Saturday, 24 August 2013


ಗೋವು ಬದುಕಿನ ಭಾಗವಾಗಬೇಕು- ನೂತನ ಆಂದೋಲನ- ರಾಘವೇಶ್ವರ ಶ್ರೀ

ಗೋವು ಪ್ರತಿಯೊಬ್ಬನ ಬದುಕಿನ ಭಾಗವಾದಾಗ ಮಾತ್ರ ಗೋ ರಕ್ಷಣೆ ಸಾಧ್ಯ ಯಾವುದೇ ಸಂಸತ್,ಕಾನೂನು,ಸಂಘರ್ಷದಿಂದ ಸಾಧ್ಯವಿಲ್ಲ.ಹೀಗಾಗಿ ಸದ್ಯದಲ್ಲೇ ನೂತನ ಯೋಜನೆಯನ್ನು ಆಂದೋಲನ ರೂಪದಲ್ಲಿ ಸಮಾಜದ ಎಲ್ಲರೂ ಭಾಗವಹಿಸುವಂತಹ ಯೋಜನೆ ತರುವುದಾಗಿ  ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು  ಪೆರಾಜೆ ಮಾಣಿ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು.ನಮ್ಮ ಬದುಕು ರೂಪಿಸಿದ ಗೋವಿಗೆ ಇಂದು ಬದುಕೇ ಇಲ್ಲವಾಗಿದೆ.ಹೀಗಾಗಿ ಗೋವಿನ ರಕ್ಷಣೆ ಇಂದು ಅನಿವಾರ್ಯವಾಗಿದೆ.ಇದಕ್ಕೆ ಸಮಾಜದ ಎಲ್ಲರೂ ಪ್ರಯತ್ನ ಮಾಡಬೇಕಾಗಿದೆ,ಹೀಗಾಗಿ ಆಂದೋಲನವೇ ಅಗತ್ಯ ಎಂದ ಅವರು ಇದಕ್ಕೆ ಸಮಾಜವೇ ಅಂತಿಮ ಮಾಧ್ಯಮ ಎಂದರು.  
ಚಾತುಮರ್ಾಸ್ಯ ಸಂದರ್ಭದಲ್ಲಿ ನಡೆಯುತ್ತಿರುವ ರಾಮಕಥಾ  ಸಂತೋಷ ಹಾಗೂ ಸಂದೇಶ ಎರಡೂ ಕೂಡಾ ನೀಡುವ ಈ ಕಾರ್ಯಕ್ರಮವಾಗಿದೆ.ಎಳೆಯರಿಂದ ತೊಡಗಿ ಹಿರಿಯರವರೆಗೆ ಮಾಧ್ಯಮವಾಗಿ ರಾಮಕಥಾ ಕಾರ್ಯಕ್ರಮ ಆಕರ್ಷಣೆಯಾಗಿದೆ ಎಂದರು. 

