Saturday, 13 April 2013

Gas tanker 2


ದುರಂತ ನಡೆದು  ಸರಿಯಾಗಿ 24 ಗಂಟೆ ಕಳೆದರೂ ಆಘಾತದಿಂದ ಸ್ಥಳೀಯರು  ಇನ್ನೂ ಹೊರಬಂದಿಲ್ಲ. ಹತ್ತಿರದಲ್ಲಿ  ಹೊತ್ತಿ ಭಸ್ಮವಾಗಿದ್ದ ಅಂಗಡಿಯ ಕಿಡಿ  ಇನ್ನೂ ಆರಿಲ್ಲ. ಜನಸಾಗರ ಕುತೂಹಲದಿಂದ ಇನ್ನೂ ಹರಿದು  ಬರುತ್ತಲೇ ಇದೆ. ಇದು  ಬುಧವಾರದಂದು  ಕಂಡ ಘಟನೆ.
ಯಮ ಸ್ವರೂಪಿ ಟ್ಯಾಂಕರ್ ಪಲ್ಟಿಯಾಗಿ 8 ಮಂದಿ  ಸಜೀವ ದಹನವಾಗಿ 24 ಗಂಟೆ ಕಳೆದಿದೆ. ಈಗಲೂ ಕೂಡಾ ಹೆದ್ದಾರಿ  ಪಕ್ಕದ ಈ ಪುಟ್ಟ ಗ್ರಾಮದಲ್ಲಿ  ಭಯ ಮಾಸಿಲ್ಲ, ಆಘಾತದಿಂದ ಸಂಪೂರ್ಣ ಚೇತರಿಕೆ ಕಂಡುಬಂದಿಲ್ಲ. ಆಸುಪಾಸಿನ  ಎಲ್ಲಾ ಮನೆಗಳಿಗೆ ಕೂಡಾ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಡಿಕೆ , ತೆಂಗಿನ ಮರಗಳು ಕರಟಿ ಹೋಗಿದೆ. ಬುಧವಾರದಂದು  ಮೆಸ್ಕಾಂ ಸಿಬಂದಿಗಳು  ತುಂಡಾದ ಮುಖ್ಯ ತಂತಿಯ ಮರುಜೋಡಣೆ ಕೆಲಸ ಮಾಡುತ್ತಿದ್ದಾರೆ.ನಿನ್ನೆ ಬೆಳಗ್ಗೆ ಹೊತ್ತಿದ ಬೆಂಕಿಯಲ್ಲಿ  ಇಂದಿಗೂ  ಬೀಡಿ ಬ್ರಾಂಚ್ ಅಂಗಡಿಯಲ್ಲಿನ ಬೆಂಕಿಯ ಕಿಡಿ  ಇನ್ನೂ ಆರಿಲ್ಲ. ಹೊಗೆಯಾಡುತ್ತಲೇ ಇದೆ.
