Sunday, 16 December 2012

Kuke Madestna


ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿದ್ದ ಇತ್ತೀಚೆಗೆ ಅತ್ಯಂತ ವಿವಾದಕ್ಕೆ ಎಡೆ ಮಡಿಕೊಟ್ಟಿದ್ದ ಮಡೆಮಡೆ ಸ್ನನ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾಂತಕವಾಗಿ ನಡೆಯಿತು. ಹಲವು ಪ್ರಗತಿಪರ ಸಂಘಟನೆಗಳು ಈ ಸಂಪ್ರದಾಯಿಕ ಆಚರಣೇಯನ್ನು ನಿಷೇಧಿಸಬೆಕು ಎನ್ನುವ ನಿಟ್ಟಿನಲ್ಲಿ ಕೋಟರ್ು ಮೆಟ್ಟಿಲನ್ನೂ ಏರಿದ್ದರಿಂದ ಹೈಕೋಟರ್ು ಈ ಆಚರಣೇಯಲ್ಲಿ ರೂಪಾಂತರ ಮಾಡಲು ಆದೇಶ ನೀಡಿತ್ತು ಈ ಕಾರಣದಿಂದಾಗಿ ಈ ಬಾರಿ ಈ ಆಚರಣೆ ನಡೆಯುವುದೋ ಎನ್ನುವ ಅನುಮಾನದ ನಡುವೆ ಸುಪ್ರಿಂ ಕೋಟರ್ು ಹೈಕೋಟರ್ುನ ಆದೇಶವನ್ನು ತೆಡೆಹಿಡಿದ ಪರಿಣಾಮ ಕ್ಷೇತ್ರದಲ್ಲಿ ಈ ಬಾರಿಯು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಸೇವೆ ಮಾಡುವ ಮೂಲಕ ತನ್ನ ಹರಕೆಯನ್ನು ತೀರಿಸಿಕೊಂಡರು.
ವಾಯ್ಸ್: 1
ಪ್ರಗತಿಪರ ಸಂಘಟನೆಗಳ ತೀವೃ ವಿರೋಧ ಹಾಗೂ ಸಂಪ್ರದಾಯವಾದಿಗಳ ಪರ ವಾದಗಳಿಂದಾಗಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದುಕೊಂಡು ಬರುತ್ತಿದ್ದ ಮಡೆಮಡೆ ಸ್ನಾನ ಸುಪ್ರರ್ೀಂ ಕೋಟರ್ಿನ ತೀರ್ಪನಿಂದಾಗಿ ಮತ್ತೆ ಈ ಬಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾತಂಕವಾಗಿ ನಡೆಯಿತು.ಬ್ರಾಹ್ಮಣರು ಅನ್ನ ಸೇವಿಸಿದ ಎಂಜಲೆಲೆಯ ಮೇಲೆ ಉರುಳುಸೇವೆ ಮಾಡುವ ಈ ಆಚರಣೇ ದ್ವಾಪರಯುಗದ ಶ್ರೀಕೃಷ್ಣನ ಮಗ ಸಾಂನಿಂದ ಮೊದಲುಗೊಂಡು ಇಂದಿನವರೆಗೂ ಈ ಪರಂಪರೆ ಬೆಳೆದುಕೊಂಡು ಬಂದಿದ್ದು ಭಕ್ತ ತನ್ನ ನೆಚಿನ ಭಗವಂತನಿಗೆ ಸಲ್ಲಿಸುವ ಈ ಹರಕೆಯಾಗಿದ್ದು ಇದನ್ನು ಕೇವಲ ಒಂದೇ  ವರ್ಗಕ್ಕೆ ಸೇರಿದ ಜನ ನಡೆಸದೆ ಎಲ್ಲರೂ ಸೇರಿ ನಡೆಸುತ್ತಿದ್ದಾರೆ ಹಾಗೂ ಇದನ್ನು ನಡೆಸಲು ಯಾವುದೇ  ಭಕ್ತನಿಗೂ ಯಾವುದೇ ರೀತಿಯ ಒತ್ತಡವು ಇಲದ ಕರಣ ಇದಕ್ಕೆ ತಡೆಯೊಡ್ಡುವ ಪ್ರಯತ್ನ ನಿಲ್ಲಬೇಕೆನ್ನುವುದು ಇಲ್ಲಿನ ಭಕ್ತರ ಆಶಯವಾಗಿದೆ.

