Sunday, 16 September 2012

Betampady grama panchayth







ಆಡಳಿತ ವಿಕೇಂದ್ರೀಕರಣದ ನಂತರ ಗ್ರಾಮಪಂಚಾಯಿತಿಗಳಿಗೆ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ  ಗ್ರಾಮಮಟ್ಟದಿಂದಲೇ ಅಧಿಕಾರ ನಡೆಸುವಂತಾಗಬೇಕು ಎಂದು  ಮುಜರಾಯಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು  ಮಂಗಳವಾರದಂದು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಕಚೇರಿಯ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ  ನಿಮರ್ಾಣಗೊಂಡ ನೂತನ ಕಟ್ಟಡ ಉದ್ಘಾಟಿಸಿ  ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣದ ನಂತರ ಆಡಳಿತ ವ್ಯವಸ್ಥೆ ಬಲಗೊಳ್ಳಬೇಕಿತ್ತು. ಆದರೆ ಅದಿನ್ನೂ ಸಾಕಾರವಾಗಿಲ್ಲ. ಹೀಗಾಗಿ ಗ್ರಾಮಸಕರ್ಾರಗಳು ರಚನೆಯಾದ ಬಳಿಕ ಹಳ್ಳಿಯಿಂದಲೇ ಆಡಳಿತ ಆರಂಭವಾಗಬೇಕೇ ಹೊರತು ದೆಹಲಿಯಿಂದ ಅಲ್ಲ ಎಂದ  ಶ್ರೀನಿವಾಸ ಪೂಜಾರಿ ಗ್ರಾಮಸಭೆಗಳು ಹಳ್ಳಿಯಲ್ಲಿ  ನಡೆದು  ಈ ಮೂಲಕ ಊರಿನ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ  ಸಫಲರಾಗಬೇಕು ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
ಸಭಾಧ್ಯಕ್ಷತೆಯನ್ನು  ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ನಾಮಫಲಕವನ್ನು  ಬೆಟ್ಟಂಪಾಡಿ  ಗ್ರಾಪಂ ಅಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಅನಾವರಣಗೊಳಿಸಿದರು.ಸಭಾಕಾರ್ಯಕ್ರವನ್ನು  ಜಿಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್ ಉದ್ಘಾಟಿಸಿದರು. ವೇದಿಕೆಯಲ್ಲಿ  ತಾಪಂ ಅಧ್ಯಕ್ಷ ಶಂಭು ಭಟ್ , ಎಪಿಎಂಸಿ ಸದಸ್ಯ  ರಂಗನಾಥ ರೈ ಗುತ್ತು , ತಾಪಂ ಕಾರ್ಯನಿರ್ವಹಣಾಧಿಕಾರಿ  ಜಯಾನಂದ ಪೂಜಾರಿ , ಇದರ್ೆ-ಬೆಟ್ಟಂಪಾಡಿ  ಸಹಕಾರಿ ಸಂಘ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು , ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಶಿವಕುಮಾರ್ , ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟರಾಜು , ಕೆಆರ್ಐಡಿಎಲ್ ಇಂಜಿನಿಯರ್ ರವಿಕುಮಾರ್ , ಬೆಟ್ಟಂಪಾಡಿ ಗ್ರಾಪಂ ಪಿಡಿಒ ಶೈಲಜಾ ಪ್ರಕಾಶ್ , ಗ್ರಾಪಂ ಉಪಾಧ್ಯಕ್ಷ ರಮೇಶ್ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...