Wednesday, 30 March 2016

ಆಮಂತ್ರಣ ಮರುಮುದ್ರಿಸಲು ಹೈಕೋಟರ್್ ಆದೇಶ
 *ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣದಲ್ಲಿದ್ದ ಎ.ಬಿ.ಇಬ್ರಾಹಿಂ ಹೆಸರಿನ ವಿವಾದ
 ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಷರ್ಿಕ ಜಾತ್ರಾ ಉತ್ಸವದ ಆಮಂತ್ರಣ ಪತ್ರಿಕೆ ವಿವಾದ ಅಂತ್ಯ ಕಂಡಿದೆ. ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರನ್ನು ತೆಗೆದು ಮರುಮುದ್ರಿಸುವಂತೆ ಹಾಗೂ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ರಾಜ್ಯ ಹೈಕೋಟರ್್ ಬುಧವಾರ ಆದೇಶ ಮಹತ್ವದ ಆದೇಶ ನೀಡಿದೆ.
 ಧಾಮರ್ಿಕ ದತ್ತಿ ಇಲಾಖೆಯ ಕಲಂ 7ರ ಪ್ರಕಾರ ದೇವಸ್ಥಾನಗಳಲ್ಲಿ ಹಿಂದುಯೇತರರು ಮತ್ತು ಧಾಮರ್ಿಕ ನಂಬಿಕೆ ಇಲ್ಲದವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡ ಭಕ್ತವೃಂದ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಹೆಸರಿಗೆ ವಿರೋಧವಿಲ್ಲ; ಎ.ಬಿ.ಇಬ್ರಾಹಿಂ ಹೆಸರಿಗೆ ವಿರೋಧ ಎಂದು ಸ್ಪಷ್ಟವಾಗಿ ತಿಳಿಸಲಾಯಿತು. ಹಿಂದುಯೇತರ ಅಧಿಕಾರಿ ಹಿಂದು ಭಕ್ತರನ್ನು ದೇವಳಕ್ಕೆ ಆಮಂತ್ರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಸಮರ್ಥನೆ, ಕಾಂಗ್ರೆಸ್ ನಾಯಕರ ಬೆಂಬಲ ಒಂದಾಗುತ್ತಿದ್ದಂತೆ ವಿಹಿಂಪ ಮುಖಂಡ ನವೀನ್ ಕುಲಾಲ್ ಹೈಕೋಟರ್್ ಮೆಟ್ಟಿಲೇರಿದರು. ಭಕ್ತವೃಂದದ ವಾದವನ್ನು ಇದೀಗ ಹೈಕೋಟರ್್ ಎತ್ತಿ ಹಿಡಿದಂತಾಗಿದೆ.
 ಪ್ರತಿಭಟನೆ, ರಾಸ್ತಾರೋಕೋ, ಬಂದ್ ಹೀಗೆ ವಿವಿಧ ಹಂತದಲ್ಲಿ ವಿರೋಧ ವ್ಯಕ್ತಪಡಿಸುವ ಇಂಗಿತ ಭಕ್ತರದ್ದಾಗಿತ್ತು. ಆದರೆ ಮಹಾಲಿಂಗೇಶ್ವರ ದೇವರ ವಿಚಾರದಲ್ಲಿ ಇದರ ಅಗತ್ಯವಿಲ್ಲ ಎಂದು ಮುಖಂಡರು ಮನವೊಲಿಸಿದರು. ಹೈಕೋಟರ್್ ನೀಡಿದ ತೀಪರ್ು ಭಕ್ತವೃಂದದ ಪರವಾಗಿಯೇ ಬಂದ ಕಾರಣ ವಿವಾದ ಅಂತ್ಯವಾಗಿದೆ. ಆಮಂತ್ರಣ ಮರುಮುದ್ರಿಸಬೇಕು ಎಂಬ ಭಕ್ತರ ಬೇಡಿಕೆಗೆ ಜಯ ಸಿಕ್ಕಿದೆ.


