Friday, 13 October 2017

PUTTUR POLICE

ವಗರ್ಾವಣೆ ಗೊಂಡ ಎಸ್ ಐ ಮತ್ತು ಸಿಬ್ಬಂದಿಗಳ ಹಾಗೂ ಪ್ರೊಬೇಷನರಿ ಎಸ್ ಐ ಗಳಿಗೆ ಬೀಳ್ಕೋಡುಗೆ ಹಾಗೂ ಪುತ್ತೂರಿಗೆ ವಗರ್ಾವಣೆ ಗೊಂಡು ಕತ್ರ್ತವ್ಯಕ್ಕೆ ಹಾಜರಾದ ಎಸ್ಐ ಮತ್ತು ಸಿಬ್ಬಂದಿಗಳನ್ನು ಸ್ವಾಗತಿಸಿ ಅಭಿನಂದಿಸುವ ಸಮಾರಂಭ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾಭವನದಲ್ಲಿ  ನಡೆಯಿತು.

ಪುತ್ತೂರು ನಗರ ಪೋಲೀಸ್ ಠಾಣೆ ಯ ವೃತ್ತ ನಿರೀಕ್ಷಕ ಮಹೇಶ್ ಪ್ರಾಸಾದ್ರವರು ಅದ್ಯಕ್ಷತೆ ವಹಿಸಿ ಮಾತನಾಡಿ ಪೋಲೀಸ್ ಸಿಬ್ಬಂದಿಗಳ ಕಷ್ಟಸುಖದ ಕುರಿತು ತಿಳಿದಿದೆ ಸಾರ್ವಜನಿಕ ಸ್ಥಳದಲ್ಲಿ ಸಿಬ್ಬಂದಿಗಳಿಗೆ ಅವಮಾನ ಆಗಬಾರದು ಹಾಗೆ ಒಂದು ವೇಳೆ ಆದರೆ ಸುಮ್ಮನಿರುವುದಿಲ್ಲ ಒಳ ಅವಮಾನಕ್ಕೆ ಒಳಗಾಗಬೇಡಿ ಅಪರಾಧನಿಯಂತ್ರಣ ಮಾಡಲು ನಮ್ಮ ಜೊತೆ ಹೆಗಲು ಕೊಡಿ ಎಂದು ಹೇಳಿದರು. ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಮೇಲೆ ನಾವು ಪುತ್ತೂರಿನ ಜನತೆ ನೆಮ್ಮದಿಯಿಂದ ಇರಲಿ ಎಂದು ಕೆಲಸ ನಿರ್ವಹಿಸುತ್ತೇವೆ. ಹೊಸದಾಗಿ ಬಂದಿರುವ ಸಿಬಂದಿಗಳು ಡಿ ಮೋರಲೈಸ್ಡ್ ಆಗುವ ಅವಶ್ಯಕತೆ ಇಲ್ಲ. ನಾವು ಪ್ರಾಣಿಗಳನ್ನು ಕಂಟ್ರೋಲ್ ಮಾಡುವುದಿಲ್ಲ ಮನುಷ್ಯರನ್ನು ಕಂಟ್ರೋಲ್ ಮಾಡುವವರು ಎಂದು ತಿಳಿದಿರಲಿ ಎಂದು ಸಿಬಂದಿಗಳು ಎಚ್ಚರಿಸಿದರು.


ಪುತ್ತೂರು ನಗರ ಸಂಚಾರ ಠಾಣೆಯ ಎಸ್ ಐ ಜಗದೀಶ ರೆಡ್ಡಿ ಯವರು ಮಾತನಾಡಿ ನಮ್ಮ ಪಾಲಿಗೆ ವಗರ್ಾವಣೆ ಸಂದರ್ಭವೇ ಸಮಾರಂಭ. ಪುತ್ತೂರಿಗೆ ವಗರ್ಾವಣೆ ಆದ ಮೇಲೆ ನೆಮ್ಮದಿ ಸಿಕ್ಕಿದೆ ಎಂದರು.ಪುತ್ತೂರು ಕ್ಷೇತ್ರ ಪವಿತ್ರ ಕ್ಷೇತ್ರ ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.



