Tuesday, 12 September 2017

janajagrthi Samavesh_Akshaya Gokale

 ಕೇರಳದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಲವ್ ಜಿಹಾದ್ ಕರಾವಳಿ ಕನರ್ಾಟಕವನ್ನು ದಾಟಿ ದೇಶದೆಲ್ಲೆಡೆ ವ್ಯಾಪಿಸಿದೆ. ಇದರ ವಿರುದ್ಧ ಜಾಗೃತ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಸಾಮಾಜಿಕ ಚಿಂತಕ ಶ್ರೀಕಾಂತ ಶೆಟ್ಟಿ ಉಡುಪಿ ಹೇಳಿದರು.
ಅವರು ಪಾಲ್ತಾಡಿ ಹಿಂದೂ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಅಂಕತ್ತಡ್ಕ ಮೈದಾನದಲ್ಲಿ ರವಿವಾರ ನಡೆದ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಕೋಟಿ ಚೆನ್ನಯರ ತಾಯಿ ದೇಯಿಬೈದೇತಿಯನ್ನು ಅವಮಾನಕಾರವಾಗಿ ಚಿತ್ರಿಸಿದ ಮತಾಂಧರು, ಹಿಂದೂ ಸಮಾಜವನ್ನು ನಾನಾ ರೀತಿಯಲ್ಲಿ ಘಾಸಿಗೊಳಿಸುತ್ತಿದ್ದಾರೆ. ಇಂತಹ ಜಾಲದ ವಿರುದ್ಧ ಪೊಲೀಸ್ ಇಲಾಖೆ ಮೌನವಾಗಿದ್ದು, ಇದನ್ನು ಹಿಂದೂ ಸಮಾಜವೇ ಎದುರಿಸಿ ತಕ್ಕ ಉತ್ತರ ನೀಡಬೇಕು ಎಂದರು
ಧರ್ಮರಕ್ಷಣೆಗಾಗಿ ಪ್ರತಿ ಮನೆ-ಮನೆಯಲ್ಲೂ ಜಾಗೃತಿ ಮೂಡಬೇಕಿದೆ. ಮತಾಂಧ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂ ಸಮಾಜದ ಯುವತಿಯರನ್ನು ಮತಾಂತರಗೊಳಿಸಿ, ಭಯೋತ್ಪಾದನೆಗೆ ಬಳಸುವ ಹುನ್ನಾರ ನಡೆಸಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆಯನ್ನು ಹಿಂದೂ ಸಂಘಟನೆಯ ತಲೆ ಕಟ್ಟುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಅವರ ಆಪಾದಿಸಿದರು.
ಉಪನ್ಯಾಸಕಿ ಅಕ್ಷಯ ಗೋಖಲೆ ಮಾತನಾಡಿ, ಶ್ರೇಷ್ಠ ವಿಚಾರಧಾರೆಗಳನ್ನು ಜಗತ್ತಿಗೆ ಸಾರಿದ ದೇಶ ನಮ್ಮದು. ಮಾತೃಪ್ರಧಾನ ವ್ಯವಸ್ಥೆಯ ಈ ನೆಲದಲ್ಲಿ ಮತಾಂಧ ದುರುಳರು ಹೆಣ್ಮಕ್ಕಳನ್ನು ಬಲೆ ಬೀಳಿಸುವ ಸಂಚು ನಡೆದಿದೆ. ಸಾಮಾಜಿಕ ಜಾಲ ತಾಣ ಬಳಸಿ, ಹಿಂದೂ ಯುವತಿಯರನ್ನು ಬಲೆಗೆ ಬೀಳಿಸುವ ಟಾಗರ್ೇಟ್ ಮಾಡಿರುವ ಮತಾಂಧ ಶಕ್ತಿಗಳ ವಿರುದ್ಧ ಪ್ರತಿ ಹಿಂದೂ ಮನೆಯವರು ಎಚ್ಚೆತ್ತುಕೊಳ್ಳಬೇಕು . ನಡು ರಾತ್ರಿಯಲ್ಲಿ ಮೊಬೈಲ್ ಬಳಸುವ ಹೆಣ್ಮಕ್ಕಳ ಬಗ್ಗೆ ಮನೆ ಮಂದಿ ಎಚ್ಚರದಿಂದಿರಬೇಕು ಎಂದು ಅವರು ಹೇಳಿದರು.
ಸಿನಿಮಾ ನಟ ಶಾರುಖ್ಖಾನ್, ಗೌರಿಖಾನ್ಗೆ ಮರುಳಾಗಿ ಹಿಂದೂ ಮನೆಯ ಲಕ್ಷ್ಮೀ ಕೊನೆಗೆ ಲಕ್ಷ್ಮೀ ಖಾನ್ ಆಗುವುದು ಬೇಡ. ಅದಕ್ಕಾಗಿ ಮನೆಯೊಳಗೆ ಸಂಸ್ಕಾರ, ಸಂಸ್ಕೃತಿ ಪಾಠ ಆಗಬೇಕು. ಇದಕ್ಕೆ ಸಂಕಲ್ಷ ಸಮಾವೇಶ ಪ್ರೇರಣೆಯಾಗಲಿ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಸ್ವಾ ಶ್ರೀ ಮಾತಾನಂದಮಯಿ,  ಹಿಂದೂ ಸಮಾಜದ ವಿರುದ್ಧ ದುಷ್ಟ ಶಕ್ತಿಗಳು ಆಕ್ರಮಣ ಮಾಡುವಾಗ ಅದನ್ನು ಎದುರಿಸಿ ಸಂರಕ್ಷಿಸಬೇಕಾದ ಶಕ್ತಿ ಈ ಧರ್ಮಕ್ಕೆ ಇದೆ. ಅದಕ್ಕಾಗಿ ಯುವ ಶಕ್ತಿ ಜಾಗೃತಿಗೊಳ್ಳಬೇಕಿದ್ದು, ಇಡೀ ಹಿಂದೂ ಸಮಾಜ ಸಂಘಟಿತಗೊಳ್ಳಬೇಕು ಎಂದು ಅವರು ಹೇಳಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪಾಲ್ತಾಡಿನಲ್ಲಿ ಹಕೀಂ ಎನ್ನುವ ಯುವಕ ಹಿಂದೂ ಯುವತಿಯನ್ನು ಲವ್ ಜಿಹಾದ್ ಮೂಲಕ ಮತಾಂತರಗೊಳಿಸುವ ಹುನ್ನಾರ ಮಾಡಿದ್ದು ಆತನನ್ನು 24 ತಾಸಿನೊಳಗೆ ಬಂಸಬೇಕು. ಆರೋಪಿಗೆ ರಕ್ಷಣೆ ನೀಡಿರುವ ಫಿಎಫ್ಐ ಮುಖಂಡ ಶಾಫಿ ಬೆಳ್ಳಾರೆಯನ್ನು ತತ್ಕ್ಷಣ ಬಂಸಬೇಕು. ಇಲ್ಲದಿದ್ದರೆ ಬೆಳ್ಳಾರೆ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದರು.
ಮತಾಂಧರ ಅಂಗಡಿಗಳಲ್ಲಿ ಆಥರ್ಿಕ ವ್ಯವಹಾರ ಮಾಡಬಾರದು. ಹಿಂದೂಗಳು ಹಿಂದೂಗಳೊಂದಿಗೆ ವ್ಯವಹಾರ ಮಾಡಬೇಕು ಎಂದು ಅವರು ಹೇಳಿದರು.
ಬೆಳ್ಳಾರೆ ಲಕ್ಷ್ಮೀವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಶಾನ್ಭೋಗ್ ಮಣಿಕ್ಕರ ಸಭಾಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಲೋಕೇಶ್ ಕುಮಾರ್ ಪಾಲ್ತಾಡಿ ಉಪಸ್ಥಿತರಿದ್ದರು.
ತ್ಯಾಂಪಣ್ಣ ರೈ ದಂಪತಿಗಳು ಸ್ವಾ ಮಾತಾನಂದಮಯಿ ಅವರಿಗೆ ಗೌರವ ಸಲ್ಲಿಸಿದರು. ಹಿಂದೂ ಹಿತರಕ್ಷಣಾ ಸಮಿತಿ ಗೌರವಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಸ್ವಾಗತಿಸಿ, ಸುಬ್ರಾಯ ಗೌಡ ವಂದಿಸಿದರು. ಹಿಂದೂ ಮುಖಂಡ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಶೀನಪ್ಪ ಶೆಟ್ಟಿ ನೆಕ್ರಾಜೆ ವಂದೇ ಮಾತರಂ ಹಾಡಿದರು. ಅತಿಥಿಗಳನ್ನು ಕಂಪ ತಾರಾನಾಥ ಬಂಗೇರ, ಸಂತೋಷ್ ಕೆಯ್ಯೂರು, ಇಂದಿರಾ ಬಿ.ಕೆ ಗೌರವಿಸಿದರು.

