Thursday, 23 April 2020

Rama Bhat Puttur X MLA nammaPuttur

  ಪ್ರಧಾನಿ ನರೇಂದ್ರ ಮೋದಿ ಪುತ್ತೂರು ಮಾಜಿ ಶಾಸಕ ರಾಮ್ ಭಟ್  ರಿಗೆ  ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪುತ್ತೂರಿನ ಮೊತ್ತ ಮೊದಲ ಬಿಜೆಪಿ‌ ಶಾಸಕ‌ ಹಾಗೂ ರಾಜ್ಯದಲ್ಲಿ  ಆ ಸಮಯದಲ್ಲಿ  ಬಿಜೆಪಿಯ ಇಬ್ಬರು ಶಾಸಕರ ಪೈಕಿ ರಾಮ್ ಭಟ್ ಒಬ್ಬರಾಗಿದ್ದು, ಇನ್ನೊಬ್ಬರು ಸದ್ಯ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪರಾಗಿದ್ದಾರೆ.  ಪ್ರಧಾನಿ ಕಛೇರಿಯಿಂದ ರಾಮ್ ಭಟ್ ಮನೆಗೆ ಕರೆ ಬಂದಿದ್ದು, ಹಿಂದಿಯಲ್ಲೇ ರಾಮ್ ಭಟ್ ಅವರ ಆರೋಗ್ಯವನ್ನು ಪ್ರಧಾನಿ ಮೋದಿ ವಿಚಾರಿಸಿದ್ದಾರೆ. ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಮೋದಿಯವರು ಕರೆ ಮಾಡಿರುವುದು ಸಂತಸ ತಂದಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನಿಗೆ ಇಂಥಹ ಮಾತುಗಳು ಉತ್ತೇಜನ ನೀಡುತ್ತದೆ ಎಂದು ರಾಮ್ ಭಟ್ ಪ್ರತಿಕ್ರಿಯಿಸಿದ್ದಾರೆ.

Monday, 20 April 2020

nagarasabhe Puttur 3



ರಸ್ತೆ ಬದಿಯ ನಿರ್ಗತಿಕರು ಶಾಲೆಗೆ ಸ್ಥಳಾಂತರ

ಪುತ್ತೂರು; ಬೀದಿ ಬದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ೮ ಮಂದಿಯನ್ನು ಇದೀಗ ಪುತ್ತೂರು ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಗೆ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಅವರ ನೇತೃತ್ವದಲ್ಲಿ ಶುಕ್ರವಾರ ಸ್ಥಳಾಂತರ ಮಾಡಲಾಯಿತು.

ಪುತ್ತೂರು ನಗರದ ಎಂ.ಟಿ ರಸ್ತೆಯ ಅಂಗಡಿ ಭಾಗಲಲ್ಲಿ ಈ ನಿರ್ಗತಿಕರು ಭಿಕ್ಷೆ ಬೇಡಿ ಹಲವು ವರ್ಷಗಳಿಂದ ಬದುಕುತ್ತಿದ್ದರು. ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಇವರಿಗೆ ಅನ್ನದ ತುತ್ತಿಗೂ ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಪುತ್ತೂರು ಮೆಸ್ಕಾಂ ಇಲಾಖೆಯ ಆಶ್ರಫ್ ಮತ್ತು ತಂಡದಿAದ ದಿನಂಪ್ರತಿ ಆಹಾರ ನೀಡುವ ಕೆಲಸ ನಡೆಯುತ್ತಿತ್ತು. ಆದರೆ ಮಳೆಯೂ ಆರಂಭವಾದ ಹಿನ್ನಲೆಯಲ್ಲಿ ಇವರನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರು ನಗರಸಭಾ ಪೌರಾಯುಕ್ತರಿಗೆ ಸೂಚಿಸಿದರು.