 ಅಸಹಿಷ್ಣುತೆ ಎಂದಿದ್ದ ಡಿಸಿ:
 ಜಿಲ್ಲೆಯ ಎಲ್ಲಾ ವಿಚಾರಗಳಲ್ಲೂ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬಹುದು. ದೇವಳಕ್ಕೆ ಅನುದಾನ ನೀಡಿದ್ದೇನೆ, ಕಾರು ನೀಡಿದ್ದೇನೆ, ಕ್ಯಾಟಲಾಗ್ನಲ್ಲಿ ಹೆಸರು ಸೇರಿಸುವಾಗಿ ತಾನು ಬೇಕಿತ್ತು. ಈಗ ತಾನು ಬೇಡವಾದೆನೇ ಎಂದಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿವಾದವನ್ನು ಅಸಹಿಷ್ಣುತೆ ಎಂದು ಬಣ್ಣಿಸಿದ್ದರು. ಸುಬ್ರಹ್ಮಣ್ಯ, ಮೈಸೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಹೆಸರನ್ನು ಆಮಂತ್ರಣದಲ್ಲಿ ಮುದ್ರಿಸುವ ಶಿಷ್ಟಚಾರ ಇದೆ ಎಂದು ತಿಳಿಸಿದ್ದರು.
 

 ಚಪ್ಪರ ವಿವಾದ:
 ಇದರ ನಡುವೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ವಿವಾದದ ನಡುವೆ ಚಪ್ಪರ ವಿವಾದ ತಾರಕಕ್ಕೇರಿತು. ಶೇಡ್ ನೆಟ್ ಹಾಕಿದ್ದ ಅಧಿಕಾರಿಗಳ ಕ್ರಮ ಆಕ್ರೋಶಕ್ಕೆ ಕಾರಣವಾಯಿತು. ಮಾಂಸಾಹಾರಿ ಕಾರ್ಯಕ್ರಮಗಳಲ್ಲಿ ಬಳಕೆಯಾದ ಶೇಡ್ನೆಟ್ ದೇವಳಗಳಲ್ಲಿ ಬಳಕೆಯಾಗುವುದು ಎಷ್ಟು ಸರಿ? ಇದನ್ನು ಪ್ರತಿಭಟಿಸಿ ದಿನೇಶ್ ಜೈನ್ ಮನವಿ ಸಲ್ಲಿಸಿದ್ದರು. ಶ್ರೀಧರ್ ಹೆಗ್ಡೆ ಎಂಬವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸಾಂಪ್ರದಾಯಿಕ ತಟ್ಟಿ ಚಪ್ಪರ ನಿಮರ್ಿಸಿ ಕೊಡುವ ಭರವಸೆ ನೀಡಿದ್ದರು. ಅದರಂತೆ ಒಪ್ಪಿಗೆ ಸಿಕ್ಕಿದ್ದು ಏ.1ರಂದು ಚಪ್ಪರ ಮುಹೂರ್ತ ನಡೆಯಲಿದೆ.

ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿಗೂ ತನಗೆ ಸಿಕ್ಕಿರುವ ಮಾಹಿತಿಗೂ ಹೊಂದಾಣಿಕೆ ಆಗುತ್ತಿಲ್ಲ. ಹೈಕೋಟರ್್ ಆದೇಶದ ಪ್ರತಿ ಸಿಕ್ಕಿದ ಬಳಿಕವಷ್ಟೇ ಹೇಳಿಕೆ ನೀಡಲು ಸಾಧ್ಯ.
 ಎ.ಬಿ.ಇಬ್ರಾಹಿಂ, ಜಿಲ್ಲಾಧಿಕಾರಿ

