Sunday, 14 October 2012

M.P.Nalin kumar


ನೇರ ನಡೆನುಡಿಯ ಸಾಹಿತಿ ಡಾ.ಶಿವರಾಮ ಕಾರಂತರು  ಸಾಹಿತ್ಯ ಮಾತ್ರವಲ್ಲ  ಯಕ್ಷಗಾನ , ಆಧ್ಯಾತ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ  ಸಾಧಿಸಿದವರು. ಪ್ರತೀ ಕ್ಷೇತ್ರದಲ್ಲಿ  ಕೂಡಾ ಅವರು  ವ್ಯಕ್ತಿ  ನಿಮರ್ಾಣ ಕೆಲಸ ಮಾಡುತ್ತಿದ್ದರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
 ಪುತ್ತೂರಿನಲ್ಲಿ  ಡಾ.ಶಿವರಾಮ ಕಾರಂತ ಜನ್ಮ ದಿನಾಚರಣೆಯ ಪ್ರಯುಕ್ತ  ಬಾಲವನ ಸಮಿತಿ  ವತಿಯಿಂದ ಕೊಡಮಾಡುವ ಡಾ.ಶಿವರಾಮ ಕಾರಂತ  ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಯಕ್ಷರಂಗದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸಂಸದ ನಳಿನ್ ಕುಮಾರ್ ಮಾತನಾಡಿದರು. ಕಾರಂತರು  ಪ್ರತಿಭೆಯ ಅನ್ವೇಷಣೆ ನಿರಂತರ ಮಾಡುತ್ತಿದ್ದರು. ಹೀಗಾಗಿ ಯಕ್ಷರಂಗದಲ್ಲಿ  ಪೇತ್ರಿ ಮಾಧವ ನಾಯ್ಕ್ರಂತಹ ಹಿರಿಯ ಕಲಾವಿದರನ್ನು  ತಮ್ಮ ಜೊತೆ ಸುಮಾರು  35 ವರ್ಷಗಳ ಕಾಲವೂ ಜೊತೆಯಲ್ಲೇ ಇರಿಸಿಕೊಂಡಿದ್ದರು ಎಂದ ನಳಿನ್ ಸಮಾಜದಲ್ಲಿ  ಅಸ್ಪಶ್ಯತೆ ಹಾಗೂ ಇತರ ಕಂದಾಚಾರಗಳ ಬಗ್ಗೆಯೂ ಕಾರಂತರು  ಧ್ವನಿ ಎತ್ತಿದ್ದರು ಎಂದು  ನಳಿನ್ ಹೇಳಿದರು.
ಬಾಲವನ ಅಭಿವೃದ್ಧಿಗೆ ಸಂಸದರ ನಿಧಿಯಿಂದ 5 ಲಕ್ಷ ರೂಪಾಯಿ ನೀಡುವುದಾಗಿ  ಇದೇ ವೇಳೆ ನಳಿನ್ ಕುಮಾರ್ ಘೋಷಿಸಿದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...