ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಧ್ವಜ ಏರಿಸುವ ಪ್ರಕ್ರಿಯೆಗೆ ಗರುಡ ಬೇಕಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀಣರ್ೋದ್ದಾರ ಕಾರ್ಯದ ಈ ಸಂದರ್ಭದಲ್ಲಿ ಗರುಡ ಕೂಡಾ ಸಿದ್ದವಾಗುತ್ತಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಈ ಸಂದರ್ಭದಲ್ಲಿ ಗರುಡ ಕೂಡಾ ಅಲಂಕಾರಗೊಳ್ಳುತ್ತಿದೆ. ಬೆಟ್ಟಂಪಾಡಿಯ ವಾಸುದೇವ ಅವರು ಗರುಡ ಚಿತ್ರ ನಿಮರ್ಾಣದಲ್ಲಿ ತೊಡಗಿದ್ದಾರೆ.ಮೂಲತ: ಕಾಸರಗೋಡು ಜಿಲ್ಲೆಯ ಕೂಡ್ಲುಬಳಿಯ ಕಾವುಗುಳಿಯ ಇವರು ಕಳೆದ 10 ದಿನಗಳಿಂದ ಈ ಕೆಲಸವನ್ನು ದೇವಸ್ಥಾನದ ವಠಾರದಲ್ಲಿ ಮಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಜಾತ್ರೆ ವೇಳೆ ಗ್ರಾಮ್ಯ ಭಾಷೆಯಲ್ಲಿ ಕೊಡಿ ಏರುವುದು ಎಂಬ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಕೊಡಿಮರದಲ್ಲಿ (ಧ್ವಜಸ್ಥಂಭದಲ್ಲಿ) ಗರುಡ ನೇತಾಡುತ್ತದೆ. ಮನುಷ್ಯನ ಅಥವಾ ಬೇತಾಳದ ಮಾದರಿಯಲ್ಲಿ ಇರುವ ಈ ಆಕೃತಿಯು ಕೆಲವು ಪ್ರಮುಖ
ದೇವಸ್ಥಾನಗಳಲ್ಲಿ ಇರುತ್ತದೆ. ಈ ಗರುಡ ಆಕೃತಿಯನ್ನು ಕೆಲವೇ ಕೆಲವು ಜನ ಮಾತ್ರಾ ತಯಾರಿಸುತ್ತಾರೆ. ಅಂತಹವರಲ್ಲಿ ವಾಸುದೇವ ಒಬ್ಬರು.
ಒಂದು ನೂತನ ಗರುಡ ನಿಮರ್ಾಣಕ್ಕೆ ಕನಿಷ್ಠ 6 ತಿಂಗಳ ಕೆಲಸ ಇದೆ ಎನ್ನುವ ವಾಸುದೇವ್ ಇದರಲ್ಲಿ ಕೆಂಪು , ಕಪ್ಪು , ಬಿಳಿ ಹಾಗೂ ಹಳದಿ ಬಣ್ಣ ಉಪಯೋಗಿಸಲಾಗುತ್ತದೆ. ಒಮ್ಮೆ ತಯಾರು ಮಾಡಿದರೆ ಸುಮಾರು 20 ರಿಂದ 30 ವರ್ಷದವರೆಗೂ ಬಾಳ್ವಿಗೆ ಬರುತ್ತದೆ. ಆದರೆ 5 ವರ್ಷಗಳಿಗೊಮ್ಮೆ ದುರಸ್ತಿ ಮಾಡಿದರೆ ಸೈ. ಸುಮಾರು 73 ವರ್ಷದ ಇವರು ಇದುವರೆಗೆ 15 ರಷ್ಟು ನೂತನ ಗರುಡ ರಚನೆ ಮಾಡಿದ್ದಾರೆ.
ಪುತ್ತೂರಿನಲ್ಲಿ ಇರುವ ಗರುಡವು ಅನೇಕ ವರ್ಷಗಳ ಹಿಂದೆ ಮಾಡಲಾಗಿದೆ. ಈಗಲೂ ಸುಸಜ್ಜಿತವಾಗಿದೆ. ಆದರೆ ಗ ದೇವಸ್ಥಾನ ಜೀಣರ್ೋಧ್ದಾರಗೊಂಡು ಬ್ರಹ್ಮಕಲಶ ಆಗುವ ವೇಳೆ ಮತ್ತೆ ಸುಂದರವಾಗಿ ರೂಪುಗೊಳಿಸಬೇಕಿದೆ. ಇನ್ನು 15 ದಿನಗಳ ಒಳಗಾಗಿ ಆಕರ್ಷಕ ಗರುಡ ರಚನೆ ಆಗಲಿದೆ ಎನ್ನುತ್ತಾರೆ ವಾಸುದೇವ.
