Friday, 12 October 2012

Balavana Habba


ಯಕ್ಷಗಾನಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೇ ದೊರಕುವಂತೆ ಮಾಡುವಲ್ಲಿ ಹಾಗೂ ಯಕ್ಷಗನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆಯ ಹಿಂದೆ ಶಿವರಾಮ ಕಾರಂತರ ಕೊಡುಗೆ ಅಪಾರವಾದುದು ಎಂದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಎಂ.ಎಲ್ ಸಾಮಗ ಹೇಳಿದರು.ಅವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಕಾರಂತರ ಕರ್ಮಭೂಮಿ ಬಾಲವನದಲ್ಲಿ ನಡೆದ 111 ನೇ ಕಾರಂತರ ಜನ್ಮದಿನಾಚರಣೇ ಸಮಾರಂಭವ್ನನು ಉದ್ದೇಶಿಸಿ ಮಾತನಾಡಿದರು.
ಫ್ರೋ.ಎಂ.ಎಲ್ ಸಾಮಗ
ಅಧ್ಯಕ್ಷರು ಕನರ್ಾಟಕ ಯಕ್ಷಗಾನ ಬಯಲಾಟ ಬೆಂಗಳೂರು.
ಸಾಹಿತ್ಯ ಸೇರಿದಂತೆ ಎಲ್ಲಾ ರಂಗಗಳಿಗೂ ಶಿವರಾಮ ಕಾರಂತರ ಕೊಡುಗೆ ಅಪಾರವಾಗಿದ್ದು ಯಕ್ಷಗಾನದ ಮೇಲೆ ಅವರು ಬೀರಿದ ಪ್ರಭಾವ ಗುರುತಿಸುವಂತಹುದಾಗಿದ್ದು,ಯಕ್ಷಗಾನದಲ್ಲಿ ನಿರಂತರ ಹೊಸತನವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಅವರು ನಡೆಸಿದ್ದಾರೆ ಎಂಧರು.ತನ್ನ ಎಲ್ಲಾ ಸಾಹಿತ್ಯಗಳಲ್ಲಿ ಮನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿದ ಕಾರಂತರ ಪುಸ್ತಕಗಳು ಎಲ್ಲಾ ಕಾಲಗಳಿಗೂ ಸೂಕ್ತವಾದದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರಂತರ ಕೃತಿಗಳಲ್ಲಿ ಸಾಮಜಿಕ ತುಡಿಗಳು ಮತ್ತು ಶಿರಾಮಕಾರಂತರ ಸಾಂಸ್ಕೃತಿಕ ಒಲವು ಕುರಿತ ಗೋಷ್ಟಿಯು ಇದೇ ಸಂದರ್ಭದಲ್ಲಿ ನಡೆಯಿತು.
 

ಡಾ.ಶಿವರಾಮ ಕಾರಂತರ ಯಕ್ಷರಂಗದ ಹಿರಿಯ ಕಲಾವಿದ ಪೇತ್ರಿ ಮಾಧವ ನಾಯ್ಕ್ ಅವರಿಗೆ 10 ಸಾವಿರ ನಗದು , ಶಾಲು ಲಪುಷ್ಟ ನೀಡಿ ಗೌರವಿಸಲಾಯಿತು. ಯಕ್ಷಗಾನ ಅಕಾಡೆಮಿಯ ಸದಸ್ಯ  ಬಾಸ್ಕರ ಬಾರ್ಯ ಅಭಿನಂದಾ ಮಾತುಗಳನ್ನಾಡಿದರು.  ಸನ್ಮಾನದ ಬಳಿಕ ಮಾತನಾಡಿದ ಪೇತ್ರಿ ಮಾಧವ ನಾಯ್ಕ್ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ  ಪುರಸಭಾ ಅಧ್ಯಕ್ಷೆ ಕಮಲಾ ಆನಂದ್ , ಸಹಾಯಕ ಕಮೀಶನರ್ , ಬಾಲವನ ಸಮಿತಿ ಅಧ್ಯಕ್ಷ ಎಚ್.ಪ್ರಸನ್ನ,ಬಾಲವನ ಈಜುಕೊಳ ಉಪಸಮಿತಿ  ಅಧ್ಯಕ್ಷ ಸೀತಾರಾಮ ರೈ ಉಪಸ್ಥಿತರಿದ್ದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...