ಹಿಂದೂ ಸಂಘಟನೆ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ
ಪುತ್ತೂರು:ಸವಣೂರಿನಲ್ಲಿ ನಡೆದ ಗೋಸಾಗಾಟದಲ್ಲಿ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಮುಖಂಡ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
ಸವಣೂರಿನ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರೊಬ್ಬರು ಶಾಮೀಲಾಗಿ ಸವಣೂರಿನಲ್ಲಿ ನಡೆದ ಗೋಸಾಗಾಟದಲ್ಲಿ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಗೂಬೆ ಕೂರಿಸಲಾಗುತ್ತಿದೆ.ಆದರೆ ವಾಸ್ತವವಾಗಿ ಸವಣೂರಿನಲ್ಲಿ ಬಜರಂಗ ದಳಘಟಕವೇ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಜರಂಗದಳ ಜಿಲ್ಲಾ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ,ದೃಶ್ಯಮಾಧ್ಯಮದ ವರದಿಗಾರನೊಬ್ಬ ಫೇಸ್ಬುಕ್ನಲ್ಲಿ ಹಿಂದೂ ಸಂಘಟನೆ ಧಕ್ಕೆ ಬರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ.ಈ ಬಗ್ಗೆ ಕಾನೂನಿನಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಕುಮಾರ್ ಜೈನ್,ಗೋರಕ್ಷಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು,ತಾಲೂಕು ಸಂಚಾಲಕ ಸಚಿನ್,ನಗರ ಸಂಚಾಲಕ ಶ್ರೀಧರ ಪಡ್ನೂರು,ಕರುಣಾಕರ ಕೊಮ್ಮಂಡ ಉಪಸ್ಥಿತರಿದ್ದರು.
No comments:
Post a Comment