Sunday, 22 January 2012

Laticharge

ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದ ಬಳಿಕ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ನಡೆದಿದ್ದು,ಓರ್ವ ವ್ಯಕ್ತಿಗೆ ಚೂರಿ ಇರಿತ ಸಂಭವಿಸಿದೆ.ಇರ್ವರಿಗೆ ಗಾಯಗಾಳಾಗಿದ್ದು ಪೋಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.ಹಿಂದೂ ಸಮಾವೇಶವನ್ನು ಮುಗಿಸಿಕೊಂಡು ಬರುತ್ತಿದ್ದ ಸಂದರ್ಭ ಸ್ಥಳಿಯ ಮಸಿದಿಯಿಂದ ಬಂದ ಗುಂಪುಂದು ಧಿಕ್ಕಾರ ಕೂಗಿದರ ಪರಿಣಾಮ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡ ಪರಿಣಾಮ ಪೋಲೀಸರು ಲಾಠೀಚಾರ್ಜ್ ನಡೆಸಿ ಎರಡೂ ಗುಂಪುಗಳನ್ನು ಚದುರಿಸಿದರು.ಉದ್ವಿಗ್ನಗೊಂಡ ಗುಂಪುಗಳು ಅಂಗಡಿಮುಂಗಟ್ಟುಗಳಿಗೆ ಕಲ್ಲು ತೂರಾಟವನ್ನೂ ನಡೆಸಿ ಹಾನಿಗೊಳಿಸಿದೆ.ಬಳಿಕ ನಡೆದ ಘಟನೆಯಲ್ಲಿ ಸಮಾಜೋತ್ಸವವನ್ನು ಮುಗಿಸಿ ಹೊರಡುತ್ತಿದ್ದವರ ಮೇಲೆ ಕಿಡಿಗೇಡಿಗಳು ಹಲ್ಲಿ ನಡೆಸಿದ್ದು,ಓರ್ವನಿಗೆ ತಲವಾರಿನಿಂದ ತಲೆಗೆ ಕಡಿಯಲಾಗಿದ್ದು,ಮತ್ತೀರ್ವರಿಗೆ ಹಲ್ಲೆ ನಡೆಸಲಾಗಿದೆ.ಸ್ಥಳದಲ್ಲಿ ದಕ್ಷಿಣಕನ್ನಡ ಪೋಲೀಸ್ ವರಿಷ್ಟಾಧಿಕಾರಿ ಅಭಿಷೇಕ್ ಗೋಯಲ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ.

No comments:

Post a Comment

Vivekananda THENKILA 2025 ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯ...

ಪುತ್ತೂರು ವಿವೇಕಾನಂದ ಶಾಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ  ಶಾಲಾಪ್ರಾರಂಭೋತ್ಸವ.. ದಕ್ಷಿಣಕನ್ನಡ: ರಾಜ್ಯದೆಲ್ಲೆಡೆ ಇಂದಿನಿಂದ ಶಾಲೆಗಳು ಪ್ರಾರಂಭಗೊಂಡಿದೆ. ವಿವಿಧ ಶಾಲ...