ರಾಜ್ಯಾಡಳಿತದಲ್ಲಿ ಭಯ ಬೇಡ'
`ತರವಾಡು ದೈವಗಳ ಆಶೀರ್ವಾದದಿಂದ, ಹಿರಿಯರ ಪ್ರಯತ್ನದಿಂದ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ ರಾಜ್ಯದ ದೊರೆಯಾಗಿದ್ದು, ರಾಜ್ಯಾಡಳಿತದಲ್ಲಿ ಯಾವುದೇ ಭಯವಿಲ್ಲದೆ ರಾಜ್ಯಭಾರ ಮಾಡು ದೇವರ ಎಲ್ಲಾ ಆಶೀರ್ವಾದವೂ ಇದೆ' ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ತರವಾಡು ದೈವಗಳು ಅನುಗ್ರಹಿಸಿ, ಹರಸಿದವು. ಮಂಗಳವಾರ ತನ್ನ ಹುಟ್ಟೂರಾದ ಸುಳ್ಯದ ದೇವರಗುಂಡದ ಮನೆಯ ತರವಾಡು ದೈವಸ್ಥಾನದಲ್ಲಿ ನಡೆದ ವಾರ್ಷಿಕ ಭೂತಕೋಲ ಕಾರ್ಯಕ್ರಮಮದಲ್ಲಿ ಭಾಗವಹಿಸಿದ ಅವರು ದೈವಗಳ ಆಶೀರ್ವಾದ ಪಡೆದರು. ಮಂಗಳವಾರ ಬೆಳಿಗ್ಗ ಮನೆಗೆ ಆಗಮಿಸಿದ ಮುಖ್ಯಮಂತ್ರಿಗಳು ಮನೆಯ ಯಜಮಾನನಾಗಿ ನಿಂತು ಎಲ್ಲಾ ದೈವಿಕ ಕಾರ್ಯಕ್ರಮಗಳಿಗೂ ನೇತೃತ್ವ ವಹಿಸಿದರು. ವಿಷ್ಣುಮುರ್ತಿ, ರಕೇಶ್ವರಿ ದೈವಗಳು ಮುಖ್ಯಮಂತ್ರಿಗೆ ಯಶಸ್ಸು ಹಾರೈಸಿ ಹರಸಿದರು. ಮುಖ್ಯಮಂತ್ರಿಯಾಗಿ `ರಾಜ್ಯಾಡಳಿತ ನಡೆಸಲು ಯಾವುದೇ ಭಯ ಬೇಡ, ದೈವಗಳ ಅನುಗ್ರಹ ಇರುವಾಗ ಭಯ ಯಾಕೆ ಧೈರ್ಯವಾಗಿ ರಾಜ್ಯಭಾರ ಮಾಡು ತರವಾಡು ದೈವಗಳು ಬೆಂಗಾವಲಾಗಿ ಇದೆ' ಎಂದು ವಿಷ್ಣುಮುರ್ತಿ ದೈವ ಮುಖ್ಯಮಂತ್ರಿಯವರನ್ನು ಹರಸಿತು. ದೇವರಗುಂಡ ತರವಾಡು ಮತ್ತು ಭಗವಂತನ ಮದ್ಯೆ, ಶ್ರೀಕೃಷ್ಣನಿಗೂ ಕುಚೇಲನಿಗೂ ಇರುವಂತಹಾ ಸಂಬಂಧವಿದೆ. ಶ್ರೀಕೃಷ್ಣನು ಕುಚೇಲನಿಗೆ ಅಗಾಧವಾದ ಸಂಪತ್ತು ನೀಡಿದಂತೆ ದೇವರಗುಂಡದ ಕುಡಿಯಾದ ಸದಾನಂದ ಗೌಡರಿಗೂ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರುವಂತೆ ಅನುಗ್ರಹಿಸಿದೆ. ತಾಯಿ ಮತ್ತು ಇತರ ಹಿರಿಯರ ಪ್ರಯತ್ನ, ದೈವಗಳ ಅನುಗ್ರಹದಿಂದ ನಾಡಿನ ಮುಖ್ಯಮಂತ್ರಿಯಾಗಿ ಯಾವುದೇ ಸಮಸ್ಯೆ, ಸಹಾಯ ಬೆಕಿದ್ದರೆ ದೇವರಲ್ಲಿ ಪ್ರಾರ್ಥಿಸು ಖಂಡಿತಾ ಅನುಗ್ರಹಿಸುತ್ತಾನೆ' ಎಂದು ವಿಷ್ಣುಮುರ್ತಿ ದೈವ ನುಡಿದು ಸದಾನಂದ ಗೌಡರನ್ನು ಹರಸಿದರು.ರಕ್ತೇಶ್ವರಿ ದೈವವೂ ಮುಖ್ಯಮಂತ್ರಿಯವರಿಗೆ ಆಶೀರ್ವಾದವಿತ್ತು ಹರಸಿದರು. ತಾಯಿ ರಕ್ತೇಶ್ವರಿಯ ಅನುಗ್ರಹ ಯಾವತ್ತೂ ಇರುತ್ತದೆ. ಮುಂದೆಯೂ ಅದೇ ರೀತಿಯ ಯಶಸ್ಸು, ಸಾಧನೆ ಸಾಧ್ಯವಾಗಲಿ, ದೈವಗಳ ಶ್ರೀರಕ್ಷೆ ಸದಾ ಇರುತ್ತದೆ ಎಂದು ಹರಸಿದರು. ಬೆಳಿಗ್ಗಿನಿಂದ ಸಂಜೆಯವರೆಗೂ ದೇವರಗುಂಡದ ಮನೆಯಲ್ಲಿ ಕಳೆದ ಮುಖ್ಯಮಂತ್ರಿ, ಅತಿಥಿಗಳನ್ನು ಸ್ವಾಗತಿಸಿ, ಎಲ್ಲರನ್ನೂ ನಗುಮೊಗದಿಂದ ಮಾತನಾಡಿಸಿದರು. ಭೂತ ಕೋಲ ಕಟ್ಟುವ ಕಲಾವಿದರನ್ನೂ ಮಾತನಾಡಿಸಿ ಅವರಿಗೆ ದಕ್ಷಿಣೆ ನೀಡಿದರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಯಶಸ್ವಿಯಾಗಿ ಅಧಿಕಾರ ನಡೆಸುತ್ತಿರುವುದಕ್ಕೆ ಸದಾನಂದ ಗೌಡರ ಸಹೋದರರು ವಿಷ್ಣುಮುರ್ತಿ ದೈವಕ್ಕೆ ಬೆಳ್ಳಿಯ ದ್ವೀಪವನ್ನು ಹರಕೆಯಾಗಿ ಸಮರ್ಪಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್, ಸಹೋದರರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಗಡಿ ಗ್ರಾಮದ ಅಭಿವೃದ್ದಿಗೆ ಆಗ್ರಹಿಸಿ ನಾಗರಿಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.`
ಮುಖ್ಯಮಂತ್ರಿಗಳಿಗೆ ತರವಾಡು ದೈವಗಳ ಅಭಯ
ರಾಜ್ಯದ ಸುಭಿಕ್ಷೆಗಾಗಿ ಪ್ರಾರ್ಥನೆ'-ಡಿವಿಎಸ್
`ತರವಾಡು ದೈವದ ಉತ್ಸವದಲ್ಲಿ ಭಾಗಿಯಾಗಿ ದೈವಗಳ ಅನುಗ್ರಹ ಪಡೆದ ಕಾರಣ ಇನ್ನಷ್ಟು ಆತ್ಮ ವಿಶ್ವಾಸ ಮತ್ತು ಶಕ್ತಿ ಹೆಚ್ಚಿದೆ. ಕರ್ನಾಟಕದ ಒಳಿತಿಗಾಗಿ ಮತ್ತು ರಾಜ್ಯ ಸುಭಿಕ್ಷವಾಗಲೆಂದು ದೇವರಲ್ಲಿ ಪ್ರಾರ್ಥನೆ ನಡೆಸಿರುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿದರು. ದೇವರ ಆಶೀರ್ವಾದ ಮತ್ತು ಅನುಗ್ರಹದಿಂದ ಉತ್ತಮ ಆಡಳಿತ ನಡೆಸಲು ಮತ್ತು ರಾಜ್ಯ ಸುಭಿಕ್ಷವಾಗುವ ವಿಶ್ವಾಸವಿದೆ. ಎಲ್ಲಾ ಸಮಸ್ಯೆಗಳನ್ನೂ ಗೊಂದಲಗಳನ್ನೂ ಆ ದೇವರೇ ನಿವಾರಿಸಿ ಜನರಿಗೆ ಉತ್ತಮ ಆಡಳಿತ ನೀಡುವಂತೆ ಕರುಣಿಸುತ್ತಾನೆ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.ತನ್ನ ಮನೆ ದೇವರಗುಂಡದಲ್ಲಿ ನಡೆಯುವ ಭೂತಕೋಲು ಉತ್ಸವಕ್ಕೆ ಪ್ರತಿವರ್ಷವೂ ತಪ್ಪದೇ ಹಾಜರಾಗುತ್ತೇನೆ. ಎಷ್ಟೇ ಒತ್ತಡವಿದ್ದರೂ ಈ ಕಾರ್ಯಕ್ರಮವನ್ನು ತಪ್ಪಿಸುವುದಿಲ್ಲ. ಪ್ರತಿ ವರ್ಷವೂ ಎರಡು ದಿನ ಪೂರ್ತಿ ಇರುತ್ತಿದ್ದೆ. ಈ ಬಾರಿ ಒಂದು ದಿನ ಪೂರ್ತಿಯಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿದರು. ಬಾಲ್ಯದಿಂದಲೂ ತನ್ನ ತರವಾಡು ದೈವದ ಆಶೀರ್ವಾದ ಅನುಗ್ರಹಗಳು ತನಗೆ ಪ್ರೇರಣೆ ಮತ್ತು ಶಕ್ತಿಯಾಗಿತ್ತು ಎಂದು ಹೇಳಿದರು. ಕರ್ನಾಟಕದ ಮತ್ತು ಕೇರಳ ರಾಜ್ಯದ ನೂರಾರು ಮಂದಿ ಉತ್ಸವದಲ್ಲಿ ಭಾಗವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ , ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ರಜ್ಯ ಅರಣದ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಮನ್ಮಥ, ಬಿಜೆಪಿ ನೇತಾರರಾದ ವೆಂಕಟ್ ದಂಬೆಕೋಡಿ, ಗೋಪಾಲಕೃಷ ಹೇರಳೆ, ಸಂಜೀವ ಮಠಂದೂರು, ಎ.ವಿ.ತೀರ್ಥರಾಮ, ಜಯರಾಮ ರೈ ಜಾಲ್ಸೂರು ಮತ್ತಿತರರು ಉಪಸ್ಥಿತರಿದ್ದರು.
No comments:
Post a Comment