ಕಸಾಯಿಖಾನೆಗೆ ಅಕ್ರಮ ಗೋ ಸಾಗಾಟ ಆರೋಪ ಸತ್ಯಕ್ಕೆ ದೂರವಾದ ವಿಚಾರ- ಎ.ಆರ್. ಚಂದ್ರ
 ಪುತ್ತೂರು ತಾಲೂಕಿನ ಸವಣೂರಿನಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ನಡೆಸಲಾಗುತ್ತಿತ್ತು ಎನ್ನುವುದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು , ಅಲ್ಲಿ ದನಗಳನ್ನು ಕದ್ದು ಸಾಗಾಟ ಮಾಡಲಾಗಿಲ್ಲ. ತೋಟಕ್ಕೆ ನುಗ್ಗಿ ಹಾನಿ ಮಾಡಿದ ದನಗಳನ್ನು ಅಲ್ಲಿನ ಕೃಷಿಕರು ಕಟ್ಟಿ ಹಾಕಿ ತನಗೆ ಮಾಹಿತಿ ನೀಡಿ ಗೋ ಆಶ್ರಮಕ್ಕೆ ಪಿಕಫ್ ವಾಹನದಲ್ಲಿ ತಂದಿದ್ದರು. ಈ ಘಟನೆಯ ವೇಳೆ  ದನದ ಮಾಲಕ ಹಾಗೂ ಇತರ ಸುಮಾರು 100ಕ್ಕೂ ಅಧಿಕ ಮಂದಿ  ಸೇರಿಕೊಂಡು ಘಟನೆಯನ್ನು ವಿಷಯಾಂತರಗೊಳಿಸಿ  ಅಪಪ್ರಚಾರ ನಡೆಸಿದ್ದಾರೆ ಎಂದು ಸವಣೂರಿನ ಭಾರತೀಯ ಭಾವೈಕ್ಯತಾ ಪ್ರತಿಷ್ಠಾನದ ಸಂಚಾಲಕ , ಗೋಕುಲಂ ಗೋಶಾಲೆಯ ಎ.ಆರ್.ಚಂದ್ರ ಎಡಪತ್ಯ ಅವರು ಹೇಳಿದರು. 
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.21ರಂದು ರಾತ್ರಿ  ಸವಣೂರಿನ ಆರೆಲ್ತಡ್ಕದ ಕೃಪಿಕರಾದ ಪ್ರಕಾಶ್ ಎಂಬವರು ನಾರಾಯಣ ಎಂಬವರ ಮೊಬೈಲ್ ಮೂಲಕ ತನಗೆ ಕರೆ ಮಾಡಿ ತಮ್ಮ ತೋಟಕ್ಕೆ ನುಗ್ಗಿದ 4 ದನಗಳನ್ನು ಕಟ್ಟಿಹಾಕಿದ್ದೇವೆ. ನಿಮ್ಮ ಆಶ್ರಮಕ್ಕೆ ಅದನ್ನು ತರುತ್ತೇವೆ .ಅದನ್ನು ನೀವು ಸ್ವೀಕಾರ ಮಾಡಬೇಕು ಎಂದಿದ್ದರು. ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ ನಾಳೆ ಬೆಳಿಗ್ಗೆ ತಂದರೆ ಒಳ್ಳೆಯದ್ದು , ಇಲ್ಲದಿದ್ದರೆ ಪೊಲೀಸ್ ಠಾಣೆಗೆ ತಿಳಿಸಿ ಬರಹ ಮೂಲಕವೇ ಆಶ್ರಮಕ್ಕೆ ಒಪ್ಪಿಸಬೇಕು ಎಂದು ತಾನು ತಿಳಿದಿದ್ದೆ. ಈ ಬಗ್ಗೆ ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಮೆದು ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ ಬಳಿಕ ಆಶ್ರಮಕ್ಕೆ ತರುವಂತೆ ಹೇಳಿದ್ದೆ . ಅದರಂತೆ ಅವರು ದನಗಳನ್ನು ಆಶ್ರಮಕ್ಕೆ ಪಿಕಪ್ ವಾಹನದಲ್ಲಿ ತಂದಿದ್ದರು. ಆ ವೇಳೆ ದನಗಳ ವಾರಿಸುದಾರ ಉಸ್ಮಾನ್ ಸೇರಿದಂತೆ ಸುಮಾರು ನೂರಕ್ಕಿಂತಲೂ ಅಧಿಕ ಮಂದಿ ಗೋಶಾಲೆಯ ಬಳಿ ಜಮಾಯಿಸಿ ಗೊಂದಲ ಸೃಷ್ಟಿಸಿದರು. ಘಟನೆಯ ವಿಷಯಾಂತರಿಸಿ ಅಪಪ್ರಚಾರ ಎಬ್ಬಿಸಿದರು . ಆ ಸಂದರ್ಭದಲ್ಲಿ ಈ ಬಗ್ಗೆ  ತಾನೇ ಪೊಲೀಸರಿಗೆ ದೂರು ನೀಡಿದ್ದೆ ಎಂದು ಅವರು ತಿಳಿಸಿದರು.
ತಾನು ದನಗಳನ್ನು ಗೋಶಾಲೆಗೆ ಸೇರಿಸಲು ನಿರಾಕರಿಸಿಲ್ಲ . ಆದರೆ ಆ ವಿಚಾರದಲ್ಲಿ ತಪ್ಪು ಸುದ್ದಿ ಬಿತ್ತರವಾಗಿದೆ. ಈ ಘಟನೆಗೆ ಸಂಬಂಧಿಸಿ ರಾಜಕೀಯ ಲಾಭ ಪಡೆಯುವ ಕೆಲಸ ನಡೆದಿದೆ. ಪೊಲೀಸರ ಆಗಮನದ ಬಳಿಕ ಮುಗಿಯುವ ಹಂತದಲ್ಲಿದ್ದ ಪ್ರಕರಣವನ್ನು ದೊಡ್ಡದಾಗಿಸುವ ಕೆಲಸ ನಡೆದಿದೆ ಎಂದು ಅವರು ತಿಳಿಸಿದರು.