ಇದೇ ಸಂದರ್ಭದಲ್ಲಿ ವಗರ್ಾವಣೆ ಗೊಳಗಾದವರು ಮತ್ತು ಹೊಸದಾಗಿ ಪುತ್ತೂರು ಠಾಣೆಗೆ ಆಗಮಿಸಿದ ಸಿಬಂದಿಗಳು ಅವರ  ಅನಿಸಿಕೆ ವ್ಯಕ್ತ ಪಡಿಸಿದರು.ಎಸ್ ಐ ಓಮನ ಕೆ ಹಾಗೂ ಎ ಎಸ್ ಐಗಳಾದ ಲೋಕನಾಥ್ ರುಕ್ಮಯ್ಯ ಗೌಡ , ಜಯರಾಮ  ,ಉಮೇಶ್ ಮತ್ತಿರರು  ವೇದಿಕೆಯಲ್ಲಿ ಉಪಸ್ಥಿತರಿದ್ದರು
 

Thursday, 12 October 2017

BJP PADAYATHRE SAMAROPA

ಪುರಾಣಪ್ರಸಿದ್ದ ಅವಳಿವೀರರಾದ ಕೋಟಿಚೆನ್ನಯರ ತಾಯಿ ದೇಯಿ ಬೈದೇತಿಯ ಪರಮ ಪವಿತ್ರ ಕ್ಷೇತ್ರ ಪಡುಮಲೆಯಲ್ಲಿ ತಾಯಿ ದೇಯಿ ಬೈದೇತಿಯ ಮೂತರ್ಿಯ ಜತೆ ಅಶ್ಲೀಲ ಭಂಗಿಯಲ್ಲಿ ಪೊಟೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಮತಾಂಧನ ವಿರುದ್ದ ಹಾಗೂ ಹಿಂದೂಗಳ ಭಾವನೆ, ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲೆಯ ಬಿಜೆಪಿ ಶಾಸಕೆ ನೇತೃತ್ವದಲ್ಲಿ ಪಡುಮಲೆಯಲ್ಲಿರುವ ದೇಯಿಬೈದೆದಿ ಔಷಧವನಕ್ಕೆ ಪಾದಯಾತ್ರೆ ಮಂಗಳವಾರ ನಡೆಯಿತು.
ಇತಿಹಾಸ ಪ್ರಸಿದ್ಧ ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಹಿಂದೂ ಮಾತೆಗೆ ಆದ ಅವಮಾನ ಹಾಗೂ ಶ್ರದ್ಧಾ ಕೇಂದ್ರಗಳ ರಕ್ಷಣೆಗೆ ಆಗ್ರಹಿಸಿ ನಡೆದ ಜಗೃತಿ ಪಾದಯಾತ್ರೆಯಲ್ಲಿ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪುತ್ತೂರು ಕೇಂದ್ರದಿಂದ ಮುಡುಪಿನಡ್ಕ ದೇಯಿ ಬೈದ್ಯೆತಿ ಔಷಧ ವನದ ತನಕ ಸುಮಾರು 19 ಕಿ.ಮೀ. ದೂರದ ತನಕ ಕ್ರಮಿಸಿದರು.
ಮೆರವಣಿಗೆಯಲ್ಲಿ ಕೇರಳದ ಚೆಂಡೆ ಮೇಳ, ಸಾಸಿಕ್ ಬ್ಯಾಂಡ್, ಹುಲಿ ವೇಷ ವಿಶೇಷ ಮೆರುಗನ್ನು ನೀಡಿತು. ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರಿಗೆ ಅಲ್ಲಲ್ಲಿ ಪಾನೀಯದ ವ್ಯವಸ್ಥೆ, ಕುಂಬ್ರದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾಣರ್ಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಹಿಳಾ ಮೋಚರ್ಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷೆ ಪೂಜಾ ಪೈ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಮುಖಂಡರಾದ ಉಮಾನಾಥ ಕೋಟ್ಯಾನ್, ಉಡುಪಿ ಜಿಲ್ಲಾ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಹಿಂದೂ ಸಂಘಟನೆಗಳ ಪ್ರಮುಖ ಸತ್ಯಜಿತ್ ಸುರತ್ಕಲ್, ಅರುಣ್ ಕುಮಾರ್ ಪುತ್ತಿಲ, ಮುರಳೀಕೃಷ್ಣ ಹಸಂತಡ್ಕ, ಮುಖಂಡರಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಡಾ. ಎಂ.ಕೆ. ಪ್ರಸಾದ್, ಪುಲಸ್ತ್ಯಾ ರೈ, ಶಿವರಂಜನ್ ಸೇರಿದಂತೆ ತಾ.ಪಂ. ಪಾಲ್ಗೊಂಡರು.
