Thursday, 26 January 2023

ವಿವಿಧ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಒಳಗೊಂಡ ಎಲ್ಲಾ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಎಲ್ಲಾ ಅಂಶ ಸಂವಿಧಾನದಲ್ಲಿದೆ. ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿ ಬೆಳೆಯುತ್ತಿರುವ ಭಾರತವನ್ನು ಸದೃಢಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.

ಅವರು ಗುರುವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಭಾರತ ಜಗತ್ತಿಗೆ ನಾಯಕತ್ವ ನೀಡುವ ಕಾಲಘಟ್ಟದಲ್ಲಿದೆ. ದೇಶಕ್ಕಾಗಿ ಸಮಾಜಕ್ಕಾಗಿ ಹೇಗೆ ಬದುಕಬೇಕೆಂಬುದನ್ನು ಅರಿತುಕೊಳ್ಳಬೇಕಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ. ದೇಶದಲ್ಲಿ ಸಮಾನತೆ ಜಾರಿಗೆ ಬಂದರೆ ಪ್ರಜಾಪ್ರಭುತ್ವ ವೈಭವ ಪಡೆಯಲು ಸಾಧ್ಯ ಎಂದು ತಿಳಿಸಿದರು. 

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸದಸ್ಯ ಪಿ.ಜಿ.ಜಗನ್ನಿವಾ ರಾವ್, ಪೊಲೀಸ್ ಉಪಾಧೀಕ್ಷಕ ವೀರಯ್ಯ ಹಿರೇಮಠ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ, ಪೌರಾಯುಕ್ತ ಮಧು ಎಸ್.ಮನೋಹರ್, ತಹಸೀಲ್ದಾರ್ ನಿಸರ್ಗಪ್ರಿಯ ಜೆ., ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್, ಸಿಡಿಪಿಒ ಶ್ರೀಲತಾ ಮತ್ತಿತರರು ಉಪಸ್ಥಿತರಿದ್ದರು. 

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. 

ಸನ್ಮಾನ - ಲ್ಯಾಪ್ ಟಾಪ್ ವಿತರಣೆ:
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರೀಯ ಮಟ್ಟದ ಈಜುಪಟು ವೈಷ್ಣವ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ೨೦೨೧-೨೨ನೇ ಸಾಲಿನಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಐದು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಿಸಲಾಯಿತು. ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಶಾಲೆಗಳಿಗೆ ಏರ್ಪಡಿಸಿದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮ ವನ್ ಮೂಲಕ ಅತೀ ಹೆಚ್ಚು ಸರಕಾರಿ ಸೇವೆಯನ್ನು ಜನರಿಗೆ ತಲುಪಿಸಿದ ಮುಸ್ತಾಫ, ಅಶೋಕ, ಭವಿಷ್ಯಾ ಅವರನ್ನು ಗೌರವಿಸಲಾಯಿತು.






&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 30ನೇ ವರ್ಷದ ಕೋಟ ಚೆನ್ನಯ ಜೋಡುಕರೆ ಕಂಬಳ ಜ.28ರಂದು ಬೆಳಗ್ಗೆ 10.35ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ ಉದ್ಘಾಟಿಸಲಿದ್ದು, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಂಬಳ ಸಮಿತಿ ಮಾರ್ಗದರ್ಶಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.


ಸಾಯಂಕಾಲ 6ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ಪ್ರಕಾಶ್ ಶೆಟ್ಟಿ ವಹಿಸಲಿದ್ದು, 30ನೇ ವರ್ಷದ ಸ್ಮರಣ ಸಂಚಿಕೆ ಬಿಡುಗಡೆಯನ್ನು ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾಡಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎನ್. ಸುಧಾಕರ ಶೆಟ್ಟಿ ಪುತ್ತೂರು (ಧಾರ್ಮಿಕ ಕ್ಷೇತ್ರ), ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ (ಕಂಬಳ ಕ್ಷೇತ್ರ), ಆಕಾಶ್‌ ಐತಾಳ್‌ (ಕ್ರೀಡಾ ಕ್ಷೇತ್ರ), ಸತೀಶ್ ದೇವಾಡಿಗ ಅಳದಂಗಡಿ (ಹಿರಿಯ ಕಂಬಳ ಓಟಗಾರರು), ಶ್ರೀಧರ್ ಮಾರೋಡಿ (ಕಂಬಳ ಓಟಗಾರ ಕ್ರೀಡಾರತ್ನ ಪುರಸ್ಕೃತರು) ಅವರಿಗೆ ಸನ್ಮಾನ ನಡೆಯಲಿದೆ ಎಂದು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.


ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ ಸುಮಾರು 200ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇಟ್ಟಿದ್ದು, ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ಮಿಂಚಿನ ಓಟದ ಕೋಣ ಚೆನ್ನ ನಿಗೆ ಸನ್ಮಾನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ನಟ ನಟಿಯರಾದ ಅದಿತಿ ಪ್ರಭುದೇವ, ಸಂಗೀತ ಶೃಂಗೇರಿ, ಸಾನಿಯ ಅಯ್ಯರ್, ದೀಪಕ್ ರೈ ಪಾಣಾಜೆ, ಸಂಗೀತ ನಿರ್ದೇಶಕ ಗುರುಕಿರಣ್, ಬಿಗ್‌ಬಾಸ್-9 ವಿಜೇತ ರೂಪೇಶ್ ಶೆಟ್ಟಿ, ನಿರ್ಮಾಪಕ ರವಿ ರೈ ಕಳಸ, ವಿಕ್ರಾಂತ್ ರೋಣ ಖ್ಯಾತಿಯ ವಜ್ರಧೀರ್ ಜೈನ್, ಡೈಜಿ ವರ್ಲ್ಡ ನ ವಾಲ್ಟರ್‌ ನಂದಳಿಕೆ ಮತ್ತಿತರರು ಭಾಗವಹಿಸದಿದ್ದಾರೆ ಎಂದರು.


ಜ.29ರಂದು ಬಹುಮಾನ ವಿತರಣೆ ನಡೆಯಲಿದ್ದು, ಅಧ್ಯಕ್ಷತೆಯನ್ನು ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್ ವಹಿಸಲಿದ್ದು, ಸಂಸದ ನಳಿನ್ ಕುಮಾರ್, ಶಾಸಕ ಮಠಂದೂರು ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಹಿರಿಯ ವಿಭಾಗದಲ್ಲಿ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ನ (16ಗ್ರಾಂ) ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್ ಹಾಗೂ ದ್ವಿತೀಯ 1/2 ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪ್ರೋತ್ಸಾಹಕ ಬಹುಮಾನವಿದೆ. ವಿಜೇತ ಕೋಣಗಳ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿಚೆನ್ನಯ ಟ್ರೋಫಿಯನ್ನು ನೀಡಲಿದ್ದೇವೆಂದು ತಿಳಿಸಿದರು.



ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.

 ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^


ಪುತ್ತೂರು: ಸಾಂಸ್ಕೃತಿಕವಾಗಿ ಒಂದು ಎಂಬ ಚಿಂತನೆಯಲ್ಲಿ ದೇಶ ನಿಂತಿದೆ. ವಿದೇಶಿಗರ ನಿರಂತರ ಆಕ್ರಮಣವನ್ನು ವಿರೋಧಿಸಿ ತನ್ನತನವನ್ನು ಭಾರತ ಉಳಿಸಿಕೊಂಡಿದೆ. ಗಡಿನಾಡಿ ಉತ್ಸವದ ಮೂಲಕ ಭಾಷೆ - ಪದ್ಧತಿ ಒಂದೇ ಎಂಬುದನ್ನು ತೋರಿಸುವ ಪ್ರಯತ್ನ ನಡೆಯುತ್ತಿದೆ. ಭಾರತದ ಸಂಸ್ಕೃತಿ ವಿಭಿನ್ನವಾಗಿದ್ದು, ದೇವರನ್ನು ಬಿಟ್ಟು ದೇಶ ಇಲ್ಲ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ  ಗಡಿನಾಡ ಸಂಸ್ಕೃತಿ ಉತ್ಸವ-ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಗಡಿನಾಡಿನಲ್ಲಿ ಸರ್ಕಾರಗಳ ಪ್ರಭಾವದಿಂದ ಅನ್ಯಯ ಭಾಷೆಗಳನ್ನು ನಾಶ ಮಾಡಲಾಗುತ್ತಿದೆ. ಕಾಸರಗೋಡು ಭಾಗದ ಕನ್ನಡ ಶಾಲೆಗಳ ಪುನಶ್ಚೇತನ ಕಾರ್ಯ ಕರ್ನಾಟಕದಿಂದ ನಡೆಯಬೇಕಾಗಿದೆ. ವ್ಯಕ್ತಿಗೆ ಬದುಕಿನಲ್ಲಿ ಕಲಿಕೆ ಎಂಬುದು ನಿರಂತರವಾಗಿರಬೇಕು. ಜೀವನ ಪೂರ್ತಿ ಸಾಧನಕನಾಗಿ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯವಾಗಬೇಕು. ಗಡಿನಾಡಿನಲ್ಲಿದ್ದುಕೊಂಡು ಕನ್ನಡ ನಾಡಿನ ಸಂಸ್ಕೃತಿಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.


ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್, ಪೂಡಾ ಅಧ್ಯಕ್ಷ ಬಾಮಿ ಅಶೋಕ ಶೆಣೈ ಉಪಸ್ಥಿತರಿದ್ದರು. ಸಿಂಚನಾ ಭಟ್ ಪ್ರಾರ್ಥಿಸಿದರು. ಉಪನ್ಯಾಸಕಿ ಮೈತ್ರಿ ಭಟ್ ಸ್ವಾಗತಿಸಿದರು. ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್ ಪ್ರಸ್ತಾವನೆಗೈದರು. ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ವಂದಿಸಿದರು. ಸ್ನಾತಕೋತ್ತರ ವಿಭಾಗ ಡೀನ್ ಡಾ. ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.


ಐವರು ಸಾಧಕರಿಗೆ ಗೌರವ:

ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ಪುತ್ತೂರಿನ ಚರ್ಮವಾದ್ಯ ತಯಾರಕ ರಾಜರತ್ನಂ ದೇವಾಡಿಗ, ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ರಾಮಕೃಷ್ಣ ಮಯ್ಯ, ಹಿರಿಯ ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ಎಡನೀರು ಉಡುಪುಮೂಲೆ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ ಸೇರಿ ಐವರು ಸಾಧಕರನ್ನು ಸನ್ಮಾನಿಸಲಾಯಿತು.







**********************************************************************************************************************************************************************

30ರಂದು ತಾಲೂಕು ಮಟ್ಟದ ಸಮನ್ವಯ ಸಮಿತಿಗಳ ಸಭೆ


ಪುತ್ತೂರು:  ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ನೇತೃತ್ವದಲ್ಲಿ ಪುತ್ತೂರು ತಾಲೂಕು ಮಟ್ಟದ ವಿವಿಧ ಸಮನ್ವಯ ಸಮಿತಿಗಳ ಸಭೆ ಜನವರಿ 30ರಂದು ಸೋಮವಾರ ಅಪರಾಹ್ನ 2.30 ಗಂಟೆಗೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ.

ವರದಕ್ಷಿಣೆ ನಿಷೇಧ ಕಾಯಿದೆ ಸಮಿತಿ, ಮಾದಕ ವಸ್ತು ಸೇವನೆ ನಿಷೇಧ ತಾಲೂಕು ಮಟ್ಟದ ಸಮಿತಿ, ಸ್ತ್ರೀಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ, ಸಾಗಾಣಿಕೆ ವಿರುದ್ಧ ಪ್ರಚಾರ ಆಂದೋಲನ ಸಮಿತಿ, ಬಾಲ್ಯ ವಿವಾಹ ನಿಷೇಧ ಸಮಿತಿ, ಭಾಗ್ಯಲಕ್ಷ್ಮೀ ಯೋಜನೆಯ ಕಾರ್ಯಪಡೆ ಸಮಿತಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಸಮಿತಿ, ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ, ವಿಕಲಚೇತನರ ತಾಲೂಕು ಮಟ್ಟದ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಮಾತೃವಂದನಾ ಸಮಿತಿ, ಭೇಟಿ ಬಚಾವೋ- ಭೇಟಿ ಪಡಾವೊ ಸಮಿತಿ ಇವುಗಳ ಸಭೆ ನಡೆಯಲಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Tuesday, 24 January 2023




ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ "ವಿಜಯ ಸಂಕಲ್ಪ ಅಭಿಯಾನ" ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಹಿರೆಬಂಡಾಡಿ ಗ್ರಾಮದ ಬೂತ್ 48ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ "ವಿಜಯ ಸಂಕಲ್ಪ ಅಭಿಯಾನ" ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಹಿರೆಬಂಡಾಡಿ ಗ್ರಾಮದ ಬೂತ್ 48ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರಕವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲಾಧ್ಯಕ್ಷರಾದ ಶ್ರೀ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಉಪಾಧ್ಯಕ್ಷರಾದ ಶ್ರೀ ಮುಕುಂದ ಬಜತ್ತೂರು, ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


*#VijayaSankalpaAbhiyana |* *#ವಿಜಯಸಂಕಲ್ಪಅಭಿಯಾನ |* *#ಬಿಜೆಪಿಯೇಭರವಸೆ*


Monday, 23 January 2023


************************************************************


ಈ ಮಹಿಳಾ ನಿರ್ವಾಹಕಿ ಕೇರಳದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹೆಗಲಿಗೆ ಒಂದು ನೋಟಿಸ್ ನೇತು ಹಾಕಲಾಗಿದೆ.
 ಅದರಲ್ಲಿ ಏನು ಬರೆದಿದೆ ಎಂದರೆ
 " ಸಂಬಳವಿಲ್ಲದೆ ಕೆಲಸ ಮಾಡುತ್ತಿರುವ
44ನೇ ದಿನ  "ಎಂದು. ಉಚಿತ ಸೌಲಭ್ಯಗಳು ಹಾಗೂ ಉಚಿತ ಭಾಗ್ಯಗಳನ್ನು ಕೊಡುವ ಸರ್ಕಾರಗಳ ಆರ್ಥಿಕ ದಿವಾಳಿತನ.
 ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಆಗದಿರಲಿ ಎಂತಾದರೆ ಉಚಿತ ಭಾಗ್ಯಗಳು ಹಾಗೂ ಸೌಲಭ್ಯಗಳನ್ನು ಕೊಡುವ ಯಾವುದೇ ಪಕ್ಷವನ್ನು ಬೆಂಬಲಿಸದಿರಿ.

 ಉಚಿತ ಸೌಲಭ್ಯಗಳು ದೊರಕಬೇಕಾಗಿರುವುದು
 ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಮಾತ್ರ.

*************************************************************

ಪುತ್ತೂರು:  ಕೆಎಸ್‌ಆರ್‌ಟಿಸಿ ನೌಕರರು ತಮ್ಮ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 24ರಂದು ಬೆಳಗ್ಗೆ ೧೦.೩೦ರಿಂದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ 


*******************************************************************************************************

ಪುತ್ತೂರು: ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಜ.23ರಂದು ಬೆಳ್ಳಂಬೆಳಗೆ ನಡೆದಿದೆ.

ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ವೇಗದಿಂದ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಸ್ಕೂಟರ್‌ಗಳಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. 

ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರೊಬ್ಬರು ತೀವ್ರ ಗಾಯಗೊಂಡಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಉಳಿದಂತೆ ಇನ್ನೊಂದು ಸ್ಕೂಟರ್‌ನ ಸವಾರ ಶಾಂತಿಗೋಡು ದೇವಸ್ಥಾನದ ಗುಮಸ್ತ ವಿಜಿತ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

ವೇಗವಾಗಿ ಬಂದು ಅಪಘಾತಕ್ಕೆ ಕಾರಣವಾದ ಸ್ಕೂಟರ್ ಸವಾರ ಉಮ್ಮರ್ ಎಂದು ಸ್ಥಳೀಯರು ತಿಳಿಸಿದ್ದಾರೆ.






**************************************************************************************************

ಎಸ್.ಕೆ.ಎಸ್‌.ಎಸ್.ಎಫ್. ವಿದ್ಯಾರ್ಥಿ ಯುವಜನ ಸಂಘಟನೆಯು ಜನವರಿ 26 ಪ್ರಜಾಪ್ರಭುತ್ವ ದಿನದ ಪ್ರಯುಕ್ತ ರಾಷ್ಟ್ರ ರಕ್ಷಣೆಗೆ ಸೌರ್ಹಾವತೆಯ ಸಂಕಲ್ಪ' ಎಂಬ ದ್ವೇಯ ವಾಕ್ಯದೊಂದಿಗೆ ದೇಶದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರತೀ ವರ್ಷ ಹಮ್ಮಿ ಕ್ಕೊಳ್ಳುವ ಮಾನವ ಸರಪಳಿ ಕಾರ್ಯಕ್ರಮವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕೇಂದ್ರಗಳಲ್ಲಿ ನಡೆಯಲಿದೆ. ಎಸ್.ಕೆ.ಎಸ್.ಎಸ್‌.ಎಫ್, ಈಸ್ ಜಿಲ್ಲಾ ಸಮಿತಿ ವತಿಯಿಂದ ಮಧ್ಯಾಹ್ನ 200ರಿಂದ ಉಪ್ಪಿನಂಗಡಿಯಲ್ಲಿ ನಡೆಯಲಿದೆ.


