Thursday, 6 September 2012

Ithuru



ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸುವ ಬದಲು ಅದನ್ನು ಯಾವ ರೀತಿಯಲ್ಲಿ ತಮ್ಮ ಪ್ರಯೋಜನಕ್ಕಾಗಿ ಹೇಗೆ ಉಪಯೋಗಿಸುವುದು ಎನ್ನುವ ಲೆಕ್ಕಾಚಾರದಲ್ಲೇ ಕೆಲವು ಜನಪ್ರತಿನಿಧಿಗಳು  ಹಾಗೂ ಅಧಿಕಾರಿ ವರ್ಗದವರಲ್ಲಿರುತ್ತದೆ.ಇದನ್ನು ಬಯಲಿಗೆಳೆಯುವ  ಜನರ ಮೇಲೆ ಈ ವರ್ಗಗಳಿಂದ ವಿರೋಧಗಳೂ ವ್ಯಕ್ತವಾಗಿತ್ತಿದೆ.ಇಂಥಹುದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್ ನಲ್ಲಿ ನಡೆದಿದೆ.ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳು ಇಲ್ಲಿ ನಡೆದ ಹಲವು ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಆರೋಪ ಮಾಡಿದ ವ್ಯಕ್ತಿಯ ಮೇಲೆಯೇ ಇಲ್ಲಿ ದೂರುಗಳನ್ನು ನೀಡಲಾಗುತ್ತಿದೆ.
ಬುದ್ದಿವಂತರ ಜಿಲ್ಲೆಯಂದೇ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸರಕಾರವ್ನನು ವಂಚಿಸಿ ಸರಕಾರದ ಯೋಜನೆಗಳಿಂದಲಾಭವನ್ನು ಪಡೆಯುವ ಪ್ರಕ್ರಯೆಗಳು ನಿರಂತರವಾಗಿ ನಡೆಯುತ್ತಿದೆ.ಇದಕ್ಕೆ ಒಂದು ಸೂಕ್ತ ಉದಾಹರಣೇ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಐತೂರು ಗ್ರಾಮಪಂಚಾಯತ್  ಎನ್ನಬಹುದಾಗಿದೆ.2010=11 ರ ಸಾಲಿನ ಈ ಗ್ರಾಮಪಂಚಾಯತ್ ಗ್ರಾಮ ನೈರ್ಮಲ್ಯಕಗಕ್ಕೋಸ್ಕರ  ಇಲ್ಲಿನ ಶೀವಾಜಿ ನಗರದಲ್ಲಿ ತ್ಯಾಜ್ಯ ವಿಲೇವಾರಿ ಗುಂಡಿಯೊಂದನ್ನು ತೋಡಲು ಬರೋಬ್ಬರಿ 28 ಸಾವಿರ ರುಪಾಯಿಗಳನ್ನು ಡ್ರಾ ಮಾಡಿಕೊಂಡಿದೆ.ಆದರೆ ಇಂದಿನವರೆಗೂ ಇಲ್ಲಿ ತ್ಯಾಜ್ಯಗಳನ್ನು ಸುರಿಯುವ ಕೆಲಸ ನಡೆದಿಲ್ಲ.ಮಾನವ ಕೆಲಸದಿಂದ ಅಥವಾ ಯಂತ್ರಗಳಳ ಮೂಲಕ ನಡೆಸುವ ಈ ಕಲಸಕ್ಕೆ ಹೆಚ್ಚೆಂದರೆ ಕೇವಲ 10 ಸಾವಿರದಷ್ಟು ಮಾತ್ರ ಖಚರ್ಾಗುತ್ತಿದ್ದರೂ,ಸದ್ರಿ ಗ್ರಾಮಪಂಚಾಯತ್ ಮಾತ್ರ ಇದಕ್ಕೆ ಇಷ್ಟೊಂದು ಮೊತ್ತವನ್ನು ಯಾವ ರೀತಿಯಲ್ಲಿ ವಹಿಸಿತು ಎನ್ನುವ ಆಶ್ಚರ್ಯವು ಇಲ್ಲಿನ ಸ್ಥಳೀಯರಲ್ಲಿ ಕಾಡುತ್ತಿದೆ.ಅಲ್ಲದೆ ಕಾಮಗಾರಿಯು ಮುಗಿಯುವ ಮೊದಲೇ ಇದರ ಕಾಮಗಾರಿಯ ಬಿಲ್ಲನ್ನು ಪಡೆಯುವ ಮೂಲಕ ಪಂಚಾಯತ್ ಸರಕಾರಕ್ಕೆ ಮೋಸ ಮಾತ್ತಿದೆ ಎನ್ನುವ ಆರೋಪಗಳೂ ಸ್ಥಳೀಯರಿಂದ  ಕೇಳಿಬರುತ್ತಿದೆ.

ಬೈಟ್: ಕೆ.ಪಿ ಮೋಹನ್ 

ಐತೂರು ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷ
ತ್ಯಾಜ್ಯ ವಿಲೇವಾರಿ ಘಟಕವನ್ನು ಪಂಚಾಯತ್ ನ ನಿರ್ಣಯದ ಮೂಲಕವೇ ಕೈಗೆತ್ತಿಕೊಂಡಿದ್ದು, ಮುಳೆಯಿಂದಾಗಿ  ಈ ಗುಂಡಿಗೆ ಮಣ್ಣನ್ನು ತೆಗೆಯುವ ಕಾರ್ಯ ಪಂಚಾಯತ್ ನ ಆದೇಶದಂತೆ ಇದನ್ನು ಗುತ್ತಿಗೆ ಪಡೆಯುತ್ತಿರುವ ಗುತ್ತಿಗೆದಾರರು ಮಾಡುತ್ತಿದ್ದಾರೆ.ಪಂಚಾಯತ್ ಪ್ರಕಾರ ಇದೊಂದು ಲ್ಯಾಂಡ್ ಫಲ್ ತಂತ್ರಜ್ಷಾನವಿರುವ ಗುಂಡಿಯಾಗಿದ್ದರೂ ಇದನ್ನು ನಿರ್ವಹಿಸಬೇಕಾದ ರೀತಿಯಲ್ಲಿ ಇದನ್ನು ಮಾಡದೇ ಇರುವುದರಿಂದಾಗಿ ಪದೇ ಪದೇ ಇದರ ಮಣ್ಣನ್ನು ಸರಿಸುವ ಕೆಲಸವನ್ನು ಪಂಚಾಯತ್ ಇಂದು ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಬೈಟ್ ಸತೀಶ್ ಕೆ ಗ್ರಾಮಪಂಚಾಯತ್ ಅಧ್ಯಕ್ಷ

ಸ್ಥಳೀಯರ ಪ್ರಕಾರ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಸರಕಾರಿ ಯೋಜನೆಗ ದುರುಪಯೋಗವಾಗಿದ್ದು ಸೂಕ್ತ ತನಿಖೆ ನಡೆಯಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.ಈ ಗ್ರಾಮಪಂಚಾಯತ್ ಒಟ್ಟು 15 ಸದಸ್ಯರನ್ನು ಒಳಗೊಂಡಿದ್ದು,ಇದರಲ್ಲಿ 8 ಕಾಂಗ್ರೇಸ್ಸ್ ಹಾಗೂ 7ಬಿಜೆಪಿ ಸದಸ್ಯರಿದ್ದಾರೆ.ಈ ಕಾರಣದಿಂದಾಗಿ ಎಲ್ಲರೂ ಇದರಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಆರೋಪಗಳೂ ಕೇಳಿಬರುತ್ತಿದೆ. 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...