸ್.ಎಫ್. ವಿದ್ಯಾರ್ಥಿ ಯುವಜನ ಸಂಘಟನೆಯು ಜನವರಿ 26 ಪ್ರಜಾಪ್ರಭುತ್ವ ದಿನದ ಪ್ರಯುಕ್ತ ರಾಷ್ಟ್ರ ರಕ್ಷಣೆಗೆ ಸೌರ್ಹಾವತೆಯ ಸಂಕಲ್ಪ' ಎಂಬ ದ್ವೇಯ ವಾಕ್ಯದೊಂದಿಗೆ ದೇಶದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರತೀ ವರ್ಷ ಹಮ್ಮಿ ಕ್ಕೊಳ್ಳುವ ಮಾನವ ಸರಪಳಿ ಕಾರ್ಯಕ್ರಮವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕೇಂದ್ರಗಳಲ್ಲಿ ನಡೆಯಲಿದೆ. ಎಸ್.ಕೆ.ಎಸ್.ಎಸ್.ಎಫ್, ಈಸ್ ಜಿಲ್ಲಾ ಸಮಿತಿ ವತಿಯಿಂದ ಮಧ್ಯಾಹ್ನ 200ರಿಂದ ಉಪ್ಪಿನಂಗಡಿಯಲ್ಲಿ ನಡೆಯಲಿದೆ.
ಪ್ರಮುಖ ಕಾರ್ಯಕ್ರಮಗಳು ಸೌಹಾರ್ದ, ಜಾಥಾ, ಮಧ್ಯಾಹ್ನ 2:00 ಗಂಟೆಗೆ ಸೌಹಾರ್ದತೆಯ ಸಂದೇಶ ಸಾರುವ ಜಾಥಾ ಕೂಟೇಲು ದರ್ಗಾ ಝಿಯಾರತಿನೊಂದಿಗೆ ಆರಂಭಗೊಳ್ಳಲಿದ್ದು ವಿವಿಧ ದಫ್ , ತಂಡಗಳು ಭಾಗವಹಿಸಲಿದೆ.
ಎಸ್.ಕೆ.ಎಸ್.ಎಸ್.ಎಫ್., ಇವರ ಉಪ ವಿಭಾಗಗಳಾದ ವಿಖಾಯ , ತೈಲಬಾ, ಕ್ಯಾಂಪಸ್ ತಂಡಗಳು ಸಮವಸ್ತ್ರದೊಂದಿಗೆ ಪಾಲ್ಗೊಳ್ಳಲಿದೆ. ಮೆರವಣಿಗೆಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಘೋಷ ವಾಕ್ಯಾಗಳು ಮೊಳಗಲಿದೆ. ತದನಂತರ 4 ಗಂಟೆಗೆ ಸಭಾ ಕಾರ್ಯಕ್ರಮವು ನಡೆಯಲಿದೆ. ನೆರೆದ ಜನರೆಲ್ಲರೂ ಪರಸ್ಪರ ಕೈಜೋಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ . ಸಮಸ್ತ ಕೇಂದ್ರ ಮುಷವಾರ ಸದಸ್ಯರಾದ ಬಹು ಬಂಬ್ರಾನ ಉಸ್ತಾದರು. ಉದ್ಘಾಟಿಸಲಿದ್ದು, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಬಹು| ಉಸ್ಮಾನುಲ್ ಫೈಝಿ ಉಸ್ತಾದರು ಅನುಗ್ರಹ ಭಾಷ ಮಾಡಲಿದ್ದಾರೆ. ಎಸ್ಎಸ್ಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಆನೀಸ್ ಕೌಸರಿ ವಿಷಯ ಮಂಡಿಸಿ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಸ್ಯೆ ಮತ್ತು ಸತ್ವಾ ಉಪ ಸಮಿತಿಗಳ ನೇತಾರರು, ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು
ಬಾಗವಹಿಸಲಿರುವರು, ಸೌಹಾರ್ದ ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಮತ ಬೇಧವಿಲ್ಲದೆ ಸರ್ವರೂ ಈ ಸಂಗಮದಲ್ಲಿ ಭಾಗವಹಿಸಿಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ದಕ ಈಸ್ಟ್ ಜಿಲ್ಲೆ ಅಧ್ಯಕ್ಷರಾದ ತಾಜುದ್ದೀನ್ ರಾಹ್ಮನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Sunday, 22 January 2023
#ಪಣೆಮರಗಳಬೀಡುಪಾಣಾಜೆಯರಣಮಂಗಲನಿಗೀಗಸಂಭ್ರಮದಜಾತ್ರೆ.
#ರಣಕ್ಕೆಮಂಗಲಹಾಡಿದಪುಣ್ಯನೆಲ_ರಣಮಂಗಲ.
