Wednesday, 8 April 2020

PUTTUR BAND nammaPuttur

ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದರೂ ಸಂಚಾರ ನಿಯಂತ್ರಿಸುವ ಹಿನ್ನಲೆಯಿಂದ ಖಾಸಗಿ ವಾಹನಗಳನ್ನು ನಿರ್ಬಂಧಿಸುವ ಕಾರ್ಯದಲ್ಲಿ ಪೊಲೀಸ್ ಇಲಾಖೆಗೆ ಹಿನ್ನಡೆಯಾಗುತ್ತಿದೆ. ಅನಗತ್ಯವಾಗಿ ನಗರ ಪ್ರವೇಶಿಸುವ ವಾಹನಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ತಾಳ ತಪ್ಪುತ್ತಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಪೊಲೀಸರು ನಗರ ಪ್ರವೇಶಿಸುವ 8 ಸಂಪರ್ಕ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಪುತ್ತೂರು ಹಾಗೂ ಉಪ್ಪಿನಂಗಡಿ ಪೇಟೆಯಲ್ಲಿ ಬೆಳಿಗ್ಗಿನಿಂದಲೇ ವಾಹನಗಳ ಓಡಾಟ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ಕೆಲಸದಲ್ಲಿ ಪೊಲೀಸರು ಹೈರಾಣಾಗುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರ ಹಿಡಿತ ಸಮರ್ಪಕಗೊಳ್ಳದೆ ಇರುವುದು, ಜನತೆ ಪೊಲೀಸರ ಮಾತುಗಳನ್ನು ಕೇಳದಿರುವುದು ಕಂಡುಬರುತ್ತಿದೆ. ಪುತ್ತೂರು ನಗರದಲ್ಲಿ ಹೇಗಾದರೂ ಮಾಡಿ ಖಾಸಗಿ ವಾಹನಗಳ ಸಂಚಾರವನ್ನು ತಹಬದಿಗೆ ತರೆಬೇಕು ಎಂದು ಪಣತೊಟ್ಟಿರುವ ಪೊಲೀಸರು ನಗರ ಪ್ರವೇಶಕ್ಕೆ ಕೇವಲ ನಾಲ್ಕು ದಾರಿಗಳನ್ನು ಬಿಟ್ಟು ಉಳಿದ ಎಲ್ಲಾ ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಎಲ್ಲಾ ವಾಹನಗಳನ್ನು ತಡೆಯುವ ಕೆಲಸ ನಡೆಸಿದ್ದಾರೆ.
ಪುತ್ತೂರು ನಗರಕ್ಕೆ  ಸುಳ್ಯ ಕಡೆಯಿಂದ ಬರುವ ವಾಹನಗಳು ದಬರ್ೆ ಅಶ್ವಿನಿ ಸರ್ಕಲ್, ಸವಣೂರು ಕಡೆಯಿಂದ ಬರುವ ವಾಹನಗಳು ದಬರ್ೆ ಸರ್ಕಲ್, ಉಪ್ಪಿನಂಗಡಿಯಿಂದ ಬರುವ ವಾಹನಗಳು ಪಡೀಲ್, ಮಂಗಳೂರು ಕಡೆಯಿಂದ ಬರುವ ವಾಹನಗಳು ಮಂಜಲ್ಪಡ್ಪು ಬೈಪಾಸ್ ರಸ್ತೆ ಮೂಲಕ ನಗರಕ್ಕೆ ಪ್ರವೇಶ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.  ಈ ಹೊಸ ಯೋಜನೆಯಿಂದ ನಗರ ಪ್ರವೇಶ ನಡೆಸುವ ಅನಗತ್ಯ ವಾಹನಗಳನ್ನು ನಿಯಂತ್ರಿಸುವ ಚಿಂತನೆ ಪೊಲೀಸರದ್ದಾಗಿದೆ. ಆದರೆ  ಜನತೆ ಖಾಸಗಿ ವಾಹನಗಳನ್ನು ನಗರಕ್ಕೆ ತರುವ ಮೂಲಕ ಪೊಲೀಸರ ಚಿಂತನೆಗೆ ಸವಾಲು ಹಾಕುತ್ತಿದ್ದಾರೆ.
