Friday, 28 September 2012
Friday, 21 September 2012
Yuvakamandala
ಬೊಳಂತಿಮೊಗರು ವಿನೂತನ ಯುವಕ ಮಂಡಲದ 2012- 13ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು 2011-12ನೇ ಸಾಲಿನ ವಾಷರ್ಿಕ ಮಹಾಸಭೆಯಲ್ಲಿ ಸವರ್ಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಸಂತ ಗೌಡ ಮಾಡ್ತೇಲು, ಉಪಾಧ್ಯಕ್ಷರಾಗಿ ಲೋಕೇಶ್ ಗೌಡ ಮಾಡ್ತೇಲು, ಗೌರವಾಧ್ಯಕ್ಷರಾಗಿ ಕರುಣಾಕರ ನಾಯ್ತೊಟು, ಕಾರ್ಯದಶರ್ಿಯಾಗಿ ದಯಾನಂದ ಗೌಡ ಬೊಡ್ಡೋಣಿ, ಜತೆ ಕಾರ್ಯದಶರ್ಿಯಾಗಿ ನಾರಾಯಣ ನೆಲ್ಲಿಗುಡ್ಡೆ, ಕ್ರೀಡಾ ಕಾರ್ಯದಶರ್ಿಯಾಗಿ ಅಶೋಕ್ ಅಂಚನ್ ಮಾಡ್ತೇಲು, ಜತೆ ಕ್ರೀಡಾ ಕಾರ್ಯದಶರ್ಿಯಾಗಿ ಅವಿನಾಶ್ ಪಶೇರಿ, ಸಂಘಟನಾ ಕಾರ್ಯದಶರ್ಿ ಪದ್ಮನಾಭ ಗೌಡ ಮಾಡ್ತೇಲು, ಕೋಶಾಧಿಕಾರಿ ವಿನೋದ್ ಕುಮಾರ್ ನೆಲ್ಲಿಗುಡ್ಡೆ ಆಯ್ಕೆಯಾದರು.
Monday, 17 September 2012
KABDDI
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆ ಪ್ರಥಮ ಸ್ಥಾನ ಮತ್ತು ಪುತ್ತೂರು ಕಡಬ ಮಾದರಿ ಶಾಲೆ 20 21 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶ್ರೀರಾಮ ಶಾಲೆಯ ಪಙಈಪಯ್ಯ ಹಿಡಿತಗಾರ, ಸೆಲ್ವಿಸ್ಟರ್ ಸವ್ಯಸಾಚಿ ಮತ್ತು ಕಡಬದ ಕಮರುದ್ದೀನ್ ದಾಳಿಗಾರ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕಿನ ಜ್ಞಾನ ದೀಪ ಶಾಲೆ ಪ್ರಥಮ ಮತ್ತು ಪುತ್ತೂರು ಕಾಣಿಯೂರು ಪ್ರಗತಿ 42 36 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸುಳ್ಯದ ಚೈತ್ರ ಹಿಡಿತಗಾತರ್ಿ, ಜಯಶ್ರೀ ಸವ್ಯಸಾಚಿ ಮತ್ತು ಕಾಣಿಯೂರು ಗೌತಮಿ ದಾಳಿಗಾತರ್ಿ.
ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢ ಶಾಲೆ ಪ್ರಥಮ ಮತ್ತು ಬಂಟ್ವಾಳ ಗೋಳ್ತಮಜಲು ಪ್ರೌಢ ಶಾಲೆ 40 30ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಬೆಳ್ತಗಡಿಯ ಕಿರಣ್ ದಾಳಿಗಾರ, ಮಹಮ್ಮದ್ ಶರೀಫ್ ಹಿಡಿತಗಾರ, ಬಂಟ್ವಾಳ ಗೋಳ್ತಮಜಲಿನ ಮಹಮ್ಮದ್ ಇಕ್ಬಾಲ್ ಸವ್ಯಸಾಚಿ.
ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಾಲೂಕಿನ ಎನ್ ಎಂ ಪಿ ಟಿ ಶಾಲೆ ಪ್ರಥಮ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಶಾಲೆ 27 16 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ಗ್ರಾಮಾಂತರದ ಸರದಿ ದಾಳಿಗಾತರ್ಿ, ಧನಲಕ್ಷ್ಮಿ ಸವ್ಯಸಾಚಿ ಮತ್ತು ಪುತ್ತುರಿನ ಪಲ್ಲವಿ ಹಿಡಿತಗಾತರ್ಿ.
