Monday, 28 July 2014

ರಾಜ್ಯದ ಮೂಲೆಮೂಲೆಯನ್ನು ಸಂಪಕರ್ಿಸುವ ಕೇಂದ್ರದ ಯೋಜನೆಗೆ ರಾಜ್ಯ ಸಕರ್ಾರ ಸಹಕರಿಸಬೇಕಿದೆ. ರಾಜ್ಯ ಸಕರ್ಾರದಿಂದ ಹೆಚ್ಚಿನ ನೆರವನ್ನು ಬಯಸದೇ, ಮೊದಲು ನೀಡುತ್ತಿದ್ದ ಅನುದಾನವನ್ನೇ ಮುಂದುವರಿಸುವಂತೆ ಕೇಳಿಕೊಂಡಿದ್ದೇವೆ ಎಂದು ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಪುತ್ತೂರು ತೆಂಕಿಲ ಗೌಡ ಸಮುದಾಯ ಭವನದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ.ಪತ್ರಕರ್ತರೊಂದಿಗೆ ಮಾತನಾಡಿದರು. ಹಿಂದಿನ ಸಕರ್ಾರದಂತೆ ಹೊಸ ಆಶ್ವಾಸನೆ ನೀಡುವ ಬದಲು, ಇರುವ ಯೋಜನೆಯನ್ನೇ ಸುಧಾರಿಸುವ ಕಾರ್ಯಕ್ಕೆ ಕೇಂದ್ರ ಸಕರ್ಾರ ಮುಂದಾಗಿದೆ. ಅದರಂತೆ ರೈಲ್ವೇ ಸುಧಾರಣೆಗೆ ರಾಜ್ಯ ಸಕರ್ಾರ ಶೇ.50ರಷ್ಟು ಅನುದಾನ ನೀಡಬೇಕು. ಹಾಗೂ ಅವಶ್ಯಕ ಜಾಗವನ್ನು ಮಂಜೂರು ಮಾಡಬೇಕು ಎಂಬ ನಿಯಮ ಮೊದಲೇ ರೂಪಿಸಲಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು, ಶೇ.50ರಷ್ಟು ಅನುದಾನ ನೀಡಲು ಕಷ್ಟಸಾಧ್ಯ ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ರಾಜಕೀಯ ಮಾಡಲು ಇಚ್ಚೆ ಪಡುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಚಾರ ತಿಳಿಸಿದ್ದೇನೆ. ಕೇಂದ್ರ ರೈಲ್ವೇ ಖಾತೆ, ಹೊಸ ಅನುದಾನಗಳನ್ನು ನಿರೀಕ್ಷಿಸುವುದಿಲ್ಲ. ಇರುವ ಅನುದಾನವನ್ನೇ ಮುಂದುವರಿಸುವಂತೆ ಕೇಳಿಕೊಂಡಿದೆ ಎಂದು ತಿಳಿಸಿದರು.
2014-15ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಂಗೀಕಾರ ಪಡೆದಿವೆ. ಆದ್ದರಿಂದ ಅತೀ ಶೀಘ್ರದಲ್ಲಿ ಬಜೆಟ್ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಬಜೆಟ್ ಮಂಡಿಸುವ ಸಂದರ್ಭದಲ್ಲಿಯೂ ಹೊಸ ಯೋಜನೆಗಳಿಗೆ ಆಸ್ಪದ ನೀಡದೇ, ಇದ್ದ ಯೋಜನೆಗಳ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲಾಯಿತು. ದೇಶದ ಪ್ರಮುಖ ಸಂಪರ್ಕ ಸಾಧನವಾದ ರೈಲ್ವೇಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ ಕಂಡುಕೊಂಡಿದ್ದು, ಖಾಸಗಿ ಸಹಭಾಗಿತ್ವ, ವಿದೇಶ ನೇರ ಬಂಡವಾಳವನ್ನು ಪ್ರೋತ್ಸಾಹಿಸಲಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ಮಾತ್ರ ಎಫ್ಡಿಐ ಹಾಗೂ ಖಾಸಗಿ ಸಹಭಾಗಿತ್ವಕ್ಕೆ ನೀಡಲಾಗಿದೆ. ಕೆಲಸ ಕಾರ್ಯಗಳ ಬಗ್ಗೆ ನೇರವಾಗಿ ಕೇಂದ್ರ ಸಕರ್ಾರವೇ ಮುತುವಜರ್ಿ ವಹಿಸಲಿದೆ. ಈ ಬಗ್ಗೆ ಯಾವುದೇ ಗೊಂದಲಗಳು ಬೇಡ. ಸ್ವಚ್ಚತೆ, ರಕ್ಷಣೆ, ಸುರಕ್ಷಿತ ಹಾಗೂ ಹೊಸ ಆವಿಷ್ಕಾರಕ್ಕೂ ಗಮನ ಹರಿಸಲಾಗಿದೆ. ರಾಜ್ಯದ ಹಿತಾಸಕ್ತಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಇವುಗಳ ಕಾರ್ಯರೂಪಕ್ಕೆ ಸ್ವಲ್ಪ ಸಮಯ ತಗುಲಬಹುದು ಎಂದು ಸ್ಪಷ್ಟಪಡಿಸಿದರು.
ತೆಲಂಗಾಣದಲ್ಲಿ ನಡೆದ ರೈಲು ದುರಂತದ ಬಗ್ಗೆ ವಿಷಾದವಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು. ದೇಶದಲ್ಲಿ ಸಾವಿರಕ್ಕೂ ಹೆಚ್ಚು ಮಾನವರಹಿತ ಲೆವೆಲ್ ಕ್ರಾಸಿಂಗ್ ಇರುವುದನ್ನು ಪತ್ತೆ ಹಚ್ಚಲಾಗಿದೆ. ಅಧಿಕಾರಿಗಳ ಬಳಿ ಚಚರ್ಿಸಿ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲಾ ಸಂಸದರ ಸಲಹೆಯನ್ನು ಪಡೆದುಕೊಳ್ಳಲಾಗುವುದು. ಹಾಗೂ ಈ ವಾರದಲ್ಲಿ ನಡೆಯುವ ಸಭೆಯಲ್ಲಿ, ಸಂಸದರ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಾಗುವುದು ಎಂದರು.




