ಸ್ವಾತಂತ್ರ್ಯದಿನದಂದು ರಾಷ್ಟ್ರಧ್ವಜಕ್ಕೆ ಉದ್ದೇಶಪೂರ್ವಕವಾಗಿ ಅಪಮಾನ ಮಾಡಿಲ್ಲ , ಅದೊಂದು ಅಚಾತುರ್ಯ ಘಟನೆ, ಹೀಗಾಗಿ ಸಮಸ್ತ ದೇಶಾಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇವೆ ಎಂದು ಪುತ್ತೂರು ವಲಯದ ಮಲಕರ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಪರವಾಗಿ ಕುಂತೂರು ZÀZïð ಧರ್ಮಗುರು eÁeïð ಹೇಳಿದ್ದಾರೆ.ಇದೇ ವೇಳೆ ಹಿಂದೂ ಸಂಘಟನೆಗಳು ಘಟನೆಯನ್ನು ಖಂಡಿಸಿದ್ದಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದೇಶಾಭಿಮಾನದಿಂದ ಕಳೆದ 2 ವರ್ಷಗಳಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹಣ ಮಾಡುತ್ತಿದ್ದೇವೆ.ಈ ಬಾರಿ ಕಬ್ಬಿಣದ ಕಂಬದಲ್ಲಿ ರಾಷ್ಟ್ರಧ್ವಜ ಅರಳಿಸುವ ಮೂಲಕ ಆಚರಿಸಿದ್ದೇವೆ. ಆದರೆ ಅಚಾತುರ್ಯದಿಂದಾಗಿ , ಅಲ್ಲಿನ ಸಿಬ್ಬಂದಿಗಳಿಗೆ ಅರಿವಿಲ್ಲದೆ ಈ ರೀತಿ ಶಿಲುಬೆಯ ಕೆಳಗೆ ರಾಷ್ಟ್ರಧ್ವಜ ಅರಳಿಸುವ ಕೆಲಸ ಆಗಿದೆ. ಇದು ನಮ್ಮಿಂದಾದ ತಪ್ಪು. ಹೀಗಾಗಿ ಸಮಸ್ತ ದೇಶಾಭಿಮಾನಿಗಳಲ್ಲಿ ಕ್ಷಮೆ ಕೇಳುವುದಾಗಿ eÁeïð ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ eÁeïð, ಇದು ಇಡೀ ಸಮಾಜಕ್ಕೆ ಪಾಠವಾಗಿದೆ , ಸ್ವಾತಂತ್ರ್ಯದ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ರಾಷ್ಟ್ರಧ್ವಜವನ್ನು ಸರಿಯಾದ ರೀತಿಯಲ್ಲಿ ಅರಳಿಸಲಿಲ್ಲ. ಹಾಗಾಗಿ ಈ ಮೂಲಕ ಇಡೀ ಸಮಾಜಕ್ಕೆ ಪಾಠವಾಗಿದೆ ಎಂದು ಹೇಳಿದರು.
No comments:
Post a Comment