Monday, 23 January 2023

ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು , ಪುತ್ತೂರು ಇದರ 2021 | 2022 ರ ಸಾಲಿನ ಮಹಾಸಭೆಯು ಶ್ರೀ ಆಂಜನೇಯ  ಮಂತ್ರಾಲಯದಲ್ಲಿ ನಡೆಯಿತು. 
ಅಧ್ಯಕ್ಷ ಭಾಸ್ಕರ್ ಬಾರ್ಯರ ನೇತೃತ್ವದಲ್ಲಿ ನಡೆದ ಕಾರ್ಯಕಲಾಪದಲ್ಲಿ  ಶ್ರೀಮತಿ ಹರಿಣಾಕ್ಷೀ ಜೆ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.ಕಾರ್ಯದರ್ಶಿ ಗುಡ್ಡಪ್ಪ ಬಲ್ಯ ವಾರ್ಷಿಕ ಆಯ ವ್ಯಯ ವನ್ನು ಸಭೆಯ ಮುಂದಿಟ್ಟರು. ಮುಂದಿನ 5 ವರ್ಷ ಕ್ಕೆ ಜ೦ಟಿ‌ ಸಂಘಗಳ ಪದಾಧಿಕಾರಿಗಳ ಆಯ್ಕೆ ನಡೆಯಿತು .ಗೌರವಾಧ್ಯಕ್ಷರಾಗಿ ಬೊಳುವಾರು ರಮಾನಂದ ನಾಯಕ್ ಅಧ್ಯಕ್ಷ ಭಾಸ್ಕರ್ ಬಾರ್ಯ ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ , ಕಾರ್ಯದರ್ಶಿ  ಆನಂದ ಸವಣೂರು , ಜತೆಕಾರ್ಯದರ್ಶಿ  ಅಚ್ಯುತ ಪಾಂಗಣ್ಣಾಯ ಕೋಡಿಬೈಲು , ಉಪಾಧ್ಯಕ್ಷರುಗಳಾಗಿ  ಪ್ರವೀಣ್ ಕುಮಾರ್ ಬೊಳುವಾರು , ಗುಂಡ್ಯಡ್ಕ ಈಶ್ವರ ಭಟ್ , ಗುಡ್ಡಪ್ಪ ಬಲ್ಯ , ಕೋಶಾಧಿಕಾರಿ ಯಾಗಿ ದುಗ್ಗಪ್ಪ ಯನ್,ಲೆಕ್ಕಪರಿಶೋಧಕರಾಗಿ
ಅಧ್ಯಕ್ಷ ಭಾಸ್ಕರ್ ಬಾರ್ಯ                                                             ರಾಮಚಂದ್ರ ಭಟ್ ದೇವರಗುಂಡಿ 