ಪೇಟೆ ಬದಿಯ ಒಳರಸ್ತೆಗಳ ಭಾಗದ ನಿವಾಸಿಗಳು ಈ ಒಳ ಸಂಪರ್ಕ ರಸ್ತೆಗಳನ್ನು ಬಳಸಲು ಅನುಮತಿ ನಿರ್ಬಂಧಿಸಲಾಗಿದೆ. ಸ್ಥಳೀಯ ನಿವಾಸಿಗಳು ಪೇಟೆಗೆ ಬರಬೇಕಾದರೂ ಮುಖ್ಯ ರಸ್ತೆಗೆ ಪ್ರವೇಶಿಸುವ ಪೊಲೀಸರು ಅವಕಾಶ ನೀಡಿದ ದಾರಿಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ಮುಂಜಾನೆ 7ರಿಂದ ಮಧ್ಯಾಹ್ನ 12 ಗಂಟೆ ತನಕ ದಿನಸಿ ಹಾಗೂ ತರಕಾರಿ, ಮೆಡಿಕಲ್ ಇನ್ನಿತರ ಅವಶ್ಯಕತೆಗಳಿಗಾಗಿ ಜನತೆಗೆ ನಗರಕ್ಕೆ ಬರಲು ಅವಕಾಶ ನೀಡಲಾಗಿದೆ. ಬೈಕ್ ಸವಾರರಿಗೆ ಹೆಚ್ಚಿನ ರಿಯಾಯತಿಯನ್ನೂ ತೋರಿಸಲಾಗಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡ ಕೆಲವರು ಅನಗತ್ಯವಾಗಿ ಪೇಟೆ ಸಂಚಾರಕ್ಕೆ ಮುಂದಾಗುತ್ತಿದ್ದಾರೆ. ಖಾಸಗಿ ಕಾರುಗಳಲ್ಲಿಯೂ ಸಂಸಾರ ಸಮೇತ ಪೇಟೆ ತಿರುಗುವ ಕಾಯಕ ನಡೆಸುತ್ತಿದ್ದಾರೆ. ಇದರಿಂದ ಪೊಲೀಸರ ತಾಳ್ಮೆಯನ್ನೇ ಪರೀಕ್ಷೆ ಮಾಡುವಂತಾಗಿದೆ.
ಬೇಕರಿ ವರ್ತಕರ ಸಮಸ್ಯೆ
ಮಧ್ಯಾಹ್ನದ ತನಕ ಬೇಕರಿ ಅಂಗಡಿಗಳನ್ನು ತೆರವು ಗೊಳಿಸಲು ಸಕರ್ಾರ ನಿದರ್ೇಶನ ನೀಡಿದ್ದರೂ, ಬೇಕರಿ ತಿಂಡಿ ತಿನಿಸುಗಳ ತಯಾರಿಗೆ ಕಚ್ಛಾ ಸಾಮಾಗ್ರಿಗಳ ಕೊರತೆ ಬೇಕರಿ ಮಾಲಕರನ್ನು ಕಾಡುತ್ತಿದೆ. ಬ್ರೆಡ್, ಬನ್, ರಸ್ಕ್, ಪಪ್ಸ್ ಮತ್ತಿತರ ತಿಂಡಿಗಳು ಗ್ರಾಹಕರಿಗೆ ಅಗತ್ಯವಾಗಿದ್ದು, ಇದರ ತಯಾರಿಕೆ ನಡೆಯುತ್ತಿಲ್ಲ. ಕೇವಲ ಖಾರ ಹಾಗೂ ಕುರುಕಲು ತಿಂಡಿಗಳು ಮಾತ್ರ ಬೇಕರಿಯಲ್ಲಿ ದೊರೆಯುತ್ತಿದೆ. ಇದರಿಂದ ಬೇಕರಿ ಬಾಗಿಲು ತೆರೆದರೂ ಗ್ರಾಹಕರಿಗೆ ಬೇಕಾದ ತಿಂಡಿಗಳನ್ನು ನೀಡುವಲ್ಲಿ ಬೇಕರಿ ವರ್ತಕರಿಗೆ ಸಮಸ್ಯೆಯಾಗುತ್ತಿದೆ.




No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...