Wednesday, 2 October 2013

Netravathi

 ರೋಹಿಣಾಕ್ಷ ಶಿಲರ್ಾಲು
ಕನರ್ಾಟಕದ  ಕೆಲವು ಜಿಲ್ಲೆಗಳಿಗೆ ಬೇಕಾದ ನೀರನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೆತ್ತಿಕೊಳ್ಳಲು ಉದ್ಧೇಶಿಸಿರುವ ಎತ್ತಿನಹೊಳೆ ಯೋಜನೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧವ್ಯಕ್ತವಾಗುತ್ತಿದ್ದು, ಈ ಸಂಬಂಧ ಕಟ್ಟಡ ನಿಮರ್ಾಣ ಕಾರ ಕಾಮರ್ಿಕರು ಇಂದು ಬೀದಿಗಿಳಿದು ವಿವಿದ ರೀತಿಯ ಹೋರಾಟನಡೆಸಲು ಸಜ್ಜಾಗಿದ್ದಾರೆ. ಪರಮಶಿವಯ್ಯ  ವರದಿಯ ಕರಡನ್ನು ಊರಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ . ಜಿಲ್ಲೆಯ  ಕುಮಾರದಾರ ಮತ್ತು ನೇತ್ರಾವತಿಯ ಏಕೈಕ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ತಿರುವು ಯೋಜನೆಯ ವಿರುದ್ದ ಒಂದು ತಿಂಗಳಲ್ಲಿ ಇದು 3 ನೇ ಪ್ರತ್ತಿಭಟನೆಯಾಗಿರುತ್ತದೆ.