-----------------
ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರಾರ್ಥನೆ
ಪಾದಯಾತ್ರೆ ಆರಂಭಕ್ಕೆ ಮೊದಲು ಪುತ್ತೂರಿನ ಉಳ್ಳಾಯ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಬಳಿಯಿಂದ ಆರಂಭಗೊಂಡು ಪುತ್ತೂರು ನಗರ, ಸಂಪ್ಯ, ಕುಂಬ್ರ, ಕೌಡಿಚ್ಚಾರು ಮಾರ್ಗವಾಗಿ ಸಾಗಿದ ಮೆರವಣಿಗೆಗೆ ಅಲ್ಲಲ್ಲಿ ಕಾರ್ಯಕರ್ತರು ಸೇರ್ಪಡೆಗೊಂಡರು. ಅಲ್ಲಲ್ಲಿ ಬ್ಯಾನರ್, ಕಟೌಟ್ಗಳ ಸ್ವಾಗತ ನೀಡಲಾಯಿತು. ಪೆರಿಗೇರಿ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಿತು.
---------------
ದುಷ್ಟ ಶಕ್ತಿಗಳಿಗೆ ಕಠಿನ ಶಿಕ್ಷೆಯನ್ನು ನೀಡುವಂತೆ ಪ್ರಾರ್ಥನೆ
ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು ಹಾಗೂ ಮುಯಖಂಡರು ಪೆರಿಗೇರಿ ಭಜನ ಮಂದಿರದಲ್ಲಿ ಸಮಾವೇಶಗೊಂಡರು. ಅಲ್ಲಿಂದ ಪ್ರಮುಖರು ಮಾತ್ರ ತೆರಳಿ ಮುಡುಪಿನಡ್ಕ ದೇಯಿ ಬೈದ್ಯೇತಿ ಔಷ ವನದ ಪ್ರಮುಖ ದ್ವಾರದ ಬಳಿ ಪ್ರಾರ್ಥನೆ ಸಲ್ಲಿಸಿ ಸಮಾಜದಲ್ಲಿ ಕಳಂಕ ತರುವವರ, ದುಷ್ಟ ಶಕ್ತಿಗಳ ವಿರುದ್ಧ, ದೇಯಿ ಬೈದ್ಯೆತಿಗೆ ಅವಮಾನ ಮಾಡಿದ ಆರೋಪಿ ಹಾಗೂ ಪ್ರಕರಣದ ಹಿಂದಿರುವ ದುಷ್ಟ ಶಕ್ತಿಗಳಿಗೆ ಕಠಿನ ಶಿಕ್ಷೆಯನ್ನು ನೀಡುವಂತೆ ಪಡುಮಲೆ ಕ್ಷೇತ್ರದ ದೈವಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
-----------
 ರಾಜ್ಯ ಸಕರ್ಾರವು ಮತಾಂದ ಶಕ್ತಿಗಳ ವಿರುದ್ದ ಹೋರಾಡುವ ಬದಲು ಹಿಂದೂಗಳ ಧಾಮರ್ಿಕ ಭಾವನೆಗೆ ಧಕ್ಕೆ ತರುವ ಕಾರ್ಯ ವೆಸಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಡು ನಾಶಗೈದು ಹುಲಿ ಕುಣಿತ ನಡೆಸುತ್ತಿದ್ದಾರೆ. ಹೀಗೆ ಮುಂದುವರಿದರೆ ಹಿಂದೂ ಸಮಾಜ ಉಸ್ತುವಾರಿ ಸಚಿವರನ್ನು ಶಾಶ್ವತವಾಗಿ ಹುಲಿ ಕುಣಿಯುವಂತೆ ಮಾಡುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ದೇಯಿ ಬೈದೇತಿಯಯ ಚಿತ್ರವನ್ನು ಆಶಲೀಲವಾಗಿ ಚಿತ್ರಿಸಿದ ಮತಾಂಧನ ವಿರುದ್ದ ಹಾಗೂ ಹಿಂದೂಗಳ ಭಾವನೆ, ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಬಿಜೆಪಿ ನೇತೃತ್ವದಲ್ಲಿ ನಡೆದ ಪಡುಮಲೆಯಲ್ಲಿರುವ ದೇಯಿಬೈದೆದಿ ಔಷಧವನಕ್ಕೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾಂಗ್ರೆಸ್ ಸಕರ್ಾರ ಹಿಂದುಗಳ ನಂಬಿಕೆಗೆ ಪೆಟ್ಟು ನೀಡುತ್ತಿದೆ ಎಂಬುದಕ್ಕೆ ಈಗ ಜಾರಿಗೆ ಉದ್ದೇಶಿಸಿರುವ ಮೂಡನಂಬಿಕೆ ವಿರೋಧಿ ಕಾನೂನು, ಹಿಂದೂ ದೇವ, ದೈವಗಳಿಗೆ ಅಪಮಾನ, ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿ ಮಹಾಮಾತೆ ದೇಯಿ ಬೈದೇತಿಗೆ ಅವಮಾನ ಮತ್ತಿತರ ಕೆಲಸಗಳ ಮೂಲಕ ಹಿಂದೂ ನಂಬಿಕೆಗೆ ಪೆಟ್ಟು ನೀಡುತ್ತದೆ. ಹಿಂದೂ ಧರ್ಮದ ಮೇಲೆ ಸವಾರಿ ಮಾಡುತ್ತದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ರಾಜ್ಯವನ್ನು ಸಿದ್ಧರಾವಣ ಆಡಳಿತ ಆಳಿದರೆ ಜಿಲ್ಲೆಯನ್ನು ನಾಥ ರಾವಣ ಆಳುವ ಮೂಲಕ ಇಲ್ಲಿನ ಮತೀಯ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಹಿಂದೂ ಆರಾಧನಾ ಕೇಂದ್ರಗಳ ಮೇಲೆ ಆಕ್ರಮಣ, ಹಿಂದುಗಳ ಭಾವನೆಗಳ ಮೇಲೆ ಆಕ್ರಮಣ ಮಾಡಿದವರನ್ನು ಈ ಇಬ್ಬರು ರಾವಣರು ರಕ್ಷಿಸುತ್ತಿದ್ದಾರೆ. ಈ ರಾವಣರನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೋಗೆಯಲೇ ಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ವಿಧಾನಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದಶರ್ಿಗಳಾದ ಕ್ಯಾ. ಬ್ರಿಜೇಶ್ ಚೌಟ, ಉಮಾನಾಥ ಕೋಟ್ಯಾನ್, ಸುದರ್ಶನ್ ಮೂಡಬಿದ್ರೆ, ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರಾದ ಈಶ್ವರ ಕಟೀಲ್, ಡಿ. ವೇದವ್ಯಾಸ ಕಾಮತ್, ವೆಂಕಟ್ ವಳಲಂಬೆ, ಡಾ. ಭರತ್ ಶೆಟ್ಟಿ, ರಂಜನ್ ಗೌಡ, ದೇವದಾಸ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ರಾಜ್ಯ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಶಿವರಂಜನ್, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಉಪಸ್ಥಿತರಿದ್ದರು.
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಪುತ್ತೂರು ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ ಜೈನ್ ವಂದಿಸಿದರು. ಪುತ್ತೂರು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
-------------
ಸಾಮೂಹಿಕ ಪ್ರಾರ್ಥನೆ
ಸಭಾಕಾರ್ಯಕ್ರಮದ ಬಳಿಕ ಮುಡಿಪಿನಡ್ಕದಲ್ಲಿರುವ ದೇಯಿ ಬೈದೇತಿ ಔಷಧಿ ವನದ ಮುಂದೆ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಧಾಮರ್ಿಕ ಅಪಮಾನಗೊಳಿಸಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು, ರಾಜ್ಯ ಸಕರ್ಾರಕ್ಕೆ ಉತ್ತಮ ಬುದ್ಧಿಕೊಡಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...