 ಹೀಗಿತ್ತು ವಿವಾದದ ಹಾದಿ
 -10ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರಿನ ವಿವಾದ ಆರಂಭ
 -11ರಂದು ಭಕ್ತವೃಂದದ ಜತೆಗೂಡಿದ ಸಂಘಟನೆಗಳು
 -14ರಂದು ಆಮಂತ್ರಣ ಮರುಮುದ್ರಿಸಿಯೇ ಸಿದ್ಧ ಎಂಬ ಶಾಸಕಿ ಶಕುಂತಳಾ ಶೆಟ್ಟಿ
 -15ರಂದು ಜಿಲ್ಲಾಧಿಕಾರಿ ಸಮರ್ಥನೆ. ಅಸಹಿಷ್ಣುತೆ ಎಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬಣ್ಣನೆ
 -16ರಂದು ಜನಾರ್ದನ ಪೂಜಾರಿ, ರಮಾನಾಥ ರೈ ಜಿಲ್ಲಾಧಿಕಾರಿ ಬೆಂಬಲಕ್ಕೆ
 -16ರಂದು ಪ್ರಕರಣ ಹೈಕೋಟರ್್ ಅಂಗಳಕ್ಕೆ
 -17ರಂದು ಪ್ರತಿಭಟನೆ- ಜಿಲ್ಲಾ ಬಂದ್ಗೆ ಕರೆ ಎಚ್ಚರಿಕೆ
 -19ರಂದು ನಟರಾಜ ವೇದಿಕೆಯಲ್ಲಿ ಭಕ್ತರ ಸಭೆ
 -21ರಂದು ವಜ್ರದೇಹಿ ಹಾಗೂ ಬಾಳೆಕೋಡಿ ಶ್ರೀಗಳ ಉಪಸ್ಥಿತಿಯಲ್ಲಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ- ರಥಬೀದಿಯಲ್ಲಿ ಸಭೆ- ನ್ಯಾಯಾಲಯ ವಿಚಾರಣೆ 24ಕ್ಕೆ ಮುಂದೂಡಿಕೆ
 -24ರಂದು ವಿಚಾರಣೆಯನ್ನು ಮುಂದೂಡಿದ ಹೈಕೋಟರ್್ -ಆಮಂತ್ರಣದಲ್ಲಿ ಹೆಸರು ಶಿಷ್ಟಾಚಾರವೆಂದ ಜಿಲ್ಲಾಧಿಕಾರಿ
 -26ರಂದು ಜಿಲ್ಲಾಧಿಕಾರಿ ಜತೆ ಆರ್ಎಸ್ಎಸ್ ಮಾತುಕತೆ
 -29ರಂದು ಧರ್ಮ ಜಾಗೃತಿ ಸಭೆ- ಒಡಿಯೂರು ಶ್ರೀ, ಮಹಾಬಲ ಶ್ರೀಗಳ ಉಪಸ್ಥಿತಿ -ಹೈಕೋಟರ್್ ವಿಚಾರಣೆ 30ಕ್ಕೆ ಮುಂದೂಡಿಕೆ
 -30ರಂದು ಭಕ್ತವೃಂದದ ಪರವಾಗಿ ಹೈಕೋಟರ್್ ತೀಪರ್ು





 

ಭಕ್ತರ ಕೈ ಬಿಡದ ಮಹಾಲಿಂಗೇಶ್ವರ ಪುತ್ತೂರು ಜಾತ್ರೋತ್ಸವದ ಆಮಂತ್ರಣ ಪತ್ರದಲ್ಲಿ ಎ.ಬಿ. ಇಬ್ರಾಹಿಂರವರ ಹೆಸರು ತೆಗೆದು ಮರು ಮುದ್ರಿಸಲು ಮಹತ್ವದ ತೀಪರ್ು ನಿಡಿದ ಹೈಕೋಟ್

Tuesday, 29 March 2016



ಮಹಾಲಿಂಗೇಶ್ವರ ದೇವಸ್ಥಾನ ಆಮಂತ್ರಣ ಪತ್ರಿಕೆ ವಿವಾದ ; ಪುತ್ತೂರಿನಲ್ಲಿ ಧರ್ಮಜಾಗೃತಿ ಸಭೆ

ಪುತ್ತೂರು:ಸಹಿಷ್ಣುತೆ ಎಂಬುದು ಈ ದೇಶದ ಹೃದಯ.ಇದು ದೇಶದ ಧರ್ಮ.ಇದನ್ನು ಅಲುಗಾಡಿಸಬೇಡಿ.ಒಂದು ವೇಳೆ ಅಲುಗಾಡಿಸಿದ್ದೇ ಆದರೆ ಸುನಾಮಿಯೇ ಏಳಬಹುದು.ದೇಶದ ಧರ್ಮ ಸಹಿದೇ ಇರುವವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ.ಹೀಗಾಗಿ ಈಗ ಮೊದಲು ಆಗಬೇಕಿರುವುದು ಸಾತ್ವಿಕ ಹೋರಾಟ, ಇದರಲ್ಲಿ ಜಯ ನಿಶ್ಚಿತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