ಬೈಟ್: ಲಕ್ಷ್ಮೀಶ್ ಗಬ್ಲಡ್ಕ
      ಮಡೆಸ್ನಾನ ಹರಕೆ ತೀರಿಸಿದ ಭಕ್ತ
    2--
ನಿಶಾ ಬೆಂಗಳೂರು
ಮಡೆಸ್ನಾನ ಹರಕೆ ತೀರಿಸಿದ ಭಕ್ತೆ

ವಾಯ್ಸ್:2    ಕಳೆದ ಹಲವು ವರ್ಷಗಳಿಂದ ಈ ಸೆವೆಯನ್ನು ಸಲ್ಲಸಿಕೊಂಡು ಬಂದ ಭಕ್ತರ ಬಾಳಿನಲ್ಲಿ ಕೆಲವು ಬದಲಾವಣೆಗಳಾಗುತ್ತಿದ್ದು, ಈ ಕಾರಣದಿಂದಲೇ ಜನ ಈ ಸೇವೆಯನ್ನು ಎಷ್ಟೇ ವಿರೋಧವಿರಲಿ ಯಾವುದಕ್ಕೂ ಲೆಕ್ಕಿಸದೆ ಇದನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

 ಬೈಟ್: ಲೋಕೇಶ್
ಕ್ಷೇತ್ರದ ಭಕ್ತ
     

 ರಾಜ್ಯದ ಹಲವು ಕಡೆಗಳಲ್ಲಿ ಈ ಆಚರಣೆಯ ವಿರುದ್ಧ ಭಾರೀ ವಿರೋದವು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರದ ತುಂಬಾ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು



Sunday, 2 December 2012

SMT PUTTUR_3-12-2012



ಪೂರ್ವ
ಇಷ್ಟಿಕಾ
ಇಷ್ಟಿಕಾ
ಉತ್ತರ
ಇಷ್ಟಿಕಾ
ಗರ್ಭ
ಪಾತ್ರದಕ್ಷಿಣ
ಇಷ್ಟಿಕಾ
ಪಶ್ಚಿಮ
ಗರ್ಭಗೃಹದ ಬಾಗಿಲ ಬಲಭಾಗದ ಕೆಳಗೆ ಇಷ್ಟಕಾನ್ಯಾಸವನ್ನು ಮಾಡಿ,ಅದರ ಮಧ್ಯೆ ಸುವಸ್ತುಗಳಿಂದ ಕೂಡಿದ ಗರ್ಭಪಾತ್ರೆಯನ್ನು ಇರಿಸುವ ಪ್ರಕ್ರಿಯೆಯೇ ಗರ್ಭನ್ಯಾಸ.ಆರಂಭದಲ್ಲಿ ಗರ್ಭಗೃಹದ ದ್ವಾರದ ಬಲಭಾಗದಲ್ಲಿ,ಪೂರ್ವಾಭಿಮುಖವಾದರೆ ಮಧ್ಯಸೂತ್ರದಿಂದ ದಕ್ಷಿಣಕ್ಕೆ, ಪಶ್ಚಿಮಾಭಿಮುಖವಾದರೆ ಮಧ್ಯಸೂತ್ರದಿಂದ ಉತ್ತರಕ್ಕೆ,ಉತ್ತರಾಭಿಮುಖವಾದರೆ ಮಧ್ಯಸೂತ್ರದಿಂದ ಪೂರ್ವಕ್ಕೆ, ದಕ್ಶಿಣಾಭಿಮುಖವಾದರೆ ಮಧ್ಯಸೂತ್ರದಿಂದ ಪಶ್ಚಿಮದಲ್ಲಿ ಇಷ್ಟಕಾನ್ಯಾಸವನ್ನು ಮಾಡಬೇಕು. ಪೂಜಿಸಲ್ಪಟ್ಟ ಮಣ್ಣಿನ ಅಥವಾ ಶಿಲೆಯಿಂದ ನಿರ್ಮಿತವಾದ ಇಟ್ಟಿಗೆಗಳನ್ನು ಸಮ ಚತುರಶ್ರವಾಗಿ ಆಗ್ನೇಯದಿಂದ ಪ್ರಾರಂಭಿಸಿ ಈಶಾನ್ಯ ಪರ್ಯಂತವಾಗಿ ಜೋಡಿಸಿ ನ್ಯಾಸಮಾಡಬೇಕು.ನಂತರ ಆಗಮೋಕ್ತವಾಗಿ ಹೇಳಲ್ಪಟ್ಟ ವಾಸ್ತು ಪೂಜಾ-ಬಲಿ ಇತ್ಯಾದಿ ಕರ್ಮಾಂಗಗಳನ್ನು ನಡೆಸುವುದು. ತದನಂತರ ತಾಮ್ರದಿಂದ ಸಿದ್ಧಪಡಿಸಿದ ಮುಚ್ಚಳದಿಂದ ಕೂಡಿದ ಸಂಸ್ಕರಿಸಿ ಶುದ್ಧೀಕರಿಸಲ್ಪಟ್ಟ ನವ ಖಂಡಗಳಿರುವ ಗರ್ಭಪಾತ್ರೆಯನ್ನು ಪೂಜಿಸಲು ಇರಿಸುವುದು. ಭಾರತಾದಿ ನವ ಖಂಡಗಳಿಂದ ಶೋಭಿಸುವ ಭೂಮಂಡಲವೇ ಗರ್ಭಾಪಾತ್ರದ ತಳವೆಂದು ಭಾವಿಸಿ, ಪಾತ್ರದ ನವ ಖಂಡಗಳಲ್ಲಿ ಆಯಾಯ ದೇವರಿಗೆ ಶಾಸ್ತ್ರೀಯವಾಗಿ ಹೇಳಲ್ಪಟ್ಟ ಮಣ್ಣುಗಳು, ಗಡ್ಡೆಗಳು, ಧಾತುದ್ರವ್ಯಗಳು, ರತ್ನಗಳು, ಬೀಜಗಳು, ಲೋಹಗಳೇ ಮೊದಲಾದ ದ್ರವ್ಯಗಳನ್ನು ನಿಕ್ಷೇಪಿಸುವುದು. ತದನಂತರ ಶಾಸ್ತ್ರೀಯ ಕರ್ಮಾಂಗಗಳನ್ನು ಪೂರೈಸಿದ ಆಚಾರ್ಯರು(ತಂತ್ರಿಗಳು) ಸಂಪೂರ್ಣ ಜಗತ್ತನ್ನೇ ಗರ್ಭದಲ್ಲಿ ಹೊಂದಿರುವುದಾದ ಗರ್ಭಪಾತ್ರವನ್ನು ಶುಭಮುಹೂರ್ತದಲ್ಲಿ ಇಷ್ಟಕಾನ್ಯಾಸ ಮಾಡಿದ ಮಧ್ಯಭಾಗದ ಗರ್ಭಾಧಾನ ಸ್ಥಾನದ ಕುಳಿಯಲ್ಲಿ ಇರಿಸಿ ಗರ್ಭನ್ಯಾಸವನ್ನು ಮಾಡುವರು.ಪಿ.ಜಿ.ಜಗನ್ನಿವಾಸ ರಾವ್.        ಕನ್ಸಲ್ಟಿಂಗ್ ಇಂಜಿನಿಯರ್
ಕೃಪೆ
:ತಂತ್ರಸಮುಚ್ಚಯ,
.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...