ತಾಲೂಕಿನ ಅಂಗನವಾಡಿ PÁAiÀÄðPÀvÉðAiÀÄರಿಗೆ ಮತ್ತು ಸಹಾಯಕಿಯರಿಗೆ ಕಳೆದ ಮೇ ತಿಂಗಳಿನಿಂದ ಗೌರವಧನ ಪಾವತಿ ಆಗದೇ ಇರುವುದನ್ನು ಖಂಡಿಸಿ ಸೋಮವಾರದಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಪುತ್ತೂರು ತಾಲೂಕಿನ ಅಂಗನವಾಡಿ PÁAiÀÄðPÀvÉðAiÀÄgÀÄ ಹಾಗೂ ಸಹಾಯಕಿಯರು ಕಳೆದ ಒಂದು ತಿಂಗಳಿನಿಂದ ವೇತನ ಬಿಡುಗಡೆಯಾಗದೇ ಇರುವುದರ ಬಗ್ಗೆ ಸಾಕಷ್ಟು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಇದುವರೆಗೂ ಸೂಕ್ತವಾದ ಪರಿಹಾರ ಸಿಗದೇ ಇರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿಗಳನ್ನು ಬಂದ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ ವಿವಿಧ ಘೋಷಣೆಗಳೊಂದಿಗೆ ಸುಮಾರು 370 PÁAiÀÄðPÀvÉðAiÀÄgÀÄ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಕಚೇರಿ ಮುಂದೆ ಧರಣಿ ಕುಳಿತು , ಸಮಸ್ಯೆ ತಕ್ಷಣವೇ ಪರಿಹಾರ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ , ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ , ಯಾವುದೇ ಭಿಕ್ಷೆಯನ್ನಲ್ಲ , ಗೌರವ ಧನ ಬಾರದೆ 4 ತಿಂಗಳು ಆಗಿದೆ , ಮನೆಯಲ್ಲಿ ಉಪವಾಸ ಬೀಳುವ ಸ್ಥಿತಿ ಬಂದಿದೆ ಆದರೂ ಕೂಡಾ ಈ ಬಗ್ಗೆ ಗಮನಹರಿಸದೇ ಇರುವುದು ಖಂಡನೀಯ ಎಂದು ಹೇಳಿದರು.
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ,ಅಂಗನವಾಡಿ PÁAiÀÄðPÀvÉðAiÀÄgÀ ನಿಜವಾದ ಸಮಸ್ಯೆ ಏನು ಎಂಬುದು ಗೊತ್ತಿಲ್ಲ , ಆದರೆ ತಮ್ಮ ನ್ಯಾಯಯುತವಾದ ಬೇಡಿಕೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಹೇಳಿದರು.
ಆದರೆ ಪ್ರತಿಭಟನೆ ಕೈಬಿಡದ ಅಂಗನವಾಡಿ ಕಾರ್ಯಕತರ್ೆಯರು , ಒಂದು ವೇಳೆ ಸೂಕ್ತ ಪರಿಹಾರ ಸಿಗದೇ ಇದ್ದಲ್ಲಿ ಭಿಕ್ಷೆ ಬೇಡಿಯಾದರೂ ಇಲ್ಲಿ ಪ್ರತಿಭಟನೆ ಮಾಡುವುದಾಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪ್ರಭಾರ ಅಧಿಕಾರಿ ಸುಕನ್ಯಾ , ಇದು ಟ್ರೆಷರಿಯಲ್ಲಿ ಆದ ತೊಂದರೆ ಎಂದು ಹೇಳಿದರು. ಹಾಗಾದರೆ ಟ್ರೆಷರಿಯಲ್ಲಿ ಪರಿಶೀಲನೆ ನಡೆಸಲು ಅಂಗನವಾಡಿ PÁAiÀÄðPÀvÉðAiÀÄgÀÄ ತೆರಳಿದಾಗ , ಪುಡಾ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಾನಂದ ಪೂಜಾರಿ , ತಾಲೂಕು ನೋಡಲ್ ಅಧಿಕಾರಿ ಶೇಕ್ ಲತೀಫ್ , ಅಂಗನವಾಡಿ PÁAiÀÄðPÀvÉðಯರಿಗೆ ಗೌರವಧನ ಪಾವತಿ ಆಗದೇ ಇರಲು ಟ್ರೆಶರಿಯಲ್ಲಾದ ತಾಂತ್ರಿಕ ತೊಂದರೆಯೇ ಕಾರಣವಾಗಿದೆ. ಹೀಗಾಗಿ 10 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ಅಂಗನವಾಡಿ PÁAiÀÄðPÀvÉðAiÀÄgÀÄ 5 ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು. ಅಂತಿಮವಾಗಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ PÁAiÀÄðPÀvÉðAiÀÄgÀÄ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಶಂಭು ಭಟ್, ಉಪಾಧ್ಯಕ್ಷೆ ಪುಲಸ್ಯ ರೈ , ಜಿಪಂ ಕೇಶವ ಗೌಡ , ಸಾವಿತ್ರಿ ಶಿವರಾಂ , ಪುಡಾ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಉಪಸ್ಥಿತರಿದ್ದರು.
ಅಂಗನವಾಡಿ PÁAiÀÄðPÀvÉðAiÀÄgÀ ಸಂಘದ ಅಧ್ಯಕ್ಷೆ ಕವಿತಾ ಜಯನ್ , ಜಿಲ್ಲಾಧ್ಯಕ್ಷೆ ಅರುಣಾ , ತಾಲೂಕು PÁAiÀÄðzÀ²ð ಪುಷ್ಪಲತಾ ,ರಾಜ್ಯ ಪ್ರತಿನಿಧಿ ವಿಜಯ ಈಶ್ವರ ಗೌಡ ,ತಾಲೂಕು ಖಜಾಂಜಿ ಕಮಲ ಮೊದಲಾದವರು ಉಪಸ್ಥಿತರಿದ್ದರು.
No comments:
Post a Comment