    ಮುಕರ್ೇತಿಯಿಂದ ಪಾಲ್ತಾಡು ಮಾರ್ಗವಾಗಿ ಅಂಕತಡ್ಕಕ್ಕೆ ಬೃಹತ್ ಮೆರವಣಿಗೆ ನಡೆಯಿತು. ಈ ಸಂದರ್ಭ ಐದು ಸಾವಿರಕ್ಕೂ ಮಿಕ್ಕಿ ಜನರು ಪಾಲ್ಗೊಂಡಿದ್ದರು.
    ಮೆರವಣಿಗೆಗೆ ಸುಳ್ಯ ಶಾಸಕ ಎಸ್.ಅಂಗಾರ ,ಸ್ಥಳೀಯ ಮುಂದಾಳು ಕುಂಙ ಚಾಲನೆ ನೀಡಿದರು.
    ಸಮಾವೇಶದಲ್ಲಿ ಕೇಸರಿ ಧ್ವಜ, ದೇಶಭಕ್ತಿಯ ಘೋಷಣೆಗಳು ಮೊಳಗಿತ್ತು.
    ಅಸೌಖ್ಯದಲ್ಲಿರುವ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ನೆರವಾಗುವ ಉದ್ದೇಶದಿಂದ ನಿ ಸಂಗ್ರಹ ಮಾಡಲಾಯಿತು.
 

janajagrthi Samavesh_Arun kumar Puthila


janajagrthi Samavesh Srikanth Shetty_1


Krishnamurthi kedila


Deviprasd&vidyashree


Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...