Saturday, 1 September 2012

c.m.Udasi


ಪುತ್ತೂರು ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ
ನ್ಯಾಯಾಂಗ ವ್ಯವಸ್ಥೆ ಬಲಗೊಳ್ಳಲು ಸೂಕ್ತ ವ್ಯವಸ್ಥೆ - ಉದಾಸಿ

ಪುತ್ತೂರು:ರಾಜ್ಯದಲ್ಲಿ  ಆಡಳಿತಕ್ಕೆ ಚುರುಕು ಮುಟ್ಟಿಸಲು  ಹಾಗೂ ಕಾನೂನು ಪರಿಪಾಲನೆಯ ದೃಷ್ಟಿಯಿಂದ ನ್ಯಾಯಾಲಯದ ಪಾತ್ರ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹೀಗಾಗಿ ನ್ಯಾಯಾಲಯ ಹಾಗೂ ನ್ಯಾಯಾಲಯದ ವಠಾರಕ್ಕೆ ಅಗತ್ಯವಾದ ಸೌಲಭ್ಯಗಳನ್ನು  ಸಕರ್ಾರ ಒದಗಿಸಿ  ನ್ಯಾಯಾಂಗ ವ್ಯವಸ್ಥೆಯನ್ನು  ಬಲಗೊಳಿಸಲು  ವ್ಯವಸ್ಥೆ ಮಾಡುತ್ತಿರುವುದಾಗಿ  ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು.
ಪುತ್ತೂರಿನಲ್ಲಿ  ಶನಿವಾರದಂದು  ವಕೀಲರ ಸಂಘದ ನೂತನ ಸಭಾಂಗಣ "ಪರಾಶರ"ವನ್ನು  ಉದ್ಘಾಟಿಸಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಮಾತನಾಡಿದರು. ಪುತ್ತೂರು ವಕೀಲರ ಸಂಘಕ್ಕೆ ರಾಜ್ಯ ಸಕರ್ಾರದಿಂದ 80 ಲಕ್ಷ ರೂಪಾಯಿ ಅನುದಾನವನ್ನು  ಇತ್ತೀಚೆಗೆ ನೀಡಲಾಗಿತ್ತು. ಇದೀ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದು  ನೂತನ ಕಟ್ಟಡವನ್ನು  ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ  ಮಾತನಾಡಿದ  ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ನ್ಯಾಯಾಲಯವು  ಆಡಳಿತ ಸುಧಾರಣೆಗೆ ಚುರುಕು ಮುಟ್ಟಿಸಲು ಕಾಲಕಾಲಕ್ಕೆ ಸೂಕ್ತ ನಿದರ್ೇಶನ ಹಾಗೂ ಸೂಚನೆಯನ್ನು  ನೀಡಿ ಜನತೆಯ ಸಂಕಷ್ಟ ದೂರವಾಗಿಸುತ್ತಿದೆ ಎಂದ ಉದಾಸಿ ಶಾಸಕಾಂಗ , ಕಾಯರ್ಾಂಗ ಹಾಗೂ ನ್ಯಾಯಾಂಗ ಜೊತೆಯಾಗಿ ಇದ್ದಾಗ ಬದಲಾವಣೆ ಸಾಧ್ಯ ಎಂದರು. ಇಂದು ವೈಜ್ಞಾನಿಕವಾಗಿ , ವೈಚಾರಿಕವಾಗಿ ಬೆಳೆದರೂ ವಿವೇಕ ಮಾತ್ರಾ ಅದೇ ವೇಗದಲ್ಲಿ  ಬೆಳೆಯುತ್ತಿಲ್ಲ. ಹೀಗಾಗಿ ಕಾನೂನು ಬಳಕೆ ಹೆಚ್ಚಾಗಿ ಬೇಕಾಗುತ್ತದೆ ಎಂದು  ಉದಾಸಿ ಹೇಳಿದರು. ಸಕರ್ಾರದ ವತಿಯಿಂದ ಜಿಲ್ಲೆಯ ನ್ಯಾಯಾಲಯ ವಿವಿಧ ಕಾಮಗಾರಿಗಳಿಗೆ 53 ಕೋಟಿ ರೂಪಾಯಿ ಬಿಡಗಡೆಗೊಳಿಸಿದ್ದು  ಮುಂದೆಯೂ ಸಹಕಾರ ನೀಡುವುದಾಗಿ  ಇದೇ ವೇಳೆ ಉದಾಸಿ ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ , ನ್ಯಾಯಾಂಗ , ಕಾಯರ್ಾಂಗ , ಶಾಸಕಾಂಗವು ಸಹಮತದಿಂದ ನಡೆದಾಗ ಮಾತ್ರಾ ಅಭಿವೃದ್ಧಿ ಸಾಧ್ಯ. ಆದರೆ ಶಾಸಕಾಂಗವು  ವಿವಿಧ ಕಾರಣಗಳಿಂದ ಇತ್ತೀಚಿಗೆ ಶಿಥಿಲವಾಗುತ್ತಿರುವುದು  ಕಂಡುಬಂದಿದೆ. ಆದರೆ ನ್ಯಾಯಾಂಗ ವ್ಯವಸ್ಥೆಯು ಶಿಥಿಲವಾಗದೆ , ಆಗಾಗ ಶಾಸಕಾಂಗವನ್ನು  ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದ ಸದಾನಂದ ಗೌಡ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಬಲಿಷ್ಟವಾದಾಗ ಸಮಾಜದ ಸುದಾರಣೆ ಸಾಧ್ಯ ಎಂದು  ಸದಾನಂದ ಗೌಡ ಹೇಳಿದರು.
ಹಿರಿಯ ನ್ಯಾಯವಾದಿಗಳನ್ನು ಸನ್ಮಾನಿಸಿದ ಹೈಕೋಟರ್್ ನ್ಯಾಯಾಧೀಶ ಕೆ.ಎಲ್.ಮಂಜುನಾಥ್ , ವಕೀಲರು ತಮ್ಮ ವೃತ್ತಿಯ ನಡುವೆ ಸಂಘಟನೆ ಹಾಗೂ ಸಾಮರಸ್ಯವನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಹಿರಿಯ ವಕೀರ ಮಾರ್ಗದರ್ಶನ ಹಾಗೂ ಅನುಭವನ್ನು  ಹಂಚಿಕೊಳ್ಳಬೇಕು ಎಂದು  ಹೇಳಿದರು.
ಈ ಸಂದರ್ಭದಲ್ಲಿ  ಹಿರಿಯ ನ್ಯಾಯವಾದಿಗಳಾದ ರಾಘವ ಗೌಡ , ಸುಬ್ರಹ್ಮಣ್ಯ ಕೊಳತ್ತಾಯ , ರಾಂಮೋಹನ್ ರಾವ್ , ಶಿವರಾಮ ಗೌಡ , ವಕೀಲಸ ಗುಮಾಸ್ತ  ಸುಬ್ರಾಯ ಗೌಡರನ್ನು  ಸನ್ಮಾನಿಸಲಾಯಿತು.
ಹೈಕೋಟರ್್ ನ್ಯಾಯಾಧೀಶ ಕೆ.ಭಕ್ತವತ್ಸಲ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ  ಸಂಸದ ನಳಿನ್ ಕುಮಾರ್ ಕಟೀಲ್ , ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ , ಎಡಿಶನಲ್ ಎಡ್ವಕೇಟ್ ಜನರಲ್ ಕೆ.ಎಂ.ನಟರಾಜ್ , ಜಿಲ್ಲಾ ಸೆಶನ್ಸ್ ನ್ಯಾಯಾಯದ ನ್ಯಾಯಾಧೀಶ ಅಶೋಕ್ ಜಿ ಗಟ್ಟಿಗಣ್ಣನವರ್ , ರಾಜ್ಯ  ಬಾರ್ ಕೌನ್ಸಿಲ್ ಅಧ್ಯಕ್ಷ ಆನಂದ ಕುಮಾರ್ , ಕೆಎಸ್ಬಿಸಿ  ಸದಸ್ಯ ರವೀಂದ್ರನಾಥ ರೈ , ಕೆಎಸ್ಬಿಸಿ  ನೋಂದಣಿ ಮುಖ್ಯಸ್ಥ ಸುಭಾಸ್ ಕೌಡಿಚ್ಚಾರ್ , ಕೆಎಸ್ಬಿಸಿ  ಸದಸ್ಯ  ಪಿ.ಪಿ ಹೆಗ್ಡೆ , ರಾಷ್ಟ್ರೀಯ ಬಾರ್ ಕೌನ್ಸಿಲ್ ಸದಸ್ಯ  ಬೋಜೇ ಗೌಡ ಉಪಸ್ಥಿತರಿದ್ದರು.
ಪುತ್ತೂರ ವಕೀಲರ ಸಂಘದ ಕಾರ್ಯದಶರ್ಿ ಜಗನ್ನಾಥ ರೈ ಸ್ವಾಗತಿಸಿ , ಅಧ್ಯಕ್ಷ ಮಹೇಶ್ ಕಜೆ ಪ್ರಸ್ತಾವನೆಗೈದರು, ಉಪಾಧ್ಯಕ್ಷ ದೇವಾನಂದ ವಂದಿಸಿದರು. ನ್ಯಾಯವಾದಿಗಳಾದ ದುಗರ್ಾಪ್ರಸಾದ್ ಹಾಗೂ  ಸೂರ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.
-----------