ವಿಟ್ಲ: ಕಬಡ್ಡಿ ಎನ್ನುವುದು ಒಂದೆಡೆ ಮಿತ್ರತ್ವದ ಸ್ವದೇಶೀ ಆಟವಾದರೆ, ಇನ್ನೊಂದೆಡೆ ಕಾಲೆಳೆಯುವ ರಾಜಕೀಯ ಆಟವೂ ಹೌದು. ಸದ್ಯ ಕಬಡ್ಡಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದ್ದು, ವಿದ್ಯಾಥರ್ಿಗಳು ತಳಮಟ್ಟದಿಂದ ಆಟವಾಡುತ್ತಾ ಉನ್ನತ ಮಟ್ಟಕ್ಕೆ ತಲುಪುವಂತಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೊಮವಾರ ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆಯ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯತ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮತ್ತು ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಮಕ್ಕಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಒತ್ತು ನೀಡಿದ್ದು 4ಸಾವಿರ ಕೋಟಿ ಇದ್ದ ಬಜೆಟ್ ಮೊತ್ತವನ್ನು 14ಸಾವಿರ ಕೋಟಿಗೆ ಹೆಚ್ಚಿಸಿದೆ. ಕೇಂದ್ರ ಸಕರ್ಾರ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿಶೇಷ ಸ್ಥಾನವನ್ನು ನೀಡುತ್ತಿದೆ ಎಂದು ಅವರು ಹೇಳಿದರು.ಧ್ವಜಾರೋಹಣ ಮಾಡಿದ ದ ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಕೆ ಟಿ ಭಟ್ ಮಾತನಾಡಿ ಕಬಡ್ಡಿಯು ಸಮಯ ಪ್ರಜ್ಞೆ ಮತ್ತು ತಾಳ್ಮೆಯನ್ನು ಹೆಚ್ಚಿಸಲು ಸಹಕಾರಿಯಾದ ಆಟ. ಸದ್ಯ ಕಬಡಿಗೆ ಹೆಚ್ಚು ಮಹತ್ವ ಸಿಗುತ್ತಿರುವುದರಿಂದ ಹೆತ್ತವರು ಮಕ್ಕಳನ್ನು ಇದರಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಸಂಜೀವ ಎಚ್ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ವಿಜೇತ ದೈಹಿಕ ಶಿಕ್ಷಕ ಶಂಕರ್ ವಿ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಮ್ಟೂರು, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯರಾದ ಉಷಾ ಕೆ, ಜೂಲಿಯಾನ ಮೇರಿ ಲೋಬೋ, ವಿಟ್ಲ ಗ್ರಾಮ ಪಂಚಾಯತ್ ಅಧ್ಯಕ್ಷ ರಮಾನಾಥ ವಿಟ್ಲ, ಉಪಾಧ್ಯಕ್ಷೆ ಶಾಂತಾ ಎಸ್ ಎನ್ ಭಟ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುಧಾಕರ, ಬಂಟ್ವಾಳ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಾನ್ಸಿಸ್ ಡೇಸ್, ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ವರ ಅಮೈ, ದೈಹಿಕ ಶಿಕ್ಷಕ ವಿದ್ಯಾಶಂಕರ್ ಡಿ ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದರೆ ಮತ್ತು ಬಂಟ್ವಾಳ ಸೇರಿ ಏಳು ತಂಡಗಳು ಭಾಗವಹಿಸಿದ್ದವು.
ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಹೆಚ್ ಸ್ವಾಗತಿಸಿದರು. ವಿಶ್ವನಾಥ ಗೌಡ ಕುಳಾಲು ವಂದಿಸಿದರು. ತಾಲೂಕು ದೈಹಿಕ ಶಿಕ್ಷಕ ಸಂಯೋಜಕ ವಿಠಲ ನಾಕ್ ಕಾರ್ಯಕ್ರಮ ನಿರೂಪಿಸಿದರು.
ಮಳೆ ನಡುವೆ :
ಪಂದ್ಯಾಟದ ನಡುವೆ ಸುಮಾರು ಅರ್ಧ ತಾಸಿಗೂ ಅಧಿಕ ಧಾರಾಕಾರ ಮಳೆ ಸುರಿದು ಸ್ವಲ್ಪ ಸಮಯ ಪಂದ್ಯಾಟಕ್ಕೆ ತೊಂದರೆಯಾಗಿತ್ತು. ಮಳೆ ಬರುವ ಮುಸ್ಸೂಚನೆ ತಿಳಿದ ಕಬಡ್ಡಿ ಪಂದ್ಯಾಟ ಸಮಿತಿ ಬೇಕಾದ ಸಿದ್ದತೆ ಮಾಡಿದ್ದು ಮಳೆ ನಿಂತ ಮೇಲೆ ಪಂದ್ಯಾಟ ಮುಂದುವರಿಸಲು ಸಹಕಾರಿಯಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆ ಪ್ರಥಮ ಸ್ಥಾನ ಮತ್ತು ಪುತ್ತೂರು ಕಡಬ ಮಾದರಿ ಶಾಲೆ 20 21 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶ್ರೀರಾಮ ಶಾಲೆಯ ಪಙಈಪಯ್ಯ ಹಿಡಿತಗಾರ, ಸೆಲ್ವಿಸ್ಟರ್ ಸವ್ಯಸಾಚಿ ಮತ್ತು ಕಡಬದ ಕಮರುದ್ದೀನ್ ದಾಳಿಗಾರ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕಿನ ಜ್ಞಾನ ದೀಪ ಶಾಲೆ ಪ್ರಥಮ ಮತ್ತು ಪುತ್ತೂರು ಕಾಣಿಯೂರು ಪ್ರಗತಿ 42 36 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸುಳ್ಯದ ಚೈತ್ರ ಹಿಡಿತಗಾತರ್ಿ, ಜಯಶ್ರೀ ಸವ್ಯಸಾಚಿ ಮತ್ತು ಕಾಣಿಯೂರು ಗೌತಮಿ ದಾಳಿಗಾತರ್ಿ.
ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢ ಶಾಲೆ ಪ್ರಥಮ ಮತ್ತು ಬಂಟ್ವಾಳ ಗೋಳ್ತಮಜಲು ಪ್ರೌಢ ಶಾಲೆ 40 30ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಬೆಳ್ತಗಡಿಯ ಕಿರಣ್ ದಾಳಿಗಾರ, ಮಹಮ್ಮದ್ ಶರೀಫ್ ಹಿಡಿತಗಾರ, ಬಂಟ್ವಾಳ ಗೋಳ್ತಮಜಲಿನ ಮಹಮ್ಮದ್ ಇಕ್ಬಾಲ್ ಸವ್ಯಸಾಚಿ.
ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಾಲೂಕಿನ ಎನ್ ಎಂ ಪಿ ಟಿ ಶಾಲೆ ಪ್ರಥಮ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಶಾಲೆ 27 16 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ಗ್ರಾಮಾಂತರದ ಸರದಿ ದಾಳಿಗಾತರ್ಿ, ಧನಲಕ್ಷ್ಮಿ ಸವ್ಯಸಾಚಿ ಮತ್ತು ಪುತ್ತುರಿನ ಪಲ್ಲವಿ ಹಿಡಿತಗಾತರ್ಿ.
Sunday, 16 September 2012
Betampady grama panchayth
ಆಡಳಿತ ವಿಕೇಂದ್ರೀಕರಣದ ನಂತರ ಗ್ರಾಮಪಂಚಾಯಿತಿಗಳಿಗೆ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಗ್ರಾಮಮಟ್ಟದಿಂದಲೇ ಅಧಿಕಾರ ನಡೆಸುವಂತಾಗಬೇಕು ಎಂದು ಮುಜರಾಯಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮಂಗಳವಾರದಂದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಕಚೇರಿಯ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿಮರ್ಾಣಗೊಂಡ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣದ ನಂತರ ಆಡಳಿತ ವ್ಯವಸ್ಥೆ ಬಲಗೊಳ್ಳಬೇಕಿತ್ತು. ಆದರೆ ಅದಿನ್ನೂ ಸಾಕಾರವಾಗಿಲ್ಲ. ಹೀಗಾಗಿ ಗ್ರಾಮಸಕರ್ಾರಗಳು ರಚನೆಯಾದ ಬಳಿಕ ಹಳ್ಳಿಯಿಂದಲೇ ಆಡಳಿತ ಆರಂಭವಾಗಬೇಕೇ ಹೊರತು ದೆಹಲಿಯಿಂದ ಅಲ್ಲ ಎಂದ ಶ್ರೀನಿವಾಸ ಪೂಜಾರಿ ಗ್ರಾಮಸಭೆಗಳು ಹಳ್ಳಿಯಲ್ಲಿ ನಡೆದು ಈ ಮೂಲಕ ಊರಿನ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾಗಬೇಕು ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
ಸಭಾಧ್ಯಕ್ಷತೆಯನ್ನು ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ನಾಮಫಲಕವನ್ನು ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಅನಾವರಣಗೊಳಿಸಿದರು.ಸಭಾಕಾರ್ಯಕ್ರವನ್ನು ಜಿಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್ ಉದ್ಘಾಟಿಸಿದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಶಂಭು ಭಟ್ , ಎಪಿಎಂಸಿ ಸದಸ್ಯ ರಂಗನಾಥ ರೈ ಗುತ್ತು , ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಾನಂದ ಪೂಜಾರಿ , ಇದರ್ೆ-ಬೆಟ್ಟಂಪಾಡಿ ಸಹಕಾರಿ ಸಂಘ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು , ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಶಿವಕುಮಾರ್ , ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟರಾಜು , ಕೆಆರ್ಐಡಿಎಲ್ ಇಂಜಿನಿಯರ್ ರವಿಕುಮಾರ್ , ಬೆಟ್ಟಂಪಾಡಿ ಗ್ರಾಪಂ ಪಿಡಿಒ ಶೈಲಜಾ ಪ್ರಕಾಶ್ , ಗ್ರಾಪಂ ಉಪಾಧ್ಯಕ್ಷ ರಮೇಶ್ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು.