#ಅರಳಿವೃಕ್ಷಗಳಬೀಡುದೈವಗಳನಾಡು_ಅರಳಿಪದವು..
#ಈಹೆಸರಿನಹಿಂದಿರುವಐತಿಹ್ಯಗಳಸುತ್ತಒಂದುನೋಟ.
ಹೌದು ರಣಮಂಗಲನಿಗೀಗ ಜಾತ್ರೆಯ ಸಂಭ್ರಮ. ನಾವೆಲ್ಲರೂ ಕಾತರದಿಂದ ಕಾಯುತ್ತಿರುವ ನಮ್ಮೂರಿನ ಹಬ್ಬ.
ಅಂದಹಾಗೆ ನಮ್ಮೂರಿರೋದು ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವುನಲ್ಲಿ. ಈ ಹೆಸರಿನ ಹಿಂದೆ ಒಂದು ಸುಂದರ ಐತಿಹ್ಯ ಕಥೆ ಇದೆ.
ಹಿಂದೆ #ಕೌಸ್ತುಭನೆಂಬ ಮಹಾ ತಪಸ್ವಿಯು ತನ್ನ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಾ,ಉಡುಪಿ, ಕದ್ರಿ, ಕಟೀಲು, ಮುಂತಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಈ ಸ್ಥಳಕ್ಕೆ ಬಂದಾಗ, ಇಲ್ಲಿ ಹುಲಿ- ದನ, ಹಾವು- ಮುಂಗುಸಿ ತಮ್ಮ ವೈರತ್ವವನ್ನು ಮರೆತು ಅನ್ಯೋನ್ಯವಾಗಿ ಇರುವುದನ್ನು ಕಾಣುತ್ತಾನೆ, ಮಾತ್ರವಲ್ಲದೆ ಈ ಪ್ರದೇಶದಲ್ಲಿ ಸಾಕಷ್ಟು #ಅರಳಿವೃಕ್ಷಗಳುಬೆಳೆದು_ನಿಂತಿದ್ದು ತನ್ನ ತಪಸ್ಸಿಗೆ ಇದೇ ಯೋಗ್ಯ ಸ್ಥಳವೆಂದು ನಿರ್ಧರಿಸಿ ಅರಳಿ ವೃಕ್ಷದ ಕೆಳಗೆ ಧ್ಯಾನ ಮಾಡುತ್ತಾನೆ.
ಮುಂದೆ ಆತ ದೀಕ್ಷೆ ಪಡೆದ, ಅರಳಿ ವೃಕ್ಷ ಗಳು ಹೇರಳವಾಗಿ ಬೆಳೆದು ನಿಂತ ಈ #ಪ್ರದೇಶವನ್ನುಅರಳಿಪದವುಎಂದುಕರೆದು, ಇದರ ಫಲವಾಗಿ ಕ್ರಮೇಣ ಜನರ ಆಡುನುಡಿಯಲ್ಲಿ #ಅರಳಿಪದವುಆರ್ಲಪದವಾಗಿ_ಪ್ರಚಲಿತವಾಯಿತು ಎನ್ನಲಾಗಿದೆ.
ಇಲ್ಲಿಂದ ದಕ್ಷಿಣದೆಡೆಗೆ ಸುಮಾರು ಒಂದೂವರೆ ಕಿಲೋಮೀಟರ್ ಸಾಗಿದರೆ ಕಾಣಸಿಗುವ ರಮಣೀಯ ತಾಣವೇ #ರಣಮಂಗಲಶ್ರೀಸುಬ್ರಮಣ್ಯ_ಕ್ಷೇತ್ರ.
ಪಚ್ಚೆ ಪೈರಿನ ವನರಾಶಿಯ ನಡುವೆ ಕಂಗೊಳಿಸುವ ಈ ದೇವಸ್ಥಾನ ಬಲು ನಯನಮನೋಹರವಾಗಿದೆ.