ದುರಂತ ನಡೆದು ಸರಿಯಾಗಿ 24 ಗಂಟೆ ಕಳೆದರೂ ಆಘಾತದಿಂದ ಸ್ಥಳೀಯರು ಇನ್ನೂ ಹೊರಬಂದಿಲ್ಲ. ಹತ್ತಿರದಲ್ಲಿ ಹೊತ್ತಿ ಭಸ್ಮವಾಗಿದ್ದ ಅಂಗಡಿಯ ಕಿಡಿ ಇನ್ನೂ ಆರಿಲ್ಲ. ಜನಸಾಗರ ಕುತೂಹಲದಿಂದ ಇನ್ನೂ ಹರಿದು ಬರುತ್ತಲೇ ಇದೆ. ಇದು ಬುಧವಾರದಂದು ಕಂಡ ಘಟನೆ. ಯಮ ಸ್ವರೂಪಿ ಟ್ಯಾಂಕರ್ ಪಲ್ಟಿಯಾಗಿ 8 ಮಂದಿ ಸಜೀವ ದಹನವಾಗಿ 24 ಗಂಟೆ ಕಳೆದಿದೆ. ಈಗಲೂ ಕೂಡಾ ಹೆದ್ದಾರಿ ಪಕ್ಕದ ಈ ಪುಟ್ಟ ಗ್ರಾಮದಲ್ಲಿ ಭಯ ಮಾಸಿಲ್ಲ, ಆಘಾತದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲ. ಆಸುಪಾಸಿನ ಎಲ್ಲಾ ಮನೆಗಳಿಗೆ ಕೂಡಾ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಡಿಕೆ , ತೆಂಗಿನ ಮರಗಳು ಕರಟಿ ಹೋಗಿದೆ. ಬುಧವಾರದಂದು ಮೆಸ್ಕಾಂ ಸಿಬಂದಿಗಳು ತುಂಡಾದ ಮುಖ್ಯ ತಂತಿಯ ಮರುಜೋಡಣೆ ಕೆಲಸ ಮಾಡುತ್ತಿದ್ದಾರೆ.ನಿನ್ನೆ ಬೆಳಗ್ಗೆ ಹೊತ್ತಿದ ಬೆಂಕಿಯಲ್ಲಿ ಇಂದಿಗೂ ಬೀಡಿ ಬ್ರಾಂಚ್ ಅಂಗಡಿಯಲ್ಲಿನ ಬೆಂಕಿಯ ಕಿಡಿ ಇನ್ನೂ ಆರಿಲ್ಲ. ಹೊಗೆಯಾಡುತ್ತಲೇ ಇದೆ. ಸ್ಥಳಕ್ಕೆ ಐಜಿ ಪ್ರತಾಪ್ ರೆಡ್ಡಿ , ಎಸ್ಪಿ ಅಭಿಷೇಕ್ ಗೋಯಲ್ , ಎಎಸ್ಪಿ ಸದಾನಂದ ವಣರ್ೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ನಡುವೆ ಸಾರ್ವಜನಿಕರು ತಂಡತಂಡವಾಗಿ ಆಗಮಿಸಿ ದುರಂತ ನಡೆದ ಸ್ಥಳವನ್ನು ನೋಡಿ ಮರುಕ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದುರಂತದಲ್ಲಿ ಮೃತಪಟ್ಟ ಶೋಭಾ ಅವರ ಪತಿ ಶಂಕರ ರೈ ಖಾಸಗೀ ಬಸ್ಸಿನಲ್ಲಿ ನಿವರ್ಾಹಕ.