Tuesday, 16 October 2012
Sunday, 14 October 2012
Agriculture_Sri Padre
ಕೃಷಿಕರ ಬಳಿ ಅನೇಕ ಮಾಹಿತಿಗಳು ಇವೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಅಪರೂಪದ ಕೃಷಿ ಮಾಹಿತಿಗಳ ವಿನಿಮಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿಪರ ಮಾಧ್ಯಮಗಳ ಅನಿವಾರ್ಯತೆ ಇದೆ ಎಂದು ಪತ್ರಕರ್ತ ಶ್ರೀಪಡ್ರೆ ಹೇಳಿದರು.
ಅವರು ಪುತ್ತೂರಿನ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಶುಕ್ರವಾರದಂದು ಪೇಸ್ಬುಕ್ನ ಎಗ್ರಿಕಲ್ವರಿಸ್ಟ್ ಗುಂಪಿನ ಮೊದಲ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಯ ಕಡೆಗೆ ಎಷ್ಟು ಜನ ಆಕಷರ್ಿತರಾಗುತ್ತಾರೋ ಎಂಬುದು ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಮುಖ್ಯವಾಗಿ ಮಾಹಿತಿಗಳ ವಿನಿಯಮವೂ ಅಗತ್ಯವಾಗುತ್ತದೆ. ಮೌಲಿಕವಾದ ಮಾಹಿತಿಗಳು ಕೃಷಿಕರಿಗೆ ವಿವಿಧ ಮೂಲಗಳ ಮೂಲಕ ಸಿಕ್ಕಾಗ ಅನುಭವಗಳ ಮೂಟೆ ದೊಡ್ಡದಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲೂ ಜಳ್ಳು ಇರುತ್ತದೆ , ಅದೇ ರೀತಿ ಪೇಸ್ಬುಕ್ನ ಗುಂಪಿನಲ್ಲೂ ಇರಬಹುದು , ಆದರೆ ಅದಕ್ಕೆ ಹೆಚ್ಚು ಮಹತ್ವ ನೀಡದೆ ಪ್ರಯೋಜನಕರವಾದ ಮಾಹಿತಿಗಳನ್ನು ಪಡೆಯಬಹುದು ಎಂದು ಶ್ರೀಪಡ್ರೆ ಹೇಳಿದರು. ಅನೇಕ ಗುಂಪುಗಳು ಸಮಾಜದಲ್ಲಿ ಗುಂಪುಗಾರಿಕೆ ಮಾಡಲೇ ಇದೆ ಎಂದು ಕೇಳಿದ್ದೇವೆ , ಆದರೆ ಪೇಸ್ಬುಕ್ನ ಈ ಗುಂಪುಗಾರಿಕೆ ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ , ಕೃಷಿಕರಿಗೆ ವಿವಿಧ ರೀತಿಯ ಸಂವಹನಗಳು ತೀರಾ ಅಗತ್ಯ ಇದೆ.ಕೃಷಿಕರು ಕೃಷಿಯ ಜೊತೆಗೆ ಮಾತನಾಡುವುದು ಮತ್ತು ಬರೆಯಲು ಕೂಡಾ ಕಲಿಯಬೇಕು. ಇದಕ್ಕೆ ಹಿಂಜರಿಕೆ ಇರಬಾರದು , ಹೀಗಾದಾಗ ಮಾತ್ರಾ ಮಾಹಿತಿ ಸಿಗಲು ಸಾಧ್ಯ ಎಂದು ಶ್ರೀನಿವಾಸ ಆಚಾರ್ ಹೇಳಿದರು.