ಪ್ರಮುಖ ಕಾರ್ಯಕ್ರಮಗಳು ಸೌಹಾರ್ದ, ಜಾಥಾ, ಮಧ್ಯಾಹ್ನ 2:00 ಗಂಟೆಗೆ ಸೌಹಾರ್ದತೆಯ ಸಂದೇಶ ಸಾರುವ ಜಾಥಾ ಕೂಟೇಲು ದರ್ಗಾ ಝಿಯಾರತಿನೊಂದಿಗೆ ಆರಂಭಗೊಳ್ಳಲಿದ್ದು ವಿವಿಧ ದಫ್ , ತಂಡಗಳು ಭಾಗವಹಿಸಲಿದೆ.


ಎಸ್.ಕೆ.ಎಸ್‌.ಎಸ್‌.ಎಫ್., ಇವರ ಉಪ ವಿಭಾಗಗಳಾದ ವಿಖಾಯ , ತೈಲಬಾ, ಕ್ಯಾಂಪಸ್‌ ತಂಡಗಳು ಸಮವಸ್ತ್ರದೊಂದಿಗೆ ಪಾಲ್ಗೊಳ್ಳಲಿದೆ. ಮೆರವಣಿಗೆಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಘೋಷ ವಾಕ್ಯಾಗಳು ಮೊಳಗಲಿದೆ. ತದನಂತರ 4 ಗಂಟೆಗೆ  ಸಭಾ ಕಾರ್ಯಕ್ರಮವು ನಡೆಯಲಿದೆ. ನೆರೆದ ಜನರೆಲ್ಲರೂ ಪರಸ್ಪರ ಕೈಜೋಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ . ಸಮಸ್ತ ಕೇಂದ್ರ  ಮುಷವಾರ ಸದಸ್ಯರಾದ ಬಹು ಬಂಬ್ರಾನ ಉಸ್ತಾದರು. ಉದ್ಘಾಟಿಸಲಿದ್ದು, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಬಹು| ಉಸ್ಮಾನುಲ್ ಫೈಝಿ ಉಸ್ತಾದರು ಅನುಗ್ರಹ ಭಾಷ ಮಾಡಲಿದ್ದಾರೆ. ಎಸ್‌ಎಸ್‌ಎಸ್‌ಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಆನೀಸ್ ಕೌಸರಿ ವಿಷಯ ಮಂಡಿಸಿ ಮುಖ್ಯ ಭಾಷಣ ಮಾಡಲಿದ್ದಾರೆ.


ಸಮಸ್ಯೆ ಮತ್ತು ಸತ್ವಾ ಉಪ ಸಮಿತಿಗಳ ನೇತಾರರು, ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು

ಬಾಗವಹಿಸಲಿರುವರು, ಸೌಹಾರ್ದ ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಮತ ಬೇಧವಿಲ್ಲದೆ ಸರ್ವರೂ ಈ ಸಂಗಮದಲ್ಲಿ ಭಾಗವಹಿಸಿಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ದಕ ಈಸ್ಟ್ ಜಿಲ್ಲೆ ಅಧ್ಯಕ್ಷರಾದ ತಾಜುದ್ದೀನ್ ರಾಹ್ಮನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು , ಪುತ್ತೂರು ಇದರ 2021 | 2022 ರ ಸಾಲಿನ ಮಹಾಸಭೆಯು ಶ್ರೀ ಆಂಜನೇಯ  ಮಂತ್ರಾಲಯದಲ್ಲಿ ನಡೆಯಿತು. 
ಅಧ್ಯಕ್ಷ ಭಾಸ್ಕರ್ ಬಾರ್ಯರ ನೇತೃತ್ವದಲ್ಲಿ ನಡೆದ ಕಾರ್ಯಕಲಾಪದಲ್ಲಿ  ಶ್ರೀಮತಿ ಹರಿಣಾಕ್ಷೀ ಜೆ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.ಕಾರ್ಯದರ್ಶಿ ಗುಡ್ಡಪ್ಪ ಬಲ್ಯ ವಾರ್ಷಿಕ ಆಯ ವ್ಯಯ ವನ್ನು ಸಭೆಯ ಮುಂದಿಟ್ಟರು. ಮುಂದಿನ 5 ವರ್ಷ ಕ್ಕೆ ಜ೦ಟಿ‌ ಸಂಘಗಳ ಪದಾಧಿಕಾರಿಗಳ ಆಯ್ಕೆ ನಡೆಯಿತು .ಗೌರವಾಧ್ಯಕ್ಷರಾಗಿ ಬೊಳುವಾರು ರಮಾನಂದ ನಾಯಕ್ ಅಧ್ಯಕ್ಷ ಭಾಸ್ಕರ್ ಬಾರ್ಯ ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ , ಕಾರ್ಯದರ್ಶಿ  ಆನಂದ ಸವಣೂರು , ಜತೆಕಾರ್ಯದರ್ಶಿ  ಅಚ್ಯುತ ಪಾಂಗಣ್ಣಾಯ ಕೋಡಿಬೈಲು , ಉಪಾಧ್ಯಕ್ಷರುಗಳಾಗಿ  ಪ್ರವೀಣ್ ಕುಮಾರ್ ಬೊಳುವಾರು , ಗುಂಡ್ಯಡ್ಕ ಈಶ್ವರ ಭಟ್ , ಗುಡ್ಡಪ್ಪ ಬಲ್ಯ , ಕೋಶಾಧಿಕಾರಿ ಯಾಗಿ ದುಗ್ಗಪ್ಪ ಯನ್,ಲೆಕ್ಕಪರಿಶೋಧಕರಾಗಿ
ಅಧ್ಯಕ್ಷ ಭಾಸ್ಕರ್ ಬಾರ್ಯ                                                             ರಾಮಚಂದ್ರ ಭಟ್ ದೇವರಗುಂಡಿ 

ಆಯ್ಕೆಗೊಂಡರು.ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ಬಾಬು , ಚಂದ್ರಶೇಖರ್ ಭಟ್ ಭಟ್ ಬಡೆಕ್ಕಿಲ ಆಯ್ಕೆಗೊಂಡರು. ಸದಸ್ಯರುಗಳಾಗಿ ಕು೦ಬ್ಳೆ ಶ್ರೀಧರ್ ರಾವ್ , ಪಕಳ ಕುಂಜ ಶ್ಯಾಮ್ ಭಟ್ ,ಚಂದ್ರಶೇಖರ್ ಹೆಗ್ಡೆ , ವಸಂತ ಆಚಾರ್ಯ, ಶ್ರೀಪತಿ ಭಟ್ ಉಪ್ಪಿನಂಗಡಿ , ಸತೀಶ್ ಇರ್ದೆ ,ಯಲ್ ಯನ್ ಭಟ್ ಬಟ್ಯಮೂಲೆ ,ಮುರಳೀಧರ ಕಲ್ಲೂರಾಯ, ನಿತೀಶ್ ಎಂಕಣ್ಣಮೂಲೆ , ದಂಬೆ ಈಶ್ವರ ಶಾಸ್ತ್ರೀ , ನಾ.ಕಾರಂತ ಪೆರಾಜೆ , ಸುಬ್ಬಪ್ಪ ಕೈಕಂಬ ,ಗುರುಮೂರ್ತಿ ಅಮ್ಮಣ್ಣಾಯ ಆಯ್ಕೆ ಗೊಂಡರು. ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಪ್ರೇಮಲತಾ ಟಿ ರಾವ್ ,ಕಾರ್ಯದರ್ಶಿ ಹರಿಣಾಕ್ಷೀ ಜೆ ಶೆಟ್ಟಿ , ಉಪಾಧ್ಯಕ್ಷರುಗಳಾಗಿ ಶುಭಾ ಜೆ ಸಿ ಅಡಿಗ , ಕಿಶೋರಿ ದುಗ್ಗಪ್ಪ ನಡುಗಲ್ಲು ಆಯ್ಕೆ ಮಾಡಲಾಯಿತು, ಸದಸ್ಯರುಗಳಾಗಿ  ಶುಭಾಗಣೇಶ್ , ಜಯಂತಿ  ಹೆಬ್ಬಾರ್ ,ಶಾರದಾ ಅರಸ್ , ಮನೋರಮಾ .ಜಿ. ಭಟ್ , ಭಾರತಿ ಜಯರಾಮ್ , ಲಕ್ಷ್ಮಿ ವಿ.ಜಿ ಭಟ್ , ಹರಿಣೀ ಪುತ್ತೂರಾಯ , ಮಧುರಾ ಜಿ ಭಟ್ ಆಯ್ಕೆಗೊಂಡರು. ರಮೇಶ್‌ ಬಾಬು , ಕು೦ಬ್ಳೆ ಶ್ರೀಧರ ರಾವ್  ಹರಿಣಾಕ್ಷಿ ಜೆ ಶೆಟ್ಟಿ ಅನಿಸಿಕೆ ವ್ಯಕ್ತ ಪಡಿಸಿದರು  ಪ್ರೇಮಲತಾ ಟಿ.ರಾವ್ ಪ್ರಾರ್ಥಿಸಿದ ಸಭೆಗೆ  ಕಾರ್ಯದರ್ಶಿ  ಆನಂದ ಸವಣೂರು ವಂದಿಸಿದರು.ಟಿ
ರಂಗನಾಥ ರಾವ್ ಸಹಕರಿಸಿದರು ಬಳಿಕ ಸಂಘದ ಪಾಕ್ಷಿಕ ಕೂಟ " "ಧರ್ಮಾಂಗದ ದಿಗ್ವಿಜಯ " ತಾಳಮದ್ದಳೆ ನಡೆಯಿತು.


ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಪ್ರೇಮಲತಾ ಟಿ ರಾವ್

ಕಾರ್ಯದರ್ಶಿ ಹರಿಣಾಕ್ಷೀ ಜೆ ಶೆಟ್ಟಿ 


****************************************************************************************************
ಪುತ್ತೂರು:  ವಿವೇಕಾನಂದ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಎಂ.ಆರ್.ಪಿ.ಎಲ್ ಪ್ರಾಯೋಜಿತ ತ್ಯಾಜ್ಯ ನೀರು ಸಂಸ್ಕರಣಾ ಸ್ಥಾವರದ ಎರಡನೇ ಘಟಕದ ಲೋಕಾರ್ಪಣಾ ಸಮಾರಂಭವು 

ಜ. 24ರಂದು ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾ ಭವನದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ ಜೈನ್, ಎಂ.ಆರ್. ಪಿ.ಎಲ್.ನ ಗ್ರೂಪ್ ಜನರಲ್ ಮ್ಯಾನೇಜರ್(ಮಾನವ ಸಂಪನ್ಮೂಲ) ಕೃಷ್ಣ ಹೆಗ್ಡೆ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಇವರುಗಳ ಉಪಸ್ಥಿತಿಯಲ್ಲಿ ಶಾಸಕ ಸಂಜೀವ ಮಠಂದೂರು ಇವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪಾಲಿಟೆಕ್ನಿಕ್‌ನ ಪ್ರಕಟಣೆ ತಿಳಿಸಿದೆ.


*********************************************************************************************

29ರಂದು ‘ಅಡಿಕೆ ಚೊಗರು’
 ಪುಸ್ತಕ ಬಿಡುಗಡೆ

ಪುತ್ತೂರು: ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆ ಅವರ ನೂತನ ಕೃತಿ ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಜ. 29ರಂದು ಪೂರ್ವಾಹ್ನ 11ಕ್ಕೆ ಪರ್ಪುಂಜದ ‘ಸೌಗಂಧಿಕ’ದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೃಷಿ ಲೇಖಕ ಡಾ.ನರೇಂದ್ರ ರೈ ದೇರ್ಲ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ, ಲೇಖಕ ಶ್ರೀ ಪಡ್ರೆ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಅಡಿಕೆ ಚೊಗರಿನ ತಯಾರಿ ಕ್ರಮ, ವೈಶಿಷ್ಟ್ಯ, ವಿವಿಧ ಉಪಯೋಗ ಮತ್ತಿತರ ಸಂಗತಿಗಳ ಬಗ್ಗೆ ಬೆಳಕುಚೆಲ್ಲುವ ಭಿತ್ತಿಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಚಂದ್ರ ಸೌಗಂಧಿಕ ಮತ್ತು ಮಾಧವ ಕಲ್ಲಾರೆ ಪರಿಸರ ಗೀತೆಗಳನ್ನು ಸಾದರಪಡಿಸಲಿದ್ದಾರೆ.

ಮಲೆನಾಡಿನ ಕೆಲ ಭಾಗಗಳಲ್ಲಿ ಕೆಂಪಡಿಕೆ ಸಂಸ್ಕರಣೆ ವೇಳೆ ಸಿಗುವ, ಗಾಢ ಕಂದು ಬಣ್ಣದ ಉಪಉತ್ಪನ್ನವಾದ ಚೊಗರು ಒಂದು ಬಹೂಪಯೋಗಿ ಪದಾರ್ಥ. ಬೇಯಿಸಿ ಒಣಗಿಸಿದ ಅಡಿಕೆಗೆ ಬಣ್ಣ ಲೇಪನಕ್ಕೆ ಚೊಗರು ಪ್ರಧಾನವಾಗಿ ಬಳಕೆಯಾಗುತ್ತದೆ. ಇದು ಪರಿಸರಸ್ನೇಹಿ, ನೈಸರ್ಗಿಕ ಬಟ್ಟೆ ಬಣ್ಣ. ಗೆದ್ದಲುನಾಶಕವೂ ಹೌದು. ಕರ್ನಾಟಕದಲ್ಲಿ ವಾರ್ಷಿಕ ಸುಮಾರು 2 ಲಕ್ಷ ಲೀಟರಿನಷ್ಟು ಚೊಗರು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅಗತ್ಯಬಿದ್ದರೆ ಇದನ್ನು ಮೂರು ಪಟ್ಟು ಹೆಚ್ಚಿಸಬಹುದಾಗಿದೆ. ಚೊಗರಿನ ವಾಣಿಜ್ಯಿಕ ಸಾಧ್ಯತೆಗಳ ಬಗ್ಗೆ ಕೂಡ ಈ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

***********************************************************************************************
ಪುತ್ತೂರಿನಲ್ಲಿ
 ಮಹಿಳಾ ವಿಚಾರಗೋಷ್ಠಿ

ಪುತ್ತೂರು:  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಪುತ್ತೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಪುತ್ತೂರು ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಜ. 24ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಆಯುರ್ವೇದ ತಜ್ಞರಾದ ಡಾ.ಸುಧಾ ಶ್ರೀಪತಿ ರಾವ್ ಉದ್ಘಾಟಿಸಲಿದ್ದಾರೆ. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು ಇದರ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಿನ್ಸಿಪಾಲ್ ಶೋಭಿತಾ ಸತೀಶ್, ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಮಹಿಳಾ ಪೊಲೀಸ್ ಠಾಣೆ ಎಸ್‌ಐ ಸೇಸಮ್ಮ ಕೆ.ಎಸ್., ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಉದಯ ಕುಮಾರ್ ಜಿ.ಕೆ., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಇದರ ಅಧ್ಯಕ್ಷರಾದ ಮಹಾಬಲ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


***************************************************************************************************
ಕೆಎಸ್‌ಆರ್‌ಟಿಸಿ 
ನೌಕರರ ಸತ್ಯಾಗ್ರಹ

ಪುತ್ತೂರು:  ಕೆಎಸ್‌ಆರ್‌ಟಿಸಿ ನೌಕರರು ತಮ್ಮ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 24ರಂದು ಬೆಳಗ್ಗೆ ೧೦.೩೦ರಿಂದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಎಐಟಿಯುಸಿ, ಸಿಐಟಿಯು, ಕೆಎಸ್‌ಆರ್‌ಟಿಸಿ ಎಸ್‌ಸಿ ಯೂನಿಯನ್ ಇವರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ವಜಾಗೊಂಡ ಕಾರ್ಮಿಕರನ್ನು ಯಾವುದೇ ಷರತ್ತಿಲ್ಲದೆ ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ವೇತನ ಪರಿಷ್ಕರಣೆ ಮಾಡಬೇಕು, ಸಾರಿಗೆ ನಿಗಮಗಳಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರ ನೇಮಕಾತಿ ನಿಲ್ಲಿಸಬೇಕು. ೨೦೨೦ರ ಸೆ.೨ರಂದು ಸಲ್ಲಿಸಿದ್ದ ಇತರ ಬೇಡಿಕೆಗಳನ್ನು ಈಡೇರಿಸಬೇಕು. ನಿವೃತ್ತ ಕಾರ್ಮಿಕರಿಗೆ ಪಿಂಚಣಿ ಮತ್ತು ಉಪಧನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ನಾಯಕರ ಸಲಹೆ ಮತ್ತು ಸೂಚನೆಯಂತೆ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸ್ಟಾಫ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***************************************************************************************************



ಪುತ್ತೂರು : ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕೆಎಸ್‌ ಭಗವಾನ್‌ನನ್ನು ಬಂಧಿಸಿ,
ಹಿ೦ದೂ ರಾಷ್ಟ್ರ-ಜಾಗೃತಿ ಆಂದೋಲನದಲ್ಲಿ ಎಲ್ಲಾ ಹಿ೦ದೂಪರ ಸಂಘಟನೆಗಳು ಮಾಡಿದ ಬೇಡಿಕೆ.