      ಅವರು  ಪುತ್ತೂರುಶ್ರೀಮಹಾಲಿಂಗೇಶ್ವರದೇವಸ್ಥಾನದ ವಠಾರದಲ್ಲಿ ಮಂಗಳವಾದ ನಡೆದ ಧರ್ಮಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದರು.ಈಗಿನ ಹೋರಾಟದಲ್ಲಿ ಸಾಧು-ಸಂತರು, ಹಿಂದೂ ಮುಖಂಡರು ಭಾಗವಹಿಸಿದ್ದಾರೆ.ಇಲ್ಲಿ ಸಮರ್ಥನೆಗಿಂತ ಬೇಕಿರುವುದು ಸಾಮರಸ್ಯ.ಇದು ಅಧಿಕಾರಿಗಳಿಗೆ ಮನವರಿಕೆಯಾಗಬೇಕು.ಹಾಗಿದ್ದರೂ ಹಿಂದೂಗಳ ಭಾವನೆಗೆ ಗೌರವ ಸಿಕ್ಕಿಲ್ಲವಾದರೆ ಹೋರಾಟದ ಕಿಚ್ಚು ಹೆಚ್ಚಾಗಬೇಕು.ಹೀಗಾಗಿ ಈಗಲೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆಯ ವಿಚಾರದಲ್ಲಿ ಸಾಮರಸ್ಯ ಕಾಪಾಡಲು ಅಧಿಕಾರಿಗಳಿಗೆ ಅವಕಾಶ ಇದೆ.ಎಲ್ಲವೂ ತಪ್ಪಾಗಿದೆ, ಸರಿಮಾಡೋಣ ಎಂಬ ಒಂದು ವಾಕ್ಯ ಎಲ್ಲಾ ವಿವಾದವನ್ನೂ ತಣಿಸಲಿದೆ.ಇದಕ್ಕೆ ಹಿಂದೂಗಳ ಸಹಕಾರವೂ ಇದೆ ಎಂದರು.ಪುತ್ತೂರು ದೇಸ್ಥಾನದ ವಿವಿಧ ಕಾರ್ಯಗಳು ಕರಸೇವೆಯ ಮೂಲಕವೇ ಆಗಿದೆ ಎಂದಾದರೆ, ಭಕ್ತರ ಭಾವನೆಗಳಿಗೆ ಗೌರವ ನೀಡುವ ಕೆಲಸವಾಗಬೇಕು ಎಂದರು.