 ನೇತ್ರಾವತಿ ನದಿಯನ್ನು ಎತ್ತಿನಹೊಳೆ ಎನ್ನುವ ಪ್ರದೇಶದಲ್ಲಿ ಉತ್ತರಭಾಗಕ್ಕೆ ತಿರುಗಿಸುವ ಈ ಯೋಜನೆಯಿಂದ ಉತ್ತರ ಕನರ್ಾಟಕದ ಕೋಲಾರ, ಚಿಕ್ಕಬಳ್ಳಾಪುರ,ಬೆಂಗಳೂರು ಉತ್ತರ ಹೀಗೆ ಒಂಬತ್ತು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸುವುದಾಗಿ ಹೊರಟಿರುವ ರಾಜ್ಯ ಸರಕಾರದ ತೀಮರ್ಾನಕ್ಕೆ ಕರಾವಳಿಭಾಗದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ.ನೇತ್ರಾವತಿ ಈ ಬಾಗದ ಜನರ ಜೀವನದಿ ಮತ್ತು ಭಾಗ್ಯದೇವತೆ. ಇದನ್ನೆ ನಂಬಿಕೊಂಡು ಬದುಕು ಕಟ್ಟಿಕಂಡವರು ಹಲವರು. ಇಂದು ಆ ಭಾಗ್ಯದೇವತೆಗೆ ಸಂಕಷ್ಟಬಂದಿದೆ .ಎತ್ತಿನಹೊಳೆ ಯೋಜನೆಯ ಕುರಿತು ಜನರಿಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಯಾವುದೇ ರೀತಿಯ ಪ್ರಾಕೃತಿಕ,ಜೈವಿಕ ತೊಂದರೆ ಮಾಡದೇ 24 ಟಿ.ಎಂ.ಸಿ. ನೀರನ್ನು ಮೇಲ್ಮುಕವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಸಾಧ್ಯವೇ ಇಲ್ಲ. ಜನರನ್ನು ದಾರಿ ತಪ್ಪಿಸುವ ಕಾರ್ಯ ನಿಲ್ಲಬೇಕು ದಕ್ಷಿಣ ಕನ್ನಡ ಜಿಲ್ಲೆಗೆ ನೇತ್ರಾವತಿಯೇ ಉಸಿರು. ಅದಕ್ಕೆ ಬರುವ ನೀರನ್ನು ತಿರುಗಿಸಿದರೆ ಮುಂದೋಂದು ದಿನ ನದಿ ಬತ್ತಿ ಹೋಗಿ ನಾಶವಾಗುವುದಲ್ಲಿ ಸಂದೇಹವಿಲ್ಲ ಮಾತ್ರವಲ್ಲದೆ ದಕ್ಷಿಣ ಕನ್ನಡದಲ್ಲಿ ಕುಡಿಯುವ ನೀರಿನ ಅಭಾವ ಕೂಡ ತಲೆದೋರಲಿದೆ ಎನ್ನುತ್ತಾರೆ
ನೇತ್ರಾವತಿಯ ಮೂಲವಾದ ಎತ್ತಿನಹೊಳೆ ತಿರುಗಿಸಿದರೆ ಅದರ ಜೀವ ತೆಗೆದಂತೆ. ಅದನ್ನು ಊಹಿಸಲು ನಮ್ಮಿಂದ ಸಾದ್ಯವಿಲ್ಲ. ನದಿಯನ್ನು ತಡೆದರೆ, ಅಮೂಲ್ಯ ಮಲೆಕಾಡು, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಜಲಚರಗಳು ನಾಶವಾಗಲಿವೆ. ಅಗಾಧ ವೆಚ್ಚ ಮತ್ತು ಅಷ್ಟೇ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗುವ ಈ ಯೋಜನೆ ನಮಗೆ ಬೇಡವೇ ಬೇಡ. ದಕ್ಷಿಣ ಕನ್ನಡದ ಜನತೆಯ ಬದುಕನ್ನು ಬಲಿ ಕೊಟ್ಟು  ನದಿ ತಿರುವು ಯೋಜನೆಗೆ ಕೈಜೋಡಿಸುವ ರಾಜಕಾರಣಿಗಳನ್ನು ತಿರಸ್ಕರಿಸಿದರೆ ನಮ್ಮ ನದಿ ಉಳಿಯುತ್ತದೆ . ಎತ್ತಿನಹೊಳೆ ಜಾರಿಯಾದರೆ, ಕಾವೇರಿ ನೀರಿಗಾಗಿ ಕನರ್ಾಟಕ ಮತ್ತು ತಮಿಳುನಾಡು ಸಂಘರ್ಷ ನಡೆಯುತ್ತಿರುವಂತೆ, ನೇತ್ರಾವತಿ ನದಿ ನೀರಿಗಾಗಿ ದಕ್ಷಿಣ ಕನ್ನಡ ಮತ್ತು ಬಯಲುಸೀಮೆ ಮಧ್ಯೆ  ವಿವಾದ, ಸಂಘರ್ಷ ನಡೆದು ಹೊತ್ತಿ ಉರಿಯುವ ಸಾಧ್ಯತೆಗಳಿವೆ. ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಿ ಪಶ್ಚಿಮಘಟ್ಟವನ್ನೂ ನಾಶಮಾಡುವ ಯೋಜನೆಯನ್ನು ಜೀವ ಕೊಟ್ಟಾದರೂ ಉಳಿಸುವ ದಿಟ್ಟ ನಿಧರ್ಾರಕ್ಕೂ ಇದೀಗ ಜಿಲ್ಲೆಯ ಜನತೆ ಬಂದಿದ್ದಾರೆ.
ಒಟ್ಟಾರೆಯಾಗಿ ಈ ಯೋಜನೆಯಿಂದ 10 ಸಾವಿರ ಹೆಕ್ಟೇರ್ ಅರಣ್ಯ ನಾಶ ಎಂದರೂ, 28 ಸಾವಿರ ಹೆಕ್ಟೇರ್ ನಾಶವಾಗಲಿದೆ. ಒಂದು ವರ್ಷದಲ್ಲಿ ಮುಗಿಸುವ ಯೋಜನೆ ವೆಚ್ಚ 8323 ಕೋಟಿ ರೂ. ಎಂದು ಸರಕಾರ ಹೇಳಿದರೂ, 10- 20 ವರ್ಷ ಮುಂದುವರಿದು, 20 ಸಾವಿರ ಕೋಟಿ ರೂ. ದಾಟಿದರೂ ಆಶ್ಚರ್ಯವಿಲ್ಲ.ಕೋಲಾರ, ಚಿತ್ರದುರ್ಗ ಜಿಲ್ಲೆ ಜನರಿಗೆ ನಿರಂತರ ನೀರಿನ ಭ್ರಮೆ ಹುಟ್ಟಿಸಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೇಬು ತುಂಬಿಸುವ ಇರಾದೆ ಇದ್ದಂತಿದೆ ಅಸಂಬದ್ಧ ಈ ಯೋಜನೆಯು ಎಷ್ಟು ಸರಿಯೆಂದು ಸರಕಾರ ಅಲೋಚಿಸ ಬೇಕಾಗಿದೆ 

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...