#ಸರಿಸುಮಾರು_800ವರ್ಷಗಳಇತಿಹಾಸವಿರುವ ಈ ಕ್ಷೇತ್ರದ ಐತಿಹ್ಯ, ಅತ್ಯಂತ ಸ್ವಾರಸ್ಯಕರ. ಶತಮಾನಗಳ ಹಿಂದೆ ಹೆಸರಾಂತ ಅರಸು ಪೆರ್ಮಾಣ ಬಲ್ಲಾಳ ಘಟ್ಟದಾಯಿಂದ ದಿಗ್ವಿಜಯಕ್ಕಾಗಿ ಸಾಗಿ ಬಂದವನು ಇಲ್ಲಿ #ರಣಕ್ಕೆಮಂಗಳಹಾಡಿದುದರಿಂದಈಸ್ಥಳರಣಮಂಗಲವಾಯಿತಂತೆ. ಮುಂದೆ ಇದೇ ಸ್ಥಳದಲ್ಲಿ ಶ್ರೀ ಸುಬ್ರಮಣ್ಯನ ದೇವಾಲಯ ವನ್ನು ಸ್ಥಾಪಿಸಿದ ಎಂಬುದು ಪೂರ್ವ ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಹಿಂದೆ ಬಳ್ಳಾಲರ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರಾಂತ್ಯದ ದೇವಸ್ಥಾನ ಸಾಕಷ್ಟು ಸಂಪತ್ಬರಿತ ವಾಗಿತ್ತು.ಕ್ರಮೇಣ ಬಲ್ಲಾಳರ ಅವನತಿಯ ಕಾಲದಲ್ಲಿ ಊರಿನಲ್ಲಿ ಸಮರ್ಥರೆನಿಸಿಕೊಂಡಿದ್ದ #ವೇದಮೂರ್ತಿಗೋವಿಂದಬೋಳಿಲ್ಲಾಯರಿಗೆ_ಹಸ್ತಾಂತರಿಸಲಾಯಿತು.
ಅಂದಿನಿಂದ ಬೋಳಿಲ್ಲಾಯ ಮನೆತನದ ಸುಮಾರು ಎಂಟು ತಲೆಮಾರಿನ ಮೂಲಕ ಮುಂದುವರಿದು ಇಂದು ಪ್ರಸ್ತುತ #ಶ್ರೀಕೃಷ್ಣಬೋಳಿಲ್ಲಾಯರಆಡಳಿತದಲ್ಲಿಕಾರ್ಯನಿರ್ವಹಿಸುತ್ತಿದೆ.
ಇಲ್ಲಿ ನಾಗನಿಗೆ ಪ್ರಿಯವಾದ ಹತ್ತು ಹಲವು ಸೇವೆಗಳು ನಡೆಯುತ್ತಿದ್ದು ಅದರಲ್ಲೂ ವಿಶೇಷವಾಗಿ ಆಶ್ಲೇಷ ಪೂಜೆ, ಕಾರ್ತಿಕ ಪೂಜೆ ಬಹಳ ಪ್ರಾಮುಖ್ಯವಾದದ್ದು, ದೂರದ ಮೈಸೂರು ಹಾಗೂ ಬೆಂಗಳೂರು ಕಡೆಯಿಂದಲೂ ಭಕ್ತರು ಆಗಮಿಸುತ್ತಿದ್ದು ತಮ್ಮ ಸೇವೆಯನ್ನು ಸಮರ್ಪಿಸಿ ಸದಾ ಧನ್ಯತಾಭಾವದಿಂದ ತೆರಳುತ್ತಿದ್ದಾರೆ.
ಈ ದೇವಸ್ಥಾನದ ಅಧೀನದಲ್ಲಿರುವ ದೈವಸ್ಥಾನವೆಂದರೆ #ಶ್ರೀಪೂಮಾಣಿಕಿನ್ನಿಮಾಣಿ_ದೈವಸ್ಥಾನ.
ದೇವಸ್ಥಾನದಿಂದ ಬಯಲು ದಾರಿಯಾಗಿ ನಡೆದು ಬರುವುದಾದರೆ ಕೆಲವೇ ನಿಮಿಷಗಳು ಸಾಕು. ಆರ್ಲಪದವಿನ ಸುಂದರ ಪರಿಸರದಲ್ಲಿ ಕಾಣಸಿಗುವ ಈ ದೈವಸ್ಥಾನವು ತನ್ನದೇ ಆದ ಇತಿಹಾಸವನ್ನು ಹೊಂದಿದೆ.
ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ಮಹಾ ವಿಷ್ಣುವಿನ ಅಂಶ ಸಂಭೂತರು. #ಮಹಾವಿಷ್ಣುತಾವರೆಹೂವಿನಎಸಳಿನಲ್ಲಿದೈವಗಳನ್ನು_ಸೃಷ್ಟಿಸಿದನಂತೆ. ದೈವಗಳು ದಕ್ಷಿಣ ಗಂಗೆ ಎಂದೆನಿಸಿದ ತಲಕಾವೇರಿಯಲ್ಲಿ, ಅಲ್ಲಿನ ಅರ್ಚಕರಿಗೆ ಚಿಕ್ಕ ಮಕ್ಕಳ ರೂಪದಲ್ಲಿ ದೊರೆತರು. ಅರ್ಚಕರು ಮಕ್ಕಳನ್ನು ದೇವಾಲಯಕ್ಕೆ ಕರೆದೊಯ್ದು ಅಲ್ಲಿಯೇ ಲಾಲನೆ ಪಾಲನೆ ಮಾಡುತ್ತಿರಬೇಕಾದರೆ, ಶೈವಾವಸ್ಥೆ ಕಳೆದು ಪ್ರೌಢಾವಸ್ಥೆಗೆ ಬಂದಂತೆ ಅವರಿಗೆ ತಮ್ಮ ಸೃಷ್ಟಿಯ ಅರಿವು ಉಂಟಾಯಿತು. ಒಂದು ದಿನ ಅವರಿಗೆ ಮಹಾವಿಷ್ಣುವು ಕನಸಿನಲ್ಲಿ ದರ್ಶನವಿತ್ತು, ಮಕ್ಕಳೇ, ನೀವಿನ್ನು ಇಲ್ಲಿರಬಾರದು, ತುಳುನಾಡಿಗೆ ಹೋಗಿ ಅಲ್ಲಿಯ ಜನರಿಗೆ ದೈವಪ್ರಜ್ಞೆ ಉಂಟಾಗುವಂತೆ ಮಾಡಿ, ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳಾಗಿ ಆರಾಧನೆ ಪಡೆಯಿರಿ, ಎಂದು ಆಜ್ಞಾಪಿಸಿದರು. ಈ ರೀತಿಯಾಗಿ ಇಲ್ಲಿ ನೆಲೆನಿಂತವರು ಇಂದು ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾ ಜನರಲ್ಲಿ ಭಯ ಭಕ್ತಿ ತುಂಬುವಂತೆ ಮಾಡಿದ ದೈವಗಳೇ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು.
ಇವರ ಜೊತೆಗೆ ಪರಿವಾರ ದೈವಗಳಾದ ರಾಜನ್ ದೈವ ಮಲರಾಯ ದೈವಗಳು ಇಲ್ಲಿ ನೆಲೆ ನಿಂತಿವೆ.
ಪ್ರತಿವರ್ಷ ನಡೆಯುವ #ವಾರ್ಷಿಕಜಾತ್ರೆಯೂಜನವರಿತಿಂಗಳ_22ರಿಂದದೇವಾಲಯದಿಂದಮೊದಲ್ಗೊಂಡು28ರವರೆಗೆವಿವಿಧಧಾರ್ಮಿಕಹಾಗೂಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತಿ ವಿಜೃಂಭಣೆಯಿಂದ ನಡೆಯುತ್ತಿದೆ.. ಬನ್ನಿ ನಮ್ಮೂರಿನ ಜಾತ್ರೋತ್ಸವಕ್ಕೆ ನಿಮಗೆಲ್ಲರಿಗೂ #ಪ್ರೀತಿಪೂರ್ವಕ_ಸ್ವಾಗತ.
ಮಾಹಿತಿ ಆಧಾರ. ಕುಮಾರ ವೈಭವ ರಣ ಮಂಗಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ದ ವಿಶೇಷಾಂಕ.1994.
ಮತ್ತು ಕೊರಗಪ್ಪ ಪೂಜಾರಿ ನಡುಕಟ್ಟ ಇವರ ರಣಮಂಗಲ ಕ್ಷೇತ್ರ ಮಹಾತ್ಮೆ ಯಕ್ಷಗಾನ.
✍ ಹರೀಶ್ ಕೆ ಪಾಣಾಜೆ.
ಸಹಕಾರ . ಮಹಾಬಲೇಶ್ವರ ಭಟ್ಟ ಗಿಳಿಯಾಲು. ಪ್ರದೀಪ್ ಪಾಣಾಜೆ.
ಚಿತ್ರ.. ಹರೀಶ್ ಪೂಜಾರಿ ಅರುಣ್ ಸ್ಟುಡಿಯೋ ಆರ್ಲಪದವು
Saturday, 21 January 2023
ಭೈರವೈಕ್ಯ ಪರಮಪೂಜ್ಯಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅ...
Friday, 20 January 2023
ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ, ಸಹೋದರನ ಮಾಹಿತಿಯನ್ನು ಪಡೆಯುವ ಜತೆಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಕೊಯಿಲ ನಿವಾಸಿ ನಿಝಾಮ್ (25) ಆಸ್ಪತ್ರೆಯಗೆ ದಾಖಲಾಗಿದ್ದಾರೆ. ಸಹೋದರ ಶಾರೂಕ್ (23) ಅವರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗಿದೆ.
ಮಂಗಳೂರಿನ ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಹೋದರನ ಮಾಹಿತಿ ಪಡೆದು ಆತನನ್ನು ಅಪಹರಣ ಮಾಡಿ ಹಣ ತರದೇ ಹೋದರೆ ತಮ್ಮನನ್ನು ಕೊಲೆ ಮಾಡುವುದಾಗಿ ಹೇಳಿದ್ದಾರೆ ಎಂದು ನಿಝಾಮ್ ಹೇಳಿದ್ದಾರೆ. ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...