ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಕೂಡಾ ಸ್ವಾಭಿಮಾನದ ಕಿಚ್ಚು ಇನ್ನೂ ಭಾರತೀಯರಲ್ಲಿ ಮೊಳಗಲೇ ಇಲ್ಲ. ಈ ಕಿಚ್ಚು ಮೊಳಗಬೇಕಾಗಿದೆ , ದೇಶವನ್ನು ಭಾರತೀಯರೇ ಆಳುವಂತಾಗಬೇಕು ಎಂದು ಜಾಗೋ ಭಾರತ್ ಸಂಚಾಲಕ ಅಶ್ವತ್ಥ ಹೆಗಡೆ ಹೇಳಿದರು.
ಅವರು ಪುತ್ತೂರಿನಲ್ಲಿ ಮಂಗಳವಾರದಂದು ರಾತ್ರಿ ಕಿಲ್ಲೆ, ಮೈದಾನದಲ್ಲಿ ನಡೆದ ಅಖಿಲ ಭಾರತ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಈ ದೇಶವು ಅಖಂಡ ಭಾರತವಾದ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿಗೂ ನಮ್ಮ ಹೋರಾಟ ನಡೆಯುತ್ತಲೇ ಇದೆ. ಆದರೆ ಸ್ವಾತಂತ್ರ್ಯದ ದಿನವೇ ಈ ದೇಶ ತುಂಡಾದದ್ದು «¥ÀAiÀiÁð¸À ಎಂದ ಅವರು ಈ ದೇಶವು ಎಲ್ಲಾ ರೀತಿಯಿಂದಲೂ ಸಂಮೃದ್ಧವಾಗಿದೆ ಹೀಗಾಗಿ ತಾಯಿ ಭಾರತಿಗೆ ನಾವು ಯಾವತ್ತೂ ಋಣಿಯಾಗಿರಬೇಕು ಅಲ್ಲದೆ ಅವಳ ಸೇವೆಗೆ ಕಟಿಬದ್ದರಾಗಬೇಕು ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ಪುತ್ತೂರು ಜಿಲ್ಲಾ ವಿಹಿಂಪ ಮಾಜಿ ಅಧ್ಯಕ್ಷ ಪೂವಪ್ಪ ವಹಿಸಿದರು,
ವೇದಿಕೆಯಲ್ಲಿ ಪ್ರಮುಖರಾದ ಯಾದವ ಕುಮಾರ್ , ಡೀಕಯ್ಯ ಪೆರುವೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಬೊಳುವಾರಿನಿಂದ ಬೃಹತ್ ಸಂಖ್ಯೆಯ ಕಾರ್ಯಕರ್ತರು ದೊಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು.
No comments:
Post a Comment