Sunday, 22 January 2023




ಭಾರತೀಯ ಜನತ ಪಕ್ಷ ಅದು ಕಾರ್ಯಕರ್ತರ ಪಕ್ಷ ಇಲ್ಲಿ ನಾಯಕರಿಗಿಂತ ಕಾರ್ಯಕರ್ತರಿಗೆ ಪ್ರಾಮುಖ್ಯತೆ. ಕಳೆದ ಬಾರಿ ಏನಾಗಿದೆಯೋ ನಮಗೆ ಗೊತ್ತಿಲ್ಲ ಆದರೆ ಈ ಬಾರಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷ ಪುತ್ತೂರಿನಲ್ಲಿ ಸ್ಪರ್ಧಿಸಲು ಅವಕಾಶ ಮಾಡಿ ಕೊಡಬೇಕು. ಯಾಕೆಂದರೆ ಪುತ್ತೂರಿನ ಕಾರ್ಯಕರ್ತರ ಬೇಡಿಕೆ, ಆಸೆ ಅದು PUTTILAFORPUTTUR.  ಪುತ್ತೂರಿನ ಕಾರ್ಯಕರ್ತರ ಮನ ಶ್ರದ್ದೆ ಅದು ಅರುಣ್ ಕುಮಾರ್ ಅವರಿಗಾಗಿ ಎಂಬುದಕ್ಕೆ ಸಾಕ್ಷಿ ನಮ್ಮ ಕಾರ್ಯಕರ್ತ ಮಿತ್ರರು ಪ್ರವೀಶ್ ಈಶ್ವರಮಂಗಳ ಮತ್ತು ಅಶೋಕ್ ಬಲ್ಪ ಸುಬ್ರಮಣ್ಯ.  ಈ ಬಾರಿ ಪುತ್ತಿಲರನ್ನು ಪುತ್ತೂರಿನ ಭಾಜಪ ಅಭ್ಯರ್ಥಿಯಾಗಿ ಆಯ್ಕೆ ಮಾಡುವಲ್ಲಿ ಯಾವುದೇ ಅಡೆ ತಡೆಗಳು ಬಾರದಂತೆ ಮತ್ತು ಕಾಣದ ಕೈಗಳು ಕೆಲಸ ಮಾಡದಂತೆ ನಿರ್ವಿಘ್ನದಿಂದ ಅಭ್ಯರ್ಥಿಯಾಗಿ ಆಯ್ಕೆಯಾದರೆ   ಶ್ರೀ ಕ್ಷೇತ್ರ ಶಬರಿಮಲೆಗೆ ಕಾಲ್ನಡಿಯಲ್ಲಿ ಪಾದಯಾತ್ರೆ ಮಾಡುತ್ತೆವೆ ಎಂದು ಅಯ್ಯಪ್ಪನಿಗೆ ಹರಕೆ ಸಲ್ಲಿಸಿದ್ದಾರೆ.   ಇದಲ್ಲವೇ ಅಭಿಮಾನ⁉️  #PuttilaForPuttur #PutturigePuttila #Hindutva




*********************************************************

"ಕಾಡು" ಬಯಲು ರಂಗಮಂಟಪದಲ್ಲಿ ಮತ್ತೊಂದು ನಾಟಕ
25 ಜನವರಿ 2023 ಬುಧವಾರ ಸಂಜೆ ಗಂಟೆ 7 ರಿಂದ.

ಕಿನ್ನರ ಮೇಳ ತುಮರಿ 2022-23
ಅರ್ಪಿಸುವ ನಾಟಕ
"ವೊಯ್ ಜೆಕ್"
ರಚನೆ: ಜಾರ್ಜ್ ಬುಷ್ನರ್ 
ಅನುವಾದ: ಕೆ.ವಿ.ಸುಬ್ಬಣ್ಣ
ಸಂಗೀತ: ಕೆ.ಎನ್.ಭಾರ್ಗವ
ವಿನ್ಯಾಸ ಮತ್ತು ನಿರ್ದೇಶನ :
ಇಕ್ಬಾಲ್ ಅಹಮದ್
ಅವಧಿ: ಒಂದು ಘಂಟೆ ಹದಿನೈದು ನಿಮಿಷ

ಬನ್ನಿ, ನಾಟಕ ನೋಡಿ, ಊಟ ಮಾಡಿ.
ಪ್ರೀತಿಯಿಂದ ಆಮಂತ್ರಿಸುವ,
"ಕಾಡು ಬಳಗ" ನೆಹರೂನಗರ, ಪುತ್ತೂರು.
                                       
*********************************************************************************

                            #ಮತ್ತೆಬಂದಿದೆನಮ್ಮೂರ_ಜಾತ್ರೆ



#ಪಣೆಮರಗಳಬೀಡುಪಾಣಾಜೆಯರಣಮಂಗಲನಿಗೀಗಸಂಭ್ರಮದಜಾತ್ರೆ.

