Sunday, 26 August 2012

Vijaya Mallya

 ಖ್ಯಾತ ಉದ್ಯಮಿ ಹಾಗೂ ಯುಬಿ. ಗ್ರೂಪ್ನ ಮಾಲಕ ಡಾ. ವಿಜಯ ಮಲ್ಯ ಅವರು ಅ.23ರಂದು ಸಂಜೆ  ಕುಕ್ಕೆಶ್ರೀಸುಬ್ರಹ್ಮಣ್ಯ ದೇವಾಲಯಕ್ಕೆ ಚಿನ್ನದ ಬಾಗಿಲನ್ನು ¸ÀªÀĦð¹zÀgÀÄ. ಕಳೆದ ಏಪ್ರಿಲ್ ತಿಂಗಳಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ ವಿಜಯ ಮಲ್ಯರು ಚಿನ್ನದ ಬಾಗಿಲನ್ನು ಶ್ರೀ ದೇವರಿಗೆ C¦ð¸ÀĪÀ  ಸಂಕಲ್ಪ ಮಾಡಿದ್ದರು. ಅದೇ ರೀತಿ ಸುಮಾರು ರೂ.80ಲಕ್ಷ ಮೌಲ್ಯದ ಎರಡೂವರೆ ಕೆ.ಜಿ ತೂಕದ ಸ್ವರ್ಣದ್ವಾರವನ್ನು  ಕ್ಷೇತ್ರಾಧಿಪ ಕುಕ್ಕೆ ಸುಬ್ರಹ್ಮಣ್ಯನಿಗೆ C¦ðಸಿದರು. ಚಿನ್ನದ ನಾಜೂಕಾದ ಕೆಲಸವನ್ನು ಕಾರ್ಕಳ ತಾಲೂಕಿನ ಮಾಳದ ಸುಧಾಕರ ಡೋಂಗ್ರೆ ಮತ್ತು ತಂಡದವರು ಕಳೆದ ಎರಡು ತಿಂಗಳಿನಿಂದ ಮಾಡಿ ಮುಗಿಸಿದ್ದಾರೆ. ಈ ಚಿನ್ನದದ್ವಾರವನ್ನು ಶ್ರೀ ದೇವಳದ ಗರ್ಭಗುಡಿಯ ಹೊರಗಿನ ಮಂಟದ ಬಾಗಿಲಿಗೆ ಹೊದಿಸಲಾಯಿತು.
  ಗುರುವಾರ ವಿಜಯ ಮಲ್ಯರು ಮಂಗಳೂರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಮಲ್ಯರೊಂದಿಗೆ ಪಿಂಕಿ ಲಾಲ್ವಾಣಿ,ನಪೀಸಾ ಮತ್ತು ಮೇಜರ್ ರಾಜೇಶ್ ಮಿತ್ರ ಇದ್ದರು. ಶ್ರೀ ಕ್ಷೇತ್ರದಲ್ಲಿ ಆನೆ, ಮಂಗಳವಾದ್ಯದೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಆರಂಭದಲ್ಲಿ ಸ್ವರ್ಣದ್ವಾರದ ಕೆತ್ತನೆಯನ್ನು ವೀಕ್ಷಿಸಿದ ವಿಜಯ ಮಲ್ಯ ಶ್ರೀ ದೇವಳದ ಗರ್ಭಗುಡಿಯ ಎದುರು ¸ÀªÀĦðಸಿದರು. ದೇವಳದ ಪ್ರಧಾನ ಅರ್ಚಕ ವೆ.ಮೂ.ಬಿ.ಕೇಶವ ಜೋಗಿತ್ತಾಯರು zsÁ«Äð ಕ ವಿಧಿವಿಧಾನಗಳನ್ನು ನೆರವೇರಿಸಿದರು.ಪುರೋಹಿತರಾದ ಮಧುಸೂದನ ಕಲ್ಲೂರಾಯರು ಸಂಕಲ್ಪ ವಿಧಿಯನ್ನು ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ, ಸಮಿತಿ ಸದಸ್ಯರಾದ ಚಂದ್ರಶೇಖರ ತಳೂರು, ಸುಬ್ರಹ್ಮಣ್ಯ ಭಟ್, ಮೋಹನ್ ರಾಮ್ ಸುಳ್ಳಿ, ಕಿಶೋರ್ ಶೀರಾಡಿ, ಮೋನಪ್ಪ ಮಾನಾಡು, ವನಜಾ ವಿ. ಭಟ್, ಯಮುನಾ ರೈ, ಕಾರ್ಯನಿರ್ವಹಣಾಧಿಕಾರಿಗಳಾದ ಎಚ್.ಎಂ.ಕಾಳಿ ಮತ್ತು ರವೀಂದ್ರ ಉಪಸ್ಥಿತರಿದ್ದರು.
 ಸ್ವರ್ಣದ್ವಾರ:
   2.400ಕೆಜಿ ಚಿನ್ನದಲ್ಲಿ ¤«Äðತವಾದ ಈ ಸುವರ್ಣ ದ್ವಾರದಲ್ಲಿ ಶಿಲ್ಪಿ ಸುಧಾಕರ ಡೋಂಗ್ರೆಯವರು ನಾಗಾಭರಣ, ಹೆಡೆ, ಬಳ್ಳಿ, ಗಜಪಡಿಗಳನ್ನು ನಾಜೂಕಾಗಿ ರಚಿಸಿರುತ್ತಾರೆ. ಶ್ರೀ ದೇವರಿಗೆ ಸಮರ್ಪಣೆ ಮಾಡಿದ ವೇಳೆ ವಿಜಯ ಮಲ್ಯ ತನ್ನ ಇಷ್ಟಾರ್ಥ ನೆರವೇರಿದಲ್ಲಿ ಗರ್ಭಗುಡಿಯ ಮಹಾದ್ವಾರಕ್ಕೆ ಚಿನ್ನದ ಬಾಗಿಲನ್ನು ಶೀಘ್ರವೇ C¦ðಸುವುದಾಗಿ ಸಂಕಲ್ಪ ಮಾಡಿದರು.
  ವಿಜಯಮಲ್ಯ ಹಾಗೂ ಪರಿವಾರದವರನ್ನು ಕೇಶವ ಜೋಗಿತ್ತಾಯರು ಶಾಲು ಹೊದಿಸಿ, ಗಂಧಪ್ರಸಾದ ಹಾಗೂ ಮಹಾಪ್ರಸಾದ ನೀಡಿ ಹರಸಿದರು.
 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...