ಆಯ್ಕೆಗೊಂಡರು.ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್ ಬಾಬು , ಚಂದ್ರಶೇಖರ್ ಭಟ್ ಭಟ್ ಬಡೆಕ್ಕಿಲ ಆಯ್ಕೆಗೊಂಡರು. ಸದಸ್ಯರುಗಳಾಗಿ ಕು೦ಬ್ಳೆ ಶ್ರೀಧರ್ ರಾವ್ , ಪಕಳ ಕುಂಜ ಶ್ಯಾಮ್ ಭಟ್ ,ಚಂದ್ರಶೇಖರ್ ಹೆಗ್ಡೆ , ವಸಂತ ಆಚಾರ್ಯ, ಶ್ರೀಪತಿ ಭಟ್ ಉಪ್ಪಿನಂಗಡಿ , ಸತೀಶ್ ಇರ್ದೆ ,ಯಲ್ ಯನ್ ಭಟ್ ಬಟ್ಯಮೂಲೆ ,ಮುರಳೀಧರ ಕಲ್ಲೂರಾಯ, ನಿತೀಶ್ ಎಂಕಣ್ಣಮೂಲೆ , ದಂಬೆ ಈಶ್ವರ ಶಾಸ್ತ್ರೀ , ನಾ.ಕಾರಂತ ಪೆರಾಜೆ , ಸುಬ್ಬಪ್ಪ ಕೈಕಂಬ ,ಗುರುಮೂರ್ತಿ ಅಮ್ಮಣ್ಣಾಯ ಆಯ್ಕೆ ಗೊಂಡರು. ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಪ್ರೇಮಲತಾ ಟಿ ರಾವ್ ,ಕಾರ್ಯದರ್ಶಿ ಹರಿಣಾಕ್ಷೀ ಜೆ ಶೆಟ್ಟಿ , ಉಪಾಧ್ಯಕ್ಷರುಗಳಾಗಿ ಶುಭಾ ಜೆ ಸಿ ಅಡಿಗ , ಕಿಶೋರಿ ದುಗ್ಗಪ್ಪ ನಡುಗಲ್ಲು ಆಯ್ಕೆ ಮಾಡಲಾಯಿತು, ಸದಸ್ಯರುಗಳಾಗಿ  ಶುಭಾಗಣೇಶ್ , ಜಯಂತಿ  ಹೆಬ್ಬಾರ್ ,ಶಾರದಾ ಅರಸ್ , ಮನೋರಮಾ .ಜಿ. ಭಟ್ , ಭಾರತಿ ಜಯರಾಮ್ , ಲಕ್ಷ್ಮಿ ವಿ.ಜಿ ಭಟ್ , ಹರಿಣೀ ಪುತ್ತೂರಾಯ , ಮಧುರಾ ಜಿ ಭಟ್ ಆಯ್ಕೆಗೊಂಡರು. ರಮೇಶ್‌ ಬಾಬು , ಕು೦ಬ್ಳೆ ಶ್ರೀಧರ ರಾವ್  ಹರಿಣಾಕ್ಷಿ ಜೆ ಶೆಟ್ಟಿ ಅನಿಸಿಕೆ ವ್ಯಕ್ತ ಪಡಿಸಿದರು  ಪ್ರೇಮಲತಾ ಟಿ.ರಾವ್ ಪ್ರಾರ್ಥಿಸಿದ ಸಭೆಗೆ  ಕಾರ್ಯದರ್ಶಿ  ಆನಂದ ಸವಣೂರು ವಂದಿಸಿದರು.ಟಿ
ರಂಗನಾಥ ರಾವ್ ಸಹಕರಿಸಿದರು ಬಳಿಕ ಸಂಘದ ಪಾಕ್ಷಿಕ ಕೂಟ " "ಧರ್ಮಾಂಗದ ದಿಗ್ವಿಜಯ " ತಾಳಮದ್ದಳೆ ನಡೆಯಿತು.


ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಪ್ರೇಮಲತಾ ಟಿ ರಾವ್

ಕಾರ್ಯದರ್ಶಿ ಹರಿಣಾಕ್ಷೀ ಜೆ ಶೆಟ್ಟಿ 


****************************************************************************************************
ಪುತ್ತೂರು:  ವಿವೇಕಾನಂದ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಎಂ.ಆರ್.ಪಿ.ಎಲ್ ಪ್ರಾಯೋಜಿತ ತ್ಯಾಜ್ಯ ನೀರು ಸಂಸ್ಕರಣಾ ಸ್ಥಾವರದ ಎರಡನೇ ಘಟಕದ ಲೋಕಾರ್ಪಣಾ ಸಮಾರಂಭವು 

ಜ. 24ರಂದು ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾ ಭವನದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ ಜೈನ್, ಎಂ.ಆರ್. ಪಿ.ಎಲ್.ನ ಗ್ರೂಪ್ ಜನರಲ್ ಮ್ಯಾನೇಜರ್(ಮಾನವ ಸಂಪನ್ಮೂಲ) ಕೃಷ್ಣ ಹೆಗ್ಡೆ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಇವರುಗಳ ಉಪಸ್ಥಿತಿಯಲ್ಲಿ ಶಾಸಕ ಸಂಜೀವ ಮಠಂದೂರು ಇವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪಾಲಿಟೆಕ್ನಿಕ್‌ನ ಪ್ರಕಟಣೆ ತಿಳಿಸಿದೆ.