ಮಂಗಳವಾರ ಕೆಲಸಕ್ಕೆ ರಜೆ ಮಾಡಿ ಖಾಸಗೀ ಕೆಲಸಕ್ಕೆ ಹೋಗಲು ಮಮನೆಯಿಂದ ಸ್ವಲ್ಪ ಮೇಲಿನ ಬಸ್ಸು ನಿಲ್ದಾಣಕ್ಕೆ ತೆರಳಿದ್ದರು. ಹೀಗೆ ಹೊರಟು 15 ನಿಮಿಷದಲ್ಲಿ ದುರಂತ ನಡೆದಿದೆ.ಕೂಡಲೇ ಬಸ್ಸು ನಿಲ್ದಾಣದ ಬಳಿಯಿಂದ ಮನೆಯ ಹಿಂಬದಿಗೆ ದೂರದಿಂದ ಬಂದಾಗ ಮನೆಯೇ ಉರಿಯುವುದು ಕಂಡಿತು , ಪತ್ನಿ ಬೆಂಕಿಯಲ್ಲಿ ಸುಡುವುದು ಕಂಡಿತು , ಆದರೆ ಏನೂ ಮಾಡಲಾಗದ ಸ್ಥಿತಿ ಅದಾಗಿತ್ತು ಎಂದು ಶಂಕರ್ ರೈ ಘಟನೆಯನ್ನು ವಿವರಿಸುತ್ತಾರೆ. ಈಗ ಮನೆಯಲ್ಲಿ ಏನೂ ಇಲ್ಲದೆ ಖಾಲಿ ಕೈಯಲ್ಲಿ ಇರಬೇಕಾದ ಸ್ಥಿತಿ ಬಂದಿದೆ ಎಂದು ಹೇಳುತ್ತಾರೆ. ಮನೆ ಸುತ್ತಲೂ ಹೊತ್ತಿ ಉರಿಯಿತು. . . ಮನೆ ಉಳಿಯಿತು. . .! ಘಟನೆ ನಡೆದ 50 ಮೀಟರ್ ದೂರದ ಗುಡ್ದದಲ್ಲಿ ಲಾರಿ ಚಾಲಕ ಉಮ್ಮರ್ ಂಬವ ಮನೆ ಇದೆ. ನೇರವಾಗಿ ಟ್ಯಾಂಕರ್ ಪಲ್ಟಿಯಾದ ಜಾಗದಲ್ಲೇ ಇದೆ. ಇವರ ಮನೆ ಮುಂಭಾಗದ ಚಿಕ್ಕು , ತೆಂಗಿನ ಮರ ಎಲ್ಲವೂ ಹೊತ್ತಿ ಉರಿದಿದೆ. ಮನೆಯ ಹಿಂಭಾಗದ ತೆಂಗಿನ ಮರವೂ ಕರಟಿಹೋಗಿದೆ. ಆದರೆ ಮನೆಯ ವಯರಿಂಗ್ ಸುಟ್ಟುಹೋದದ್ದು ಬಿಟ್ಟರೆ ಬೇರೆ ಯಾವುದೇ ಅನಾಹುತ ಆಗಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಮನೆಯ ಮೇಲೆ ಗುಡ್ಡದಲ್ಲಿ ತೆಂಗಿನ ಗರಿಗಳನ್ನು ತುಂಡರಿಸುತ್ತಿದ್ದಾಗ ಲಾರಿ ಪಲ್ಟಿಯಾಗಿ ಬೆಂಕಿ ಬಂದಾಗ ಮನೆಯವರಿಗೆ ಹೇಳಿ ಓಡಲು ತಿಳಿಸಿ ನಾನು ನೀರು ಸುರಿದೆ ಎಂದು ಘಟನೆಯನ್ನು ವಿವರಿಸುತ್ತಾರೆ.
