Thursday, 4 October 2012

Balavana puttur_Press

ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಪುತ್ತೂರು ನೇತೃತ್ವದಲ್ಲಿ  ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ 2012 ಕಾರ್ಯಕ್ರಮವನ್ನು ವ್ಯೆವಿದ್ಯಮಯ ಸಾಹಿತ್ಯ ಮತ್ತು ಸಾಂಸಕೃತಿಕ ಕಾರ್ಯಕ್ರಮಗಳೊಂದಿಗೆ ಬಾಲವನದಲ್ಲಿ ಆಚರಿಸುವ ನಿಟ್ಟಿನಲ್ಲಿ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಅ.10ರಂದು ನಡೆಯುವ ಕಾರ್ಯಕ್ರಮದಲಿ ಪೂವರ್ಾಹ್ನ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ವಿಚಾರಗೋಷ್ಠಿ ನಡೆಯಲಿದೆ.  ಗೋಷ್ಠಿಯನ್ನು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗರು ಉದ್ಘಾಟಿಸಲಿರುವರು. ಮಂಗಳೂರು ವಿಶ್ವವಿದ್ಯಾಲಯದ  ಡಾ. ಸಬೀಹಾ ಭೂಮಿ ಗೌಡ, ಕುವೆಂಪು ವಿಶ್ವವಿದ್ಯಾಲಯದ ಡಾ. ಕೆ.ಕೇಶವ ಶರ್ಮ, ಬಿಳಿಕೆರೆ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಡಾ.ಗಣೇಶ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವರದರಾಜ ಚಂದ್ರಗಿರಿ ವಿಚಾರಗೋಷ್ಠಿಯಲ್ಲಿ  ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು.  ಅಪರಾಹ್ನ  ಶಿವರಾಮ ಕಾರಂತ ಕೃತಿ ಬಎಟ್ಟದ  ಜೀವ ಆಧಾರಿತ ಚಲನಚಿತ್ರ ಪ್ರದರ್ಶನ ಮತ್ತು ನಿದರ್ೆಶಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ  ಬೆಟ್ಟದ ಜೀವ ನಿದರ್ೆಶಕ ವಿ.ಶೇಷಾದ್ರಿ, ಮೈಸೂರು ವಿಶ್ವ ವಿದ್ಯಾಲಯದ ಪ್ರೊ. ಕೃಷ್ಣ ಮೂತರ್ಿ  ಹನ್ನೂರು, ಪುತ್ತೂರು ಕನರ್ಾಟಕ ಸಂಘದ ಅಧ್ಯಕ್ಷ ಬಿ.ಪುರಂದರಭಟ್ ಭಾಗವಹಿಸಲಿದ್ದಾರೆ.  ಸಂಜೆ ನಡೆಯುವ ಪ್ರಸ್ತಿ ಸಮಾರಂಭದಲ್ಲಿ  ನಳಿನ್ ಕುಮಾರ್ ಕಟೀಲ್, ಶಾಸಕಿ ಮಲ್ಲಿಕಾ ಪ್ರಸಾದ್, ತಾ.ಪಂ ಅಧ್ಯಕ್ಷ ಶಂಭು ಭಟ್, ಪುರಸಭಾಧ್ಯಕ್ಷೆ ಕಮಲಾ ಅನಂದ್ ಭಾಗವಹಿಸಲಿರುವರು.
2012ನೇ ಸಲಿನ ಬಾಲವನ ಪ್ರಶಸ್ತಿಗೆ ಮಾಧವ ನಾಯ್ಕ್ ಇವರನ್ನು ಆಯ್ಕೆ ಮಾಡಲಾಗಿದ್ದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಸದಸ್ಯ ಭಾಸ್ಕರ ಬಾರ್ಯ ಇವರು ಅಭಿನಂದನಾ ಭಾಷಣ ಮಾಢಲಿರುವರು. ಈ ಸಂದರ್ಬದಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಾಲವನ  ಸಮಿತಿ ಅಧ್ಯಕ್ಷ ಮತ್ತು ಪುತ್ತೂರು ಸಹಾಯಕ ಆಯುಕ್ತರಾದ ಹೆಚ್.ಪ್ರಸನ್ನ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...