*********************************************************************************************

29ರಂದು ‘ಅಡಿಕೆ ಚೊಗರು’
 ಪುಸ್ತಕ ಬಿಡುಗಡೆ

ಪುತ್ತೂರು: ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀ ಪಡ್ರೆ ಅವರ ನೂತನ ಕೃತಿ ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಜ. 29ರಂದು ಪೂರ್ವಾಹ್ನ 11ಕ್ಕೆ ಪರ್ಪುಂಜದ ‘ಸೌಗಂಧಿಕ’ದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೃಷಿ ಲೇಖಕ ಡಾ.ನರೇಂದ್ರ ರೈ ದೇರ್ಲ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಪಡಾರು ರಾಮಕೃಷ್ಣ ಶಾಸ್ತ್ರಿ, ಲೇಖಕ ಶ್ರೀ ಪಡ್ರೆ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಅಡಿಕೆ ಚೊಗರಿನ ತಯಾರಿ ಕ್ರಮ, ವೈಶಿಷ್ಟ್ಯ, ವಿವಿಧ ಉಪಯೋಗ ಮತ್ತಿತರ ಸಂಗತಿಗಳ ಬಗ್ಗೆ ಬೆಳಕುಚೆಲ್ಲುವ ಭಿತ್ತಿಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಚಂದ್ರ ಸೌಗಂಧಿಕ ಮತ್ತು ಮಾಧವ ಕಲ್ಲಾರೆ ಪರಿಸರ ಗೀತೆಗಳನ್ನು ಸಾದರಪಡಿಸಲಿದ್ದಾರೆ.

ಮಲೆನಾಡಿನ ಕೆಲ ಭಾಗಗಳಲ್ಲಿ ಕೆಂಪಡಿಕೆ ಸಂಸ್ಕರಣೆ ವೇಳೆ ಸಿಗುವ, ಗಾಢ ಕಂದು ಬಣ್ಣದ ಉಪಉತ್ಪನ್ನವಾದ ಚೊಗರು ಒಂದು ಬಹೂಪಯೋಗಿ ಪದಾರ್ಥ. ಬೇಯಿಸಿ ಒಣಗಿಸಿದ ಅಡಿಕೆಗೆ ಬಣ್ಣ ಲೇಪನಕ್ಕೆ ಚೊಗರು ಪ್ರಧಾನವಾಗಿ ಬಳಕೆಯಾಗುತ್ತದೆ. ಇದು ಪರಿಸರಸ್ನೇಹಿ, ನೈಸರ್ಗಿಕ ಬಟ್ಟೆ ಬಣ್ಣ. ಗೆದ್ದಲುನಾಶಕವೂ ಹೌದು. ಕರ್ನಾಟಕದಲ್ಲಿ ವಾರ್ಷಿಕ ಸುಮಾರು 2 ಲಕ್ಷ ಲೀಟರಿನಷ್ಟು ಚೊಗರು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅಗತ್ಯಬಿದ್ದರೆ ಇದನ್ನು ಮೂರು ಪಟ್ಟು ಹೆಚ್ಚಿಸಬಹುದಾಗಿದೆ. ಚೊಗರಿನ ವಾಣಿಜ್ಯಿಕ ಸಾಧ್ಯತೆಗಳ ಬಗ್ಗೆ ಕೂಡ ಈ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

***********************************************************************************************
ಪುತ್ತೂರಿನಲ್ಲಿ
 ಮಹಿಳಾ ವಿಚಾರಗೋಷ್ಠಿ

ಪುತ್ತೂರು:  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಪುತ್ತೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಪುತ್ತೂರು ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಜ. 24ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಆಯುರ್ವೇದ ತಜ್ಞರಾದ ಡಾ.ಸುಧಾ ಶ್ರೀಪತಿ ರಾವ್ ಉದ್ಘಾಟಿಸಲಿದ್ದಾರೆ. ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು ಇದರ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಿನ್ಸಿಪಾಲ್ ಶೋಭಿತಾ ಸತೀಶ್, ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಮಹಿಳಾ ಪೊಲೀಸ್ ಠಾಣೆ ಎಸ್‌ಐ ಸೇಸಮ್ಮ ಕೆ.ಎಸ್., ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಉದಯ ಕುಮಾರ್ ಜಿ.ಕೆ., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಇದರ ಅಧ್ಯಕ್ಷರಾದ ಮಹಾಬಲ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


***************************************************************************************************
ಕೆಎಸ್‌ಆರ್‌ಟಿಸಿ 
ನೌಕರರ ಸತ್ಯಾಗ್ರಹ