ಪ್ರತಿಭಟನೆಯಲ್ಲಿ ಮಾತನಾಡಿದ  ಆನಂದ ಗೌಡ   ಮೈಸೂರಿನ ವಿವಾದಿತ ಪ್ರಾಧ್ಯಾಪಕ ಕೆ ಎಸ್ ಭಗವಾನ್‌ನು ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಾನೆ. ಕೆ ಎಸ್ ಭಗವಾನ್ ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಭು ಶ್ರೀರಾಮನು ಮದ್ಯಾಹ್ನ ತನ್ನ ಪತ್ನಿ ಸೀತೆಯ ಜೊತೆಗೆ ಸೇರಿ ಮದ್ಯಪಾನವನ್ನು ಮಾಡುತ್ತಿದ್ದನು. ಶ್ರೀರಾಮ ಆದರ್ಶ ಅಲ್ಲವೇ ಅಲ್ಲ. ಶ್ರೀರಾಮ ೧೧,೦೦೦ ಅಲ್ಲ, ಕೇವಲ ೧೧ ವರ್ಷ ಆಡಳಿತವನ್ನು ಮಾಡಿದ್ದನು. ಹೀಗೆ ಅತ್ಯಂತ ಕೆಟ್ಟದಾಗಿ ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾನೆ. ಈ ಹಿಂದೆ ಇದೇ ರೀತಿಯಲ್ಲಿ ಪ್ರಭು ಶ್ರೀರಾಮಚಂದ್ರನ ಬಗ್ಗೆ ಅಪಮಾನ ಮಾಡಿದ್ದಾಗ ಅವನ ಮೇಲೆ ಪ್ರಕರಣ ದಾಖಲಾಗಿತ್ತು. ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪುನಃ ಅಕ್ಷಮ್ಯ ಅಪರಾಧವನ್ನು ಎಸಗಿದ್ದು, ಕೂಡಲೇ ಕೆ ಎಸ್ ಭಗವಾನ್‌ನ ಬಂಧನ ಮಾಡಬೇಕು ಮತ್ತು ಅತ್ಯಂತ ಕಠೋರ ಕಾರ್ಯಚರಣೆ ಮಾಡಬೇಕು ಎಂದು 'ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ'ದಲ್ಲಿ ಕೇಂದ್ರ ಸರ್ಕಾರಕ್ಕೆ ಈ ಬೇಡಿಕೆಯನ್ನು ಸಲ್ಲಿಸಲಾಯಿತು.

Sunday, 22 January 2023




ಭಾರತೀಯ ಜನತ ಪಕ್ಷ ಅದು ಕಾರ್ಯಕರ್ತರ ಪಕ್ಷ ಇಲ್ಲಿ ನಾಯಕರಿಗಿಂತ ಕಾರ್ಯಕರ್ತರಿಗೆ ಪ್ರಾಮುಖ್ಯತೆ. ಕಳೆದ ಬಾರಿ ಏನಾಗಿದೆಯೋ ನಮಗೆ ಗೊತ್ತಿಲ್ಲ ಆದರೆ ಈ ಬಾರಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷ ಪುತ್ತೂರಿನಲ್ಲಿ ಸ್ಪರ್ಧಿಸಲು ಅವಕಾಶ ಮಾಡಿ ಕೊಡಬೇಕು. ಯಾಕೆಂದರೆ ಪುತ್ತೂರಿನ ಕಾರ್ಯಕರ್ತರ ಬೇಡಿಕೆ, ಆಸೆ ಅದು PUTTILAFORPUTTUR.  ಪುತ್ತೂರಿನ ಕಾರ್ಯಕರ್ತರ ಮನ ಶ್ರದ್ದೆ ಅದು ಅರುಣ್ ಕುಮಾರ್ ಅವರಿಗಾಗಿ ಎಂಬುದಕ್ಕೆ ಸಾಕ್ಷಿ ನಮ್ಮ ಕಾರ್ಯಕರ್ತ ಮಿತ್ರರು ಪ್ರವೀಶ್ ಈಶ್ವರಮಂಗಳ ಮತ್ತು ಅಶೋಕ್ ಬಲ್ಪ ಸುಬ್ರಮಣ್ಯ.  ಈ ಬಾರಿ ಪುತ್ತಿಲರನ್ನು ಪುತ್ತೂರಿನ ಭಾಜಪ ಅಭ್ಯರ್ಥಿಯಾಗಿ ಆಯ್ಕೆ ಮಾಡುವಲ್ಲಿ ಯಾವುದೇ ಅಡೆ ತಡೆಗಳು ಬಾರದಂತೆ ಮತ್ತು ಕಾಣದ ಕೈಗಳು ಕೆಲಸ ಮಾಡದಂತೆ ನಿರ್ವಿಘ್ನದಿಂದ ಅಭ್ಯರ್ಥಿಯಾಗಿ ಆಯ್ಕೆಯಾದರೆ   ಶ್ರೀ ಕ್ಷೇತ್ರ ಶಬರಿಮಲೆಗೆ ಕಾಲ್ನಡಿಯಲ್ಲಿ ಪಾದಯಾತ್ರೆ ಮಾಡುತ್ತೆವೆ ಎಂದು ಅಯ್ಯಪ್ಪನಿಗೆ ಹರಕೆ ಸಲ್ಲಿಸಿದ್ದಾರೆ.   ಇದಲ್ಲವೇ ಅಭಿಮಾನ⁉️  #PuttilaForPuttur #PutturigePuttila #Hindutva




*********************************************************

"ಕಾಡು" ಬಯಲು ರಂಗಮಂಟಪದಲ್ಲಿ ಮತ್ತೊಂದು ನಾಟಕ
25 ಜನವರಿ 2023 ಬುಧವಾರ ಸಂಜೆ ಗಂಟೆ 7 ರಿಂದ.

ಕಿನ್ನರ ಮೇಳ ತುಮರಿ 2022-23
ಅರ್ಪಿಸುವ ನಾಟಕ
"ವೊಯ್ ಜೆಕ್"
ರಚನೆ: ಜಾರ್ಜ್ ಬುಷ್ನರ್ 
ಅನುವಾದ: ಕೆ.ವಿ.ಸುಬ್ಬಣ್ಣ
ಸಂಗೀತ: ಕೆ.ಎನ್.ಭಾರ್ಗವ
ವಿನ್ಯಾಸ ಮತ್ತು ನಿರ್ದೇಶನ :
ಇಕ್ಬಾಲ್ ಅಹಮದ್
ಅವಧಿ: ಒಂದು ಘಂಟೆ ಹದಿನೈದು ನಿಮಿಷ

ಬನ್ನಿ, ನಾಟಕ ನೋಡಿ, ಊಟ ಮಾಡಿ.
ಪ್ರೀತಿಯಿಂದ ಆಮಂತ್ರಿಸುವ,
"ಕಾಡು ಬಳಗ" ನೆಹರೂನಗರ, ಪುತ್ತೂರು.
                                       
*********************************************************************************

                            #ಮತ್ತೆಬಂದಿದೆನಮ್ಮೂರ_ಜಾತ್ರೆ



#ಪಣೆಮರಗಳಬೀಡುಪಾಣಾಜೆಯರಣಮಂಗಲನಿಗೀಗಸಂಭ್ರಮದಜಾತ್ರೆ.

#ರಣಕ್ಕೆಮಂಗಲಹಾಡಿದಪುಣ್ಯನೆಲ_ರಣಮಂಗಲ.

#ಅರಳಿವೃಕ್ಷಗಳಬೀಡುದೈವಗಳನಾಡು_ಅರಳಿಪದವು..