#ರಣಕ್ಕೆಮಂಗಲಹಾಡಿದಪುಣ್ಯನೆಲ_ರಣಮಂಗಲ.

#ಅರಳಿವೃಕ್ಷಗಳಬೀಡುದೈವಗಳನಾಡು_ಅರಳಿಪದವು..

#ಈಹೆಸರಿನಹಿಂದಿರುವಐತಿಹ್ಯಗಳಸುತ್ತಒಂದುನೋಟ.


ಹೌದು ರಣಮಂಗಲನಿಗೀಗ  ಜಾತ್ರೆಯ ಸಂಭ್ರಮ. ನಾವೆಲ್ಲರೂ ಕಾತರದಿಂದ ಕಾಯುತ್ತಿರುವ ನಮ್ಮೂರಿನ ಹಬ್ಬ.

ಅಂದಹಾಗೆ ನಮ್ಮೂರಿರೋದು ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವುನಲ್ಲಿ. ಈ ಹೆಸರಿನ ಹಿಂದೆ ಒಂದು ಸುಂದರ ಐತಿಹ್ಯ ಕಥೆ ಇದೆ.

ಹಿಂದೆ #ಕೌಸ್ತುಭನೆಂಬ ಮಹಾ ತಪಸ್ವಿಯು ತನ್ನ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಾ,ಉಡುಪಿ, ಕದ್ರಿ, ಕಟೀಲು, ಮುಂತಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಈ ಸ್ಥಳಕ್ಕೆ ಬಂದಾಗ, ಇಲ್ಲಿ ಹುಲಿ- ದನ, ಹಾವು- ಮುಂಗುಸಿ ತಮ್ಮ ವೈರತ್ವವನ್ನು ಮರೆತು ಅನ್ಯೋನ್ಯವಾಗಿ ಇರುವುದನ್ನು ಕಾಣುತ್ತಾನೆ, ಮಾತ್ರವಲ್ಲದೆ ಈ ಪ್ರದೇಶದಲ್ಲಿ ಸಾಕಷ್ಟು #ಅರಳಿವೃಕ್ಷಗಳುಬೆಳೆದು_ನಿಂತಿದ್ದು ತನ್ನ ತಪಸ್ಸಿಗೆ ಇದೇ ಯೋಗ್ಯ ಸ್ಥಳವೆಂದು ನಿರ್ಧರಿಸಿ ಅರಳಿ ವೃಕ್ಷದ ಕೆಳಗೆ ಧ್ಯಾನ ಮಾಡುತ್ತಾನೆ.

ಮುಂದೆ ಆತ ದೀಕ್ಷೆ ಪಡೆದ, ಅರಳಿ ವೃಕ್ಷ ಗಳು ಹೇರಳವಾಗಿ ಬೆಳೆದು ನಿಂತ ಈ #ಪ್ರದೇಶವನ್ನುಅರಳಿಪದವುಎಂದುಕರೆದು, ಇದರ ಫಲವಾಗಿ ಕ್ರಮೇಣ ಜನರ ಆಡುನುಡಿಯಲ್ಲಿ #ಅರಳಿಪದವುಆರ್ಲಪದವಾಗಿ_ಪ್ರಚಲಿತವಾಯಿತು ಎನ್ನಲಾಗಿದೆ.


ಇಲ್ಲಿಂದ ದಕ್ಷಿಣದೆಡೆಗೆ ಸುಮಾರು ಒಂದೂವರೆ ಕಿಲೋಮೀಟರ್ ಸಾಗಿದರೆ ಕಾಣಸಿಗುವ ರಮಣೀಯ ತಾಣವೇ #ರಣಮಂಗಲಶ್ರೀಸುಬ್ರಮಣ್ಯ_ಕ್ಷೇತ್ರ. 

ಪಚ್ಚೆ ಪೈರಿನ ವನರಾಶಿಯ ನಡುವೆ ಕಂಗೊಳಿಸುವ ಈ ದೇವಸ್ಥಾನ ಬಲು ನಯನಮನೋಹರವಾಗಿದೆ.