ಈ ಹಿನ್ನಲೆಯಲ್ಲಿ ಅಲ್ಲಿದ್ದ ೮ ಮಂದಿ ನಿರ್ಗತಿಕರನ್ನು ಇದೀಗ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಗೆ ಸ್ಥಳಾಂತರ ನಡೆಸಲಾಗಿದೆ. ಈ ಶಾಲೆಯ ಒಂದು ಕೋಣೆಯನ್ನು ಇವರಿಗಾಗಿ ತೆರವು ಮಾಡಲಾಗಿದೆ. ನೀರಿನ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ನಿರ್ಗತಿಕರಿಗೆ ಊಟ ಕಾಫಿ ವ್ಯವಸ್ಥೆಯನ್ನು ಮೆಸ್ಕಾಂ ಇಲಾಖೆಯಿಂದ ಮಾಡಲಾಗುವುದು. ಉಳಿದ ಸೌಕರ್ಯಗಳನ್ನು ನಗರಸಭೆ ಆಡಳಿತದ ಮೂಲಕ ಮಾಡಿಕೊಡಲಾಗುವುದು ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದರು.

Friday, 10 April 2020

Mahalingesawra Temple Puttur 10 4 2020 1

ಪತ್ರಕರ್ತರಿಗೂ ಅವಕಾಶ ನಿರ್ಬಂಧ

ಪ್ರತಿ ವರ್ಷವೂ ಅದ್ದೂರಿ ಪುತ್ತೂರು ಜಾತ್ರೆಯ ವರದಿಯನ್ನು ಮಾಡುತ್ತಿದ್ದ ಪುತ್ತೂರು ಪತ್ರಕರ್ತರನ್ನು ಈ ಬಾರಿ ಧ್ವಜಾರೋಹಣ ಸಂದರ್ಭದಲ್ಲಿ ದೇವಾಲಯದ ಅಂಕಣಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಈ ನಡುವೆ ಉತ್ಸವಮೂರ್ತಿಯನ್ನು ಹೊರುವ ಅರ್ಚಕರ ವಿರುದ್ಧ ಪುತ್ತೂರಿನ ಹಿರಿಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆದರೆ ಈ ದೂರನ್ನು ನಿರ್ಲಕ್ಷಿಸಿ ಧ್ವಜಾರೋಹಣ ಸಂದರ್ಭ ಅದೇ ಅರ್ಚಕರಿಂದ ಉತ್ಸವ ಮೂರ್ತಿ ಹೊರುವ ಕೆಲಸ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿಯೂ ಪತ್ರಕರ್ತರನ್ನು ಹೊರಗಿಡುವ ಕೆಲಸ ನಡೆದಿದೆ ಎನ್ನಲಾಗಿದೆ.