#ಈಹೆಸರಿನಹಿಂದಿರುವಐತಿಹ್ಯಗಳಸುತ್ತಒಂದುನೋಟ.


ಹೌದು ರಣಮಂಗಲನಿಗೀಗ  ಜಾತ್ರೆಯ ಸಂಭ್ರಮ. ನಾವೆಲ್ಲರೂ ಕಾತರದಿಂದ ಕಾಯುತ್ತಿರುವ ನಮ್ಮೂರಿನ ಹಬ್ಬ.

ಅಂದಹಾಗೆ ನಮ್ಮೂರಿರೋದು ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವುನಲ್ಲಿ. ಈ ಹೆಸರಿನ ಹಿಂದೆ ಒಂದು ಸುಂದರ ಐತಿಹ್ಯ ಕಥೆ ಇದೆ.

ಹಿಂದೆ #ಕೌಸ್ತುಭನೆಂಬ ಮಹಾ ತಪಸ್ವಿಯು ತನ್ನ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಾ,ಉಡುಪಿ, ಕದ್ರಿ, ಕಟೀಲು, ಮುಂತಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಈ ಸ್ಥಳಕ್ಕೆ ಬಂದಾಗ, ಇಲ್ಲಿ ಹುಲಿ- ದನ, ಹಾವು- ಮುಂಗುಸಿ ತಮ್ಮ ವೈರತ್ವವನ್ನು ಮರೆತು ಅನ್ಯೋನ್ಯವಾಗಿ ಇರುವುದನ್ನು ಕಾಣುತ್ತಾನೆ, ಮಾತ್ರವಲ್ಲದೆ ಈ ಪ್ರದೇಶದಲ್ಲಿ ಸಾಕಷ್ಟು #ಅರಳಿವೃಕ್ಷಗಳುಬೆಳೆದು_ನಿಂತಿದ್ದು ತನ್ನ ತಪಸ್ಸಿಗೆ ಇದೇ ಯೋಗ್ಯ ಸ್ಥಳವೆಂದು ನಿರ್ಧರಿಸಿ ಅರಳಿ ವೃಕ್ಷದ ಕೆಳಗೆ ಧ್ಯಾನ ಮಾಡುತ್ತಾನೆ.

ಮುಂದೆ ಆತ ದೀಕ್ಷೆ ಪಡೆದ, ಅರಳಿ ವೃಕ್ಷ ಗಳು ಹೇರಳವಾಗಿ ಬೆಳೆದು ನಿಂತ ಈ #ಪ್ರದೇಶವನ್ನುಅರಳಿಪದವುಎಂದುಕರೆದು, ಇದರ ಫಲವಾಗಿ ಕ್ರಮೇಣ ಜನರ ಆಡುನುಡಿಯಲ್ಲಿ #ಅರಳಿಪದವುಆರ್ಲಪದವಾಗಿ_ಪ್ರಚಲಿತವಾಯಿತು ಎನ್ನಲಾಗಿದೆ.


ಇಲ್ಲಿಂದ ದಕ್ಷಿಣದೆಡೆಗೆ ಸುಮಾರು ಒಂದೂವರೆ ಕಿಲೋಮೀಟರ್ ಸಾಗಿದರೆ ಕಾಣಸಿಗುವ ರಮಣೀಯ ತಾಣವೇ #ರಣಮಂಗಲಶ್ರೀಸುಬ್ರಮಣ್ಯ_ಕ್ಷೇತ್ರ. 

ಪಚ್ಚೆ ಪೈರಿನ ವನರಾಶಿಯ ನಡುವೆ ಕಂಗೊಳಿಸುವ ಈ ದೇವಸ್ಥಾನ ಬಲು ನಯನಮನೋಹರವಾಗಿದೆ.


#ಸರಿಸುಮಾರು_800ವರ್ಷಗಳಇತಿಹಾಸವಿರುವ ಈ ಕ್ಷೇತ್ರದ ಐತಿಹ್ಯ, ಅತ್ಯಂತ ಸ್ವಾರಸ್ಯಕರ. ಶತಮಾನಗಳ ಹಿಂದೆ ಹೆಸರಾಂತ ಅರಸು ಪೆರ್ಮಾಣ  ಬಲ್ಲಾಳ ಘಟ್ಟದಾಯಿಂದ  ದಿಗ್ವಿಜಯಕ್ಕಾಗಿ ಸಾಗಿ ಬಂದವನು ಇಲ್ಲಿ #ರಣಕ್ಕೆಮಂಗಳಹಾಡಿದುದರಿಂದಈಸ್ಥಳರಣಮಂಗಲವಾಯಿತಂತೆ. ಮುಂದೆ ಇದೇ ಸ್ಥಳದಲ್ಲಿ ಶ್ರೀ ಸುಬ್ರಮಣ್ಯನ ದೇವಾಲಯ ವನ್ನು ಸ್ಥಾಪಿಸಿದ ಎಂಬುದು ಪೂರ್ವ ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಹಿಂದೆ ಬಳ್ಳಾಲರ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರಾಂತ್ಯದ ದೇವಸ್ಥಾನ ಸಾಕಷ್ಟು ಸಂಪತ್ಬರಿತ ವಾಗಿತ್ತು.ಕ್ರಮೇಣ ಬಲ್ಲಾಳರ ಅವನತಿಯ ಕಾಲದಲ್ಲಿ ಊರಿನಲ್ಲಿ ಸಮರ್ಥರೆನಿಸಿಕೊಂಡಿದ್ದ #ವೇದಮೂರ್ತಿಗೋವಿಂದಬೋಳಿಲ್ಲಾಯರಿಗೆ_ಹಸ್ತಾಂತರಿಸಲಾಯಿತು.

ಅಂದಿನಿಂದ ಬೋಳಿಲ್ಲಾಯ ಮನೆತನದ ಸುಮಾರು ಎಂಟು ತಲೆಮಾರಿನ ಮೂಲಕ ಮುಂದುವರಿದು ಇಂದು ಪ್ರಸ್ತುತ #ಶ್ರೀಕೃಷ್ಣಬೋಳಿಲ್ಲಾಯರಆಡಳಿತದಲ್ಲಿಕಾರ್ಯನಿರ್ವಹಿಸುತ್ತಿದೆ.

ಇಲ್ಲಿ ನಾಗನಿಗೆ ಪ್ರಿಯವಾದ ಹತ್ತು ಹಲವು ಸೇವೆಗಳು ನಡೆಯುತ್ತಿದ್ದು ಅದರಲ್ಲೂ ವಿಶೇಷವಾಗಿ ಆಶ್ಲೇಷ ಪೂಜೆ, ಕಾರ್ತಿಕ ಪೂಜೆ ಬಹಳ ಪ್ರಾಮುಖ್ಯವಾದದ್ದು, ದೂರದ ಮೈಸೂರು ಹಾಗೂ ಬೆಂಗಳೂರು ಕಡೆಯಿಂದಲೂ ಭಕ್ತರು ಆಗಮಿಸುತ್ತಿದ್ದು ತಮ್ಮ ಸೇವೆಯನ್ನು ಸಮರ್ಪಿಸಿ ಸದಾ ಧನ್ಯತಾಭಾವದಿಂದ ತೆರಳುತ್ತಿದ್ದಾರೆ.


ಈ ದೇವಸ್ಥಾನದ ಅಧೀನದಲ್ಲಿರುವ ದೈವಸ್ಥಾನವೆಂದರೆ #ಶ್ರೀಪೂಮಾಣಿಕಿನ್ನಿಮಾಣಿ_ದೈವಸ್ಥಾನ.

ದೇವಸ್ಥಾನದಿಂದ ಬಯಲು ದಾರಿಯಾಗಿ ನಡೆದು ಬರುವುದಾದರೆ ಕೆಲವೇ ನಿಮಿಷಗಳು ಸಾಕು. ಆರ್ಲಪದವಿನ ಸುಂದರ ಪರಿಸರದಲ್ಲಿ ಕಾಣಸಿಗುವ ಈ ದೈವಸ್ಥಾನವು ತನ್ನದೇ ಆದ ಇತಿಹಾಸವನ್ನು ಹೊಂದಿದೆ.

ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ಮಹಾ ವಿಷ್ಣುವಿನ ಅಂಶ ಸಂಭೂತರು. #ಮಹಾವಿಷ್ಣುತಾವರೆಹೂವಿನಎಸಳಿನಲ್ಲಿದೈವಗಳನ್ನು_ಸೃಷ್ಟಿಸಿದನಂತೆ. ದೈವಗಳು ದಕ್ಷಿಣ ಗಂಗೆ ಎಂದೆನಿಸಿದ ತಲಕಾವೇರಿಯಲ್ಲಿ, ಅಲ್ಲಿನ ಅರ್ಚಕರಿಗೆ  ಚಿಕ್ಕ ಮಕ್ಕಳ ರೂಪದಲ್ಲಿ  ದೊರೆತರು. ಅರ್ಚಕರು ಮಕ್ಕಳನ್ನು ದೇವಾಲಯಕ್ಕೆ ಕರೆದೊಯ್ದು ಅಲ್ಲಿಯೇ ಲಾಲನೆ ಪಾಲನೆ ಮಾಡುತ್ತಿರಬೇಕಾದರೆ,  ಶೈವಾವಸ್ಥೆ ಕಳೆದು  ಪ್ರೌಢಾವಸ್ಥೆಗೆ ಬಂದಂತೆ ಅವರಿಗೆ ತಮ್ಮ ಸೃಷ್ಟಿಯ ಅರಿವು ಉಂಟಾಯಿತು. ಒಂದು ದಿನ ಅವರಿಗೆ ಮಹಾವಿಷ್ಣುವು ಕನಸಿನಲ್ಲಿ ದರ್ಶನವಿತ್ತು, ಮಕ್ಕಳೇ, ನೀವಿನ್ನು ಇಲ್ಲಿರಬಾರದು, ತುಳುನಾಡಿಗೆ ಹೋಗಿ ಅಲ್ಲಿಯ ಜನರಿಗೆ ದೈವಪ್ರಜ್ಞೆ ಉಂಟಾಗುವಂತೆ ಮಾಡಿ, ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳಾಗಿ ಆರಾಧನೆ ಪಡೆಯಿರಿ, ಎಂದು ಆಜ್ಞಾಪಿಸಿದರು. ಈ ರೀತಿಯಾಗಿ ಇಲ್ಲಿ ನೆಲೆನಿಂತವರು ಇಂದು ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾ ಜನರಲ್ಲಿ ಭಯ ಭಕ್ತಿ ತುಂಬುವಂತೆ ಮಾಡಿದ ದೈವಗಳೇ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು.

ಇವರ ಜೊತೆಗೆ ಪರಿವಾರ ದೈವಗಳಾದ ರಾಜನ್ ದೈವ ಮಲರಾಯ ದೈವಗಳು ಇಲ್ಲಿ ನೆಲೆ ನಿಂತಿವೆ.

ಪ್ರತಿವರ್ಷ ನಡೆಯುವ #ವಾರ್ಷಿಕಜಾತ್ರೆಯೂಜನವರಿತಿಂಗಳ_22ರಿಂದದೇವಾಲಯದಿಂದಮೊದಲ್ಗೊಂಡು28ರವರೆಗೆವಿವಿಧಧಾರ್ಮಿಕಹಾಗೂಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತಿ ವಿಜೃಂಭಣೆಯಿಂದ ನಡೆಯುತ್ತಿದೆ.. ಬನ್ನಿ ನಮ್ಮೂರಿನ ಜಾತ್ರೋತ್ಸವಕ್ಕೆ ನಿಮಗೆಲ್ಲರಿಗೂ #ಪ್ರೀತಿಪೂರ್ವಕ_ಸ್ವಾಗತ.


ಮಾಹಿತಿ ಆಧಾರ. ಕುಮಾರ ವೈಭವ ರಣ ಮಂಗಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ದ ವಿಶೇಷಾಂಕ.1994.

ಮತ್ತು ಕೊರಗಪ್ಪ ಪೂಜಾರಿ ನಡುಕಟ್ಟ ಇವರ ರಣಮಂಗಲ‌ ಕ್ಷೇತ್ರ ಮಹಾತ್ಮೆ ಯಕ್ಷಗಾನ.

✍ ಹರೀಶ್ ಕೆ ಪಾಣಾಜೆ.

ಸಹಕಾರ . ಮಹಾಬಲೇಶ್ವರ ಭಟ್ಟ ಗಿಳಿಯಾಲು. ಪ್ರದೀಪ್ ಪಾಣಾಜೆ. 

ಚಿತ್ರ.. ಹರೀಶ್ ಪೂಜಾರಿ ಅರುಣ್ ಸ್ಟುಡಿಯೋ ಆರ್ಲಪದವು 

Saturday, 21 January 2023

ಭೈರವೈಕ್ಯ ಪರಮಪೂಜ್ಯಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅ...



ಪುತ್ತೂರು: 
ವ್ಯಕ್ತಿ ಒಳಗೆ ಇರುವ ಶಕ್ತಿಯನ್ನು ಮರೆಯುವ ಕಾರ್ಯವಾಗಬಾರದು. ಸರ್ವವನ್ನು ತ್ಯಾಗ ಮಾಡಿದ ಸಂತ ಸಮಾಜ ನೀಡಿದ ಕೊಡುಗೆ ಫಲವಾಗಿ 1.52ಲಕ್ಷ ವಿದ್ಯಾರ್ಥಿಗಳು ಸಂಸ್ಥಾನದಲ್ಲಿ ವಿದ್ಯೆಯನ್ನು ಪಡೆಯುತ್ತಿದ್ದಾರೆ ಎಂದು ಶ್ರೀ ಆದಿಚುಂಚನಗಿರಿ ಕ್ಷೇತ್ರ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೆದ್ದಯಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ  ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ 
ಸಮಾಜಕ್ಕೆ ಬಹುಮುಖವಾದ ಕೊಡುಗೆಯನ್ನು ಶ್ರೀಮಠ ನೀಡುತ್ತಾ ಬಂದಿರುವ ಜತೆಗೆ ಬದುಕಿಗೆ ಅರ್ಥಪೂರ್ಣವಾದ ಮೌಲ್ಯವನ್ನು ನೀಡುವ ಕಾರ್ಯ ಮಾಡಿದೆ. ಸಾಧನೆಯ ಹಾದಿ ಕಷ್ಟವಾದರೂ, ಗುರುಗಳ ಆಶೀರ್ವಾದದಿಂದ ಫಲಪ್ರದವಾಗುತ್ತದೆ. ಸಮಾಜದ ಪ್ರೀತಿ ವಿಶ್ವಾಸ ಪೀಠದ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.


ಪುತ್ತೂರು

ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಆರಂಭ ಮಾಡಿದ್ದೇ ಒಕ್ಕಲಿಗ ಸಮುದಾಯ

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾ್ ಗೌಡ ಹೇಳಿಕೆ

ಭೈರವೈಕ್ಯ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯ 78 ನೇ ಜಯಂತೋತ್ಸವದಲ್ಲಿ ಮಾತನಾಡಿದ ಡಿವಿಎಸ್

ನಾವು ಸಮಾನತೆ,ವಿಶ್ವಮಾನವತೆ ಬಗ್ಗೆ ಇಂದು ಮಾತನಾಡುತ್ತೇವೆ

ಆದರೆ ಈ ಸಂದೇಶವನ್ನು ಜಗತ್ತಿಗೆ ಕೊಟ್ಟವರು ನಮ್ಮ ಸಮುದಾಯದ ರಾಷ್ಟ್ರಕವಿ ಕುವೆಂಪು 

ಇಂದು ನಾವು ಸ್ಮಾರ್ಟ್ ಸಿಟಿ ಬಗ್ಗೆ ಮಾತನಾಡುತ್ತೇವೆ

ಬೆಂಗಳೂರು, ಮಂಗಳೂರು,ಹೈದರಾಬಾದ್ ಗೆ
 ಸ್ಮಾರ್ಟ್ ಸಿಟಿ ನೀಡಲಾಗಿದೆ

ಸ್ಮಾರ್ಟ್ ಸಿಟಿಯ ಪರಿಕಲ್ಪನೆಯನ್ನು ಕೊಟ್ಟಿದ್ದೇ ನಾಡಪ್ರಭು ಕೆಂಪೇಗೌಡರು

500 ವರ್ಷದ ಹಿಂದೆಯೇ ವಿವಿಧ ಕುಲಕಸುಬುಗಳನ್ನು ಗುರುತಿಸಿ ಪೇಟೆ ಮಾಡಿದವರು ಕೆಂಪೇಗೌಡರು

ಆದ್ದರಿಂದ ನಮ್ಮ ಸಮಯದಾಯದ ಬಗ್ಗೆ ಹೇಳಿಕೊಳ್ಳಲು ನಮಗೆ
 ಕೀಳರಿಮೆ ಬೇಕಾಗಿಲ್ಲ


ಅಧಿಕಾರ ದೊರೆತಾಗ ಸಮುದಾಯದ ಜನತೆಗಾಗಿ ಕೆಲಸ ಮಾಡಿದೆ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಜಯಂತೋತ್ಸವ

