Friday, 7 September 2012

Jagadish shetty press_SMT


ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥದಲ್ಲಿ  ಯಾವುದೇ ದೋಷವಿಲ್ಲ
ಪುತ್ತೂರು: ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉದ್ಯಮಿ ಮುತ್ತಪ್ಪ ರೈ ಕೊಡುಗೆಯಾಗಿ ನೀಡಿದ ಬ್ರಹ್ಮರಥದಲ್ಲಿ  ಯಾವುದೇ ದೋಷವಿಲ್ಲ. ಈ ಬಗ್ಗೆ ದೈವಜ್ಞರಲ್ಲಿ  ಚಿಂತನೆ ನಡೆಸಿಯೇ ದೇವರಿಗೆ ಸಮರ್ಪಣೆ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ  ಯಾವುದೇ ಗೊಂದಲ ಬೇಡ ಎಂದು  ಬ್ರಹ್ಮರಥ ನಿಮರ್ಾಣ ಸಮಿತಿಯ ಮುಖಂಡ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರಿನಲ್ಲಿ  ಶುಕ್ರವಾರದಂದು ಸುದ್ದಿಗೋಷ್ಟಯಲ್ಲಿ ಮಾತನಾಡಿದ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ , ಇತ್ತೀಚೆಗೆ ವಾಹಿನಿಯೊಂದರಲ್ಲಿ  ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುತ್ತಪ್ಪ ರೈಯವರು ಸಮರ್ಪಣೆ ಮಾಡಿದ ಬ್ರಹ್ಮರಥದಲ್ಲಿ  ದೋಷ ಇದೆ ಎಂಬ ಅರ್ಥದಲ್ಲಿ  ಸುದ್ದಿ ಪ್ರಸಾರವಾಗಿತ್ತು. ಹೀಗಾಗಿ ಅನೇಕ ಭಕ್ತಾದಿಗಳು ಗೊಂದಲಕ್ಕೆ ಹಾಗೂ ಮಾನಸಿಕವಾಗಿ ನೊಂದಿದ್ದಾರೆ. ವಾಸ್ತವವಾಗಿ ಬ್ರಹ್ಮರಥ ನಿಮರ್ಾಣ ಹಾಗೂ ಸಮರ್ಪಣೆಯಲ್ಲಿ  ಯಾವುದೇ ದೋಷವಿಲ್ಲ. ಈ ಬಗ್ಗೆ ದೈವಜ್ಞರಲ್ಲಿ  ಹಾಗೂ ವಾಸ್ತು ತಜ್ಞರಲ್ಲಿ  ವಿಚಾರಿಸಿಯೇ ರಥ ಸಮರ್ಪಣೆ ಮಾಡಲಾಗಿದೆ. ರಥ ನಿಮರ್ಾಣದ ಕೆಲಸದಲ್ಲಿ  ಯಾವುದೇ ಸಣ್ಣ ತೊಂದರೆಯೂ ಬಂದಿಲ್ಲ. ಅದು ಮಾತ್ರವಲ್ಲ ರಥ ಸಮರ್ಪಣೆ ಮಾಡಿದ ಬಳಿಕ 4 ಬಾರಿ ರಥೋತ್ಸವವೂ ನಡೆದಿದೆ.ಆಗಲೂ ಯಾವುದೇ ತೊಂದರೆ ಬಂದಿಲ್ಲ.  ಹೀಗಾಗಿ ಈ ರಥದಲ್ಲಿ  ಯಾವುದಾದರೂ ದೋಷ ಇದೆ ಎಂದು  ಯಾರಾದರೂ ತೋರಿಸಿದೆ ಮಹಾಲಿಂಗೇಶ್ವರ ನೀಡಿದಷ್ಟು ಶಕ್ತಿಯಿಂದ ಬಹುಮಾನ ನೀಡುವುದಾಗಿ ನೆಲ್ಲಿಕಟ್ಟೆ ಜಗದೀಶ ಶೆಟ್ಟಿ ಸವಾಲು ಹಾಕಿದರು.
ಸುದ್ದಿಗೋಷ್ಟಿಯಲ್ಲಿ  ದೇವಸ್ಥಾನದ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ , ಬ್ರಹ್ಮರಥ ನಿಮರ್ಾಣ ಸಮಿತಿಯ ಕರುಣಾಕರ ರೈ , ರಥಬೀದಿ ನಿಮರ್ಾಣ ಕಾರ್ಯದ ಕೃಷ್ಣ ಶೆಟ್ಟಿ , ರಥ ನಿಮರ್ಾಣದ ನವೀನ್ ನಾಯ್ಕ್ ಉಪಸ್ಥಿತರಿದ್ದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...