ಪ್ರಮಾಣಕ್ಕೆ ಬರಲಿ -ಸವಾಲು : 
ದನಗಳನ್ನು ಕದ್ದು ಕಖಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಆರೋಪ ಮಾಡುವವರು ಯಾವುದೇ ಕ್ಷೇತ್ರದಲ್ಲಿ ಪ್ರಮಾಣ ಮಾಡಲು ಮುಂದಾಗಲಿ .ನಾವು ಅದಕ್ಕೆ ಸಿದ್ದ ಎಂದು ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಮೆದು ಸವಾಲು ಹಾಕಿದರು. ಉಸ್ಮಾನ್ ಅವರ ದನಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿರುವ ಕುರಿತು ಆರೆಲ್ತಡ್ಕದ ಕೃಷಿಕರು 6 ತಿಂಗಳ ಹಿಂದೆಯೇ ಪಂಚಾಯಿತಿಗೆ ದೂರು ನೀಡಿದ್ದರು. ಅದಕ್ಕೂ ಮುನ್ನ ಕಡಬ ಪೊಲೀಸರಿಗೂ ದೂರು ಸಲ್ಲಿಸಿದ್ದರು. ಪಂಚಾಯಿತಿಯಿಂದ ಅವರಿಗೆ ಈ ಕುರಿತು ನೋಟೀಸು ಕೂಡ ನೀಡಲಾಗಿತ್ತು. ಆದರೆ ಉಸ್ಮಾನ್ ಅವರು ಹಗಲು ಹೊತ್ತಿನಲ್ಲಿ ದನಗಳನ್ನು ಕಟ್ಟಿ ಹಾಕಿ ರಾತ್ರಿ ವೇಳೆ ಬಿಡುತ್ತಿದ್ದರು. ಮೂರು ದಿನಗಳ ಹಿಂದೆ  ದನಗಳನ್ನು ಬಿಡಬೇಡಿ . ಕೃಷಿ ಹಾನಿ ಮಾಡುತ್ತಿವೆ ಎಂದು ಸ್ಥಳೀಯ ಕೃಷಿಕರೊಬ್ಬರು ವಿನಂತಿಸಿಕೊಂಡಿದ್ದರು. ಆದರೂ ಅವರು ಅದನ್ನು ಲೆಕ್ಕಿಸದ ಕಾರಣ ತಾನೇ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದೆ.  ಆ ವೇಳೆ ಪೊಲೀಸರು ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುವ ದನಗಳನ್ನು ಸ್ಥಳೀಯ ಗೋಶಾಲೆಗೆ ಕೊಡಿ. ಬಳಿಕ ಅವರು ದಾಖಲೆ ಕೊಟ್ಟು ಬಿಡಿಸಿಕೊಂಡು ಹೋಗಲಿ ಅಂದಿದ್ದರು. ಈ ಕಾರಣದಿಂದ ಗೋಶಾಲೆಗೆ ಕೊಂಡೊಯ್ಯಲಾಗುತ್ತಿತ್ತು ಎಂದು ದಿನೇಶ್ ಮೆದು ತಿಳಿಸಿದರು.
ಮುಸ್ಲಿಮರು ಅಕ್ರಮವಾಗಿ ದನಗಳ ಸಾಗಾಟ ಮಾಡುತ್ತಿದ್ದ ವೇಳೆ ತಡೆಯಲು ಮುಂದಾದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ,ದರೋಡೆ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಪೊಲೀಸರು  ಈ ಪ್ರಕರಣದಲ್ಲಿ ತಡೆಯಲು ಹೋದ ಮುಸ್ಲಿಂ ಮಂದಿಯ ಮೇಲೆ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ . ನಾವು ತಡೆದರೆ ಮಾತ್ರ ನೈತಿಕ ಪೊಲೀಸ್ಗಿರಿ , ಇದು ಯಾವುದು ಅನೈತಿಕ ಪೊಲೀಸ್ ಗಿರಿಯೇ ಎಂದು ಅವರು ಪ್ರಶ್ನಿಸಿದರು .   
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಸುಪ್ರೀತ್ ರೈ ಖಂಡಿಗ , ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ, ಸದಸ್ಯ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.
     