ವನ್ಸ್ ಲಾಯರ್ ಆಲ್ವೆಸ್ ಲಾಯರ್ . . .
ವನ್ಸ್ ಲಾಯರ್ ಆಲ್ವೇಸ್ ಲಾಯರ್ ಆದರೆ ವನ್ಸ್ ಸೀಎಂ ನಾಟ್ ಆಲ್ವೇಸ್ ಸೀಎಂ . . .! . ಹೀಗೆಂದು  ಹಾಸ್ಯ ಚಟಾಕಿ ಹಾರಿಸಿದವರು  ಮಾಜಿ ಸೀಎಂ ಸದಾನಂದ ಗೌಡ. ಹಿಂದೆ ಪುತ್ತೂರಿನಿಂದಲೇ ವಕೀಲ ವೃತ್ತಿ ಆರಂಭಿಸಿದ್ದು , ಆದರೆ ಮುಂದೆ ಮತ್ತೆ ಬರಬೇಕಾಗಿ ಬಂದರೂ ಬರಬಹುದು ಎಂದು  ಸದಾನಂದ ಗೌಡ ಚಟಾಕಿ ಹಾರಿಸಿದರು.
--------------------------------------------
ಪುತ್ತೂರು ಪ್ರಥಮ ಪ್ರಜೆಗೆ ಆಹ್ವಾನವಿಲ್ಲ.  .

ಪುತ್ತೂರು ವಕೀಲರ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಸೀಎಂ , ಸಚಿವರು  ಸಂಸದರು , ಶಾಸಕರುಗಳಿಗೆ  ಆಹ್ವಾನ ಇದ್ದರೆ ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ , ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಲಿಲ್ಲ ಎಂದು  ಪುರಸಭಾಧ್ಯಕ್ಷರೇ ಮಾಧ್ಯಮ ಮಂದಿಯ ಬಳಿ ಹೇಳಿಕೊಂಡರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...