Wednesday, 8 April 2020

PUTTUR BAND nammaPuttur

ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದರೂ ಸಂಚಾರ ನಿಯಂತ್ರಿಸುವ ಹಿನ್ನಲೆಯಿಂದ ಖಾಸಗಿ ವಾಹನಗಳನ್ನು ನಿರ್ಬಂಧಿಸುವ ಕಾರ್ಯದಲ್ಲಿ ಪೊಲೀಸ್ ಇಲಾಖೆಗೆ ಹಿನ್ನಡೆಯಾಗುತ್ತಿದೆ. ಅನಗತ್ಯವಾಗಿ ನಗರ ಪ್ರವೇಶಿಸುವ ವಾಹನಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ತಾಳ ತಪ್ಪುತ್ತಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಪೊಲೀಸರು ನಗರ ಪ್ರವೇಶಿಸುವ 8 ಸಂಪರ್ಕ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆಯಲ್ಲಿ ಬೆಳಿಗ್ಗಿನಿಂದಲೇ ವಾಹನಗಳ ಓಡಾಟ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ಕೆಲಸದಲ್ಲಿ ಪೊಲೀಸರು ಹೈರಾಣಾಗುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರ ಹಿಡಿತ ಸಮರ್ಪಕಗೊಳ್ಳದೆ ಇರುವುದು, ಜನತೆ ಪೊಲೀಸರ ಮಾತುಗಳನ್ನು ಕೇಳದಿರುವುದು ಕಂಡುಬರುತ್ತಿದೆ. ಪುತ್ತೂರು ನಗರದಲ್ಲಿ ಹೇಗಾದರೂ ಮಾಡಿ ಖಾಸಗಿ ವಾಹನಗಳ ಸಂಚಾರವನ್ನು ತಹಬದಿಗೆ ತರೆಬೇಕು ಎಂದು ಪಣತೊಟ್ಟಿರುವ ಪೊಲೀಸರು ನಗರ ಪ್ರವೇಶಕ್ಕೆ ಕೇವಲ ನಾಲ್ಕು ದಾರಿಗಳನ್ನು ಬಿಟ್ಟು ಉಳಿದ ಎಲ್ಲಾ ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಎಲ್ಲಾ ವಾಹನಗಳನ್ನು ತಡೆಯುವ ಕೆಲಸ ನಡೆಸಿದ್ದಾರೆ.
ಪುತ್ತೂರು ನಗರಕ್ಕೆ  ಸುಳ್ಯ ಕಡೆಯಿಂದ ಬರುವ ವಾಹನಗಳು ದಬರ್ೆ ಅಶ್ವಿನಿ ಸರ್ಕಲ್, ಸವಣೂರು ಕಡೆಯಿಂದ ಬರುವ ವಾಹನಗಳು ದಬರ್ೆ ಸರ್ಕಲ್, ಉಪ್ಪಿನಂಗಡಿಯಿಂದ ಬರುವ ವಾಹನಗಳು ಪಡೀಲ್, ಮಂಗಳೂರು ಕಡೆಯಿಂದ ಬರುವ ವಾಹನಗಳು ಮಂಜಲ್ಪಡ್ಪು ಬೈಪಾಸ್ ರಸ್ತೆ ಮೂಲಕ ನಗರಕ್ಕೆ ಪ್ರವೇಶ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.  ಈ ಹೊಸ ಯೋಜನೆಯಿಂದ ನಗರ ಪ್ರವೇಶ ನಡೆಸುವ ಅನಗತ್ಯ ವಾಹನಗಳನ್ನು ನಿಯಂತ್ರಿಸುವ ಚಿಂತನೆ ಪೊಲೀಸರದ್ದಾಗಿದೆ. ಆದರೆ  ಜನತೆ ಖಾಸಗಿ ವಾಹನಗಳನ್ನು ನಗರಕ್ಕೆ ತರುವ ಮೂಲಕ ಪೊಲೀಸರ ಚಿಂತನೆಗೆ ಸವಾಲು ಹಾಕುತ್ತಿದ್ದಾರೆ.
ಪೇಟೆ ಬದಿಯ ಒಳರಸ್ತೆಗಳ ಭಾಗದ ನಿವಾಸಿಗಳು ಈ ಒಳ ಸಂಪರ್ಕ ರಸ್ತೆಗಳನ್ನು ಬಳಸಲು ಅನುಮತಿ ನಿರ್ಬಂಧಿಸಲಾಗಿದೆ. ಸ್ಥಳೀಯ ನಿವಾಸಿಗಳು ಪೇಟೆಗೆ ಬರಬೇಕಾದರೂ ಮುಖ್ಯ ರಸ್ತೆಗೆ ಪ್ರವೇಶಿಸುವ ಪೊಲೀಸರು ಅವಕಾಶ ನೀಡಿದ ದಾರಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ಮುಂಜಾನೆ 7ರಿಂದ ಮಧ್ಯಾಹ್ನ 12 ಗಂಟೆ ತನಕ ದಿನಸಿ ಹಾಗೂ ತರಕಾರಿ, ಮೆಡಿಕಲ್ ಇನ್ನಿತರ ಅವಶ್ಯಕತೆಗಳಿಗಾಗಿ ಜನತೆಗೆ ನಗರಕ್ಕೆ ಬರಲು ಅವಕಾಶ ನೀಡಲಾಗಿದೆ. ಬೈಕ್ ಸವಾರರಿಗೆ ಹೆಚ್ಚಿನ ರಿಯಾಯತಿಯನ್ನೂ ತೋರಿಸಲಾಗಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡ ಕೆಲವರು ಅನಗತ್ಯವಾಗಿ ಪೇಟೆ ಸಂಚಾರಕ್ಕೆ ಮುಂದಾಗುತ್ತಿದ್ದಾರೆ. ಖಾಸಗಿ ಕಾರುಗಳಲ್ಲಿಯೂ ಸಂಸಾರ ಸಮೇತ ಪೇಟೆ ತಿರುಗುವ ಕಾಯಕ ನಡೆಸುತ್ತಿದ್ದಾರೆ. ಇದರಿಂದ ಪೊಲೀಸರ ತಾಳ್ಮೆಯನ್ನೇ ಪರೀಕ್ಷೆ ಮಾಡುವಂತಾಗಿದೆ.
ಬೇಕರಿ ವರ್ತಕರ ಸಮಸ್ಯೆ
ಮಧ್ಯಾಹ್ನದ ತನಕ ಬೇಕರಿ ಅಂಗಡಿಗಳನ್ನು ತೆರವು ಗೊಳಿಸಲು ಸಕರ್ಾರ ನಿದರ್ೇಶನ ನೀಡಿದ್ದರೂ, ಬೇಕರಿ ತಿಂಡಿ ತಿನಿಸುಗಳ ತಯಾರಿಗೆ ಕಚ್ಛಾ ಸಾಮಾಗ್ರಿಗಳ ಕೊರತೆ ಬೇಕರಿ ಮಾಲಕರನ್ನು ಕಾಡುತ್ತಿದೆ. ಬ್ರೆಡ್, ಬನ್, ರಸ್ಕ್, ಪಪ್ಸ್ ಮತ್ತಿತರ ತಿಂಡಿಗಳು ಗ್ರಾಹಕರಿಗೆ ಅಗತ್ಯವಾಗಿದ್ದು, ಇದರ ತಯಾರಿಕೆ ನಡೆಯುತ್ತಿಲ್ಲ. ಕೇವಲ ಖಾರ ಹಾಗೂ ಕುರುಕಲು ತಿಂಡಿಗಳು ಮಾತ್ರ ಬೇಕರಿಯಲ್ಲಿ ದೊರೆಯುತ್ತಿದೆ. ಇದರಿಂದ ಬೇಕರಿ ಬಾಗಿಲು ತೆರೆದರೂ ಗ್ರಾಹಕರಿಗೆ ಬೇಕಾದ ತಿಂಡಿಗಳನ್ನು ನೀಡುವಲ್ಲಿ ಬೇಕರಿ ವರ್ತಕರಿಗೆ ಸಮಸ್ಯೆಯಾಗುತ್ತಿದೆ.




