Monday, 17 September 2012

KABDDI

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆ ಪ್ರಥಮ  ಸ್ಥಾನ ಮತ್ತು ಪುತ್ತೂರು ಕಡಬ ಮಾದರಿ ಶಾಲೆ 20 21 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶ್ರೀರಾಮ ಶಾಲೆಯ ಪಙಈಪಯ್ಯ ಹಿಡಿತಗಾರ, ಸೆಲ್ವಿಸ್ಟರ್ ಸವ್ಯಸಾಚಿ ಮತ್ತು ಕಡಬದ ಕಮರುದ್ದೀನ್ ದಾಳಿಗಾರ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕಿನ ಜ್ಞಾನ ದೀಪ ಶಾಲೆ ಪ್ರಥಮ ಮತ್ತು ಪುತ್ತೂರು ಕಾಣಿಯೂರು ಪ್ರಗತಿ 42 36 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸುಳ್ಯದ ಚೈತ್ರ ಹಿಡಿತಗಾತರ್ಿ, ಜಯಶ್ರೀ ಸವ್ಯಸಾಚಿ ಮತ್ತು ಕಾಣಿಯೂರು ಗೌತಮಿ ದಾಳಿಗಾತರ್ಿ.

ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢ ಶಾಲೆ ಪ್ರಥಮ ಮತ್ತು ಬಂಟ್ವಾಳ ಗೋಳ್ತಮಜಲು ಪ್ರೌಢ ಶಾಲೆ 40 30ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಬೆಳ್ತಗಡಿಯ ಕಿರಣ್ ದಾಳಿಗಾರ, ಮಹಮ್ಮದ್ ಶರೀಫ್ ಹಿಡಿತಗಾರ, ಬಂಟ್ವಾಳ ಗೋಳ್ತಮಜಲಿನ ಮಹಮ್ಮದ್ ಇಕ್ಬಾಲ್ ಸವ್ಯಸಾಚಿ.
ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಾಲೂಕಿನ ಎನ್ ಎಂ ಪಿ ಟಿ ಶಾಲೆ ಪ್ರಥಮ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಶಾಲೆ 27 16 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ಗ್ರಾಮಾಂತರದ ಸರದಿ ದಾಳಿಗಾತರ್ಿ, ಧನಲಕ್ಷ್ಮಿ ಸವ್ಯಸಾಚಿ ಮತ್ತು ಪುತ್ತುರಿನ ಪಲ್ಲವಿ ಹಿಡಿತಗಾತರ್ಿ.
ವಿಟ್ಲ: ಕಬಡ್ಡಿ ಎನ್ನುವುದು ಒಂದೆಡೆ ಮಿತ್ರತ್ವದ ಸ್ವದೇಶೀ ಆಟವಾದರೆ, ಇನ್ನೊಂದೆಡೆ ಕಾಲೆಳೆಯುವ ರಾಜಕೀಯ ಆಟವೂ ಹೌದು. ಸದ್ಯ ಕಬಡ್ಡಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದ್ದು, ವಿದ್ಯಾಥರ್ಿಗಳು ತಳಮಟ್ಟದಿಂದ ಆಟವಾಡುತ್ತಾ ಉನ್ನತ ಮಟ್ಟಕ್ಕೆ ತಲುಪುವಂತಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೊಮವಾರ ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆಯ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯತ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮತ್ತು ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಮಕ್ಕಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಒತ್ತು ನೀಡಿದ್ದು 4ಸಾವಿರ ಕೋಟಿ ಇದ್ದ ಬಜೆಟ್ ಮೊತ್ತವನ್ನು 14ಸಾವಿರ ಕೋಟಿಗೆ ಹೆಚ್ಚಿಸಿದೆ. ಕೇಂದ್ರ ಸಕರ್ಾರ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿಶೇಷ ಸ್ಥಾನವನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಧ್ವಜಾರೋಹಣ ಮಾಡಿದ ದ ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಕೆ ಟಿ ಭಟ್ ಮಾತನಾಡಿ ಕಬಡ್ಡಿಯು ಸಮಯ ಪ್ರಜ್ಞೆ ಮತ್ತು ತಾಳ್ಮೆಯನ್ನು ಹೆಚ್ಚಿಸಲು ಸಹಕಾರಿಯಾದ ಆಟ. ಸದ್ಯ ಕಬಡಿಗೆ ಹೆಚ್ಚು ಮಹತ್ವ ಸಿಗುತ್ತಿರುವುದರಿಂದ ಹೆತ್ತವರು ಮಕ್ಕಳನ್ನು ಇದರಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಸಂಜೀವ ಎಚ್ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ವಿಜೇತ ದೈಹಿಕ ಶಿಕ್ಷಕ ಶಂಕರ್ ವಿ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಮ್ಟೂರು, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ತಾಲೂಕು ಪಂಚಾಯತ್ ಸದಸ್ಯರಾದ ಉಷಾ ಕೆ, ಜೂಲಿಯಾನ ಮೇರಿ ಲೋಬೋ, ವಿಟ್ಲ ಗ್ರಾಮ ಪಂಚಾಯತ್ ಅಧ್ಯಕ್ಷ ರಮಾನಾಥ ವಿಟ್ಲ, ಉಪಾಧ್ಯಕ್ಷೆ ಶಾಂತಾ ಎಸ್ ಎನ್ ಭಟ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುಧಾಕರ, ಬಂಟ್ವಾಳ ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಾನ್ಸಿಸ್ ಡೇಸ್, ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ವರ ಅಮೈ, ದೈಹಿಕ ಶಿಕ್ಷಕ ವಿದ್ಯಾಶಂಕರ್ ಡಿ ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದರೆ ಮತ್ತು ಬಂಟ್ವಾಳ ಸೇರಿ ಏಳು ತಂಡಗಳು ಭಾಗವಹಿಸಿದ್ದವು.