Monday, 10 September 2012
BJP Vittal
10ವಿಐಎಲ್3 : ಭಾರತೀಯ ಜನತಾ ಪಾಟರ್ಿಯ ಕೇಪು ಶಕ್ತಿ ಕೇಂದ್ರದ ವತಿಯಿಂದ ಸದಸ್ಯತ್ವ ಅಭಿಯಾನ ಭಾನುವಾರದಿಂದ ಪ್ರಾರಂಭವಾಯಿತು. ಮೊದಲ ಸದಸ್ಯನಾಗಿ ಕೇಪು ಗ್ರಾಮದ ಪಂಜಿಕಲ್ಲು ಪ್ರದೀಪ್ ಪಿ ಅವರನ್ನು ನೊಂದಾವಣಿ ಮಾಡುವ ಮೂಲಕ ಮಾಡಲಾಯಿತು. ಈ ಸಂದರ್ಭ ಕೇಪು ಶಕ್ತಿ ಕೇಂದ್ರದ ಬಾಲಚಂದ್ರ ಕಟ್ಟೆ, ಬಾಲಕೃಷ್ಣ ಕಾರಂತ ಎರುಂಬು, ಮನೋಹರ ಶೆಟ್ಟಿ, ಗುರುವಪ್ಪ, ಹರಿಪ್ರಸಾದ್ ಯಾದವ್, ಗೋಪಾಲ ಕೃಷ್ಣ ಶೆಟ್ಟಿ ಪೆರುವಾಯಿ, ಜಯರಾಮ ರೈ ಹಾಜರಿದ್ದರು.
Halu uthpadakra mahasabe Vittal
ವಿಟ್ಲ: ವಿಟ್ಲ ಹಾಲು ಉತ್ಪಾದಕರ ಸಂಘದಲ್ಲಿ ಬರುತ್ತಿರುವ ಲಾಭಾಂಶದಲ್ಲಿ ಸದಸ್ಯರಿಗೆ ಶೇ15 ಡಿವಿಡೆಂಡ್ ನೀಡಲಾಗುವುದು ಎಂದು ವಿಟ್ಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮೋಹನ್ ಕಾಯರ್ಮಾರ್ ಹೇಳಿದರು.
ಅವರು ದ ಕ ಜಿ ಪಂ ಮಾ ಶಾಲೆಯಲ್ಲಿ ನಡೆದ ವಾಷರ್ಿಕ ಮಹಾ ಸಭೆಯಲ್ಲಿ ಮಾತನಾಡಿದರು. ದ ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಹೈನುಗಾರಿಕೆಗೆ ಒಕ್ಕೂಟದಿಂದ ಒದಗಿಸುತ್ತಿರುವ ಅನುದಾನ ಮತ್ತು ಅದನ್ನು ಬಳಸಿ ಹೇಗೆ ಲಾಭಗಳಿಸಬಹುದು ಎಂದು ಹೇಳಿದರು.
ಈ ಸಂದರ್ಭ ಸಂಘದ ನಿದರ್ೇಶಕರಾದ ಕೆ ಗಿರಿಯಪ್ಪ ಗೌಡ, ಬಾಲಕೃಷ್ಣ ಭಟ್ ಎ, ಕೆ ಐ ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಸುರುಂಬಡ್ಕ, ಲೋಕನಾಥ, ಲಿಂಗಪ್ಪ ನಾಯ್ಕ ಉಪಸ್ಥಿತರಿದ್ದರು.
ಈ ಸಂದರ್ಭ ವಿಧಿವಶರಾದ ಕ್ಷೀರ ಕ್ರಾಂತಿಯ ಪಿತಾಮಹ ವಗರ್ೀಸ್ ಕುರಿಯನ್ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಮೌನ ಪ್ರಾರ್ಥನೆ ಮಾಡಲಾಯಿತು. ವರದಿ ವರ್ಷದಲ್ಲಿ ಸಕ್ರೀಯವಾಗಿ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಕಾರ್ಯದಶರ್ಿ ಬಿ ಪುರುಷೋತ್ತಮ ವರದಿ ವಾಚಿಸಿದರು. ನಿದರ್ೇಶಕಿ ವಿಶಾಲಾಕ್ಷಿ ವಂದಿಸಿದರು.