Tuesday, 7 April 2020

Bhavana nammaPuttur



ವಿಶ್ವದಾದ್ಯಂತ ಜನರ ಭೀತಿಗೆ ಕಾರಣವಾದ ಕೊರೊನಾ ಮಹಾಮಾರಿಯನ್ನು ಭೌತಿಕವಾಗಿ ಕಂಡವರಿಲ್ಲ. ಹಲವರು ಹಲವು ರೀತಿಯಲ್ಲಿ ಈ ವೈರಸ್ ಅನ್ನು ಚಿತ್ರಿಸುವ ಮೂಲಕ ಈ ವೈರಾಣುವಿನ ಭೀಕರತೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು  ಮಾಡಿದ್ದಾರೆ. ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ಕೂಡಾ ಇದೇ ರೀತಿಯ ಪ್ರಯತ್ನವೊಂದನ್ನು ಮಾಡಿದೆ. ಪ್ರಸಾದನ ಕಲೆಯಲ್ಲಿ ವಿಭಿನ್ನತೆಯನ್ನು ಪರಿಚಯಿಸಿರುವ ಈ ತಂಡ ಇದೀಗ ಕೊರೊನಾ ವೈರಸ್ ಗೆ ಮುಖವಾಡದ ರೂಪ ನೀಡಿ ಗಮನಸೆಳೆದಿದೆ.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...