ಮೃತರ ಅಂತ್ಯ ಸಂಸ್ಕಾರ : ಘಟನೆಯಲ್ಲಿ ಮೃತರಾದ ಎಲ್ಲಾ ಶವಗಳನ್ನೂ ಮಂಗಳವಾರ ರಾತ್ರಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮಾಂಸದ ಮುದ್ದೆಯಂತಾಗಿದ್ದ ಈ ದೇಹಗಳಲ್ಲಿ ಕೆಲವುಗಳನ್ನು ಉಪ್ಪಿನಂಗಡಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದರೆ . ಟ್ಯಾಂಕರ್ ಚಾಲಕನ ಶವ ಮಂಗಳೂರಿನ ಶವಾಗಾರದಲ್ಲಿ ಇಡಲಾಗಿದೆ. ಹೆದ್ದಾರಿಯಲ್ಲಿ ಮತ್ತೆ ಯಮರೂಪಿ ಟ್ಯಾಂಕರ್ ಓಡಾಟ : ಮಂಗಳವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 8 ಜನ ಸಜೀವ ದಹನವಾದ ಬಳಿಕ ಬುಧವಾರದಂದು ಮತ್ತೆ ಅದೇ ವೇಗದಲ್ಲಿ ಗ್ಯಾಸ್ ಟ್ಯಾಂಕರ್ಗಳು ಓಡಾಟ ನಡೆಸುತ್ತಿವೆ. ಈಗ ಗ್ಯಾಸ್ ಟ್ಯಾಂಕರ್ ಹಿಂಬಾಗದಲ್ಲಿ ಹೋಗುವುದೇ ಅಪಾಯಕಾರಿ ಎಂದು ಸಾರ್ವಜನಿರು ಮಾತನಾಡಿಕೊಳ್ಳುವಂತಾಗಿದೆ. ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ , ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮೊಕ್ಕಾಂ ಹೂಡಿದ್ದು ಸಮಾರೋಪಾದಿಯ ಕೆಲಸದಲ್ಲಿ ನಿರತವಾಗಿವೆ. ಮೃತಪಟ್ಟ ಕುಟುಂಬಗಳಿಗೆ ಮತ್ತು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಟುಂಬಗಳಿಗೆ ಸಕರ್ಾರ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಿದ್ದಾರೆ..
ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಶಿರಾಡಿವರೆಗೆ ಆಗಾಗ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅವಘಡಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ಹೆದ್ದಾರಿ ಬದಿಯಲ್ಲಿ ವಾಸಿಸುವುದೇ ಈಗ ಸಾವಿನ ಮೇಲೆ ಮಲಗಿದಂತೆಯೇ ಆಗಿದೆ. ಹೀಗಾಗಿ ಈ ಭಾಗದಲ್ಲಿ ತುತರ್ು ಕಾರ್ಯಕ್ಕಾಗಿ ಅಗ್ನಿಶಾಮಕ ದಳದ ವ್ಯವಸ್ಥೆ ಆಗಬೇಕು, ಈ ಮೂಲಕ ಅವಘಡಗಳು ನಡೆದ ತಕ್ಷಣವೇ ಪರಿಹಾರ ಕಾರ್ಯ ನಡೆಯಲು ಸಹಾಯವಾಗುತ್ತದೆ. ಇಲ್ಲದೇ ಇದ್ದಲ್ಲಿ ಕನಿಷ್ಠ 30 ನಿಮಿಷವಾದರೂ ದುರಂತದ ಸ್ಥಳಗಳಿಗೆ ಅಗ್ನಿಶಾಮಕ ದಳದ ಸಿಬಂದಿಗಳು ತಲುಪಲು ಸಾಧ್ಯವಾಗುವುದಿಲ್ಲ ಎಂದು ಸ್ಥಳೀಯರಾದ ಲೋಕೇಶ್ ಒತ್ತಾಯಿಸಿದ್ದಾರೆ. ----------------------- ಹೆದ್ದಾರಿಯಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ - ಪ್ರತಾಪ್ ರೆಡ್ಡಿ ಟ್ಯಾಂಕರ್ಗಳ ಅಪಘಾತ ನಡೆಯುತ್ತಿರುವುದು ಹೆಚ್ಚಾಗುತ್ತಿದೆ.