Friday, 7 September 2012
Jagadish shetty press_SMT
ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥದಲ್ಲಿ ಯಾವುದೇ ದೋಷವಿಲ್ಲ
ಪುತ್ತೂರು: ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉದ್ಯಮಿ ಮುತ್ತಪ್ಪ ರೈ ಕೊಡುಗೆಯಾಗಿ ನೀಡಿದ ಬ್ರಹ್ಮರಥದಲ್ಲಿ ಯಾವುದೇ ದೋಷವಿಲ್ಲ. ಈ ಬಗ್ಗೆ ದೈವಜ್ಞರಲ್ಲಿ ಚಿಂತನೆ ನಡೆಸಿಯೇ ದೇವರಿಗೆ ಸಮರ್ಪಣೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ ಎಂದು ಬ್ರಹ್ಮರಥ ನಿಮರ್ಾಣ ಸಮಿತಿಯ ಮುಖಂಡ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶುಕ್ರವಾರದಂದು ಸುದ್ದಿಗೋಷ್ಟಯಲ್ಲಿ ಮಾತನಾಡಿದ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ , ಇತ್ತೀಚೆಗೆ ವಾಹಿನಿಯೊಂದರಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುತ್ತಪ್ಪ ರೈಯವರು ಸಮರ್ಪಣೆ ಮಾಡಿದ ಬ್ರಹ್ಮರಥದಲ್ಲಿ ದೋಷ ಇದೆ ಎಂಬ ಅರ್ಥದಲ್ಲಿ ಸುದ್ದಿ ಪ್ರಸಾರವಾಗಿತ್ತು. ಹೀಗಾಗಿ ಅನೇಕ ಭಕ್ತಾದಿಗಳು ಗೊಂದಲಕ್ಕೆ ಹಾಗೂ ಮಾನಸಿಕವಾಗಿ ನೊಂದಿದ್ದಾರೆ. ವಾಸ್ತವವಾಗಿ ಬ್ರಹ್ಮರಥ ನಿಮರ್ಾಣ ಹಾಗೂ ಸಮರ್ಪಣೆಯಲ್ಲಿ ಯಾವುದೇ ದೋಷವಿಲ್ಲ. ಈ ಬಗ್ಗೆ ದೈವಜ್ಞರಲ್ಲಿ ಹಾಗೂ ವಾಸ್ತು ತಜ್ಞರಲ್ಲಿ ವಿಚಾರಿಸಿಯೇ ರಥ ಸಮರ್ಪಣೆ ಮಾಡಲಾಗಿದೆ. ರಥ ನಿಮರ್ಾಣದ ಕೆಲಸದಲ್ಲಿ ಯಾವುದೇ ಸಣ್ಣ ತೊಂದರೆಯೂ ಬಂದಿಲ್ಲ. ಅದು ಮಾತ್ರವಲ್ಲ ರಥ ಸಮರ್ಪಣೆ ಮಾಡಿದ ಬಳಿಕ 4 ಬಾರಿ ರಥೋತ್ಸವವೂ ನಡೆದಿದೆ.ಆಗಲೂ ಯಾವುದೇ ತೊಂದರೆ ಬಂದಿಲ್ಲ. ಹೀಗಾಗಿ ಈ ರಥದಲ್ಲಿ ಯಾವುದಾದರೂ ದೋಷ ಇದೆ ಎಂದು ಯಾರಾದರೂ ತೋರಿಸಿದೆ ಮಹಾಲಿಂಗೇಶ್ವರ ನೀಡಿದಷ್ಟು ಶಕ್ತಿಯಿಂದ ಬಹುಮಾನ ನೀಡುವುದಾಗಿ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಸವಾಲು ಹಾಕಿದರು.
ಸುದ್ದಿಗೋಷ್ಟಿಯಲ್ಲಿ ದೇವಸ್ಥಾನದ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ , ಬ್ರಹ್ಮರಥ ನಿಮರ್ಾಣ ಸಮಿತಿಯ ಕರುಣಾಕರ ರೈ , ರಥಬೀದಿ ನಿಮರ್ಾಣ ಕಾರ್ಯದ ಕೃಷ್ಣ ಶೆಟ್ಟಿ , ರಥ ನಿಮರ್ಾಣದ ನವೀನ್ ನಾಯ್ಕ್ ಉಪಸ್ಥಿತರಿದ್ದರು.
Thursday, 6 September 2012
Ithuru
ಬುದ್ದಿವಂತರ ಜಿಲ್ಲೆಯಂದೇ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸರಕಾರವ್ನನು ವಂಚಿಸಿ ಸರಕಾರದ ಯೋಜನೆಗಳಿಂದಲಾಭವನ್ನು ಪಡೆಯುವ ಪ್ರಕ್ರಯೆಗಳು ನಿರಂತರವಾಗಿ ನಡೆಯುತ್ತಿದೆ.ಇದಕ್ಕೆ ಒಂದು ಸೂಕ್ತ ಉದಾಹರಣೇ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ಎನ್ನಬಹುದಾಗಿದೆ.2010=11 ರ ಸಾಲಿನ ಈ ಗ್ರಾಮಪಂಚಾಯತ್ ಗ್ರಾಮ ನೈರ್ಮಲ್ಯಕಗಕ್ಕೋಸ್ಕರ ಇಲ್ಲಿನ ಶೀವಾಜಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಗುಂಡಿಯೊಂದನ್ನು ತೋಡಲು ಬರೋಬ್ಬರಿ 28 ಸಾವಿರ ರುಪಾಯಿಗಳನ್ನು ಡ್ರಾ ಮಾಡಿಕೊಂಡಿದೆ.ಆದರೆ ಇಂದಿನವರೆಗೂ ಇಲ್ಲಿ ತ್ಯಾಜ್ಯಗಳನ್ನು ಸುರಿಯುವ ಕೆಲಸ ನಡೆದಿಲ್ಲ.ಮಾನವ ಕೆಲಸದಿಂದ ಅಥವಾ ಯಂತ್ರಗಳಳ ಮೂಲಕ ನಡೆಸುವ ಈ ಕಲಸಕ್ಕೆ ಹೆಚ್ಚೆಂದರೆ ಕೇವಲ 10 ಸಾವಿರದಷ್ಟು ಮಾತ್ರ ಖಚರ್ಾಗುತ್ತಿದ್ದರೂ,ಸದ್ರಿ ಗ್ರಾಮಪಂಚಾಯತ್ ಮಾತ್ರ ಇದಕ್ಕೆ ಇಷ್ಟೊಂದು ಮೊತ್ತವನ್ನು ಯಾವ ರೀತಿಯಲ್ಲಿ ವಹಿಸಿತು ಎನ್ನುವ ಆಶ್ಚರ್ಯವು ಇಲ್ಲಿನ ಸ್ಥಳೀಯರಲ್ಲಿ ಕಾಡುತ್ತಿದೆ.ಅಲ್ಲದೆ ಕಾಮಗಾರಿಯು ಮುಗಿಯುವ ಮೊದಲೇ ಇದರ ಕಾಮಗಾರಿಯ ಬಿಲ್ಲನ್ನು ಪಡೆಯುವ ಮೂಲಕ ಪಂಚಾಯತ್ ಸರಕಾರಕ್ಕೆ ಮೋಸ ಮಾತ್ತಿದೆ ಎನ್ನುವ ಆರೋಪಗಳೂ ಸ್ಥಳೀಯರಿಂದ ಕೇಳಿಬರುತ್ತಿದೆ.