ವಿಟ್ಲ ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಮುಖ್ಯೋಪಾಧ್ಯಾಯ ವಿಶ್ವನಾಥ ಹೆಚ್ ಸ್ವಾಗತಿಸಿದರು. ವಿಶ್ವನಾಥ ಗೌಡ ಕುಳಾಲು ವಂದಿಸಿದರು. ತಾಲೂಕು ದೈಹಿಕ ಶಿಕ್ಷಕ ಸಂಯೋಜಕ ವಿಠಲ ನಾಕ್ ಕಾರ್ಯಕ್ರಮ ನಿರೂಪಿಸಿದರು.

ಮಳೆ ನಡುವೆ :
ಪಂದ್ಯಾಟದ ನಡುವೆ ಸುಮಾರು ಅರ್ಧ ತಾಸಿಗೂ ಅಧಿಕ ಧಾರಾಕಾರ ಮಳೆ ಸುರಿದು ಸ್ವಲ್ಪ ಸಮಯ ಪಂದ್ಯಾಟಕ್ಕೆ ತೊಂದರೆಯಾಗಿತ್ತು. ಮಳೆ ಬರುವ ಮುಸ್ಸೂಚನೆ ತಿಳಿದ ಕಬಡ್ಡಿ ಪಂದ್ಯಾಟ ಸಮಿತಿ ಬೇಕಾದ ಸಿದ್ದತೆ ಮಾಡಿದ್ದು ಮಳೆ ನಿಂತ ಮೇಲೆ ಪಂದ್ಯಾಟ ಮುಂದುವರಿಸಲು ಸಹಕಾರಿಯಾಯಿತು.

 ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಶಾಲೆ ಪ್ರಥಮ  ಸ್ಥಾನ ಮತ್ತು ಪುತ್ತೂರು ಕಡಬ ಮಾದರಿ ಶಾಲೆ 20 21 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಶ್ರೀರಾಮ ಶಾಲೆಯ ಪಙಈಪಯ್ಯ ಹಿಡಿತಗಾರ, ಸೆಲ್ವಿಸ್ಟರ್ ಸವ್ಯಸಾಚಿ ಮತ್ತು ಕಡಬದ ಕಮರುದ್ದೀನ್ ದಾಳಿಗಾರ.
ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕಿನ ಜ್ಞಾನ ದೀಪ ಶಾಲೆ ಪ್ರಥಮ ಮತ್ತು ಪುತ್ತೂರು ಕಾಣಿಯೂರು ಪ್ರಗತಿ 42 36 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸುಳ್ಯದ ಚೈತ್ರ ಹಿಡಿತಗಾತರ್ಿ, ಜಯಶ್ರೀ ಸವ್ಯಸಾಚಿ ಮತ್ತು ಕಾಣಿಯೂರು ಗೌತಮಿ ದಾಳಿಗಾತರ್ಿ.

ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢ ಶಾಲೆ ಪ್ರಥಮ ಮತ್ತು ಬಂಟ್ವಾಳ ಗೋಳ್ತಮಜಲು ಪ್ರೌಢ ಶಾಲೆ 40 30ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಬೆಳ್ತಗಡಿಯ ಕಿರಣ್ ದಾಳಿಗಾರ, ಮಹಮ್ಮದ್ ಶರೀಫ್ ಹಿಡಿತಗಾರ, ಬಂಟ್ವಾಳ ಗೋಳ್ತಮಜಲಿನ ಮಹಮ್ಮದ್ ಇಕ್ಬಾಲ್ ಸವ್ಯಸಾಚಿ.
ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ತಾಲೂಕಿನ ಎನ್ ಎಂ ಪಿ ಟಿ ಶಾಲೆ ಪ್ರಥಮ ಮತ್ತು ಪುತ್ತೂರು ತಾಲೂಕಿನ ಕಾಣಿಯೂರು ಪ್ರಗತಿ ಶಾಲೆ 27 16 ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಮಂಗಳೂರು ಗ್ರಾಮಾಂತರದ ಸರದಿ ದಾಳಿಗಾತರ್ಿ, ಧನಲಕ್ಷ್ಮಿ ಸವ್ಯಸಾಚಿ ಮತ್ತು ಪುತ್ತುರಿನ ಪಲ್ಲವಿ ಹಿಡಿತಗಾತರ್ಿ.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...