Friday, 23 August 2013

ನೈತಿಕ ಪೊಲೀಸ್ಗಿರಿ ತಡೆಯಲು ಪಿಎಫ್ಐ ಆಗ್ರಹ
ಪುತ್ತೂರು: ಸಂಘ ಪರಿವಾರ ಮತ್ತು ಬಿಜೆಪಿಯವರು ಗೋ ರಕ್ಷಣೆಯ ಹೆಸರಿನಲ್ಲಿ ಕೋಮು  ಪ್ರಚೋದನಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮರೆಯಲ್ಲಿ ಗೋವುಗಳ ಕಳ್ಳತನ ನಡೆಸುವ ಮತ್ತು ನೈತಿಕ ಪೊಲೀಸ್ಗಿರಿ ನಡೆಸುತ್ತಿರುವ ವಿಚಾರವು ಸವಣೂರಿನಲ್ಲಿ ನಡೆದ ಪ್ರಕರಣದ ಮೂಲಕ ಬಹಿರಂಗಗೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಪಿಎಫ್ಐ ಪುತ್ತೂರು ಜಿಲ್ಲಾ ಸಮಿತಿಯ ಅಧ್ಯಕ್ಷ ಶಾಫಿ ಬೆಳ್ಳಾರೆ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಧಾನ ಸಭಾ ಚುನಾವಣೆಯ ಬಳಿಕ ಅಸ್ಥಿತ್ವ ಕಳೆದುಕೊಂಡಿರುವ ಸಂಘಪರಿವಾರವು ಇದೀಗ ಜಿಲ್ಲೆಯಾದ್ಯಂತ ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದು ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದ ಅವರು ಸವಣೂರು ಪ್ರಕರಣದಲ್ಲಿ ಗೋವುಗಳ ಮಾಲಕ ಉಸ್ಮಾನ್ ಎಂಬವರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ ಎಂದರು 
ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ಚಪ್ಪಲಿ ಮಾರಾಟಗಾರ ಅಝೀಝ್ ಎಂಬವರ ಮೇಲೆ ಹಲ್ಲೆ ನಡೆದಾಗ ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು, ಸಂಘ ಪರಿವಾರದ ಒತ್ತಾಯಕ್ಕೆ ಮಣಿದು ಅಝೀಝ್ ಅವರ ಮೇಲೆ ಮಾನಭಂಗ ಕೇಸು ದಾಖಲಿಸಿ ನೈತಿಕ ಪೊಲೀಸ್ಗಿರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಬಳಿಕ ಉಪ್ಪಿನಂಗಡಿಯಲ್ಲಿ ಇಮ್ರಾನ್ ಖಾನ್ ಎಂಬ ಹೆಸರಿನ ಬೆಂಗಳೂರು ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅರೆಬೆತ್ತಲೆ ಮೆರವಣಿಗೆ ನಡೆಸಿದಾಗಲೂ ಪೊಲೀಸರು ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ತಪ್ಪು ಮಾಡಿದಲ್ಲಿ ಅವರನ್ನು ಶಿಕ್ಷೆಗೊಳಪಡಿಸಲು ಇಲಾಖೆ ಮತ್ತು ಕಾನೂನುಗಳಿವೆ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದ ಅವರು ಕಾಲೇಜುಗಳಲ್ಲಿ ಕೋಮು ವಿಷಬೀಜ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಹೊರಗಿನ ಶಕ್ತಿಗಳು ಶೈಕ್ಷಣಿಕ ಕೇಂದ್ರಗಳಿಗೆ ಪ್ರವೇಶಿಸಿ ಶಿಕ್ಷಣರಂಗವನ್ನು ಹಾಲುಗೆಡವುತ್ತಿದೆ ಎಂದು ಆರೋಪಿಸಿದರು. 
ಸಕರ್ಾರ ಮತ್ತು ಪೊಲೀಸ್ ಇಲಾಖೆ ನೈತಿಕ ಪೊಲೀಸ್ ಗಿರಿಯನ್ನು ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಇವರ ಮೇಲೆ ಮೃಧು ಧೋರಣೆ ಮುಂದುವರಿಸಿದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಝೀಝ್ ಕಬಕ, ಪುತ್ತೂರು ವಲಯ ಅಧ್ಯಕ್ಷ ಕೆ.ಎಚ್. ಖಾಸಿಂ, ಕುಂಬ್ರ ವಲಯ ಅಧ್ಯಕ್ಷ ರಿಝ್ವಾನ್, ಕಬಕ ವಲಯ ಅಧ್ಯಕ್ಷ ಅಶ್ರಫ್ ಬಾವು ಉಪಸ್ಥಿತರಿದ್ದರು.