ಪುತ್ತೂರು ರೈಲ್ವೇ ನಿಲ್ದಾಣವನ್ನು ಮಾದರಿ ರೈಲ್ವೇ ನಿಲ್ದಾಣವನ್ನಾಗಿ ರೂಪಿಸುವ ಯೋಜನೆ ಇದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಪುತ್ತೂರು ರೈಲ್ವೇ ನಿಲ್ದಾಣವನ್ನು ನಂ.1 ನಿಲ್ದಾಣವನ್ನಾಗಿ ಪರಿವತರ್ಿಸಲಾಗುವುದು. ಇದಕ್ಕೆ ಸಂಬಂಧಪಟ್ಟ ಡಿಆರ್ಎಂಓಗಳ ಸಭೆ ಕರೆದು ಚಚರ್ೆ ನಡೆಸಿದ್ದೇನೆ. ಅಲ್ಲದೇ, ಪುತ್ತೂರು ರೈಲ್ವೇ ನಿಲ್ದಾಣ ಸಂಪಕರ್ಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಡಿ.ವಿ.ಸದಾನಂದ ಗೌಡ ಹೇಳಿದರು.

ಹಸ್ತಕ್ಷೇಪ ಇಲ್ಲ:

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿದ್ದ ಕೊಲ ಪಶುವೈದ್ಯಕೀಯ ಕಾಲೇಜು ಹಾಗೂ ಕಾವು ರಬ್ಬರ್ ಕಾಖರ್ಾನೆಗೆ ಸಂಬಂಧಪಟ್ಟಂತೆ ಮುಂದಿನ ಕೆಲಸವನ್ನು ರಾಜ್ಯ ಸಕರ್ಾರ ಮಾಡಬೇಕಿದೆ. ಪಶುವೈದ್ಯಕೀಯ ಕಾಲೇಜಿಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಕೆಲಸಗಳು ಪ್ರಗತಿಯಲ್ಲಿತ್ತು. ರಬ್ಬರ್ ಕಾಖರ್ಾನೆಗೆ ಪ್ರಾಥಮಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಅಷ್ಟರಲ್ಲಿ ರಾಜ್ಯ ಸಕರ್ಾರ ಬದಲಾದದ್ದರಿಂದ, ಮುಂದಿನ ಕೆಲಸವನ್ನು ನಡೆಸಲು ಸಾಧ್ಯವಾಗಿಲ್ಲ. ಅಧಿಕಾರದಿಂದ ಕೆಳಗಿಳಿದ ಮೇಲೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...