ಇದಕ್ಕೆ ವೇಗದ ಚಾಲನೆಯೇ ಕಾರಣ ಎಂಬ ಕಾರಣಕ್ಕಾಗಿ ಹೆದ್ದಾರಿಯಗಳಲ್ಲಿ ಇಂಟರ್ಸೆಪ್ಟರ್ ಮೂಲಕ ವೇಗ ನಿಯಂತ್ರಣಕ್ಕಾಗಿ ಹೆದ್ದಾರಿ ಪೊಲೀಸ್ ವ್ಯವಸ್ಥೆ ಬಲಪಡಿಸಲಾಗುತ್ತದೆ ಎಂದು ಪಶ್ಚಿಮ ವಲಯ ಐಜಿ ಪ್ರತಾಪ್ ತಿಳಿಸಿದ್ದಾರೆ. ಪೆನರ್ೆಯ ಟ್ಯಾಂಕರ್ ದುರಂತದ ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಪ್ರತಾಪ್ ರೆಡ್ಡಿ ಪರಿಶೀಲನೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹೆದ್ದಾರಿಯಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಆರ್ಟಿಒ , ಹೈವೇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಹೆದ್ದಾರಿ ಮೂಲಸೌಲಭ್ಯ ಸೇರಿದಂತೆ ವಾಹನ ಒತ್ತಡಗಳ ನಿವಾರಣೆಗೆ ಬೇಕಾದ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ಹಿರಿಯ ಪೆಟ್ರೋಲಿಯಂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಟ್ಯಾಂಕರ್ ಚಾಲಕರಿಗೆ ಮುಂಜಾಗ್ರತಾ ಮಾಹಿತಿಗಳನ್ನು ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಅದರ ಜೊತೆಗೆ ಹಾಟ್ಸ್ಫಾಟ್ಗಳಲ್ಲಿ ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಪ್ರತಾಪ್ ರೆಡ್ಡಿ ಹೇಳಿದರು.ಹೆದ್ದಾರಿಗಳಲ್ಲಿ ಅಗ್ನಿಶಾಮಕ ದಳದ ಸಿಬಂದಿ ನಿಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಪುತ್ತೂರು- ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪನರ್ೆ ಬಳಿ ಎಲ್ಪಿಜಿ ತುಂಬಿಕೊಂಡಿದ್ದ ಬುಲೆಟ್ ಟ್ಯಾಂಕರ್ ಮಂಗಳವಾರದಂದು ಪಲ್ಟಿಯಾಗಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಟ್ಯಾಂಕರ್ ಚಾಲಕ ಸಹಿತ 6 ಮಂದಿ ಸಜೀವ ದಹನವಾಗಿದ್ದಾರೆ.
ಮಂಗಳೂರಿನಿಂದ ಎಚ್ಪಿಸಿಎಲ್ ಅಡುಗೆ ಅನಿಲ ಹೇರಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಬುಲೆಟ್ ಟ್ಯಾಂಕರ್ ಪೆನರ್ೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾಯಿತು. ಈ ಸಂದರ್ಭದಲ್ಲಿ ಶಾಟರ್್ ಸಕ್ಯರ್ೂಟ್ನಿಂದ ಬೆಂಕಿ ಹತ್ತಿಕೊಂಡು ಸುಮಾರು 500 ಮೀಟರ್ ವ್ಯಾಪ್ತಿಯ ಮನೆಗಳು , ಅಂಗಡಿಗಳು ಏಕ್ಧಂ ಬೆಂಕಿಹತ್ತಿಕೊಂಡಿತು. ಈ ಸಂದರ್ಭದಲ್ಲಿ ಅಂಗಡಿ ಬಳಿ ಹಾಗೂ ಮನೆಯೊಳಗಿದ್ದ ವರೆಲ್ಲಾ ಸಜೀವ ದಹನವಾದರು. ಟ್ಯಾಂಕರ್ ಚಾಲಕ ಲಾರಿಯೊಳಗೇ ದಹನವಾದ. ಘಟನೆಯಿಂದಾಗಿ ಹೆದ್ದಾರಿ ಸಂಚಾರ್ ಬಂದ್ ಮಾಡಲಾಗಿದ್ದು ಗ್ಯಾಸ್ ಸೋರಿಕೆಯಾಗುತ್ತಿರುವುದರಿಮದ ಅಗ್ನಿ ಶಾಮಕ ದಳದ ಸಿಬಂದಿಗಳು ನಿರಂತರವಾಗಿ ಟ್ಯಾಂಕರ್ಗೆ ನೀರು ಸಿಂಚನ ಮಾಡುತ್ತಿದ್ದಾರೆ.