ಮುಖ್ಯ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಕಾರ್ಯವಾಹ ನ.ಸೀತಾರಾಮ, ಹಿಂದೂ ದೇವಸ್ಥಾನಗಳಲ್ಲಿ ಧರ್ಮವೇ ಸಂವಿಧಾನ, ಇದು ಪುರಾಣ ಇತಿಹಾಸಗಳಿಂದ ತಿಳಿಯುತ್ತದೆ. ಈಗಾಗಲೇ ದೇವಸ್ಥಾನಗಳಲ್ಲಿ ತಂತ್ರಿಗಳು ಪ್ರೋಟೋಕಾಲ್ ಮಾಡಿದ್ದಾರೆ.ಅರ್ಚಕರು ಸೇರಿದಂತೆ ಇತರರು ನೀತಿ ನಿರ್ಣಯ ಮಾಡಿದ್ದಾರೆ, ಇದು ಸರಿ ಇಲ್ಲದೇ ಇದ್ದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಇದಕ್ಕೆ ಬೇರೆಯವರ ಪ್ರವೇಶ ಬೇಡ.ಹೀಗಾಗಿ ದೇವಸ್ಥಾನದಲ್ಲಿ ಪ್ರೋಟೋಕಾಲ್ ವಿಚಾರವೇ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ  ದೇವಸ್ಥಾನಗಳಲ್ಲಿ  ಈ ಸಕರ್ಾರಿ ಪ್ರೋಟೋಕಾಲ್ ಜಾರಿಗೆ ತರದಂತೆ ಹೋರಟ ಮಾಡಲಾಗುತ್ತದೆ.ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಅನ್ಯಮತೀಯ ಅಧಿಕಾರಿ ಆಹ್ವಾನ ಮಾಡುವುದಕ್ಕೆ ಇಲ್ಲಿ ಭಕ್ತರ ವಿರೋಧ ಇದೆ.ಸಾವಿರಾರು ಭಕ್ತರು ಈ ಬಗ್ಗೆ ಹೇಳಿದರೂ ಅಧಿಕಾರುಗಳು ಸಮರ್ಥನೆ ಮಾಡುತ್ತಾರೆ ಎಂದರೆ ಏನು ಅರ್ಥ ಎಂದು  ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ  ಮಾತನಾಡಿದ ಜಿಲ್ಲಾ ವಿಶ್ವಹಿಂದೂ ಪರಿಷದ್ ಅಧ್ಯಕ್ಷ ಜಗದೀಶ್ ಶೇಣವ, ಹಿಂದೂಗಳ ದೇವಸ್ಥಾನದ ಜಾತ್ರೆಯ ಕಾರ್ಯಕ್ರಮಕ್ಕೆ ಮುಸ್ಲಿಂ ಅಧಿಕಾರಿ ಭಕ್ತಾದಿಗಳನ್ನು ಆಹ್ವಾನಿಸಬೇಕೇ, ಇಂತಹ ಕಾನೂನು ಹಿಂದೂ ಧಾಮರ್ಿಕ ದತ್ತಿ ಇಲಾಖೆಯಲ್ಲಿ ಇಲ್ಲ.ಈ ಇಲಾಖೆಯಲ್ಲಿ  ವಾಹನ ಚಾಲಕನಿಂದ ತೊಡಗಿ ಅಧಿಕಾರಿಯವರೆಗೆ ಯಾವುದೇ ಅಹಿಂದು ಇರಕೂಡದು, ಹಾಗಿದ್ದರೂ ಜಾತ್ರೆಗೆ ಆಹ್ವಾನ ಹೇಗೆ ಸಾಧ್ಯ.ಈ ಬಗ್ಗೆ ಮಾತನಾಡಲು ವಾಹಿನಿಯೊಂದರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಜೊತೆ ಮುಖಾಮುಖಿಗೆ ಅವಾಕಾಶ ಕೇಳಿದಾಗ ಜಿಲ್ಲಾಧಿಕಾರಿಗಳೇ ನಿರಾಕರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಣಿಯೂರು ಚಾಮುಂಡೇಶ್ವರಿಯ ಶ್ರೀ ಮಹಾಬಲ ಸ್ವಾಮೀಜಿ,ದೇವಸ್ಥಾನಗಳು ಹಿಂದೂಗಳ ಶ್ರದ್ದಾ ಕೇಂದ್ರ. ಇಲ್ಲಿನ ಧಾಮರ್ಿಕ ಭಾವನೆಗೆ ಧಕ್ಕೆ ತರುವ
ಆಗಲೇಬಾರದು.ಕಾನೂನು ಮೀರಿ ಕೆಲಸ ಮಾಡಿದಾಗ ಹೋರಾಟ ನಿವಾರ್ಯವಾಗಿದೆ ಎಂದರು.ನ್ಯಾಯಾಲಯದಲ್ಲೂ ಹಿಂದೂಗಳ ಪರವೇ ತೀಪರ್ು ಬರಲಿ ಎಂದು ಪ್ರಾಥರ್ಿಸೋಣ ಎಂದರು.
ಧಾಮರ್ಿಕ ಜಾಗೃತಿ ಸಭಾಕಾರ್ಯಕ್ರಮಕ್ಕೆ ಮುನ್ನ ದೇವಸ್ಥಾನದ ಎದರು ಗದ್ದೆಯಲ್ಲಿ ಭಜನೆ, ದೇವರ ನಾಮ ಸಂಕೀರ್ತನೆ, ದೇವಸ್ಥಾನದಲ್ಲಿ  ಮಹಾಪೂಜೆ ನಡೆಯಿತು.
ಬಜರಂಗದಳ ಜಿಲ್ಲಾ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಸ್ವಾಗತಿಸಿ ವಿಹಿಂಪ ಅಧ್ಯಕ್ಷ ಡೀಕಯ್ಯ ಪೆರುವೋಡಿ ವಂದಿಸಿದರು.ರಾಜೇಶ್ ಬನ್ನೂರು ಹಾಗೂ ಚಂದ್ರಶೇಖರ ರಾವ್ ಕಾರ್ಯಕ್ರಮ ನಿರೂಪಿಸಿದರು.