ಹಿಂದೂ ಸಂಘಟನೆ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ
ಪುತ್ತೂರು:ಸವಣೂರಿನಲ್ಲಿ ನಡೆದ ಗೋಸಾಗಾಟದಲ್ಲಿ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಮುಖಂಡ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
ಸವಣೂರಿನ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರೊಬ್ಬರು ಶಾಮೀಲಾಗಿ ಸವಣೂರಿನಲ್ಲಿ ನಡೆದ ಗೋಸಾಗಾಟದಲ್ಲಿ ಹಿಂದೂ ಸಂಘಟನೆಗಳ ಕೈವಾಡ ಇದೆ ಎಂದು ಗೂಬೆ ಕೂರಿಸಲಾಗುತ್ತಿದೆ.ಆದರೆ ವಾಸ್ತವವಾಗಿ ಸವಣೂರಿನಲ್ಲಿ ಬಜರಂಗ ದಳಘಟಕವೇ ಇಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಜರಂಗದಳ ಜಿಲ್ಲಾ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ,ದೃಶ್ಯಮಾಧ್ಯಮದ ವರದಿಗಾರನೊಬ್ಬ ಫೇಸ್ಬುಕ್ನಲ್ಲಿ ಹಿಂದೂ ಸಂಘಟನೆ ಧಕ್ಕೆ ಬರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ.ಈ ಬಗ್ಗೆ ಕಾನೂನಿನಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು  ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಕುಮಾರ್ ಜೈನ್,ಗೋರಕ್ಷಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು,ತಾಲೂಕು ಸಂಚಾಲಕ ಸಚಿನ್,ನಗರ ಸಂಚಾಲಕ ಶ್ರೀಧರ ಪಡ್ನೂರು,ಕರುಣಾಕರ ಕೊಮ್ಮಂಡ ಉಪಸ್ಥಿತರಿದ್ದರು.

ಸದಾನಂದ ಗೌಡರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದ = ಕಾಂಗ್ರೆಸ್

ಪುತ್ತೂರು:ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ತವರು ಕ್ಷೇತ್ರದ ಅಭಿವೃದ್ಧಿ ಹಾಕಿಕೊಂಡಿರುವ ಯೋಜನೆ ಬಗ್ಗೆ ಬಹಿರಂಗ ಚಚರ್ೆಗೆ ಸಿದ್ದ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದಶರ್ಿ ಮಹಮ್ಮದ್ ಆಲಿ ಹೇಳಿದ್ದಾರೆ.
ಬುಧವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸದನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಯವುದೇ ಜನಪರವಾದ ಕೆಲಸ ಮಾಡದೇ ಈಗ ಯಾರ್ಯಾರಲ್ಲೋ ಸಮರ್ಥನೆ ಮಾಡಿಸುತ್ತಿದ್ದಾರೆ.ಇದು ಸರಿಯಲ್ಲ, ಜನರ ಹದಿ ತಪ್ಪಿಸುವ ಕೆಲಸ ಹಾಗೂ ಅನಗತ್ಯವಾಗಿ ಕಾಂಗ್ರೆಸ್ ವಿರುದ್ದ ಟೀಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.ಕಾಂಗ್ರೆಸ್ ಜಿಲ್ಲೆಯಿಂದ 4 ಸಚಿವರು ಇದ್ದಾರೆ ಮುಂದೆ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿಯುತ್ತದೆ.ಆದರೆ ಅನಗತ್ಯವಾಗಿ ಟೀಕೆ ಮಾಡುವುದರ ಬದಲು ಬಹಿರಂಗ ಚಚರ್ೆಗೆ ಬಿಜೆಪಿ ಬರಲಿ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್,ಪುರಸಭಾ ಸದಸ್ಯ ಅನ್ವರ್ ಖಾಸಿಂ ಮೊದಲಾದವರು ಉಪಸ್ಥಿತರಿದ್ದರು.
-----------------------

Tuesday, 20 August 2013


ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಉಪಕರ್ಮ ಎಂದು ಬಹಳ ಪ್ರಾಚೀನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತದೆ.ಈ ದಿನಕ್ಕೆ ಇನ್ನೊಂದು ವಿಶೆಷವೇ ರಕ್ಷಾಬಂದನ. ರಕ್ಷಾಬಂಧನ ಎಂದ ಕೂಡಲೇ ನೆನೆಪಾಗುವುದು ಅಣ್ಣ ತಂಗಿಯರ ಸಂಬಂಧ ಸಹೋದರತೆಯ ಪ್ರೇಮ. ಅಣ್ಣ ತಂಗಿಯರ ಭಾವನಾತ್ಮಕವಾಗಿ ಸ್ಮರಿಸುವ ಈ ದಿನದ ಬಾಲ್ಯದ ಅನೇಕ ಸಿಹಿಕಹಿ ನೆನಪುಗಳನ್ನು ಮನಸ್ಸಿನ ಮೂಲೆಯಲ್ಲಿ ಮೂಡಿಸುತ್ತದೆ.ಈ ರಕ್ಷಾ ಬಂಧನ ಈ ಹಬ್ಬಕ್ಕೆ   ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶೇಷಮಹತ್ವವಿದೆ. 
ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ಈ ರಕ್ಷಾಬಂಧನ ಹಬ್ಬದ ನೀತಿಯಾಗಿದೆ. 