#ಸರಿಸುಮಾರು_800ವರ್ಷಗಳಇತಿಹಾಸವಿರುವ ಈ ಕ್ಷೇತ್ರದ ಐತಿಹ್ಯ, ಅತ್ಯಂತ ಸ್ವಾರಸ್ಯಕರ. ಶತಮಾನಗಳ ಹಿಂದೆ ಹೆಸರಾಂತ ಅರಸು ಪೆರ್ಮಾಣ  ಬಲ್ಲಾಳ ಘಟ್ಟದಾಯಿಂದ  ದಿಗ್ವಿಜಯಕ್ಕಾಗಿ ಸಾಗಿ ಬಂದವನು ಇಲ್ಲಿ #ರಣಕ್ಕೆಮಂಗಳಹಾಡಿದುದರಿಂದಈಸ್ಥಳರಣಮಂಗಲವಾಯಿತಂತೆ. ಮುಂದೆ ಇದೇ ಸ್ಥಳದಲ್ಲಿ ಶ್ರೀ ಸುಬ್ರಮಣ್ಯನ ದೇವಾಲಯ ವನ್ನು ಸ್ಥಾಪಿಸಿದ ಎಂಬುದು ಪೂರ್ವ ಕಥೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಹಿಂದೆ ಬಳ್ಳಾಲರ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರಾಂತ್ಯದ ದೇವಸ್ಥಾನ ಸಾಕಷ್ಟು ಸಂಪತ್ಬರಿತ ವಾಗಿತ್ತು.ಕ್ರಮೇಣ ಬಲ್ಲಾಳರ ಅವನತಿಯ ಕಾಲದಲ್ಲಿ ಊರಿನಲ್ಲಿ ಸಮರ್ಥರೆನಿಸಿಕೊಂಡಿದ್ದ #ವೇದಮೂರ್ತಿಗೋವಿಂದಬೋಳಿಲ್ಲಾಯರಿಗೆ_ಹಸ್ತಾಂತರಿಸಲಾಯಿತು.

ಅಂದಿನಿಂದ ಬೋಳಿಲ್ಲಾಯ ಮನೆತನದ ಸುಮಾರು ಎಂಟು ತಲೆಮಾರಿನ ಮೂಲಕ ಮುಂದುವರಿದು ಇಂದು ಪ್ರಸ್ತುತ #ಶ್ರೀಕೃಷ್ಣಬೋಳಿಲ್ಲಾಯರಆಡಳಿತದಲ್ಲಿಕಾರ್ಯನಿರ್ವಹಿಸುತ್ತಿದೆ.

ಇಲ್ಲಿ ನಾಗನಿಗೆ ಪ್ರಿಯವಾದ ಹತ್ತು ಹಲವು ಸೇವೆಗಳು ನಡೆಯುತ್ತಿದ್ದು ಅದರಲ್ಲೂ ವಿಶೇಷವಾಗಿ ಆಶ್ಲೇಷ ಪೂಜೆ, ಕಾರ್ತಿಕ ಪೂಜೆ ಬಹಳ ಪ್ರಾಮುಖ್ಯವಾದದ್ದು, ದೂರದ ಮೈಸೂರು ಹಾಗೂ ಬೆಂಗಳೂರು ಕಡೆಯಿಂದಲೂ ಭಕ್ತರು ಆಗಮಿಸುತ್ತಿದ್ದು ತಮ್ಮ ಸೇವೆಯನ್ನು ಸಮರ್ಪಿಸಿ ಸದಾ ಧನ್ಯತಾಭಾವದಿಂದ ತೆರಳುತ್ತಿದ್ದಾರೆ.


ಈ ದೇವಸ್ಥಾನದ ಅಧೀನದಲ್ಲಿರುವ ದೈವಸ್ಥಾನವೆಂದರೆ #ಶ್ರೀಪೂಮಾಣಿಕಿನ್ನಿಮಾಣಿ_ದೈವಸ್ಥಾನ.

ದೇವಸ್ಥಾನದಿಂದ ಬಯಲು ದಾರಿಯಾಗಿ ನಡೆದು ಬರುವುದಾದರೆ ಕೆಲವೇ ನಿಮಿಷಗಳು ಸಾಕು. ಆರ್ಲಪದವಿನ ಸುಂದರ ಪರಿಸರದಲ್ಲಿ ಕಾಣಸಿಗುವ ಈ ದೈವಸ್ಥಾನವು ತನ್ನದೇ ಆದ ಇತಿಹಾಸವನ್ನು ಹೊಂದಿದೆ.

ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ಮಹಾ ವಿಷ್ಣುವಿನ ಅಂಶ ಸಂಭೂತರು. #ಮಹಾವಿಷ್ಣುತಾವರೆಹೂವಿನಎಸಳಿನಲ್ಲಿದೈವಗಳನ್ನು_ಸೃಷ್ಟಿಸಿದನಂತೆ. ದೈವಗಳು ದಕ್ಷಿಣ ಗಂಗೆ ಎಂದೆನಿಸಿದ ತಲಕಾವೇರಿಯಲ್ಲಿ, ಅಲ್ಲಿನ ಅರ್ಚಕರಿಗೆ  ಚಿಕ್ಕ ಮಕ್ಕಳ ರೂಪದಲ್ಲಿ  ದೊರೆತರು. ಅರ್ಚಕರು ಮಕ್ಕಳನ್ನು ದೇವಾಲಯಕ್ಕೆ ಕರೆದೊಯ್ದು ಅಲ್ಲಿಯೇ ಲಾಲನೆ ಪಾಲನೆ ಮಾಡುತ್ತಿರಬೇಕಾದರೆ,  ಶೈವಾವಸ್ಥೆ ಕಳೆದು  ಪ್ರೌಢಾವಸ್ಥೆಗೆ ಬಂದಂತೆ ಅವರಿಗೆ ತಮ್ಮ ಸೃಷ್ಟಿಯ ಅರಿವು ಉಂಟಾಯಿತು. ಒಂದು ದಿನ ಅವರಿಗೆ ಮಹಾವಿಷ್ಣುವು ಕನಸಿನಲ್ಲಿ ದರ್ಶನವಿತ್ತು, ಮಕ್ಕಳೇ, ನೀವಿನ್ನು ಇಲ್ಲಿರಬಾರದು, ತುಳುನಾಡಿಗೆ ಹೋಗಿ ಅಲ್ಲಿಯ ಜನರಿಗೆ ದೈವಪ್ರಜ್ಞೆ ಉಂಟಾಗುವಂತೆ ಮಾಡಿ, ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳಾಗಿ ಆರಾಧನೆ ಪಡೆಯಿರಿ, ಎಂದು ಆಜ್ಞಾಪಿಸಿದರು. ಈ ರೀತಿಯಾಗಿ ಇಲ್ಲಿ ನೆಲೆನಿಂತವರು ಇಂದು ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾ ಜನರಲ್ಲಿ ಭಯ ಭಕ್ತಿ ತುಂಬುವಂತೆ ಮಾಡಿದ ದೈವಗಳೇ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು.

ಇವರ ಜೊತೆಗೆ ಪರಿವಾರ ದೈವಗಳಾದ ರಾಜನ್ ದೈವ ಮಲರಾಯ ದೈವಗಳು ಇಲ್ಲಿ ನೆಲೆ ನಿಂತಿವೆ.

ಪ್ರತಿವರ್ಷ ನಡೆಯುವ #ವಾರ್ಷಿಕಜಾತ್ರೆಯೂಜನವರಿತಿಂಗಳ_22ರಿಂದದೇವಾಲಯದಿಂದಮೊದಲ್ಗೊಂಡು28ರವರೆಗೆವಿವಿಧಧಾರ್ಮಿಕಹಾಗೂಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತಿ ವಿಜೃಂಭಣೆಯಿಂದ ನಡೆಯುತ್ತಿದೆ.. ಬನ್ನಿ ನಮ್ಮೂರಿನ ಜಾತ್ರೋತ್ಸವಕ್ಕೆ ನಿಮಗೆಲ್ಲರಿಗೂ #ಪ್ರೀತಿಪೂರ್ವಕ_ಸ್ವಾಗತ.


ಮಾಹಿತಿ ಆಧಾರ. ಕುಮಾರ ವೈಭವ ರಣ ಮಂಗಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ದ ವಿಶೇಷಾಂಕ.1994.

ಮತ್ತು ಕೊರಗಪ್ಪ ಪೂಜಾರಿ ನಡುಕಟ್ಟ ಇವರ ರಣಮಂಗಲ‌ ಕ್ಷೇತ್ರ ಮಹಾತ್ಮೆ ಯಕ್ಷಗಾನ.

✍ ಹರೀಶ್ ಕೆ ಪಾಣಾಜೆ.

ಸಹಕಾರ . ಮಹಾಬಲೇಶ್ವರ ಭಟ್ಟ ಗಿಳಿಯಾಲು. ಪ್ರದೀಪ್ ಪಾಣಾಜೆ. 

ಚಿತ್ರ.. ಹರೀಶ್ ಪೂಜಾರಿ ಅರುಣ್ ಸ್ಟುಡಿಯೋ ಆರ್ಲಪದವು 

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...