ಸಭೆಯಲ್ಲಿ ಗುಂಪಿನ ಅನೇಕ ಸದಸ್ಯರು ಭಾಗವಹಿಸಿದ್ದರು. ಎಗ್ರಿಕಲ್ಚರಿಸ್ಟ್ ಗುಂಪಿನಿಂದಾಗ ಪ್ರಯೋಜನ ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
M.P.Nalin kumar
ನೇರ ನಡೆನುಡಿಯ ಸಾಹಿತಿ ಡಾ.ಶಿವರಾಮ ಕಾರಂತರು ಸಾಹಿತ್ಯ ಮಾತ್ರವಲ್ಲ ಯಕ್ಷಗಾನ , ಆಧ್ಯಾತ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದವರು. ಪ್ರತೀ ಕ್ಷೇತ್ರದಲ್ಲಿ ಕೂಡಾ ಅವರು ವ್ಯಕ್ತಿ ನಿಮರ್ಾಣ ಕೆಲಸ ಮಾಡುತ್ತಿದ್ದರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಪುತ್ತೂರಿನಲ್ಲಿ ಡಾ.ಶಿವರಾಮ ಕಾರಂತ ಜನ್ಮ ದಿನಾಚರಣೆಯ ಪ್ರಯುಕ್ತ ಬಾಲವನ ಸಮಿತಿ ವತಿಯಿಂದ ಕೊಡಮಾಡುವ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷರಂಗದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸಂಸದ ನಳಿನ್ ಕುಮಾರ್ ಮಾತನಾಡಿದರು. ಕಾರಂತರು ಪ್ರತಿಭೆಯ ಅನ್ವೇಷಣೆ ನಿರಂತರ ಮಾಡುತ್ತಿದ್ದರು. ಹೀಗಾಗಿ ಯಕ್ಷರಂಗದಲ್ಲಿ ಪೇತ್ರಿ ಮಾಧವ ನಾಯ್ಕ್ರಂತಹ ಹಿರಿಯ ಕಲಾವಿದರನ್ನು ತಮ್ಮ ಜೊತೆ ಸುಮಾರು 35 ವರ್ಷಗಳ ಕಾಲವೂ ಜೊತೆಯಲ್ಲೇ ಇರಿಸಿಕೊಂಡಿದ್ದರು ಎಂದ ನಳಿನ್ ಸಮಾಜದಲ್ಲಿ ಅಸ್ಪಶ್ಯತೆ ಹಾಗೂ ಇತರ ಕಂದಾಚಾರಗಳ ಬಗ್ಗೆಯೂ ಕಾರಂತರು ಧ್ವನಿ ಎತ್ತಿದ್ದರು ಎಂದು ನಳಿನ್ ಹೇಳಿದರು.
ಬಾಲವನ ಅಭಿವೃದ್ಧಿಗೆ ಸಂಸದರ ನಿಧಿಯಿಂದ 5 ಲಕ್ಷ ರೂಪಾಯಿ ನೀಡುವುದಾಗಿ ಇದೇ ವೇಳೆ ನಳಿನ್ ಕುಮಾರ್ ಘೋಷಿಸಿದರು.
Friday, 12 October 2012
Balavana Habba
ಯಕ್ಷಗಾನಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೇ ದೊರಕುವಂತೆ ಮಾಡುವಲ್ಲಿ ಹಾಗೂ ಯಕ್ಷಗನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯ ಹಿಂದೆ ಶಿವರಾಮ ಕಾರಂತರ ಕೊಡುಗೆ ಅಪಾರವಾದುದು ಎಂದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಎಂ.ಎಲ್ ಸಾಮಗ ಹೇಳಿದರು.ಅವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕಾರಂತರ ಕರ್ಮಭೂಮಿ ಬಾಲವನದಲ್ಲಿ ನಡೆದ 111 ನೇ ಕಾರಂತರ ಜನ್ಮದಿನಾಚರಣೇ ಸಮಾರಂಭವ್ನನು ಉದ್ದೇಶಿಸಿ ಮಾತನಾಡಿದರು.
ಫ್ರೋ.ಎಂ.ಎಲ್ ಸಾಮಗ
ಅಧ್ಯಕ್ಷರು ಕನರ್ಾಟಕ ಯಕ್ಷಗಾನ ಬಯಲಾಟ ಬೆಂಗಳೂರು.
ಸಾಹಿತ್ಯ ಸೇರಿದಂತೆ ಎಲ್ಲಾ ರಂಗಗಳಿಗೂ ಶಿವರಾಮ ಕಾರಂತರ ಕೊಡುಗೆ ಅಪಾರವಾಗಿದ್ದು ಯಕ್ಷಗಾನದ ಮೇಲೆ ಅವರು ಬೀರಿದ ಪ್ರಭಾವ ಗುರುತಿಸುವಂತಹುದಾಗಿದ್ದು,ಯಕ್ಷಗಾನದಲ್ಲಿ ನಿರಂತರ ಹೊಸತನವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಅವರು ನಡೆಸಿದ್ದಾರೆ ಎಂಧರು.ತನ್ನ ಎಲ್ಲಾ ಸಾಹಿತ್ಯಗಳಲ್ಲಿ ಮನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿದ ಕಾರಂತರ ಪುಸ್ತಕಗಳು ಎಲ್ಲಾ ಕಾಲಗಳಿಗೂ ಸೂಕ್ತವಾದದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರಂತರ ಕೃತಿಗಳಲ್ಲಿ ಸಾಮಜಿಕ ತುಡಿಗಳು ಮತ್ತು ಶಿರಾಮಕಾರಂತರ ಸಾಂಸ್ಕೃತಿಕ ಒಲವು ಕುರಿತ ಗೋಷ್ಟಿಯು ಇದೇ ಸಂದರ್ಭದಲ್ಲಿ ನಡೆಯಿತು.