ಬೈಟ್: ಕೆ.ಪಿ ಮೋಹನ್
ಐತೂರು ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷ
ತ್ಯಾಜ್ಯ ವಿಲೇವಾರಿ ಘಟಕವನ್ನು ಪಂಚಾಯತ್ ನ ನಿರ್ಣಯದ ಮೂಲಕವೇ ಕೈಗೆತ್ತಿಕೊಂಡಿದ್ದು, ಮುಳೆಯಿಂದಾಗಿ ಈ ಗುಂಡಿಗೆ ಮಣ್ಣನ್ನು ತೆಗೆಯುವ ಕಾರ್ಯ ಪಂಚಾಯತ್ ನ ಆದೇಶದಂತೆ ಇದನ್ನು ಗುತ್ತಿಗೆ ಪಡೆಯುತ್ತಿರುವ ಗುತ್ತಿಗೆದಾರರು ಮಾಡುತ್ತಿದ್ದಾರೆ.ಪಂಚಾಯತ್ ಪ್ರಕಾರ ಇದೊಂದು ಲ್ಯಾಂಡ್ ಫಲ್ ತಂತ್ರಜ್ಷಾನವಿರುವ ಗುಂಡಿಯಾಗಿದ್ದರೂ ಇದನ್ನು ನಿರ್ವಹಿಸಬೇಕಾದ ರೀತಿಯಲ್ಲಿ ಇದನ್ನು ಮಾಡದೇ ಇರುವುದರಿಂದಾಗಿ ಪದೇ ಪದೇ ಇದರ ಮಣ್ಣನ್ನು ಸರಿಸುವ ಕೆಲಸವನ್ನು ಪಂಚಾಯತ್ ಇಂದು ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಬೈಟ್ ಸತೀಶ್ ಕೆ ಗ್ರಾಮಪಂಚಾಯತ್ ಅಧ್ಯಕ್ಷ
ಸ್ಥಳೀಯರ ಪ್ರಕಾರ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಸರಕಾರಿ ಯೋಜನೆಗ ದುರುಪಯೋಗವಾಗಿದ್ದು ಸೂಕ್ತ ತನಿಖೆ ನಡೆಯಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.ಈ ಗ್ರಾಮಪಂಚಾಯತ್ ಒಟ್ಟು 15 ಸದಸ್ಯರನ್ನು ಒಳಗೊಂಡಿದ್ದು,ಇದರಲ್ಲಿ 8 ಕಾಂಗ್ರೇಸ್ಸ್ ಹಾಗೂ 7ಬಿಜೆಪಿ ಸದಸ್ಯರಿದ್ದಾರೆ.ಈ ಕಾರಣದಿಂದಾಗಿ ಎಲ್ಲರೂ ಇದರಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಆರೋಪಗಳೂ ಕೇಳಿಬರುತ್ತಿದೆ.
Saturday, 1 September 2012
c.m.Udasi
ಪುತ್ತೂರು ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ
ನ್ಯಾಯಾಂಗ ವ್ಯವಸ್ಥೆ ಬಲಗೊಳ್ಳಲು ಸೂಕ್ತ ವ್ಯವಸ್ಥೆ - ಉದಾಸಿ
ಪುತ್ತೂರು:ರಾಜ್ಯದಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಹಾಗೂ ಕಾನೂನು ಪರಿಪಾಲನೆಯ ದೃಷ್ಟಿಯಿಂದ ನ್ಯಾಯಾಲಯದ ಪಾತ್ರ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹೀಗಾಗಿ ನ್ಯಾಯಾಲಯ ಹಾಗೂ ನ್ಯಾಯಾಲಯದ ವಠಾರಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸಕರ್ಾರ ಒದಗಿಸಿ ನ್ಯಾಯಾಂಗ ವ್ಯವಸ್ಥೆಯನ್ನು ಬಲಗೊಳಿಸಲು ವ್ಯವಸ್ಥೆ ಮಾಡುತ್ತಿರುವುದಾಗಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು.