Friday, 16 August 2013


ಶಾಸಕಿ ಶಕುಂತಳಾ ಶೆಟ್ಟಿ ಮತನಾಡಿ ಸ್ವಾತಂತ್ರದಿನದಂದು ಕೂಡ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಬದ್ರತೆಯನ್ನುಕಾಣುವ ದುಸ್ತಿತಿಇಂದು ಬಂದೊರಗಿದೆ. ಈ ದೇಶದ ಲ್ಲಿ ಇದ್ದುಕೋಂಡು ಉಗ್ರಗಾಮಿಯಾಗುವುದು ನಮ್ಮ ದುರದ್ರಷ್ಟ. ನವೇಲ್ಲರು ಒಂದೇ .ಸಹ ಬಾಲ್ವೆ,ಪ್ರೀತಿ,ವಿಶ್ವಾಸ.ನಂಬಿಕೆ ಮತ್ತು ಎಲ್ಲಾ ಧರ್ಮಗಳನ್ನು ಪ್ರೀತಿಸುವ ಮೂಲಕ ನಾವೆಲ್ಲರು ಬಾರತಿರೆಂದ ನಡೆದು ಕೋಂಡರೆ ಮಾತ್ರ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ನಾವು ಸಲ್ಲಿಸಬಹುದಾದ ಬಹುದೊಡ್ಡ ಗೌರವವಾಗಬಹುದಲ್ಲವೇ ಎಂದರು
ಈ ಸಂದರ್ಬದಲ್ಲಿ ತಶೀಲ್ದಾರ್ ಕುಳ್ಳೆ ಗೌಡ. ತಾಲೂಕು ಪಂಚಾಯತ್ತ ಅಧ್ಯಕ್ಷೆ ಶಶಿಪ್ರಭಾ ಉಪಸ್ತಿತರಿದ್ದರು
67 ನೇ ಸ್ವಾತಂತ್ರೋತ್ಸವ ಸಡಗರವನ್ನು ಪುತ್ತೂರಿನಲ್ಲಿ ಕಿಲ್ಲೆ ಮೈದಾನದಲ್ಲಿ ಇಂದು ಬೆಳಿಗ್ಗೆ ಆಚರಿಸಲಾಯಿತು. ಪುತ್ತೂರಿನ ಸಹಾಯಕ ಆಯುಕ್ತರಾದ ಪ್ರಸನ್ನರವರು ಧ್ವಜಾರೋಹಣಗೈದರು.

 ಬಳಿಕ ಮಾತನಾಡಿದ ಪ್ರಸನ್ನರವರು ಸಬ್ಮೆರಿನ್ನ ಸ್ಪೋಟದಲ್ಲಿ ಮಡಿದ ಯೋದರಿಗೆ ಸಂತಾಪ ಸೂಚಿಸಿದರು. ಸ್ವಾತಂತ್ರ ದೇಶ ಕೇವಲ ಹೆಸರಿಗೆ ಮಾತ್ರವಲ್ಲ ಹಾಗೆಯೇ ಸ್ವಾತಂತ್ರದಿನ ಇಂದಿಗೆ ಮಾತ್ರ ವಲ್ಲ ನಮ್ಮವರು  ಅಂದು ಬ್ರಿಟಿಷರ ಕೈಯಿಂದ ಈ ದೇಶವನ್ನು ಸ್ವತಂತ್ರಗೊಳಿಸಿದ್ದನ್ನು ನಾವು ಅನುಭವಿಸಬೇಕಾಗಿದೆ ಮುಂದಿನದಿನಗಳಲ್ಲಿ ಬಲಿಷ್ಟವಾದ ದೇಶವನ್ನು ಸಂವಿದಾನಬದ್ದವಾಗಿ ಕಟ್ಟೋನ ಎನ್ನುವ ಸಂದೇಶವನ್ನು ನೀಡಿದರು

 

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...