ವಿವಿಧ ಕ್ಷೇತ್ರಗಳ ಸಾಧಕರಿಗೆ -ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸಂಮಾನ
ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಮಾನ ಕಾರ್ಯಕ್ರಮ ಸಂಜೆ ನಡೆಯಿತು. ಜಿ. ಎಲ್.ಆಚಾರ್ಯ(ಸಾಹಿತ್ಯ ಮತ್ತು ದಾನಿಗಳು), ಪರಮೇಶ್ವರ ಭಟ್ ಚೌಕಾರು(ಶಿಕ್ಷಣ ಮತ್ತು ಸಮಾಜಸೇವೆ), ರೆ. ವಿಜಯ ಹಾವರ್ಿನ್(ಶಿಕ್ಷಣ ಮತ್ತು ಸಮಾಜ ಸೇವೆ), ಗಂಗಾಧರ ಬೆಳ್ಳಾರೆ(ಸಾಹಿತ್ಯ ಮತ್ತು ಮನೋವಿಶ್ಲೇಷಣೆ) ಗೋಪಾಲಕೃಷ್ಣ ಕುಂಟಿನಿ(ಪತ್ರಿಕೋದ್ಯಮ), ಚಿದಾನಂದ ಕಾಮತ್ ಕಾಸರಗೋಡು(ಸಾಂಸ್ಕೃತಿಕ ಸಂಘಟನೆ), ನಯನ.ವಿ.ರೈ(ಸಮಾಜ ಸೇವೆ), ಅಬೂಬಕ್ಕರ್ ಆರ್ಲಪದವು(ಗಡಿನಾಡ ಕನ್ನಡಿಗ) ಹರೀಶ್ ಪರವ(ದೈವಾರಾಧನೆ), ಕಾಂತು ಹಿರೇಬಂಡಾಡಿ(ದೈವಾರಾಧನೆ) ಪಾರ್ವತಿ ಗಣೇಶ್ ಭಟ್ ಹೊಸಮೂಲೆ(ಸಂಗೀತ), ಧನಂಜಯ ಮರ್ಕಂಜ(ಕರಕುಶಲ) ಮತ್ತು ಉದಯಗಿರಿ(ಸಾಹಿತ್ಯ)ರವರನ್ನು ಸಂಮಾನಿಸಲಾಯಿತು. ಪ್ರಶಸ್ತಿ ವಿಜೇತ ಶಿಕ್ಷಕರಾದ ಸರೋಜಿನಿ.ಕೆ, ಎಚ್. ಶ್ರೀಧರ ರೈ, ಯಶೋಧ.ಕೆ.ಎಸ್, ಗೋಪಾಲಕÙೃಣ ರಾವ್, ಲಕ್ಷ್ಮಣ ನಾಯ್ಕ್ ಮತ್ತು ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಸನ್ಮಾನ ನೆರವೇರಿಸಿದರು. ಪ್ರೊ. ವತ್ಸಲಾ ರಾಜ್ಞಿ ಸ್ವಾಗತಿಸಿ, ಯು.ಎಸ್.ರಾಮಕೃಷ್ಣ ಭಟ್ ವಂದಿಸಿದರು. ಬಿ. ಐತ್ತಪ್ಪ ನಾಯ್ಕ್ ಮತ್ತು ಐ.ಕೆ. ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯಕ ಸ್ಪಧರ್ೆಗಳ ವಿಜೇತರ ಬಹುಮಾನ ಪಟ್ಟಿಯ ವಿವರಣೆಯನ್ನು ಎಚ್. ಶ್ರೀಧರ ರೈ ಓದಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಡಿ. ಸದಾಶಿವ ಭಟ್ ನಿಡ್ಪಳ್ಳಿ, ರಾಷ್ಟ್ರಧ್ವಜಾರೋಹಣ ಮಾಡಿದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜಿ. ಕೆ. ಮಹಾಬಲೇಶ್ವರ ಭಟ್, ಪರಿಷತ್ನ ಧ್ವಜಾರೋಹಣ ಮಾಡಿದ ಪ್ರದೀಪ್ ಕುಮಾರ್ ಕಲ್ಕೂರ, ಪುಸ್ತಕ ಮಳಿಗೆ ಉದ್ಘಾಟಿಸಿದ ತಾ.ಪಂ. ಅಧ್ಯಕ್ಷೆ ಶಶಿಪ್ರಭ ಸಂಪ್ಯ, ಕನ್ನಡ ಧ್ವಜಾರೋಹಣ ಮಾಡಿದ ತಾ.ಪಂ. ಸದಸ್ಯ ಮಹಮ್ಮದ್ ಬಡಗನ್ನೂರು, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದ ಜಿ. ಪಂ. ಸದಸ್ಯ ಎಂ. ಪಕೀರ, ಮೆರವಣಿಗೆ ಉದ್ಘಾಟಿಸಿದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್, ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮುಳಿಯ ಶ್ಯಾಮ ಭಟ್ ಶುಭ ಹಾರೈಸಿದರು. ಡಾ. ನರೇಂದ್ರ ರೈ ದೇರ್ಲರವರು ಸಮ್ಮೇಳನಾಧ್ಯಕ್ಷರ ಪರಿಚಯ ಭಾಷಣ ಮಾಡಿದರು. ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಸ್ವಾಗತಿಸಿ, ಸಂಚಾಲಕ ಶಿವರಾಮ. ಪಿ. ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಕೋಶಾಧಿಕಾರಿ, ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment