Monday, 28 July 2014

ಪೊಲೀಸ್, ಸೈನ್ಯ ಇಲ್ಲದ ವ್ಯವಸ್ಥೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಆಂತರಿಕ ಭದ್ರತೆ ಕಾಯುವ ಪೊಲೀಸರ ಮೇಲೆ ಯಾವುದೇ ಒತ್ತಡ ಹಾಕದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಸಹಾಯಕ ಆಯುಕ್ತ ಎಚ್.ಕೆ.ಕೃಷ್ಣಮೂತರ್ಿ ಹೇಳಿದರು.
ರೋಟರಿ ಕ್ಲಬ್, ರೋಟರಿ ಕ್ಲಬ್ ಪೂರ್ವ, ರೋಟರಿ ಕ್ಲಬ್ ಸಿಟಿ ಹಾಗೂ ಮಾಜಿ ಸೈನಿಕರ ಸಂಘ ಆಶ್ರಯದಲ್ಲಿ ಪುತ್ತೂರು ಮನೀಷಾ ಸಭಾಂಗಣದಲ್ಲಿ ನಡೆದ ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುದ್ಧವನ್ನು ಕಲ್ಪಿಸಿಕೊಂಡಾಗ, ಹಾನಿ ಹಾಗೂ ದೇಶದ ಸಮಗ್ರತೆಯ ಚಿತ್ರಣ ಸಿಗುತ್ತದೆ. ಹಾನಿ ಉಂಟು ಮಾಡುವ ಯುದ್ಧದ ಅಗತ್ಯತೆ ನಮಗಿಲ್ಲ. ಆದರೆ ದೇಶದ ಸಮಗ್ರತೆ, ಸಾರ್ವಭೌಮತ್ವದ ಪ್ರಶ್ನೆ ಎದುರಾದಾಗ, ಸೈನಿಕರ ಅಗತ್ಯ ನಮಗರಿವಾಗುತ್ತದೆ. ಆಫ್ರಿಕಾದ ಕೆಲ ದೇಶಗಳ ಪರಿಸ್ಥಿತಿ ತೀರಾ ಕೆಟ್ಟುಹೋಗಿದೆ. ಇದಕ್ಕೆ ಕಾರಣ ಕುಸಿದು ಹೋದ ಸೈನ್ಯ ವ್ಯವಸ್ಥೆ. ಆದ್ದರಿಂದ ಮನುಷ್ಯ ಮನುಷ್ಯರನ್ನೇ ಜೀವಂತ ಕೊಲ್ಲುವ ಸನ್ನಿವೇಶ ಎದುರಾಗಿದೆ. ಆದ್ದರಿಂದ ದೇಶದ ಆಂತರಿಕ ಹಾಗೂ ಬಾಹ್ಯ ರಕ್ಷಣೆಗೆ ಸೈನ್ಯ ಹಾಗೂ ಇನ್ನೊಂದು ರೂಪವಾದ ಪೊಲೀಸರ ಪಾತ್ರ ಅಗತ್ಯ ಎಂದರು. ಜನರಲ್ಲಿ ಭಯ ತುಂಬಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟು ಮಾಡುವ ಹಿಂದೆ ಸೈನಿಕರ ಶಕ್ತಿಯಿದೆ ಎಂದರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...