| ಪೂರ್ವ |
ಇಷ್ಟಿಕಾ
ಇಷ್ಟಿಕಾ
ಉತ್ತರ
ಇಷ್ಟಿಕಾ
ಗರ್ಭ
ಇಷ್ಟಿಕಾ
ಗರ್ಭಗೃಹದ ಬಾಗಿಲ ಬಲಭಾಗದ ಕೆಳಗೆ ಇಷ್ಟಕಾನ್ಯಾಸವನ್ನು ಮಾಡಿ,ಅದರ ಮಧ್ಯೆ ಸುವಸ್ತುಗಳಿಂದ ಕೂಡಿದ ಗರ್ಭಪಾತ್ರೆಯನ್ನು ಇರಿಸುವ ಪ್ರಕ್ರಿಯೆಯೇ ಗರ್ಭನ್ಯಾಸ.ಆರಂಭದಲ್ಲಿ ಗರ್ಭಗೃಹದ ದ್ವಾರದ ಬಲಭಾಗದಲ್ಲಿ,ಪೂರ್ವಾಭಿಮುಖವಾದರೆ ಮಧ್ಯಸೂತ್ರದಿಂದ ದಕ್ಷಿಣಕ್ಕೆ, ಪಶ್ಚಿಮಾಭಿಮುಖವಾದರೆ ಮಧ್ಯಸೂತ್ರದಿಂದ ಉತ್ತರಕ್ಕೆ,ಉತ್ತರಾಭಿಮುಖವಾದರೆ ಮಧ್ಯಸೂತ್ರದಿಂದ ಪೂರ್ವಕ್ಕೆ, ದಕ್ಶಿಣಾಭಿಮುಖವಾದರೆ ಮಧ್ಯಸೂತ್ರದಿಂದ ಪಶ್ಚಿಮದಲ್ಲಿ ಇಷ್ಟಕಾನ್ಯಾಸವನ್ನು ಮಾಡಬೇಕು. ಪೂಜಿಸಲ್ಪಟ್ಟ ಮಣ್ಣಿನ ಅಥವಾ ಶಿಲೆಯಿಂದ ನಿರ್ಮಿತವಾದ ಇಟ್ಟಿಗೆಗಳನ್ನು ಸಮ ಚತುರಶ್ರವಾಗಿ ಆಗ್ನೇಯದಿಂದ ಪ್ರಾರಂಭಿಸಿ ಈಶಾನ್ಯ ಪರ್ಯಂತವಾಗಿ ಜೋಡಿಸಿ ನ್ಯಾಸಮಾಡಬೇಕು.ನಂತರ ಆಗಮೋಕ್ತವಾಗಿ ಹೇಳಲ್ಪಟ್ಟ ವಾಸ್ತು ಪೂಜಾ-ಬಲಿ ಇತ್ಯಾದಿ ಕರ್ಮಾಂಗಗಳನ್ನು ನಡೆಸುವುದು. ತದನಂತರ ತಾಮ್ರದಿಂದ ಸಿದ್ಧಪಡಿಸಿದ ಮುಚ್ಚಳದಿಂದ ಕೂಡಿದ ಸಂಸ್ಕರಿಸಿ ಶುದ್ಧೀಕರಿಸಲ್ಪಟ್ಟ ನವ ಖಂಡಗಳಿರುವ ಗರ್ಭಪಾತ್ರೆಯನ್ನು ಪೂಜಿಸಲು ಇರಿಸುವುದು. ಭಾರತಾದಿ ನವ ಖಂಡಗಳಿಂದ ಶೋಭಿಸುವ ಈ ಭೂಮಂಡಲವೇ ಗರ್ಭಾಪಾತ್ರದ ತಳವೆಂದು ಭಾವಿಸಿ,ಆ ಪಾತ್ರದ ನವ ಖಂಡಗಳಲ್ಲಿ ಆಯಾಯ ದೇವರಿಗೆ ಶಾಸ್ತ್ರೀಯವಾಗಿ ಹೇಳಲ್ಪಟ್ಟ ಮಣ್ಣುಗಳು, ಗಡ್ಡೆಗಳು, ಧಾತುದ್ರವ್ಯಗಳು, ರತ್ನಗಳು, ಬೀಜಗಳು, ಲೋಹಗಳೇ ಮೊದಲಾದ ದ್ರವ್ಯಗಳನ್ನು ನಿಕ್ಷೇಪಿಸುವುದು. ತದನಂತರ ಶಾಸ್ತ್ರೀಯ ಕರ್ಮಾಂಗಗಳನ್ನು ಪೂರೈಸಿದ ಆಚಾರ್ಯರು(ತಂತ್ರಿಗಳು) ಸಂಪೂರ್ಣ ಜಗತ್ತನ್ನೇ ಗರ್ಭದಲ್ಲಿ ಹೊಂದಿರುವುದಾದ ಗರ್ಭಪಾತ್ರವನ್ನು ಶುಭಮುಹೂರ್ತದಲ್ಲಿ ಇಷ್ಟಕಾನ್ಯಾಸ ಮಾಡಿದ ಮಧ್ಯಭಾಗದ ಗರ್ಭಾಧಾನ ಸ್ಥಾನದ ಕುಳಿಯಲ್ಲಿ ಇರಿಸಿ ಗರ್ಭನ್ಯಾಸವನ್ನು ಮಾಡುವರು.ಪಿ.ಜಿ.ಜಗನ್ನಿವಾಸ ರಾವ್. ಕನ್ಸಲ್ಟಿಂಗ್ ಇಂಜಿನಿಯರ್
ಕೃಪೆ
:ತಂತ್ರಸಮುಚ್ಚಯ,
.
No comments:
Post a Comment