ಪುತ್ತೂರಿನಲ್ಲಿ ಶನಿವಾರದಂದು ವಕೀಲರ ಸಂಘದ ನೂತನ ಸಭಾಂಗಣ "ಪರಾಶರ"ವನ್ನು ಉದ್ಘಾಟಿಸಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಮಾತನಾಡಿದರು. ಪುತ್ತೂರು ವಕೀಲರ ಸಂಘಕ್ಕೆ ರಾಜ್ಯ ಸಕರ್ಾರದಿಂದ 80 ಲಕ್ಷ ರೂಪಾಯಿ ಅನುದಾನವನ್ನು ಇತ್ತೀಚೆಗೆ ನೀಡಲಾಗಿತ್ತು. ಇದೀ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದು ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ನ್ಯಾಯಾಲಯವು ಆಡಳಿತ ಸುಧಾರಣೆಗೆ ಚುರುಕು ಮುಟ್ಟಿಸಲು ಕಾಲಕಾಲಕ್ಕೆ ಸೂಕ್ತ ನಿದರ್ೇಶನ ಹಾಗೂ ಸೂಚನೆಯನ್ನು ನೀಡಿ ಜನತೆಯ ಸಂಕಷ್ಟ ದೂರವಾಗಿಸುತ್ತಿದೆ ಎಂದ ಉದಾಸಿ ಶಾಸಕಾಂಗ , ಕಾಯರ್ಾಂಗ ಹಾಗೂ ನ್ಯಾಯಾಂಗ ಜೊತೆಯಾಗಿ ಇದ್ದಾಗ ಬದಲಾವಣೆ ಸಾಧ್ಯ ಎಂದರು. ಇಂದು ವೈಜ್ಞಾನಿಕವಾಗಿ , ವೈಚಾರಿಕವಾಗಿ ಬೆಳೆದರೂ ವಿವೇಕ ಮಾತ್ರಾ ಅದೇ ವೇಗದಲ್ಲಿ ಬೆಳೆಯುತ್ತಿಲ್ಲ. ಹೀಗಾಗಿ ಕಾನೂನು ಬಳಕೆ ಹೆಚ್ಚಾಗಿ ಬೇಕಾಗುತ್ತದೆ ಎಂದು ಉದಾಸಿ ಹೇಳಿದರು. ಸಕರ್ಾರದ ವತಿಯಿಂದ ಜಿಲ್ಲೆಯ ನ್ಯಾಯಾಲಯ ವಿವಿಧ ಕಾಮಗಾರಿಗಳಿಗೆ 53 ಕೋಟಿ ರೂಪಾಯಿ ಬಿಡಗಡೆಗೊಳಿಸಿದ್ದು ಮುಂದೆಯೂ ಸಹಕಾರ ನೀಡುವುದಾಗಿ ಇದೇ ವೇಳೆ ಉದಾಸಿ ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ , ನ್ಯಾಯಾಂಗ , ಕಾಯರ್ಾಂಗ , ಶಾಸಕಾಂಗವು ಸಹಮತದಿಂದ ನಡೆದಾಗ ಮಾತ್ರಾ ಅಭಿವೃದ್ಧಿ ಸಾಧ್ಯ. ಆದರೆ ಶಾಸಕಾಂಗವು ವಿವಿಧ ಕಾರಣಗಳಿಂದ ಇತ್ತೀಚಿಗೆ ಶಿಥಿಲವಾಗುತ್ತಿರುವುದು ಕಂಡುಬಂದಿದೆ. ಆದರೆ ನ್ಯಾಯಾಂಗ ವ್ಯವಸ್ಥೆಯು ಶಿಥಿಲವಾಗದೆ , ಆಗಾಗ ಶಾಸಕಾಂಗವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದ ಸದಾನಂದ ಗೌಡ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಬಲಿಷ್ಟವಾದಾಗ ಸಮಾಜದ ಸುದಾರಣೆ ಸಾಧ್ಯ ಎಂದು ಸದಾನಂದ ಗೌಡ ಹೇಳಿದರು.
ಹಿರಿಯ ನ್ಯಾಯವಾದಿಗಳನ್ನು ಸನ್ಮಾನಿಸಿದ ಹೈಕೋಟರ್್ ನ್ಯಾಯಾಧೀಶ ಕೆ.ಎಲ್.ಮಂಜುನಾಥ್ , ವಕೀಲರು ತಮ್ಮ ವೃತ್ತಿಯ ನಡುವೆ ಸಂಘಟನೆ ಹಾಗೂ ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಹಿರಿಯ ವಕೀರ ಮಾರ್ಗದರ್ಶನ ಹಾಗೂ ಅನುಭವನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ರಾಘವ ಗೌಡ , ಸುಬ್ರಹ್ಮಣ್ಯ ಕೊಳತ್ತಾಯ , ರಾಂಮೋಹನ್ ರಾವ್ , ಶಿವರಾಮ ಗೌಡ , ವಕೀಲಸ ಗುಮಾಸ್ತ ಸುಬ್ರಾಯ ಗೌಡರನ್ನು ಸನ್ಮಾನಿಸಲಾಯಿತು.