 ಸ್ಥಳಕ್ಕೆ ಐಜಿ ಪ್ರತಾಪ್ ರೆಡ್ಡಿ , ಎಸ್ಪಿ ಅಭಿಷೇಕ್ ಗೋಯಲ್ , ಎಎಸ್ಪಿ  ಸದಾನಂದ ವಣರ್ೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ನಡುವೆ ಸಾರ್ವಜನಿಕರು  ತಂಡತಂಡವಾಗಿ ಆಗಮಿಸಿ  ದುರಂತ ನಡೆದ ಸ್ಥಳವನ್ನು ನೋಡಿ  ಮರುಕ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದುರಂತದಲ್ಲಿ  ಮೃತಪಟ್ಟ ಶೋಭಾ ಅವರ ಪತಿ  ಶಂಕರ ರೈ  ಖಾಸಗೀ ಬಸ್ಸಿನಲ್ಲಿ  ನಿವರ್ಾಹಕ.ಮಂಗಳವಾರ ಕೆಲಸಕ್ಕೆ ರಜೆ ಮಾಡಿ  ಖಾಸಗೀ ಕೆಲಸಕ್ಕೆ ಹೋಗಲು  ಮಮನೆಯಿಂದ ಸ್ವಲ್ಪ  ಮೇಲಿನ ಬಸ್ಸು  ನಿಲ್ದಾಣಕ್ಕೆ ತೆರಳಿದ್ದರು. ಹೀಗೆ ಹೊರಟು  15 ನಿಮಿಷದಲ್ಲಿ  ದುರಂತ ನಡೆದಿದೆ.ಕೂಡಲೇ ಬಸ್ಸು ನಿಲ್ದಾಣದ ಬಳಿಯಿಂದ ಮನೆಯ ಹಿಂಬದಿಗೆ ದೂರದಿಂದ ಬಂದಾಗ ಮನೆಯೇ ಉರಿಯುವುದು ಕಂಡಿತು , ಪತ್ನಿ  ಬೆಂಕಿಯಲ್ಲಿ  ಸುಡುವುದು  ಕಂಡಿತು , ಆದರೆ ಏನೂ ಮಾಡಲಾಗದ ಸ್ಥಿತಿ  ಅದಾಗಿತ್ತು  ಎಂದು  ಶಂಕರ್ ರೈ  ಘಟನೆಯನ್ನು  ವಿವರಿಸುತ್ತಾರೆ. ಈಗ ಮನೆಯಲ್ಲಿ  ಏನೂ ಇಲ್ಲದೆ ಖಾಲಿ ಕೈಯಲ್ಲಿ  ಇರಬೇಕಾದ ಸ್ಥಿತಿ  ಬಂದಿದೆ ಎಂದು  ಹೇಳುತ್ತಾರೆ.
ಮನೆ ಸುತ್ತಲೂ  ಹೊತ್ತಿ ಉರಿಯಿತು. . .  ಮನೆ ಉಳಿಯಿತು. . .!
 ಘಟನೆ ನಡೆದ 50  ಮೀಟರ್ ದೂರದ ಗುಡ್ದದಲ್ಲಿ  ಲಾರಿ  ಚಾಲಕ ಉಮ್ಮರ್ ಂಬವ ಮನೆ ಇದೆ. ನೇರವಾಗಿ  ಟ್ಯಾಂಕರ್ ಪಲ್ಟಿಯಾದ ಜಾಗದಲ್ಲೇ ಇದೆ. ಇವರ ಮನೆ ಮುಂಭಾಗದ ಚಿಕ್ಕು , ತೆಂಗಿನ ಮರ ಎಲ್ಲವೂ ಹೊತ್ತಿ ಉರಿದಿದೆ. ಮನೆಯ ಹಿಂಭಾಗದ ತೆಂಗಿನ ಮರವೂ ಕರಟಿಹೋಗಿದೆ. ಆದರೆ ಮನೆಯ ವಯರಿಂಗ್ ಸುಟ್ಟುಹೋದದ್ದು  ಬಿಟ್ಟರೆ ಬೇರೆ ಯಾವುದೇ ಅನಾಹುತ ಆಗಿಲ್ಲ  ಎಂದು ನಿಟ್ಟುಸಿರು  ಬಿಡುತ್ತಾರೆ. ಮನೆಯ  ಮೇಲೆ ಗುಡ್ಡದಲ್ಲಿ  ತೆಂಗಿನ ಗರಿಗಳನ್ನು  ತುಂಡರಿಸುತ್ತಿದ್ದಾಗ ಲಾರಿ ಪಲ್ಟಿಯಾಗಿ  ಬೆಂಕಿ ಬಂದಾಗ ಮನೆಯವರಿಗೆ ಹೇಳಿ ಓಡಲು  ತಿಳಿಸಿ  ನಾನು ನೀರು  ಸುರಿದೆ ಎಂದು  ಘಟನೆಯನ್ನು  ವಿವರಿಸುತ್ತಾರೆ.