Wednesday, 23 March 2016

ಪುತ್ತೂರು ದೇವಾಲಯದ ಆಹ್ವಾನ ಪತ್ರ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ




ಪುತ್ತೂರು ದೇವಾಲಯದ ಆಹ್ವಾನ ಪತ್ರ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಇನ್ನೊಂದೆಡೆ, ಪುತ್ತೂರಿನಲ್ಲಿ ಹಿಂದೂ ಸಂಘಟನೆಗಳ ನಾಯಕರು ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ತಮ್ಮ ಹೋರಾಟವನ್ನು ಜೀವಂತವಾಗಿರಿಸಿದ್ದಾರೆ.
ಪುತ್ತೂರು ಸಂಘ ಪರಿವಾರದ ನಾಯಕ ನವೀನ್ ಎಂಬವರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಇಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ದೇವಾಲಯದ ಆಹ್ವಾನಪತ್ರದಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ ಅವರ ಹೆಸರನ್ನು ತೆಗೆಯುವಂತಾಗಬೇಕು ಎಂದು ದೇವರಲ್ಲಿ ಬೇಡಲಾಯಿತು.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.
ಸಂಘ ಪರಿವಾರದ ನಾಯಕರಾದ ಪ್ರಸಾದ್ ಭಂಡಾರಿ, ರಾಜೇಶ್ ಬನ್ನೂರು, ಸಂಜೀವ ಮಠಂದೂರು ಮೊದಲಾದವರು ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ರವೀಶ ತಂತ್ರಿ ದೇವರದಲ್ಲಿ ಪ್ರಾರ್ಥನೆ ಮಾಡಿ ಪ್ರಕರಣಕ್ಕೆ ಸೂಕ್ತ ಇತಿಶ್ರೀ ಹಾಡಬೇಕೆಂದು ಬೇಡಿಕೊಂಡರು.

Thursday, 17 March 2016

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆ ಮರುಮುದ್ರಣಕ್ಕೆ ಆಗ್ರಹಿಸಿ ಮಿನಿವಿಧಾನಸೌಧ ಮುಂಭಾಗ ಗುರುವಾರ ನಡೆದ ಪ್ರತಿಭಟನೆ