ಡಾ.ಶಿವರಾಮ ಕಾರಂತರ ಯಕ್ಷರಂಗದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ್ ಅವರಿಗೆ 10 ಸಾವಿರ ನಗದು , ಶಾಲು ಲಪುಷ್ಟ ನೀಡಿ ಗೌರವಿಸಲಾಯಿತು. ಯಕ್ಷಗಾನ ಅಕಾಡೆಮಿಯ ಸದಸ್ಯ ಬಾಸ್ಕರ ಬಾರ್ಯ ಅಭಿನಂದಾ ಮಾತುಗಳನ್ನಾಡಿದರು. ಸನ್ಮಾನದ ಬಳಿಕ ಮಾತನಾಡಿದ ಪೇತ್ರಿ ಮಾಧವ ನಾಯ್ಕ್ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ , ಸಹಾಯಕ ಕಮೀಶನರ್ , ಬಾಲವನ ಸಮಿತಿ ಅಧ್ಯಕ್ಷ ಎಚ್.ಪ್ರಸನ್ನ,ಬಾಲವನ ಈಜುಕೊಳ ಉಪಸಮಿತಿ ಅಧ್ಯಕ್ಷ ಸೀತಾರಾಮ ರೈ ಉಪಸ್ಥಿತರಿದ್ದರು.
Tuesday, 9 October 2012
Endo_Nalin kumar
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ ಮಾದರಿಯಾಗ ಬೇಕಿದೆ.ರಾಜ್ಯಸರಕಾರ ಈಗಾಗಲೇ 2 ಬಾರಿ ರಾಜ್ಯದಲ್ಲಿ ಎಂಡೋಸಲ್ಫಾನನ್ನು ನಿಷೇದಿಸಿದ್ದರೂ ಕೇಂದ್ರಕ್ಕೆ ಈ ಕಾಳಜಿಇಲ್ಲ ಎಂಧು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
Monday, 8 October 2012
Endo_Koyila_DV Sadananda gowda
ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಯಾವುದೇ ಸರಕಾರದ ವಿರುದ್ದವೂ ಹೋರಾಟನಡೆಸಲು ನಾನು ಸಿದ್ದ ಎಂಧು ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದ ಗೌಡ ಘೋಷಿಸಿದರು.ಅವರು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಲಾದಲ್ಲಿ ನೂತನವಾಗಿ ಆರಂಭಿಸಿದ ವಿಕಲ ಚೇತನಕ್ಕೊಳಗಾದ ವಿಕಲ ಚೇತನ ಪಾಲನಕೇಂದ್ರದ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮತನಾಡಿದರು.ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಎಂಢೋಸಲ್ಫಾನ್ ದುಷ್ಪರಿಣಾಮದಿಂಧಾಗಿ ಸಂತ್ರಸ್ತ್ತ್ತರಾದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆಸಿದ ಹಲವು ಹೋರಾಟಗಳಿಗೆ ಕನರ್ಾಟಕ ರಾಜ್ಯ ಸರಕಾರ ಸ್ಪಂದಿಸಿದ್ದು ತಾನೂ ಮುಖ್ಯಮಂತ್ರಿಯಾದ ಸಂಧರ್ಭದಲ್ಲಿ ಈ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಲು ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದರು.ಈ ಕುಟುಂಬಗಳ ನೋವಿಗೆ ಸ್ಪಂದಿಸಲು ಸರಕಾರ ಬದ್ದವಾಗಿದ್ದು ಯಾವುದೇ ಸರಕಾರವಾಗಲೀ ಈ ಬಗ್ಗೆ ನಿರಾಸಕ್ತಿ ವಹಿಸಿದರೆ ತಾನು ಹೋರಾಟವನ್ನು ನಡೆಸಲೂ ಸಿದ್ದವಿರುವುದಾಗಿ ಹೇಳಿದರು.