ಪುತ್ತೂರು:  ಕೆಎಸ್‌ಆರ್‌ಟಿಸಿ ನೌಕರರು ತಮ್ಮ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನವರಿ 24ರಂದು ಬೆಳಗ್ಗೆ ೧೦.೩೦ರಿಂದ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಎಐಟಿಯುಸಿ, ಸಿಐಟಿಯು, ಕೆಎಸ್‌ಆರ್‌ಟಿಸಿ ಎಸ್‌ಸಿ ಯೂನಿಯನ್ ಇವರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ವಜಾಗೊಂಡ ಕಾರ್ಮಿಕರನ್ನು ಯಾವುದೇ ಷರತ್ತಿಲ್ಲದೆ ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ವೇತನ ಪರಿಷ್ಕರಣೆ ಮಾಡಬೇಕು, ಸಾರಿಗೆ ನಿಗಮಗಳಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರ ನೇಮಕಾತಿ ನಿಲ್ಲಿಸಬೇಕು. ೨೦೨೦ರ ಸೆ.೨ರಂದು ಸಲ್ಲಿಸಿದ್ದ ಇತರ ಬೇಡಿಕೆಗಳನ್ನು ಈಡೇರಿಸಬೇಕು. ನಿವೃತ್ತ ಕಾರ್ಮಿಕರಿಗೆ ಪಿಂಚಣಿ ಮತ್ತು ಉಪಧನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ನಾಯಕರ ಸಲಹೆ ಮತ್ತು ಸೂಚನೆಯಂತೆ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸ್ಟಾಫ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***************************************************************************************************



ಪುತ್ತೂರು : ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕೆಎಸ್‌ ಭಗವಾನ್‌ನನ್ನು ಬಂಧಿಸಿ,
ಹಿ೦ದೂ ರಾಷ್ಟ್ರ-ಜಾಗೃತಿ ಆಂದೋಲನದಲ್ಲಿ ಎಲ್ಲಾ ಹಿ೦ದೂಪರ ಸಂಘಟನೆಗಳು ಮಾಡಿದ ಬೇಡಿಕೆ.

ಪ್ರತಿಭಟನೆಯಲ್ಲಿ ಮಾತನಾಡಿದ  ಆನಂದ ಗೌಡ   ಮೈಸೂರಿನ ವಿವಾದಿತ ಪ್ರಾಧ್ಯಾಪಕ ಕೆ ಎಸ್ ಭಗವಾನ್‌ನು ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಾನೆ. ಕೆ ಎಸ್ ಭಗವಾನ್ ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಭು ಶ್ರೀರಾಮನು ಮದ್ಯಾಹ್ನ ತನ್ನ ಪತ್ನಿ ಸೀತೆಯ ಜೊತೆಗೆ ಸೇರಿ ಮದ್ಯಪಾನವನ್ನು ಮಾಡುತ್ತಿದ್ದನು. ಶ್ರೀರಾಮ ಆದರ್ಶ ಅಲ್ಲವೇ ಅಲ್ಲ. ಶ್ರೀರಾಮ ೧೧,೦೦೦ ಅಲ್ಲ, ಕೇವಲ ೧೧ ವರ್ಷ ಆಡಳಿತವನ್ನು ಮಾಡಿದ್ದನು. ಹೀಗೆ ಅತ್ಯಂತ ಕೆಟ್ಟದಾಗಿ ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾನೆ. ಈ ಹಿಂದೆ ಇದೇ ರೀತಿಯಲ್ಲಿ ಪ್ರಭು ಶ್ರೀರಾಮಚಂದ್ರನ ಬಗ್ಗೆ ಅಪಮಾನ ಮಾಡಿದ್ದಾಗ ಅವನ ಮೇಲೆ ಪ್ರಕರಣ ದಾಖಲಾಗಿತ್ತು. ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪುನಃ ಅಕ್ಷಮ್ಯ ಅಪರಾಧವನ್ನು ಎಸಗಿದ್ದು, ಕೂಡಲೇ ಕೆ ಎಸ್ ಭಗವಾನ್‌ನ ಬಂಧನ ಮಾಡಬೇಕು ಮತ್ತು ಅತ್ಯಂತ ಕಠೋರ ಕಾರ್ಯಚರಣೆ ಮಾಡಬೇಕು ಎಂದು 'ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ'ದಲ್ಲಿ ಕೇಂದ್ರ ಸರ್ಕಾರಕ್ಕೆ ಈ ಬೇಡಿಕೆಯನ್ನು ಸಲ್ಲಿಸಲಾಯಿತು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...