ಘಟನೆಯ ವಿವರ :
ಮಂಗಳೂರಿನ ಸುರತ್ಕಲ್ನಿಂದ ಬೆಳಗ್ಗೆ 16 ಸಾವಿರ ಲೀಟರ್ ಅಡುಗೆ ಅನಿಲ ತುಂಬಿಕೊಂಡು ಹೊರಟ್ಟಿದ್ದ ಬುಲೆಟ್ ಟ್ಯಾಂಕರ್ ಬೆಳಗ್ಗೆ ಸುಮಾರು 9.45 ರ ಹೊತ್ತಿಗೆ ಪೆನರ್ೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಈ ಸಂದರ್ಭದಲ್ಲಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬಗಳಿಗೆ ಕೂಡಾ ಡಿಕ್ಕಿಯಾದ್ದರಿಂದ ಶಾಟರ್್ ಸಕ್ಯರ್ೂಟ್ ಆಗಿ ಟ್ಯಾಂಕರ್ ಪಲ್ಟಿಯಾಗುವ ವೇಳೆ ಟ್ಯಾಂಕರ್ನಿಂದ ಚಿಮ್ಮಿದ ಗ್ಯಾಸ್ಗೆ ಬೆಂಕಿ ಹತ್ತಿಕೊಂಡು ಇಡೀ ವ್ಯಾಪಿಸಿತು. ಈ ಸಂದರ್ಭದಲ್ಲಿ ರಸ್ತೆಯಿಂದ ಸುಮಾರು 50 ಮೀಟರ್ ದೂರದಲ್ಲಿದ್ದ 3 ಮನೆಗಳಿಗೆ , ಒಂದು ಗ್ಯಾರೇಜ್ಗೆ ,ಬೇಕರಿ ಅಂಗಡಿ ಸಂಪೂರ್ಣ ಭಸ್ಮವಾಗಿ ಆಸುಪಾಸಿನ ಮನೆಗಳಿಗೆ ಬೆಂಕಿ ತಗುಲಿತು. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಮಗು ಸಹಿತ ಮಹಿಳೆ , ಅಂಗಡಿಯದ್ದಲಿದ್ದ ಮಗು ಹಾಗೂ ಸ್ಥಳೀಯರು ಹಾಗೂ ಟ್ಯಾಂಕರ್ ಚಾಲಕ ಸಜೀವವಾಗಿ ದಹನವಾದರು.ಆಸುಪಾಸಿನಲ್ಲಿದ್ದ ಕೆಲವರು ಓಡಿ ಹೋದರು. ಕೋಳಿಗಳು , ಸಾಕುಪ್ರಾಣಿಗಳು ಸುಟ್ಟು ಕರಕಲಾಗಿ ಬಿದ್ದುಕೊಂಡಿದ್ದವು. ಸ್ಥಳದಲ್ಲಿದ್ದ ಮಾಂಸದ ಮುದ್ದೆಯಂತಾಗಿದ್ದ ಮೃತದೇಹಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡೊಯ್ಯುವ ದೃಶ್ಯ ಮನಕಲಕುವಂತಿತ್ತು. ಮೃತರಲ್ಲಿ ಶೋಭಾ (35) , ಕರೀಂ (17) , ವನಿತಾ ಎಂಬವರು ಗುರುತು ಪತ್ತೆಯಾಗಿದೆ.
ಬೆಂಕಿಯ ಕೆನ್ನಾಲಿಗೆ ಸುಮಾರು 500 ಮೀಟರ್ವರೆಗೆ ವ್ಯಾಸಪಿಸಿತ್ತು. ಆಸುಪಾಸಿನ 8 ತೆಂಗಿನ ಮರ ಸಂಪೂರ್ಣ ಭಸ್ಮವಾಗಿದೆ. ಟ್ಯಾಂಕರ್ ಹಿಂಬದಿಯಿಂದ ಬರುತ್ತಿದ್ದ ಓಮ್ನಿ , ಅಂಗಡಿಗೆ ಬೇಕರಿ ವಸ್ತುಗಳನ್ನು ನೀಡಲು ನಿಲ್ಲಿಸಿದ್ದ ಮಂಗಳೂರಿನ ಕಂಪನಿಯೊಂದರ ಮಿನಿ ಲಾರಿ, ಗ್ಯಾರೇಜ್ನಲ್ಲಿದ್ದ 2 ಬೈಕ್ ಸೇರಿದಂತೆ ಒಟ್ಟು 7 ವಾಹನಗಳು ಭಸ್ಮವಾಗಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಒಟ್ಟು 13 ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವುದರ ಜೊತೆಗೆ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಿದರು.ನಿರಂತರವಾಗಿ ನೀರಿನ ಸಿಂಪಡಣೆ ಮಾಡಿ ಟ್ಯಾಂಕರ್ ತಂಪಾಗಿಸಿ ಎಚ್ಚರಿಕೆ ವಹಿಸಿದರು.
ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹಿಡಿದು ಶಂಕರ್ ರೈ , ನಾರಾಯಣ , ಅಬೂಬಕರ್ ಎಂಬವರ ಮನೆ ಚಂದ್ರ ಎಂಬವರ ಗ್ಯಾರೇಜ್ ಭಸ್ಮವಾಗಿದೆ.