ಬೈಟ್:ಡಿ ವಿ ಸದಾನಂಧ ಗೌಡ
Thursday, 4 October 2012
Balavana puttur_Press
2012ನೇ ಸಲಿನ ಬಾಲವನ ಪ್ರಶಸ್ತಿಗೆ ಮಾಧವ ನಾಯ್ಕ್ ಇವರನ್ನು ಆಯ್ಕೆ ಮಾಡಲಾಗಿದ್ದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸದಸ್ಯ ಭಾಸ್ಕರ ಬಾರ್ಯ ಇವರು ಅಭಿನಂದನಾ ಭಾಷಣ ಮಾಢಲಿರುವರು. ಈ ಸಂದರ್ಬದಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಾಲವನ ಸಮಿತಿ ಅಧ್ಯಕ್ಷ ಮತ್ತು ಪುತ್ತೂರು ಸಹಾಯಕ ಆಯುಕ್ತರಾದ ಹೆಚ್.ಪ್ರಸನ್ನ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
Wednesday, 3 October 2012
Aravinda Limbavali Byte Endo
ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಬುಧವಾರದಂದು ಭೇಟಿ ನೀಡಿದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ , ಎಂಡೋಪೀಡಿತ ಮಕ್ಕಳನ್ನು ಹಾಗೂ ಇತರ ಸಂತ್ರಸ್ತರನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಡೋಸಲ್ಫಾನ್ ಸಂತ್ರಸ್ತರನ್ನು ಆರಂಭದಲ್ಲಿ ಗುರುತಿಸಿದ ಬಳಿಕ ತಜ್ಞ ವೈದ್ಯರಿಂದ ಅಂತಹ ಸಂತ್ರಸ್ತರನ್ನು ಪರೀಕ್ಷೆಗೆ ಒಳಪಡಿಸಿ ಎಂಡೋಸಲ್ಫಾನ್ನಿಂದ ತೊಂದರೆ ಆಗಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಆ ಬಳಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದ ಅರವಿಂದ ಲಿಂಬಾವಳಿ , ಇದರ ಜೊತೆಗೆ ಕೊಕ್ಕಡ ಪ್ರದೇಶದಲ್ಲಿ ಎಂಡೋ ಪೀಡಿತರಿಗಾಗಿಯೇ ಮೊಬೈಲ್ ಕ್ಲಿನಿಕ್ , ಅಂಬುಲೆನ್ಸ್ ಸೇವೆ ಸೇರಿಂದತೆ ಇತರ ವ್ಯವಸ್ಥೆಗಳನ್ನು ಒದಗಿಸಲಾಗುತ್ತದೆ ಎಂದರು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು ನಂತರ ಇತರ ಜಿಲ್ಲೆಗಳಲ್ಲೂ ಎಂಡೋ ಬಗ್ಗೆ ದೂರುಗಳು ಬಂದರೆ ಹಾಗೂ ವರದಿಗಳು ಬಂದರೆ ಅಲ್ಲೂ ಸಮೀಕ್ಷೆ ನಡೆಸಲಾಗುತ್ತದೆ ಎಂದು ಲಿಂಬಾವಳಿ ಹೇಳಿದರು.
ಗ್ರಾಮದಲ್ಲಿ ಇಷ್ಟು ಪ್ರಮಾಣದಲ್ಲಿ ಅಂಗವಿಕಲತೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಂಡುಬಂದಿರುವುದಕ್ಕೆ ಇಲ್ಲಿ ಸಿಂಪಡಿಸಿದ ಸೌಷಧಿಯೇ ಕಾರಣ , ಹೀಗಾಗಿ ಈಗ ಸಕರ್ಾರ ಕ್ರಮಕೈಗೊಳ್ಳುತ್ತಿದೆ , ಖಚರ್ು ಮಾಡುತ್ತಿದೆ. ಇದಕ್ಕಾಗಿ ಕಂಪನಿ ಹಾಗೂ ಸಿಂಪಡಿಸಿದವರೇ ಕಾರಣರಾಗುತ್ತಾರೆ. ಆದರೆ ಇಲ್ಲಿ ಸಕರ್ಾರವೇ ಔಷಧಿ ಸಿಂಪಡಿಸಿದೆ ಎಂದು ಪತ್ರಕರ್ತರು ಸಚಿವರ ಗಮನ ಸೆಳೆದಾಗ , ಸಕರ್ಾರ ಹಾಗೂ ಆ ಸಂದರ್ಭದಲ್ಲಿ ಇದಕ್ಕೆ ಕಾರಣರಾದವರ ಮೇಲೂ ಕ್ರಮ ಅಗತ್ಯವಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಚನ್ನಪ್ಪ ಗೌಡ , ಆರೋಗ್ಯಾಧಿಕಾರಿ ಡಾ.ಒ.ರಂಗಪ್ಪ , ಮಾಜಿ ಶಾಸಕ ಪ್ರಭಾಕರ ಬಂಗೇರ , ಪ್ರಮುಖರಾದ ಕುಶಾಲಪ್ಪ ಗೌಡ , ಪ್ರತಾಪ್ ಸಿಂಹ , ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಮೊದಲಾದವರು ಇದ್ದರು.