ಸಮುದಾಯ ಬಾಂಧವರಿಗೆ ಕಿವಿ ಮಾತ ಹೇಳಿದ ಡಿವಿಎಸ್




ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಿ.ವಿ ಸದಾನಂದ ಗೌಡ ಮಾತನಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಣಕಹಳೆ ಮೊದಲು ಮೊಳಗಿಸಿದವರು ಒಕ್ಕಲಿಗರು. ದೇಶ ಕಟ್ಟುವುದರಲ್ಲಿ ಗೌಡ ಸಮಾಜದ ಕೊಡುಗೆ ಅಪಾರವಿದೆ. ಸಮುದಾಯದ ಕೆಲಸದ ಜತೆಗೆ ಸಮಾಜ ಕಟ್ಟು ಕಾರ್ಯವಾಗಬೇಕು. ಸಮುದಾಯದ ಸಂಘಟನೆ ಯಾವುದೇ ಪೈಪೋಟಿಗಾಗಿ ಇರುವದಲ್ಲ. 5 ತಾಲೂಕುಗಳನ್ನೊಳಗೊಂಡ ಪುತ್ತೂರು ಜಿಲ್ಲೆಯಾಗಿ ಮಾರ್ಪಾಡಾಗಬೇಕು ಎಂದು ತಿಳಿಸಿದರು.


ಪುತ್ತೂರು

ಪುತ್ತೂರಿನಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ 78 ನೇ ಜಯಂತೋತ್ಸವ

ಕಾರ್ಯಕ್ರಮವನ್ನು ಉದ್ಧೇ ಶಿಸಿ ಮಾತನಾಡಿದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಒಕ್ಕಲಿಗ ಸಮುದಾಯ ನನ್ನ ಜೊತೆ ನಿಲ್ಲಬೇಕು

ಯಾವುದೇ ಸಮಸ್ಯೆ ಬಂದರೂ ನಾನು ಸಮಾಜದ ಜೊತೆಗಿದ್ದೇನೆ

ಒಕ್ಕಲಿಗ ಸಮಾಜಕ್ಕೆ 12 ಶೇಕಡಾ ಮೀಸಲಾತಿ ನೀಡಬೇಕೆಂಬ ಹಲವು ವರ್ಷಗಳದ್ದಾಗಿದೆ

ಆದಿಚುಂಚನಗಿರಿ ಮಠದ ಸ್ವಾಮೀಜಿ  ಸಚಿವ ಆರ್.ಅಶೋಕಗ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ

ರಾಜ್ಯದಲ್ಲಿ 16 ಶೇಕಡಾ ಜನಸಂಖ್ಯೆ ಇರುವ ಜನಸಂಖ್ಯೆಗೆ 12 ಶೇಕಡಾ ಮೀಸಲಾತಿಗೆ ಒತ್ತಾಯಿಸಲಾಗಿದೆ

ಆದರೆ ಸಚಿವರು ಈವರೆಗೆ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ

ಸರಕಾರ ಒಕ್ಕಲಿಗರ ಒತ್ತಾಯಕ್ಕೆ ಸ್ಪಂದಿಸಬೇಕಿದೆ   ಡಿ.ಕೆ.ಶಿವಕುಮಾರ್ ಹೇಳಿಕೆ




ಕೆ. ಪಿ. ಸಿ. ಸಿ. ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ ಜತೆಗೂಡುವುದು ಆರಂಭ, ಒಟ್ಟಾಗಿ ಚರ್ಚಿಸುವುದು ಪ್ರಗತಿ, ಸಂಘಟನೆ ಮಾಡುವುದು ಯಶಸ್ಸಿನ ಸೂಚಕವಾಗಿದೆ. ಸಮಾಜಕ್ಕಾಗಿ ನಿರಂತರ ಹೋರಾಟವನ್ನು ಮಾಡುತ್ತಿದ್ದು, ಜನಸಂಖ್ಯೆಯ ಆಧಾರದಲ್ಲಿ ಶೇ.12 ಮೀಸಲಾತಿಯನ್ನು ನೀಡಬೇಕು. ಜನರ ಕಷ್ಟ ಸುಖಕ್ಕೆ ಭಾಗಿಯಾಗುವ ಈ ಬಡ ಒಕ್ಕಲಿಗನ ಮೇಲೆ ದಯೆ ಇರಲಿ ಎಂದರು.



ಸಚಿವ ಡಾ. ಅಶ್ವತ್ಥ ನಾರಾಯಣ 
ಮಾತನಾಡಿ ಗುಣಮಟ್ಟದ ಜ್ಞಾನ, ಕೌಶಲ್ಯತೆಯನ್ನು ಪಡೆಯುವ ಕಾರ್ಯ ನಡೆಯಬೇಕು. ಸ್ವಾರ್ಥತತೆಯಿಂದ ಹೊರ ಬಂದು ಕೊಡುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಒಕ್ಕಲಿಗ ಜನಾಂಗಕ್ಕೆ ಆಧ್ಯತೆ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಸರ್ಕಾರ ಮಾಡುವ ಜತೆಗೆ ಜನ ಸಂಖ್ಯೆಯ ಆಧಾರದಲ್ಲಿ ನೀಡುವ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಒಕ್ಕಲಿಗ ಸಮಾಜ ಜಾಗೃತ ಸಮಾಜದ ಜತೆಗೆ ಧಾರ್ಮಿಕತೆಯ ಜತೆಗೆ ಸೇರಿಕೊಂಡ ಸಮಾಜವಾಗಿದೆ. ಬಿದ್ದವರನ್ನು ಮೇಲೆ ಎತ್ತು ಕಾರ್ಯವನ್ನು ಸಮಾಜ ಮಾಡಬೇಕು. ಸಂಸ್ಕಾರಯುತ ಶಿಕ್ಷಣ ನೀಡುವ ಕಾರ್ಯ ಮಠದಿಂದ ನಡೆಯುತ್ತಿದೆ. ಮಠ ಹಾಗೂ ಸಮಾಜದ ಬಾಂಧವ್ಯ ಎಲ್ಲಾ ಭಾಗದಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.


ರಾಜ್ಯ ಸಭಾ ಸದಸ್ಯೆ ಜಗ್ಗೇಶ್, ವಿಧಾನ ಪರಿಷತ್ತ್ ಸದಸ್ಯ ಬೋಜೇಗೌಡ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಎ.ವಿ. ತೀರ್ಥರಾಮ, ಬೆಂಗಳೂರು ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಸಿ. ಎನ್., ಬೆಳ್ತಂಗಡಿ ಮಾಜಿ ಸಚಿವ ಗಂಗಾಧರ ಗೌಡ, ಕೆ.ವಿ.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ. ವಿ. ರೇಣುಕಾ ಪ್ರಸಾದ್, ವಿವಿಧ ಭಾಗದ ಒಕ್ಕಲಿಗ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

ವಿವಿಧ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.


ಸ್ವಾಗತ ಸಮಿತಿಯ ಅಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಎಚ್. ಎಸ್. ಸತ್ಯನಾರಾಯಣ ಗ್ರಂಥದ ಬಗ್ಗೆ ಮಾಹಿತಿ ನೀಡಿದರು. ಚಿದಾನಂದ ಬೈಲಾಡಿ ವಂದಿಸಿದರು. ಟಿವಿ ನಿರೂಪಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.




ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ ಗ್ರಂಥ ಬಿಡುಗಡೆ ನಡೆಯಿತು.





Friday, 20 January 2023

 ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ, ಸಹೋದರನ ಮಾಹಿತಿಯನ್ನು ಪಡೆಯುವ ಜತೆಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.



ಕೊಯಿಲ ನಿವಾಸಿ ನಿಝಾಮ್ (25) ಆಸ್ಪತ್ರೆಯಗೆ ದಾಖಲಾಗಿದ್ದಾರೆ. ಸಹೋದರ ಶಾರೂಕ್ (23) ಅವರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗಿದೆ.


ಮಂಗಳೂರಿನ ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಹೋದರನ ಮಾಹಿತಿ ಪಡೆದು ಆತನನ್ನು ಅಪಹರಣ ಮಾಡಿ ಹಣ ತರದೇ ಹೋದರೆ ತಮ್ಮನನ್ನು ಕೊಲೆ ಮಾಡುವುದಾಗಿ ಹೇಳಿದ್ದಾರೆ ಎಂದು ನಿಝಾಮ್ ಹೇಳಿದ್ದಾರೆ. ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...