Thursday, 21 November 2019
Wednesday, 20 November 2019
Thursday, 14 November 2019
PENCIL BOX 05
ಪುತ್ತೂರು; ಬಹು ನಿರೀಕ್ಷಿತ ದೃಶ್ಯ ಮೂವೀಸ್ನ ದಯಾನಂದ ಎಸ್.ರೈ ನಿಮರ್ಾಣದ ಮಕ್ಕಳ ಚಿತ್ರ `ಪೆನ್ಸಿಲ್ ಬಾಕ್ಸ್' ಟ್ರೈಲರ್ ಬಿಡುಗಡೆ ಗುರುವಾರ ಪುತ್ತೂರು ಸುದಾನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಮಾಜಿ ಶಾಸಕಿ ಹಾಗೂ ಚಲನಚಿತ್ರ ನಟಿ ಶಕುಂತಳಾ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಚಲನಚಿತ್ರ ರಂಗ ಉತ್ತಮವಾದ ಮಾರ್ಗವಾಗಿದೆ. ಪುತ್ತೂರಿನ ಕಲಾವಿದರು ನಟಿಸಿದ ಪೆನ್ಸಿಲ್ ಬಾಕ್ಸ್ ಚಿತ್ರ ಶತದಿನೋತ್ಸವ ಆಚರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಾಣಲಿ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪೆನ್ಸಿಲ್ ಬಾಕ್ಸ್ ನಿಮರ್ಾಪಕ ದಯಾನಂದ ಎಸ್ ರೈ ಬೆಟ್ಟಂಪಾಡಿ, ವಿದ್ಯಾಮಾತಾ ಪೌಂಡೇಶನ್ ಪ್ರವರ್ತಕ ಭಾಗ್ಯೇಶ್ ರೈ, ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಮಾಮಚ್ಚನ್, ರಂಗಕಮರ್ಿ ಐ.ಕೆ.ಬೊಳುವಾರು, ವಕೀಲ ದುಗರ್ಾಪ್ರಸಾದ್ ರೈ ಕುಂಬ್ರ, ಸುದಾನ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಿನಿಮಾ ನಿದರ್ೇಶಕ ಜಯಪ್ರಕಾಶ್, ಉದ್ಯಮಿ ಜಯಂತ ನಡುಬೈಲು, ಪೆನ್ಸಿಲ್ ಬಾಕ್ಸ್ ಚಿತ್ರದ ನಾಯಕಿ ದೀಕ್ಷಾ ರೈ, ಚಲನಚಿತ್ರ ಹಾಡುಗಾತರ್ಿಯರಾದ ಕ್ಷಿತಿ ರೈ ಧರ್ಮಸ್ಥಳ, ಅಪೇಕ್ಷಾ, ಶ್ರೇಷ್ಟಾ ಮತ್ತಿತರರು ಹಾಜರಿದ್ದರು.
ಶಿಕ್ಷಕ ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಪೆನ್ಸಿಲ್ ಬಾಕ್ಸ್ ಚಿತ್ರದ ಪ್ರಚಾರಾರ್ಥವಾಗಿ `ಪೆನ್ಸಿಲ್ ಬಾಕ್ಸ್' ರಥಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಪೆನ್ಸಿಲ್ ಬಾಕ್ಸ್ನ 'ವಂದೇ ಮಾತರಂ' ಹಾಗೂ 'ಸಂಡೇ ನಮ್ದೇ' ಯಶಸ್ವೀ ಹಾಡುಗಳು ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಸುದಾನ ವಿದ್ಯಾಸಂಸ್ಥೆಯಲ್ಲಿ ಪೆನ್ಸಿಲ್ ಬಾಕ್ಸ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವೆಂಬರ್ 29ಕ್ಕೆ ಪೆನ್ಸಿಲ್ ಬಾಕ್ಸ್ ಕನ್ನಡ ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
Wednesday, 6 November 2019
Subscribe to:
Posts (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...