ಕೃಷಿಕರ ಬಳಿ ಅನೇಕ ಮಾಹಿತಿಗಳು ಇವೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಅಪರೂಪದ ಕೃಷಿ ಮಾಹಿತಿಗಳ ವಿನಿಮಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿಪರ ಮಾಧ್ಯಮಗಳ ಅನಿವಾರ್ಯತೆ ಇದೆ ಎಂದು ಪತ್ರಕರ್ತ ಶ್ರೀಪಡ್ರೆ ಹೇಳಿದರು.
ಅವರು ಪುತ್ತೂರಿನ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಶುಕ್ರವಾರದಂದು ಪೇಸ್ಬುಕ್ನ ಎಗ್ರಿಕಲ್ವರಿಸ್ಟ್ ಗುಂಪಿನ ಮೊದಲ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಯ ಕಡೆಗೆ ಎಷ್ಟು ಜನ ಆಕಷರ್ಿತರಾಗುತ್ತಾರೋ ಎಂಬುದು ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಮುಖ್ಯವಾಗಿ ಮಾಹಿತಿಗಳ ವಿನಿಯಮವೂ ಅಗತ್ಯವಾಗುತ್ತದೆ. ಮೌಲಿಕವಾದ ಮಾಹಿತಿಗಳು ಕೃಷಿಕರಿಗೆ ವಿವಿಧ ಮೂಲಗಳ ಮೂಲಕ ಸಿಕ್ಕಾಗ ಅನುಭವಗಳ ಮೂಟೆ ದೊಡ್ಡದಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲೂ ಜಳ್ಳು ಇರುತ್ತದೆ , ಅದೇ ರೀತಿ ಪೇಸ್ಬುಕ್ನ ಗುಂಪಿನಲ್ಲೂ ಇರಬಹುದು , ಆದರೆ ಅದಕ್ಕೆ ಹೆಚ್ಚು ಮಹತ್ವ ನೀಡದೆ ಪ್ರಯೋಜನಕರವಾದ ಮಾಹಿತಿಗಳನ್ನು ಪಡೆಯಬಹುದು ಎಂದು ಶ್ರೀಪಡ್ರೆ ಹೇಳಿದರು. ಅನೇಕ ಗುಂಪುಗಳು ಸಮಾಜದಲ್ಲಿ ಗುಂಪುಗಾರಿಕೆ ಮಾಡಲೇ ಇದೆ ಎಂದು ಕೇಳಿದ್ದೇವೆ , ಆದರೆ ಪೇಸ್ಬುಕ್ನ ಈ ಗುಂಪುಗಾರಿಕೆ ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ , ಕೃಷಿಕರಿಗೆ ವಿವಿಧ ರೀತಿಯ ಸಂವಹನಗಳು ತೀರಾ ಅಗತ್ಯ ಇದೆ.ಕೃಷಿಕರು ಕೃಷಿಯ ಜೊತೆಗೆ ಮಾತನಾಡುವುದು ಮತ್ತು ಬರೆಯಲು ಕೂಡಾ ಕಲಿಯಬೇಕು. ಇದಕ್ಕೆ ಹಿಂಜರಿಕೆ ಇರಬಾರದು , ಹೀಗಾದಾಗ ಮಾತ್ರಾ ಮಾಹಿತಿ ಸಿಗಲು ಸಾಧ್ಯ ಎಂದು ಶ್ರೀನಿವಾಸ ಆಚಾರ್ ಹೇಳಿದರು.
ಸಭೆಯಲ್ಲಿ ಗುಂಪಿನ ಅನೇಕ ಸದಸ್ಯರು ಭಾಗವಹಿಸಿದ್ದರು. ಎಗ್ರಿಕಲ್ಚರಿಸ್ಟ್ ಗುಂಪಿನಿಂದಾಗ ಪ್ರಯೋಜನ ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
No comments:
Post a Comment