Wednesday, 30 September 2015

ಪುತ್ತೂರು ಸಹಾಯಕ ಆಯುಕ್ತ ಸತೀಶ್ ಕುಮಾರ್ ಡಿ.ಎಂ.

 ಪರ್ಲಡ್ಕ ಬಾಲವನ ಸೇರಿದಂತೆ ಡಾ.ಶಿವರಾಮ ಕಾರಂತರ ಮನೆ ಅಭಿವೃದ್ಧಿಗೆ ಶ್ರಮಿಸಲಾಗುವುದು. ಈ ಬಗ್ಗೆ ಬಾಲವನ ಅಭಿವೃದ್ಧಿ ಸಮಿತಿ ನಿದರ್ೇಶನ ನೀಡಲಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಸತೀಶ್ ಕುಮಾರ್ ಡಿ.ಎಂ. ಹೇಳಿದರು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಸತೀಶ್ ಕುಮಾರ್ ಡಿ.ಎಂ. ಸುದ್ದಿಗಾರರೊಂದಿಗೆ ಮಾತನಾಡಿದರು. 2010ರ ಕೆಎಎಸ್ ಅಧಿಕಾರಿಯಾಗಿರುವ ಇವರು, ಹಾವೇರಿಯಲ್ಲಿ ಪ್ರೊಬೇಷನರಿ ಅವಧಿ ಪೂರೈಸಿದರು. ಬಳಿಕ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಭಾನುವಾರ ಪರ್ಲಡ್ಕ ಬಾಲವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಯೋಜಿತ ಕಾರ್ಯಗಳ ಬಗ್ಗೆ ಆಲೋಚಿಸಿದ್ದು, ಬಾಲವನ ಅಭಿವೃದ್ಧಿ ಸಮಿತಿ ಸಭೆ ಕರೆದು ಚಚರ್ಿಸಲಾಗಿದೆ. ಶಿವರಾಮ ಕಾರಂತರ ಮನೆ ನನೆಗುದಿಗೆ ಬಿದ್ದಿರುವ ವಿಚಾರವೂ ತಿಳಿಯಿತು. ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಪುತ್ತೂರಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಟ್ರಾಫಿಕ್ ಸಮಸ್ಯೆ, ಸಂತೆ ವಿಚಾರ, ಅನಧಿಕೃತ ಕಟ್ಟಡ, ಇಕ್ಕಟ್ಟಾದ ರಸ್ತೆ, ಪಡುಮಲೆ ಕ್ಷೇತ್ರ ಅಭಿವೃದ್ಧಿ, ಬೆಂದ್ರ್ತೀರ್ಥ ಬಿಸಿನೀರಿನ ಬುಗ್ಗೆ ಮೊದಲಾದ ವಿಚಾರಗಳ ಬಗ್ಗೆ ಸಹಾಯಕ ಆಯುಕ್ತರ ಗಮನ ಸೆಳೆಯಲಾಯಿತು.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...