ಒ.10 ರಿಂದ ಸಮೀಕ್ಷೆ , ಇದು ಸಡೇಕೇರ್ ಸೆಂಟರ್ , ರೀಹೆಬಿಲಿಟೇಶನ್ ಸೆಂಟರ್ ಮಾಡುತ್ತೇವೆ , ಅರ್ಧ ಅಂಗವಿಕಲರಿಗೆ ಪುನರ್ ವಸತಿ ಕೆಂದ್ರ ,
ಸಮೀಕ್ಷೆಯಲ್ಲಿ ಎಂಟೋ ಸಂತ್ರಸ್ತರನ್ನು ಮಾತ್ರಾ ಸಮೀಕ್ಷೆ , ಆರಂಭದಲ್ಲಿ ಎಷ್ಟು ಜನ ಸಂತ್ರಸ್ತರು ಇದ್ಧಾರೆ ಎಂಬ ಸಮೀಕ್ಷೆ , ಆ ನಂತರ ಎಂಡೋದಿಂದ ತೊಂದರೆ ಒಳಗಾದವರಿಗೆ ತಜ್ಞರಿಂದ ಗುರುತಿಸುವಿಕೆ , ಪರಿಹಾರ , ಗುರುತಿಸಿಸುವಿಕೆ ,. ಇದಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಡಿಎಚ್ಒ ಹಾಗೂ ಇತರ ಅಧಿಕಾರ ಸಮಿತಿ ಜಂಟಿ ಸಮಿತಿ, ಜನರ ಜೊತೆ ಚಚರ್ಿಸಿ ಎಂಡೋ ಸಂತ್ರಸ್ತರ ಸಮೀಕ್ಷೆ ಆಗ ತಿಳಿಯುತ್ತದೆ.
ಗ್ರಾಮಗಳಿಗೆ ಹೋದರೆ ತಿಳಿಯುತ್ತದೆ , ನಂತರ ತಜ್ಞರಿಂದ ಅಧ್ಯಯನ , ಅಂಗವಿಕಲರು ತಪ್ಪಿ ಸೇರಿಕೊಂಡರು ತೊಮದರೆ ಇಲ್ಲ , ಇದೊಂದು ಮಾಣವೀಯ ದ್ರಷ್ಟಿಯ ಪರಿಹಾರ , ಈ ಹಿಂದೆ
ಮೊಬೈಲ್ ಕ್ಲಿನಿಕ್ , ಕೇಂದದರಕ್ಕೆ ನಸರ್್ಗಳ:ಉ ಹಾಗೂ ತಜ್ಷ ವೈದ್ಯರಯ , ಆತಯುವೇಧ್ ಪಂಚಕರ್ಮ ಚಿಕಿತಸೆ ಇತ್ಯಾದಿಗಳನ್ನು ನೀಡಿ ಎಂಡೀ ಸಸಂತ್ರಸ್ತರಿಗೆ ಪರಿಹಾರ , ಆಲಂಕಾರಿನಲ್ಲಿ 5 ಎಕ್ರೆ ಜಾಗ ರಿಹ್ಯಾಬುಇಲಿಟೇಶನ್ ಸೆಣಂಟರ್ಗೆ , ಬೇರೆ ಜಿಲ್ಲ್ಲೆಗಳಲ್ಲಿ ವರದಿ ಬಂದಿಲ್ಲ , ಸದ್ಯಕ್ಕೆ ಜಿಲ್ಲೆಯಲ್ಲಿ ಮುಂದೆ ಆಗಿದ್ದರೆ ಇತರ ಜಿಲ್ಲೆಗಳಿಗೂ ಪರಿಹಾರ , ಸಂತ್ರಸ್ತರಿಗೆ ಕಾಡರ್್ ವಿತರಣೆ ಈ ಮೂಲಕ ಪರಿಹಾರ , ಮೊದಲ; ಸುತ್ತಿನ ಸವರ್ೆ ಆ ನಂತರ ಪರಿಹಾರದ ಬಗ್ಗೆ ಕ್ರಮ ,
ಎಂಡೋ ಕಂನಿ ಕಾರಣ , ಸಕರ್ಾರ ಪರಿಹಾರ ನೀಡುತ್ತಿದೆ , ಸಕರ್ಾರವಾದರೆ ಅದು ಕೂಡಾ ಕಾರಣ , ಯಾರೇ ಮಾಡಲಿ ಅದು ಕಾರಣ , ಆ ಬಗ್ಗೆಯೂ ಚಿಂತೆ , ಅವರಿಗೆ ಕಠಿಣ ಕೆಮ , ಸೂಕ್ತ ಪರಿಹಾರ
Monday, 1 October 2012
Subscribe to:
Posts (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...