************************************************************
ಈ ಮಹಿಳಾ ನಿರ್ವಾಹಕಿ ಕೇರಳದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹೆಗಲಿಗೆ ಒಂದು ನೋಟಿಸ್ ನೇತು ಹಾಕಲಾಗಿದೆ.
ಅದರಲ್ಲಿ ಏನು ಬರೆದಿದೆ ಎಂದರೆ
" ಸಂಬಳವಿಲ್ಲದೆ ಕೆಲಸ ಮಾಡುತ್ತಿರುವ
44ನೇ ದಿನ "ಎಂದು. ಉಚಿತ ಸೌಲಭ್ಯಗಳು ಹಾಗೂ ಉಚಿತ ಭಾಗ್ಯಗಳನ್ನು ಕೊಡುವ ಸರ್ಕಾರಗಳ ಆರ್ಥಿಕ ದಿವಾಳಿತನ.
ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಆಗದಿರಲಿ ಎಂತಾದರೆ ಉಚಿತ ಭಾಗ್ಯಗಳು ಹಾಗೂ ಸೌಲಭ್ಯಗಳನ್ನು ಕೊಡುವ ಯಾವುದೇ ಪಕ್ಷವನ್ನು ಬೆಂಬಲಿಸದಿರಿ.
ಉಚಿತ ಸೌಲಭ್ಯಗಳು ದೊರಕಬೇಕಾಗಿರುವುದು
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಮಾತ್ರ.
*************************************************************
ಪುತ್ತೂರು: ಕೆಎಸ್‌ಆರ್‌ಟಿಸಿ ನೌಕರರು ತಮ್ಮ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 24ರಂದು ಬೆಳಗ್ಗೆ ೧೦.೩೦ರಿಂದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ
*******************************************************************************************************
ಪುತ್ತೂರು: ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಜ.23ರಂದು ಬೆಳ್ಳಂಬೆಳಗೆ ನಡೆದಿದೆ.
ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ವೇಗದಿಂದ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಸ್ಕೂಟರ್‌ಗಳಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರೊಬ್ಬರು ತೀವ್ರ ಗಾಯಗೊಂಡಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಉಳಿದಂತೆ ಇನ್ನೊಂದು ಸ್ಕೂಟರ್‌ನ ಸವಾರ ಶಾಂತಿಗೋಡು ದೇವಸ್ಥಾನದ ಗುಮಸ್ತ ವಿಜಿತ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ವೇಗವಾಗಿ ಬಂದು ಅಪಘಾತಕ್ಕೆ ಕಾರಣವಾದ ಸ್ಕೂಟರ್ ಸವಾರ ಉಮ್ಮರ್ ಎಂದು ಸ್ಥಳೀಯರು ತಿಳಿಸಿದ್ದಾರೆ.

**************************************************************************************************
ಎಸ್.ಕೆ.ಎಸ್.ಎಸ್.ಎಫ್. ವಿದ್ಯಾರ್ಥಿ ಯುವಜನ ಸಂಘಟನೆಯು ಜನವರಿ 26 ಪ್ರಜಾಪ್ರಭುತ್ವ ದಿನದ ಪ್ರಯುಕ್ತ ರಾಷ್ಟ್ರ ರಕ್ಷಣೆಗೆ ಸೌರ್ಹಾವತೆಯ ಸಂಕಲ್ಪ' ಎಂಬ ದ್ವೇಯ ವಾಕ್ಯದೊಂದಿಗೆ ದೇಶದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರತೀ ವರ್ಷ ಹಮ್ಮಿ ಕ್ಕೊಳ್ಳುವ ಮಾನವ ಸರಪಳಿ ಕಾರ್ಯಕ್ರಮವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕೇಂದ್ರಗಳಲ್ಲಿ ನಡೆಯಲಿದೆ. ಎಸ್.ಕೆ.ಎಸ್.ಎಸ್.ಎಫ್, ಈಸ್ ಜಿಲ್ಲಾ ಸಮಿತಿ ವತಿಯಿಂದ ಮಧ್ಯಾಹ್ನ 200ರಿಂದ ಉಪ್ಪಿನಂಗಡಿಯಲ್ಲಿ ನಡೆಯಲಿದೆ.
ಪ್ರಮುಖ ಕಾರ್ಯಕ್ರಮಗಳು ಸೌಹಾರ್ದ, ಜಾಥಾ, ಮಧ್ಯಾಹ್ನ 2:00 ಗಂಟೆಗೆ ಸೌಹಾರ್ದತೆಯ ಸಂದೇಶ ಸಾರುವ ಜಾಥಾ ಕೂಟೇಲು ದರ್ಗಾ ಝಿಯಾರತಿನೊಂದಿಗೆ ಆರಂಭಗೊಳ್ಳಲಿದ್ದು ವಿವಿಧ ದಫ್ , ತಂಡಗಳು ಭಾಗವಹಿಸಲಿದೆ.
ಎಸ್.ಕೆ.ಎಸ್.ಎಸ್.ಎಫ್., ಇವರ ಉಪ ವಿಭಾಗಗಳಾದ ವಿಖಾಯ , ತೈಲಬಾ, ಕ್ಯಾಂಪಸ್ ತಂಡಗಳು ಸಮವಸ್ತ್ರದೊಂದಿಗೆ ಪಾಲ್ಗೊಳ್ಳಲಿದೆ. ಮೆರವಣಿಗೆಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಘೋಷ ವಾಕ್ಯಾಗಳು ಮೊಳಗಲಿದೆ. ತದನಂತರ 4 ಗಂಟೆಗೆ ಸಭಾ ಕಾರ್ಯಕ್ರಮವು ನಡೆಯಲಿದೆ. ನೆರೆದ ಜನರೆಲ್ಲರೂ ಪರಸ್ಪರ ಕೈಜೋಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ . ಸಮಸ್ತ ಕೇಂದ್ರ ಮುಷವಾರ ಸದಸ್ಯರಾದ ಬಹು ಬಂಬ್ರಾನ ಉಸ್ತಾದರು. ಉದ್ಘಾಟಿಸಲಿದ್ದು, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಬಹು| ಉಸ್ಮಾನುಲ್ ಫೈಝಿ ಉಸ್ತಾದರು ಅನುಗ್ರಹ ಭಾಷ ಮಾಡಲಿದ್ದಾರೆ. ಎಸ್‌ಎಸ್‌ಎಸ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಆನೀಸ್ ಕೌಸರಿ ವಿಷಯ ಮಂಡಿಸಿ ಮುಖ್ಯ ಭಾಷಣ ಮಾಡಲಿದ್ದಾರೆ.
ಸಮಸ್ಯೆ ಮತ್ತು ಸತ್ವಾ ಉಪ ಸಮಿತಿಗಳ ನೇತಾರರು, ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು
ಬಾಗವಹಿಸಲಿರುವರು, ಸೌಹಾರ್ದ ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಮತ ಬೇಧವಿಲ್ಲದೆ ಸರ್ವರೂ ಈ ಸಂಗಮದಲ್ಲಿ ಭಾಗವಹಿಸಿಯಶಸ್ವಿಗೊಳಿಸಬೇಕಾಗಿ ಎಸ್ ಕೆ ಎಸ್ ಎಸ್ ಎಫ್ ದಕ ಈಸ್ಟ್ ಜಿಲ್ಲೆ ಅಧ್ಯಕ್ಷರಾದ ತಾಜುದ್ದೀನ್ ರಾಹ್ಮನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
No comments:
Post a Comment