ಪ್ರಧಾನಿ ನರೇಂದ್ರ ಮೋದಿ ಪುತ್ತೂರು ಮಾಜಿ ಶಾಸಕ ರಾಮ್ ಭಟ್ ರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪುತ್ತೂರಿನ ಮೊತ್ತ ಮೊದಲ ಬಿಜೆಪಿ ಶಾಸಕ ಹಾಗೂ ರಾಜ್ಯದಲ್ಲಿ ಆ ಸಮಯದಲ್ಲಿ ಬಿಜೆಪಿಯ ಇಬ್ಬರು ಶಾಸಕರ ಪೈಕಿ ರಾಮ್ ಭಟ್ ಒಬ್ಬರಾಗಿದ್ದು, ಇನ್ನೊಬ್ಬರು ಸದ್ಯ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪರಾಗಿದ್ದಾರೆ. ಪ್ರಧಾನಿ ಕಛೇರಿಯಿಂದ ರಾಮ್ ಭಟ್ ಮನೆಗೆ ಕರೆ ಬಂದಿದ್ದು, ಹಿಂದಿಯಲ್ಲೇ ರಾಮ್ ಭಟ್ ಅವರ ಆರೋಗ್ಯವನ್ನು ಪ್ರಧಾನಿ ಮೋದಿ ವಿಚಾರಿಸಿದ್ದಾರೆ. ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಮೋದಿಯವರು ಕರೆ ಮಾಡಿರುವುದು ಸಂತಸ ತಂದಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನಿಗೆ ಇಂಥಹ ಮಾತುಗಳು ಉತ್ತೇಜನ ನೀಡುತ್ತದೆ ಎಂದು ರಾಮ್ ಭಟ್ ಪ್ರತಿಕ್ರಿಯಿಸಿದ್ದಾರೆ.
No comments:
Post a Comment