ಹೈಕೋಟರ್್ ನ್ಯಾಯಾಧೀಶ ಕೆ.ಭಕ್ತವತ್ಸಲ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ , ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ , ಎಡಿಶನಲ್ ಎಡ್ವಕೇಟ್ ಜನರಲ್ ಕೆ.ಎಂ.ನಟರಾಜ್ , ಜಿಲ್ಲಾ ಸೆಶನ್ಸ್ ನ್ಯಾಯಾಯದ ನ್ಯಾಯಾಧೀಶ ಅಶೋಕ್ ಜಿ ಗಟ್ಟಿಗಣ್ಣನವರ್ , ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಆನಂದ ಕುಮಾರ್ , ಕೆಎಸ್ಬಿಸಿ ಸದಸ್ಯ ರವೀಂದ್ರನಾಥ ರೈ , ಕೆಎಸ್ಬಿಸಿ ನೋಂದಣಿ ಮುಖ್ಯಸ್ಥ ಸುಭಾಸ್ ಕೌಡಿಚ್ಚಾರ್ , ಕೆಎಸ್ಬಿಸಿ ಸದಸ್ಯ ಪಿ.ಪಿ ಹೆಗ್ಡೆ , ರಾಷ್ಟ್ರೀಯ ಬಾರ್ ಕೌನ್ಸಿಲ್ ಸದಸ್ಯ ಬೋಜೇ ಗೌಡ ಉಪಸ್ಥಿತರಿದ್ದರು.
ಪುತ್ತೂರ ವಕೀಲರ ಸಂಘದ ಕಾರ್ಯದಶರ್ಿ ಜಗನ್ನಾಥ ರೈ ಸ್ವಾಗತಿಸಿ , ಅಧ್ಯಕ್ಷ ಮಹೇಶ್ ಕಜೆ ಪ್ರಸ್ತಾವನೆಗೈದರು, ಉಪಾಧ್ಯಕ್ಷ ದೇವಾನಂದ ವಂದಿಸಿದರು. ನ್ಯಾಯವಾದಿಗಳಾದ ದುಗರ್ಾಪ್ರಸಾದ್ ಹಾಗೂ ಸೂರ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.
-----------
ವನ್ಸ್ ಲಾಯರ್ ಆಲ್ವೆಸ್ ಲಾಯರ್ . . .
ವನ್ಸ್ ಲಾಯರ್ ಆಲ್ವೇಸ್ ಲಾಯರ್ ಆದರೆ ವನ್ಸ್ ಸೀಎಂ ನಾಟ್ ಆಲ್ವೇಸ್ ಸೀಎಂ . . .! . ಹೀಗೆಂದು ಹಾಸ್ಯ ಚಟಾಕಿ ಹಾರಿಸಿದವರು ಮಾಜಿ ಸೀಎಂ ಸದಾನಂದ ಗೌಡ. ಹಿಂದೆ ಪುತ್ತೂರಿನಿಂದಲೇ ವಕೀಲ ವೃತ್ತಿ ಆರಂಭಿಸಿದ್ದು , ಆದರೆ ಮುಂದೆ ಮತ್ತೆ ಬರಬೇಕಾಗಿ ಬಂದರೂ ಬರಬಹುದು ಎಂದು ಸದಾನಂದ ಗೌಡ ಚಟಾಕಿ ಹಾರಿಸಿದರು.
--------------------------------------------
ಪುತ್ತೂರು ಪ್ರಥಮ ಪ್ರಜೆಗೆ ಆಹ್ವಾನವಿಲ್ಲ. .
ಪುತ್ತೂರು ವಕೀಲರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಸೀಎಂ , ಸಚಿವರು ಸಂಸದರು , ಶಾಸಕರುಗಳಿಗೆ ಆಹ್ವಾನ ಇದ್ದರೆ ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ , ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಲಿಲ್ಲ ಎಂದು ಪುರಸಭಾಧ್ಯಕ್ಷರೇ ಮಾಧ್ಯಮ ಮಂದಿಯ ಬಳಿ ಹೇಳಿಕೊಂಡರು.
Subscribe to:
Posts (Atom)
Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...
ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...
-
ಕೇರಳ ರಾಜ್ಯದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಲ್ಲಿನ ಸರಕಾರ ನೀಡಿದ ಪರಿಹಾರದ ಮಾದರಿಕ್ಕಿಂತಲೂ ಕನರ್ಾಟಕ ಅತ್ಯಂತ ಹಚ್ಚಿನ ರೀತಿಯ ಪರಿಹಾರವನ್ನು ನೀಡುವ ಮೂಲಕ ದೇಶಕ್ಕೆ...












