ಪುತ್ತೂರು: ಸಂಘ ಪರಿವಾರ ಮತ್ತು ಬಿಜೆಪಿಯವರು ಗೋ ರಕ್ಷಣೆಯ ಹೆಸರಿನಲ್ಲಿ ಕೋಮು ಪ್ರಚೋದನಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮರೆಯಲ್ಲಿ ಗೋವುಗಳ ಕಳ್ಳತನ ನಡೆಸುವ ಮತ್ತು ನೈತಿಕ ಪೊಲೀಸ್ಗಿರಿ ನಡೆಸುತ್ತಿರುವ ವಿಚಾರವು ಸವಣೂರಿನಲ್ಲಿ ನಡೆದ ಪ್ರಕರಣದ ಮೂಲಕ ಬಹಿರಂಗಗೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿಯ ಅಧ್ಯಕ್ಷ ಶಾಫಿ ಬೆಳ್ಳಾರೆ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಧಾನ ಸಭಾ ಚುನಾವಣೆಯ ಬಳಿಕ ಅಸ್ಥಿತ್ವ ಕಳೆದುಕೊಂಡಿರುವ ಸಂಘಪರಿವಾರವು ಇದೀಗ ಜಿಲ್ಲೆಯಾದ್ಯಂತ ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದು ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದ ಅವರು ಸವಣೂರು ಪ್ರಕರಣದಲ್ಲಿ ಗೋವುಗಳ ಮಾಲಕ ಉಸ್ಮಾನ್ ಎಂಬವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದರು
ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ಚಪ್ಪಲಿ ಮಾರಾಟಗಾರ ಅಝೀಝ್ ಎಂಬವರ ಮೇಲೆ ಹಲ್ಲೆ ನಡೆದಾಗ ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು, ಸಂಘ ಪರಿವಾರದ ಒತ್ತಾಯಕ್ಕೆ ಮಣಿದು ಅಝೀಝ್ ಅವರ ಮೇಲೆ ಮಾನಭಂಗ ಕೇಸು ದಾಖಲಿಸಿ ನೈತಿಕ ಪೊಲೀಸ್ಗಿರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಬಳಿಕ ಉಪ್ಪಿನಂಗಡಿಯಲ್ಲಿ ಇಮ್ರಾನ್ ಖಾನ್ ಎಂಬ ಹೆಸರಿನ ಬೆಂಗಳೂರು ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅರೆಬೆತ್ತಲೆ ಮೆರವಣಿಗೆ ನಡೆಸಿದಾಗಲೂ ಪೊಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ತಪ್ಪು ಮಾಡಿದಲ್ಲಿ ಅವರನ್ನು ಶಿಕ್ಷೆಗೊಳಪಡಿಸಲು ಇಲಾಖೆ ಮತ್ತು ಕಾನೂನುಗಳಿವೆ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದ ಅವರು ಕಾಲೇಜುಗಳಲ್ಲಿ ಕೋಮು ವಿಷಬೀಜ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಹೊರಗಿನ ಶಕ್ತಿಗಳು ಶೈಕ್ಷಣಿಕ ಕೇಂದ್ರಗಳಿಗೆ ಪ್ರವೇಶಿಸಿ ಶಿಕ್ಷಣರಂಗವನ್ನು ಹಾಲುಗೆಡವುತ್ತಿದೆ ಎಂದು ಆರೋಪಿಸಿದರು.
ಸಕರ್ಾರ ಮತ್ತು ಪೊಲೀಸ್ ಇಲಾಖೆ ನೈತಿಕ ಪೊಲೀಸ್ ಗಿರಿಯನ್ನು ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಇವರ ಮೇಲೆ ಮೃಧು ಧೋರಣೆ ಮುಂದುವರಿಸಿದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಝೀಝ್ ಕಬಕ, ಪುತ್ತೂರು ವಲಯ ಅಧ್ಯಕ್ಷ ಕೆ.ಎಚ್. ಖಾಸಿಂ, ಕುಂಬ್ರ ವಲಯ ಅಧ್ಯಕ್ಷ ರಿಝ್ವಾನ್, ಕಬಕ ವಲಯ ಅಧ್ಯಕ್ಷ ಅಶ್ರಫ್ ಬಾವು ಉಪಸ್ಥಿತರಿದ್ದರು.
No comments:
Post a Comment