ಪ್ರತ್ಯಕ್ಷದಶರ್ಿಗಳ ಮಾತು :
ಬೆಂಕಿ ಜೊತೆಗೇ ಬಂತು :
ಮನೆಯೊಳಗಿದ್ದ ಉಮ್ಮರ್ ಅವರಿಗೆ ಲಾರಿ ಬಿದ್ದ ಸದ್ದು ಕೇಳಿತು ಜೊತೆಗೆ ಹೊಗೆಯೂ ಬಂತು , ಬೆಂಕಿಯೂ ಜೊತೆ ಜೊತೆಗೇ ಬಂತು , ಮನೆಯ ಹೊರಗಿದ್ದ ಚಪ್ಪಲ್ , ಬಟ್ಟೆ ಹೊತ್ತಿ ಉರಿಯುತ್ತಿತ್ತು ಕೂಡಲೇ ಮನೆಯವರನ್ನೆಲ್ಲಾ ಓಡಲು ಹೇಳಿ , ಮನೆ ಹೊರಗಡೆ ಉರಿಯುತ್ತಿದ್ದ ಚಪ್ಪಲ್ , ಬಟ್ಟೆಗಳನ್ನು ಎಸೆದು ಓಡಿದೆ ಎಂದು ಹೇಳುತ್ತಾರೆ. ನೋಡುತ್ತಿದ್ದಂತೆಯೇ ತೆಂಗಿನಮರಗಳೆಲ್ಲಾ ಉರಿಯುತ್ತಲೇ ಇತ್ತು ಎಂದು ಭಯದಿಂದ ಹೇಳುತ್ತಾರೆ. ಆ ಸಂದರ್ಭದಲ್ಲಿ ಕೆಳಗಿನ ಮನೆಯ ಹೆಂಗಸು ನಮ್ಮ ಮನೆ ಕಡೆಗೆ ಬರುತ್ತಿದ್ದರು , ಅವರ ಕೂದಲಿಗೆ ಬೆಂಕಿ ಹಿಡಿದಿತ್ತು ಅದನ್ನು ನಂದಿಸಲು ಪ್ರಯತ್ನ ಪಟ್ಟು ಓಡಿ ಎಂದು ಹೇಳಿದೆ , ಆದರೆ ಅವರಿಗೆ ಬರಲು ಆಗಲಿಲ್ಲ , ತೀವ್ರ ಗಾಯವಾಗಿದೆ ಎಂದು ಉಮ್ಮರ್ ಹೇಳುತ್ತಾರೆ.
ಹೊಗೆ ಬಂತು ಓಡಿದೆ . .
ಮಂಗಳೂರಿನಿಂದ ಬೇಕರಿ ತಿಂಡಿಗಳನ್ನು ಹೇರಿಕೊಂಡು ಹಾಸನದ ಕಡೆಗೆ ತೆರಳುತ್ತಿದ್ದೆವು. ಈ ಸಂದರ್ಭದಲ್ಲೆ ಪೆನರ್ೆಯ ಈ ಪ್ರದೇಶದಲ್ಲಿ ಅಂಗಡಿಗೆ ಯಾವಾಗಲೂ ತಿಂಡಿ ಖಾಲಿ ಮಾಡಿ ತೆರಳುವುದು. ಇಂದು ಕೂಡಾ ಇಲ್ಲಿ ನಿಲ್ಲಿಸಿದ್ದಾಗ ಟ್ಯಾಂಕರ್ ಬಿದ್ದ ಸದ್ದು ಕೇಳಿತು , ಜೊತೆಗೆ ದಟ್ಟವಾದ ಹೊಗೆಯೂ ಬಂತು. ನಮ್ಮ ಜೊತೆಗೆ ಇದ್ದ ಕೃಷ್ಣ ಓಡಿ ಓಡಿ ಎಂದಾಗ ದಾರಿ ಸಿಕ್ಕ ಕಡೆ ಓಡುತ್ತಾ ಸಮೀಪದ ಮನೆಯವರಿಗೂ ತಿಳಿಸುತ್ತಾ ಓಡಿದೆವು. ನೋಡುತ್ತಿದ್ದಂತೆಯೇ ನಮ್ಮ ಲಾರಿಯೂ ಉರಿಯಿತು ಎಂದು ಮಿನಿ ಲಾರಿ ಚಾಲಕ ಶಿವಪ್ಪ ದೃಶ್ಯವನ್ನು ವಿವರಿಸಿದರು.