ಪುತ್ತೂರು: ಬಹುಸಂಖ್ಯಾತರಿಗೆ- ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಅನುಸರಿಸಲಾಗುತ್ತಿದೆ. ಜಾತ್ರಾ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ತೆಗೆಯುವವರೆಗೂ ಹೋರಾಟ ಮುಂದುವರಿಯಲಿದೆ. ಪುತ್ತೂರು ಮಾತ್ರವಲ್ಲ ಪುತ್ತೂರು: ಬಹುಸಂಖ್ಯಾತರಿಗೆ- ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಕಾನೂನು ಅನುಸರಿಸಲಾಗುತ್ತಿದೆ. ಜಾತ್ರಾ ಆಮಂತ್ರಣ ಪತ್ರಿಕೆಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ತೆಗೆಯುವವರೆಗೂ ಹೋರಾಟ ಮುಂದುವರಿಯಲಿದೆ. ಪುತ್ತೂರು ಮಾತ್ರವಲ್ಲ ಜಿಲ್ಲಾ ಬಂದ್ಗೂ ಕರೆ ನೀಡಲಾಗುವುದು. ಇದರಿಂದಾಗುವ ಸಮಸ್ಯೆಗೆ ಜಿಲ್ಲಾಡಳಿತವೇ ಹೊಣೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆ ಮರುಮುದ್ರಣಕ್ಕೆ ಆಗ್ರಹಿಸಿ ಮಿನಿವಿಧಾನಸೌಧ ಮುಂಭಾಗ ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಹಿಂದುಯೇತರರ ಹೆಸರು ದೇವಸ್ಥಾನದಲ್ಲಿ ಬಳಕೆ ಆಗಬಾರದೆಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಒಂದು ವೇಳೆ ದೇವಳದ ವಿಚಾರದಲ್ಲಿ ಜಿಲ್ಲಾಧಿಕಾರಿ ಹೆಸರು ಹಾಕುವ ಪ್ರಮೇಯ ಎದುರಾದ ಸಂದರ್ಭ ಜಿಲ್ಲಾಧಿಕಾರಿ ಹಿಂದುಯೇತರ ಆದರೆ ಅಪರ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರ ಹೆಸರು ಹಾಕಬೇಕು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸುದ್ದಿಗೋಷ್ಠಿ ಕರೆದು ಎಲ್ಲಾ ಧರ್ಮದ ಆಚರಣೆಯನ್ನು ಪಾಲಿಸುತ್ತೇನೆ ಎಂದು ಹೇಳಿಕೆ ನೀಡಲಿ. ಹೀಗೆ ಮಾಡಿದರೆ ಮುಸ್ಲಿಂ ಸಂಪ್ರದಾಯದಂತೆ ಕಾಫರ್ ಆಗುತ್ತಾರೆ. ಮುಂದೆ ಬರುವ ಹಿಂದು ಜಿಲ್ಲಾಧಿಕಾರಿ ಹೆಸರನ್ನು ಉಳ್ಳಾಲ ಉರೂಸ್ನಲ್ಲಿ, ಕ್ರಿಶ್ಚಿಯನ್ ಕಾರ್ಯಕ್ರಮಗಳ ಆಮಂತ್ರಣದಲ್ಲಿ ಬಳಸಿಕೊಳ್ಳಲಿ ಎಂದು ಸವಾಲೆಸೆದರು.
ಇಬ್ರಾಹಿಂ ಸಾಹೇಬರು ನೀಡಿದರೆನ್ನಲಾದ ಅನುದಾನ ಯಾರ ದುಡ್ಡು. ಕಿಸೆಯಿಂದ ಹಣ ನೀಡಿದಂತೆ ಮಾತನಾಡುತ್ತಾರೆ. ತಕ್ಷಣ ಈ ಮಾತನ್ನು ಹಿಂಪಡೆಯಬೇಕು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿ ಬಹುಸಂಖ್ಯಾತರನ್ನು ತುಳಿತಕ್ಕೆ ಒಳಪಡಿಸುವ ಉದ್ದೇಶವಿದು. ಆಮಂತ್ರಣ ಪತ್ರಿಕೆಯಿಂದ ಹೆಸರು ತೆಗೆಯಲೇಬೇಕು. ಅಲ್ಲಿವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.



ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ, ಶ್ರದ್ಧಾ, ಭಕ್ತಿಯ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಧಾಮರ್ಿಕ ಕಾರ್ಯಕ್ರಮವಾದ ಪುತ್ತೂರು ಜಾತ್ರೆ ಯಾವಾಗ ಆರಂಭವಾಗಿದೆ ಎಂಬ ಬಗ್ಗೆ ಸಕರ್ಾರದ ಬಳಿಯೂ ದಾಖಲೆಗಳಿಲ್ಲ. ಸಕರ್ಾರದಿಂದ ದೊಡ್ಡ ಲೋಪವಾಗಿದೆ. ಇದನ್ನು ಮುಜರಾಯಿ ಇಲಾಖೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪುತ್ತೂರು ದೇವಳದ ಸಂಪ್ರದಾಯ, ಆಚರಣೆ ವಿಶಿಷ್ಟವಾದದ್ದು. ಉಳ್ಳಾಲ್ತಿ ಆಗಮನಕ್ಕೆ ಮೊದಲು ಬಲ್ನಾಡಿಗೆ ತೆರಳಿ ಹೂ ನೀಡಿ ಆಮಂತ್ರಿಸಬೇಕು, ಉಳ್ಳಾಲ್ತಿ ಮಾಣಿಗೆ ಹೂ ಹಾಕಬೇಕು, ದರ್ಶನ ಬಲಿ ಸಂದರ್ಭ ಗಂಧ ಸ್ವೀಕರಿಸಬೇಕು, ಅಪ್ಪಂಗಾಯಿ ಆಚರಿಸಬೇಕು, ಅವಭೃತಕ್ಕೆ ಹೋಗುವ ಸಂದರ್ಭ ದೈವಕ್ಕೆ ದೇವಳದ ಅಧಿಕಾರ ವಹಿಸುವ ಅನೇಕ ಆಚರಣೆ ಇಲ್ಲಿದೆ. ಇದನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಚರಿಸಲು ಸಿದ್ಧರಿದ್ದಾರೆಯೇ? ಪ್ರಸಾದ ತೆಗೆದುಕೊಳ್ಳಿ ಎಂದು ಹೇಳುವವರಿಗೆ ಭಕ್ತಿ, ಶ್ರದ್ಧೆ ಇರಬೇಕು. ಭಕ್ತರಿಗೆ ನೋವುಂಟು ಮಾಡುವ ಕೆಲಸ ಜಿಲ್ಲಾಡಳಿತದಿಂದ ನಡೆದಿದೆ. ಇದನ್ನು ಸರಿಪಡಿಸಿ ಪೂರ್ವಶಿಷ್ಟ ಸಂಪ್ರದಾಯದಂತೆ ಆಮಂತ್ರಣ ಮರುಮುದ್ರಿಸಬೇಕು ಎಂದು ಆಗ್ರಹಿಸಿದರು.





ಬಜರಂಗದಳ ಕನರ್ಾಟಕ ದಕ್ಷಿಣ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಅನ್ಯಮತೀಯ ಅಧಿಕಾರಿ ಜಾತ್ರೆ ನಡೆಸುವ ಮೂಲಕ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿ, ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಶಾಸಕಿ ಮಾತಿಗೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಹಿಂದು ಸಮಾಜದ ನಂಬಿಕೆ, ಮಠ-ಮಂದಿರವನ್ನು ನಾಶ ಮಾಡುವ ಮೂಲಕ `ನಾವು ಆಡಳಿತ ನಡೆಸುತ್ತೇವೆ, ನೀವು ಆಚರಿಸಿ' ಎಂಬ ಸಂದೇಶ ನೀಡುತ್ತಿದ್ದಾರೆ. ಮೂತರ್ಿ ಪೂಜೆ ನಂಬದ ಅಧಿಕಾರಿ ಮೂಲಕ ಜಾತ್ರೆ ನಡೆಸುತ್ತೀರಿ ಎಂದಾದರೆ ಆಮಂತ್ರಣ ಹಂಚಲು ಬಿಡುವುದಿಲ್ಲ ಎಂದರು.




ಮುಖಂಡರಾದ ರಾಜೇಶ್ ಬನ್ನೂರು, ಪೂವಪ್ಪ, ಕೇಶವ ಬಜತ್ತೂರು, ಮನೋಹರ್, ಅಪ್ಪಯ್ಯ ಮಣಿಯಾಣಿ, ಸಂಜೀವ ಮಠಂದೂರು, ಚನಿಲ ತಿಮ್ಮಪ್ಪ ಶೆಟ್ಟಿ, ಡೀಕಯ್ಯ ಪೆರ್ವೋಡಿ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮನವಿ ಪತ್ರವನ್ನು ಓದಿದರು.
ಪ್ರತಿಭಟನೆಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ನಡೆಯಿತು. ಮುಖ್ಯರಸ್ತೆಯಾಗಿ ಪುತ್ತೂರು ಮಿನಿವಿಧಾನಸೌಧ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಸಹಾಯಕ ಆಯುಕ್ತರ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಲಾಯಿತು.












Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...