ಮೃತರ ಅಂತ್ಯ ಸಂಸ್ಕಾರ :
ಘಟನೆಯಲ್ಲಿ  ಮೃತರಾದ ಎಲ್ಲಾ ಶವಗಳನ್ನೂ  ಮಂಗಳವಾರ ರಾತ್ರಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಮಾಂಸದ ಮುದ್ದೆಯಂತಾಗಿದ್ದ ಈ ದೇಹಗಳಲ್ಲಿ  ಕೆಲವುಗಳನ್ನು  ಉಪ್ಪಿನಂಗಡಿ  ಸ್ಮಶಾನದಲ್ಲಿ  ಅಂತ್ಯಸಂಸ್ಕಾರ ಮಾಡಲಾಗಿದ್ದರೆ  . ಟ್ಯಾಂಕರ್ ಚಾಲಕನ ಶವ ಮಂಗಳೂರಿನ ಶವಾಗಾರದಲ್ಲಿ  ಇಡಲಾಗಿದೆ.
ಹೆದ್ದಾರಿಯಲ್ಲಿ  ಮತ್ತೆ ಯಮರೂಪಿ ಟ್ಯಾಂಕರ್ ಓಡಾಟ :
ಮಂಗಳವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 8 ಜನ ಸಜೀವ ದಹನವಾದ ಬಳಿಕ ಬುಧವಾರದಂದು  ಮತ್ತೆ ಅದೇ ವೇಗದಲ್ಲಿ  ಗ್ಯಾಸ್ ಟ್ಯಾಂಕರ್ಗಳು ಓಡಾಟ ನಡೆಸುತ್ತಿವೆ. ಈಗ ಗ್ಯಾಸ್ ಟ್ಯಾಂಕರ್ ಹಿಂಬಾಗದಲ್ಲಿ  ಹೋಗುವುದೇ ಅಪಾಯಕಾರಿ  ಎಂದು ಸಾರ್ವಜನಿರು  ಮಾತನಾಡಿಕೊಳ್ಳುವಂತಾಗಿದೆ.
ಘಟನಾ ಸ್ಥಳದಲ್ಲಿ  ಕಂದಾಯ ಇಲಾಖೆ , ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮೊಕ್ಕಾಂ ಹೂಡಿದ್ದು  ಸಮಾರೋಪಾದಿಯ ಕೆಲಸದಲ್ಲಿ  ನಿರತವಾಗಿವೆ.
 ಮೃತಪಟ್ಟ ಕುಟುಂಬಗಳಿಗೆ ಮತ್ತು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಟುಂಬಗಳಿಗೆ ಸಕರ್ಾರ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ  ಅಧಿಕಾರಿಗಳು  ಮಾಹಿತಿ  ಸಂಗ್ರಹ ಮಾಡಿದ್ದಾರೆ..
 


 ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಶಿರಾಡಿವರೆಗೆ  ಆಗಾಗ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅವಘಡಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ಹೆದ್ದಾರಿ ಬದಿಯಲ್ಲಿ  ವಾಸಿಸುವುದೇ ಈಗ ಸಾವಿನ ಮೇಲೆ ಮಲಗಿದಂತೆಯೇ ಆಗಿದೆ. ಹೀಗಾಗಿ ಈ ಭಾಗದಲ್ಲಿ  ತುತರ್ು ಕಾರ್ಯಕ್ಕಾಗಿ ಅಗ್ನಿಶಾಮಕ ದಳದ ವ್ಯವಸ್ಥೆ ಆಗಬೇಕು, ಈ ಮೂಲಕ ಅವಘಡಗಳು ನಡೆದ ತಕ್ಷಣವೇ ಪರಿಹಾರ ಕಾರ್ಯ ನಡೆಯಲು ಸಹಾಯವಾಗುತ್ತದೆ. ಇಲ್ಲದೇ ಇದ್ದಲ್ಲಿ  ಕನಿಷ್ಠ 30 ನಿಮಿಷವಾದರೂ ದುರಂತದ
ಸ್ಥಳಗಳಿಗೆ ಅಗ್ನಿಶಾಮಕ ದಳದ ಸಿಬಂದಿಗಳು  ತಲುಪಲು ಸಾಧ್ಯವಾಗುವುದಿಲ್ಲ  ಎಂದು  ಸ್ಥಳೀಯರಾದ ಲೋಕೇಶ್ ಒತ್ತಾಯಿಸಿದ್ದಾರೆ.
-----------------------

ಹೆದ್ದಾರಿಯಲ್ಲಿ  ವೇಗ ನಿಯಂತ್ರಣಕ್ಕೆ ಕ್ರಮ - ಪ್ರತಾಪ್ ರೆಡ್ಡಿ
ಟ್ಯಾಂಕರ್ಗಳ ಅಪಘಾತ ನಡೆಯುತ್ತಿರುವುದು  ಹೆಚ್ಚಾಗುತ್ತಿದೆ.ಇದಕ್ಕೆ ವೇಗದ ಚಾಲನೆಯೇ ಕಾರಣ ಎಂಬ ಕಾರಣಕ್ಕಾಗಿ ಹೆದ್ದಾರಿಯಗಳಲ್ಲಿ  ಇಂಟರ್ಸೆಪ್ಟರ್ ಮೂಲಕ  ವೇಗ ನಿಯಂತ್ರಣಕ್ಕಾಗಿ  ಹೆದ್ದಾರಿ ಪೊಲೀಸ್ ವ್ಯವಸ್ಥೆ ಬಲಪಡಿಸಲಾಗುತ್ತದೆ ಎಂದು ಪಶ್ಚಿಮ ವಲಯ ಐಜಿ ಪ್ರತಾಪ್ ತಿಳಿಸಿದ್ದಾರೆ.
ಪೆನರ್ೆಯ ಟ್ಯಾಂಕರ್ ದುರಂತದ ಘಟನಾ ಸ್ಥಳಕ್ಕೆ ಬುಧವಾರ ಭೇಟಿ  ನೀಡಿದ ಪ್ರತಾಪ್ ರೆಡ್ಡಿ  ಪರಿಶೀಲನೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹೆದ್ದಾರಿಯಲ್ಲಿ  ಟ್ರಾಫಿಕ್ ನಿಯಂತ್ರಣಕ್ಕಾಗಿ  ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಆರ್ಟಿಒ , ಹೈವೇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ  ಹೆದ್ದಾರಿ  ಮೂಲಸೌಲಭ್ಯ ಸೇರಿದಂತೆ ವಾಹನ ಒತ್ತಡಗಳ ನಿವಾರಣೆಗೆ ಬೇಕಾದ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ಹಿರಿಯ ಪೆಟ್ರೋಲಿಯಂ ಅಧಿಕಾರಿಗಳ  ಜೊತೆಗೆ ಸಭೆ ನಡೆಸಿ  ಟ್ಯಾಂಕರ್ ಚಾಲಕರಿಗೆ ಮುಂಜಾಗ್ರತಾ ಮಾಹಿತಿಗಳನ್ನು  ನೀಡುವ ಬಗ್ಗೆಯೂ  ಮಾತುಕತೆ ನಡೆಸಲಾಗಿದೆ. ಅದರ ಜೊತೆಗೆ ಹಾಟ್ಸ್ಫಾಟ್ಗಳಲ್ಲಿ  ಮತ್ತೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು  ಪ್ರತಾಪ್ ರೆಡ್ಡಿ ಹೇಳಿದರು.ಹೆದ್ದಾರಿಗಳಲ್ಲಿ ಅಗ್ನಿಶಾಮಕ ದಳದ ಸಿಬಂದಿ  ನಿಯೋಜನೆ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು  ಎಂದು  ಇದೇ ವೇಳೆ ಹೇಳಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...